ತುಮಕೂರು : ವಾರದ ಸಂತೆಗಳಿಗೆ ನಿರ್ಬಂಧನೆ!!

ತುಮಕೂರು:        ಕೋವಿಡ್ ಎರಡನೇ ಅಲೆ ನಿಯಂತ್ರಣದ ಹಿನ್ನೆಲೆಯಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಆದೇಶದಂತೆ ಮಾರುಕಟ್ಟೆಯಲ್ಲಿ ಉಂಟಾಗುತ್ತಿರುವ ಜನಸಂದಣಿ, ನೂಕುನುಗ್ಗಲು ತಪ್ಪಿಸಲು ಮೇ 5 ರಿಂದ ಅನ್ವಯವಾಗುವಂತೆ ಜಿಲ್ಲೆಯಲ್ಲಿ ಎಲ್ಲಾ ರೀತಿಯ ಸಂತೆ, ವಾರದ ಸಂತೆಗಳನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಆದೇ ಶಿಸಿದ್ದಾರೆ.       ಸಂತೆಗಳ ಬದಲಿಗೆ ಪ್ರತಿದಿನ ಬೆಳಿಗ್ಗೆ 6ರಿಂದ ಸಂಜೆ 6 ಗಂಟೆಯವರೆಗೆ ಹಾಪ್‍ಕಾಮ್ಸ್, ಎಲ್ಲಾ ರೀತಿಯ ಹಾಲಿನ ಬೂತ್‍ಗಳು, ತಳ್ಳುವ ಗಾಡಿ ಮೂಲಕ ಹಣ್ಣು ತರಕಾರಿಗಳನ್ನು ಮಾರುಕಟ್ಟೆಯ ಬೆಲೆಗೆ ಅನುಗುಣವಾಗಿ ಮಾರಾಟ ಮಾಡಲು ಸೂಚಿಸಿದ್ದಾರೆ. ಅಲ್ಲದೆ, ಕೊರೋನಾ ನಿಯಮಗಳನ್ನು ಪಾಲಿಸುವುದರ ಜೊತೆಗೆ ಎಪಿಎಂಸಿ ಮತ್ತು ದಿನಸಿ ಅಂಗಡಿಗಳನ್ನು ಪ್ರತಿ ದಿನ ಬೆಳಿಗ್ಗೆ 6ರಿಂದ ಮಧ್ಯಾಹ್ನ 12 ಗಂಟೆಯವರೆಗೆ ತೆರೆಯಲು ಅವಕಾಶ ನೀಡಲಾಗಿದೆ ಕಳಪೆ ಗುಣಮಟ್ಟದ ವಸ್ತುಗಳ ಮಾರಾಟಗಾರರ ವಿರುದ್ಧ ಕ್ರಮ:      …

ಮುಂದೆ ಓದಿ...

ಹುಳಿಯಾರು : ತಳ್ಳುವಗಾಡಿಯಲ್ಲಿ ವ್ಯಾಪಾರ ಮಾಡಲು ಸೂಚನೆ

ಹುಳಿಯಾರು :        ಒಂದೇ ಕಡೆ ಕುಳಿತು ವ್ಯಾಪಾರ ಮಾಡುವುದರಿಂದ ಕೊರೋನಾ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ತಳ್ಳುವಗಾಡಿ ಮಾಡಿಕೊಂಡು ಬೀದಿಗಳಲ್ಲಿ ಓಡಾಡುತ್ತಾ ವ್ಯಾಪಾರ ಮಾಡಿ ಎಂದು ಹುಳಿಯಾರು ಪಪಂ ಮುಖ್ಯಾಧಿಕಾರಿ ಮಂಜುನಾಥ್ ವ್ಯಾಪಾರಸ್ಥರಿಗೆ ಕಿವಿಮಾತು ಹೇಳಿದರು.       ಹುಳಿಯಾರು ಪಟ್ಟಣದ ಶಿಲ್ಪಾಸ್ಟೋರ್ ಬಳಿ ಸೊಪ್ಪು, ತರಕಾರಿ, ಹೂವು, ಹಣ್ಣುಗಳ ವ್ಯಾಪಾರ ನಡೆಯುತ್ತಿತ್ತು. ಎಂದಿನಂತೆ ಬೆಳಗ್ಗೆ 10 ಗಂಟೆಗೆ ವ್ಯಾಪಾರ ವಹಿವಾಟು ಮುಗಿಸುವ ಸಲುವಾಗಿ ಸೊಪ್ಪಿನ ವ್ಯಾಪಾರಿಯೊಬ್ಬರು ಉಳಿದ ಸೊಪ್ಪನ್ನು ಚೀಲಕ್ಕೆ ತುಂಬುತ್ತಿದ್ದನ್ನು ಗಮನಿಸಿ ಈ ಕಿವಿ ಮಾತು ಹೇಳಿದರು.       ಹಣ್ಣುಗಳನ್ನು ಹತ್ತು-ಹದಿನೈದು ದಿನಗಳ ಕಾಲ ಇಡಬಹುದು. ತರಕಾರಿಯನ್ನು ವಾರಗಟ್ಟಲೆ ಇಡಬಹುದು. ಆದರೆ ಸೊಪ್ಪು ಮತ್ತು ಹೂವನ್ನು ಬಹಳ ದಿನಗಳ ಕಾಲ ಇಟ್ಟು ವ್ಯಾಪಾರ ಮಾಡಲಾಗುವುದಿಲ್ಲ. ಒಳ್ಳೆಯ ವ್ಯಾಪಾರವಾಗುತ್ತದೆಂದು ನೀವು ಬಂಡವಾಳ ಹಾಕಿ ಇಷ್ಟೊಂದು ಸೊಪ್ಪು…

ಮುಂದೆ ಓದಿ...

ತುಮಕೂರು : ಚಿತಾಗಾರಕ್ಕೆ 2 ಹೆಚ್ಚುವರಿ ಒಲೆ

ತುಮಕೂರು:       ಕೊರೋನಾ ವೈರಸ್ ಹಾವಳಿಯಿಂದಾಗಿ  ಮೃತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯ ಚಿತಾಗಾರದಲ್ಲಿ ಶವ ಸಂಸ್ಕಾರಕ್ಕೆ ತೀವ್ರ ತೊಂದರೆಯಾಗುತ್ತಿತ್ತು.       ಇದನ್ನು ಗಮನಿಸಿ ಮಾನ್ಯ ಮಾಜಿ ಸಚಿವರಾದ ಸೊಗಡು ಶಿವಣ್ಣನವರು ಹಾಗೂ ಕೈಗಾರಿಕೋದ್ಯಮಿಗಳು ಟಿಎಂಸಿಸಿ ಬ್ಯಾಂಕ್ ಅಧ್ಯಕ್ಷರಾದ ಎನ್.ಎಸ್. ಜಯಕುಮಾರ್ ರವರು ತಕ್ಷಣ ಕಾರ್ಯಪ್ರವೃತ್ತರಾಗಿ ಕೆಲವೇ ದಿನಗಳಲ್ಲಿ ಸಮಸ್ಯೆಯನ್ನು ಬಗೆಹರಿಸಿದ್ದಾರೆ.       ಇಂದು ಚಿತಾಗಾರದಲ್ಲಿ 2 ಹೆಚ್ಚುವರಿ ಒಲೆಗಳನ್ನು ಅಳವಡಿಸಲಾಗುತ್ತಿದೆ.

ಮುಂದೆ ಓದಿ...

ಕೊರೊನಾ ಸೋಂಕಿತನನ್ನು ಮದ್ಯರಾತ್ರಿ ಆಸ್ಪತ್ರೆಗೆ ಸೇರಿಸಿದ ಸುರೇಶ್ ಗೌಡ

ತುಮಕೂರು :      ತುಮಕೂರು ಭಾಜಪ ಜಿಲ್ಲಾ ಅಧ್ಯಕ್ಷರು ಹಾಗೂ ಮಾಜಿ ಜನಪ್ರಿಯ ಶಾಸಕರಾದ ಶ್ರೀ ಬಿ.ಸುರೇಶ್ ಗೌಡ ರವರು ಮದ್ಯ ರಾತ್ರಿ ಸಮಯದಲ್ಲಿ ಕಣಕುಪ್ಪೆಯ ನರಸಿಂಹಮೂರ್ತಿರವರಿಗೆ ಕೋವಿಡ್ ಬಂದಿರುವ ವಿಷಯ ತಿಳಿದು, ಕೊರಟಗೆರೆ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸೇರಿಸಿ, ತದನಂತರ ಬೆಳಗ್ಗೆ ಹೋಗಿ ಬೇಟಿ ಮಾಡಿ ಯೋಗ ಕ್ಷೇಮ ವಿಚಾರಿಸಿ ಆತ್ಮಸ್ಥೈರ್ಯ ತುಂಬಿ ಸಾಂತ್ವನ ಹೇಳಿದ್ದಾರೆ.       ವೈದ್ಯರ ಜೊತೆ ಮಾತನಾಡಿ ವೈದ್ಯರಿಗೆ ಪ್ರಶಂಸೆಯನ್ನು ನೀಡಿ, ಇನ್ನು ಏನಾದರೂ ವೆಂಟಿಲೇಟರ್ ಆಕ್ಸಿಜನ್ ಸಮಸ್ಯೆ ಕಂಡಲ್ಲಿ ನನಗೆ ತಕ್ಷಣವೇ ಕರೆ ಮಾಡಿ ತಿಳಿಸಿ, ಅದಕ್ಕೆ ಸೂಕ್ತವಾದ ಸಮಯದಲ್ಲಿ ಒದಗಿಸಿಕೊಡುವ ಕಾರ್ಯ ಮಾಡುತ್ತೇನೆ ಎಂದು ತಿಳಿಸಿದರು.        ಇದೇ ಸಮಯದಲ್ಲಿ ವೈದ್ಯರಾದ ಪ್ರಕಾಶ್ ಸರ್ ಹಾಗೂ ಕೊರಟಗೆರೆ ಮಂಡಲದ ಭಾರತೀ ಯ ಜನತಾ ಪಾರ್ಟಿಯ ಅಧ್ಯಕ್ಷರಾದ ಪವನ್ ಕುಮಾರ್…

ಮುಂದೆ ಓದಿ...