ಕೆಂಕೆರೆ ಕಟ್ಟೆ 35,500 ರೂ.ಗೆ ಹರಾಜು

ಹುಳಿಯಾರು :       ಹುಳಿಯಾರು ಹೋಬಳಿಯ ಕೆಂಕೆರೆ ಗ್ರಾಮ ಪಂಚಾಯ್ತಿಯಿಂದ ಕೆಂಕೆರೆ ಗ್ರಾಮದ ಮೀನು ಪಾಚುವಾರು ಹರಾಜು ಪ್ರಕ್ರಿಯೆಯು ಗುರುವಾರ ನಡೆಯಿತು.       ಗ್ರಾಪಂ ಅಧ್ಯಕ್ಷ ಕೆ.ಸಿ.ವಿಕಾಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಹರಾಜಿನಲ್ಲಿ ನಾಲ್ವರು ಭಾಗವಹಿಸಿದ್ದು ಕೆಂಕೆರೆಯ ಕೆ.ಜಿ.ಶರತ್ ಅವರಿಗೆ ವರ್ಷಕ್ಕೆ 35,500 ರೂ.ಗಳಂತೆ ವರ್ಷಿಕ ಶೇ.10 ರೂ. ಹೆಚ್ಚಳ ಮಾಡಿ 2021 ಮಾರ್ಚ್ 4 ರಿಂದ 2024 ಮಾರ್ಚ್ 31 ರ ವರೆವಿಗೆ 3 ವರ್ಷದ ಅವಧಿಗೆ ಹರಾಜು ನಿಂತಿತು.       ಗ್ರಾಪಂ ಅಭಿವೃದ್ಧಿ ಅಧಿಕಾರಿ ಕೆ.ಸಿ.ಬಲರಾಮಯ್ಯ ಸೇರಿದಂತೆ ಗ್ರಾಪಂ ಕಾರ್ಯದರ್ಶಿ ಜ್ಞಾನಮೂರ್ತಿ ಹಾಗೂ ಗ್ರಾಪಂ ಸದಸ್ಯರುಗಳು ಭಾಗವಹಿಸಿದ್ದರು.

ಮುಂದೆ ಓದಿ...

ಹುಳಿಯಾರು ಕುಡಿಯುವ ನೀರಿನ ಘಟಕಗಳ ದುರಸ್ಥಿಗೆ ಡಿಸಿ ಸೂಚನೆ

ಹುಳಿಯಾರು :       ಹುಳಿಯಾರು ಎಪಿಎಂಸಿಯಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಸೇರಿದಂತೆ ಪಟ್ಟಣದಲ್ಲಿ ಕೆಟ್ಟಿರುವ ಎಲ್ಲಾ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತಕ್ಷಣ ದುರಸ್ತಿ ಮಾಡಿಸುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಅವರು ಪಪಂ ಮುಖ್ಯಾಧಿಕಾರಿ ಮಂಜುನಾಥ್ ಅವರಿಗೆ ಸೂಚನೆ ನೀಡಿದರು.      ಹುಳಿಯಾರು ಎಪಿಎಂಸಿಯಲ್ಲಿನ ರಾಗಿ ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಹುಳಿಯಾರಿನ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ವರ್ಷಗಳೇ ಕಳೆದಿದ್ದರೂ ಸಹ ದುರಸ್ತಿ ಮಾಡದ ಪರಿಣಾಮ ಹೆಚ್ಚು ಹಣ ಕೊಟ್ಟು ಖಾಸಗಿಯವರಿಂದ ನೀರು ಖರೀದಿಸಿ ಕುಡಿಯುವಂತ್ತಾಗಿದೆ ಎಂದು ಸಾರ್ವಜನಿಕರು ದೂರಿದರು.       ಜಿಲ್ಲಾಧಿಕಾರಿಗಳು ತಕ್ಷಣ ಪಪಂ ಮುಖ್ಯಾಧಿಕಾರಿಗಳನ್ನು ಕರೆಸಿ ದುರಸ್ತಿ ಮಾಡಿಸದೆ ನಿರ್ಲಕ್ಷ್ಯಿಸಿರುವ ಬಗ್ಗೆ ಪ್ರಶ್ನಿಸಿದರು. ಶುದ್ಧ ಕುಡಿಯುವ ನೀರಿನ ಘಟಕಗಳೆಲ್ಲವೂ ಆರ್‍ಡಿಪಿಆರ್ ವ್ಯಾಪ್ತಿಯಲ್ಲಿದ್ದು ನಮಗೆ ಇದೂವರೆವಿಗೂ ಹಸ್ತಾಂತರಿಸಿರುವುದಿಲ್ಲ. ಅವರು ಹಸ್ತಾಂತರಿಸಿದರೆ ದುರಸ್ತಿ ಮಾಡಿಸುವುದಾಗಿ ತಿಳಿಸಿದರು.…

ಮುಂದೆ ಓದಿ...

ತುಮಕೂರು ವಿ.ವಿಯ 14ನೇ ಘಟಿಕೋತ್ಸವ : 73 ವಿದ್ಯಾರ್ಥಿಗಳಿಗೆ 92 ಚಿನ್ನದ ಪದಕ

ತುಮಕೂರು :       ತುಮಕೂರು ವಿಶ್ವವಿದ್ಯಾನಿಲಯದ 14ನೇ ವಾರ್ಷಿಕ ಘಟಿಕೋತ್ಸವದಲ್ಲಿ 73 ವಿದ್ಯಾರ್ಥಿಗಳಿಗೆ ಒಟ್ಟು 92 ಚಿನ್ನದ ಪದಕ, ಆರು ನಗದು ಬಹುಮಾನ ಹಾಗೂ 147 ಪಿಎಚ್‍ಡಿ ಪದವಿ ಹಾಗೂ 3 ಡಿಲಿಟ್ ಪದವಿ ಪ್ರದಾನ ಮಾಡಲಾಯಿತು.       ತುಮಕೂರು ನಗರದ ವಿಶ್ವವಿದ್ಯಾನಿಲಯದ ಶ್ರೀ ಶ್ರೀ ಶ್ರೀ ಶಿವಕುಮಾರ ಸಭಾಂಗಣದಲ್ಲಿ ನಡೆದ ಘಟಿಕೋತ್ಸವದಲ್ಲಿ ಘನತೆವೆತ್ತ ರಾಜ್ಯಪಾಲ ಹಾಗೂ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳಾದ ವಾಜುಭಾಯಿ ವಾಲಾ ಅವರು, 73 ವಿದ್ಯಾರ್ಥಿಗಳಿಗೆ ಚಿನ್ನದ ಪದಕ, 147 ಪಿಎಚ್‍ಡಿ ಅಭ್ಯರ್ಥಿಗಳಿಗೆ ಮತ್ತು 3 ಡಿಲಿಟ್ ಪದವಿ ಪ್ರದಾನ ಹಾಗೂ ಸಾಮಾಜಿಕ ಸೇವಾ ಕ್ಷೇತ್ರದಲ್ಲಿನ ಕೊಡುಗೆಗಾಗಿ ಐ.ಎಸ್. ಪ್ರಸಾದ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದರು. ಉದಾರ ಶಿಕ್ಷಣ ಪರಿಕಲ್ಪನೆಯಲ್ಲಿ ತುಮಕೂರು ವಿವಿಗೆ ವಿಶಿಷ್ಟ ಸ್ಥಾನ: ತುಮಕೂರು ವಿಶ್ವವಿದ್ಯಾಲಯವು ರಾಷ್ಟ್ರೀಯ ಶಿಕ್ಷಣ ನೀತಿಯ ಉದಾರ ಶಿಕ್ಷಣ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸುವಲ್ಲಿ ವಿಶಿಷ್ಟ…

ಮುಂದೆ ಓದಿ...