ರಂಜಾನ್ ಹಬ್ಬದ ಪ್ರಯುಕ್ತ ಉಚಿತ ಆಹಾರ ಕಿಟ್ ವಿತರಣೆ

ಚಿಕನಾಯಕನಹಳ್ಳಿ :        ರಂಜಾನ್ ಹಬ್ಬದ ಪ್ರಯುಕ್ತ ಬಡವರಿಗೆ ಉಚಿತ ಆಹಾರ ಕಿಟ್‍ಗಳನ್ನು ಅಜೀಜ್ ಟ್ರಸ್ಟ್‍ವತಿಯಿಂದ ವಿತರಿಸಲಾಯಿತು.       ಕಳೆದ 19 ವರ್ಷದಿಂದ ರಂಜಾನ್ ಸಂದರ್ಭದಲ್ಲಿ ಬಡವರಿಗೆ ಆಹಾರ ಕಿಟ್‍ಗಳನ್ನು ಟ್ರಸ್ಟ್ ವತಿಯಿಂದ ವಿತರಸಲಾಗುತ್ತಿತ್ತು, ಕೋರೊನಾ ಹಿನ್ನಲೆಯಲ್ಲಿ ಸಾರ್ವಜನಿಕವಾಗಿ ಒಂದು ಸಾವಿರ ಬಡಕುಟುಂಬಗಳಿಗೆ ಆಹಾರದ ಕಿಟ್‍ಗಳನ್ನು ವಿತರಿಸಲು ತೀರ್ಮಾನಿಸಲಾಗಿತ್ತು. ಇದನ್ನು ಸರ್ಕಾರಿ ಕಾರ್ಯಕ್ರಮದಂತೆ ಆಯೋಜಿಸಲಾಗಿದ್ದು ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಈ ಕಿಟ್‍ವಿತರಣಾ ಕಾರ್ಯಕ್ಕೆ ಸಚಿವ ಜೆ.ಸಿ. ಮಾಧುಸ್ವಾಮಿ ಚಾಲನೆ ನೀಡಿದರು. ನಂತರ ಅವರು ಮಾತನಾಡಿ ಪ್ರತಿವರ್ಷದಂತೆ ರಂಜಾನ್ ಸಂದರ್ಭದಲ್ಲಿ ಬಡವರಿಗೆ ಆಹಾರ ಕಿಟ್‍ಗಳನ್ನು ವಿತರಿಸುತ್ತಿದ್ದ ಈ ಕುಟುಂಬ, 1000 ಕಿಟ್‍ಗಳನ್ನು ವಿತರಿಸಲು ಮುಂದಾಗಿರುವುದು ಶ್ಲಾಘನೀಯ, ಇಲ್ಲಿ ಎಲ್ಲಾ ವರ್ಗದ ಬಡವರಿಗೂ ಹಂಚಿಕೆ ಮಾಡಲಾಗುತ್ತಿದೆ, ಕೊರೊನಾ ಸಂದರ್ಭದಲ್ಲಿ ಇಂತಹ ಕಾರ್ಯಕ್ಕೆ ಮುಂದಾಗಿರುವುದು ಅವರ ದೊಡ್ಡತನವೆನಿಸಿದೆ ಎಂದರು. ಟ್ರಸ್ಟ್ ನ ಮುಖ್ಯಸ್ಥರಾದ ಮಹಮದ್ ಜಿಯಾವುಲ್ಲ…

ಮುಂದೆ ಓದಿ...

ಹುಳಿಯಾರು :  ಕಾರ್ ಹೆಡ್‍ಲೈಟ್ ಬೆಳಕಲ್ಲಿ ಅಂತ್ಯಕ್ರಿಯೆ

ಹುಳಿಯಾರು :        ಮುಕ್ತಿಧಾಮದಲ್ಲಿ ವಿದ್ಯುತ್ ಸಂಪರ್ಕವಿಲ್ಲದ ಪರಿಣಾಮ ಮೃತ ಸಂಬಂಧಿಕರ ಕಾರ್ ಹೆಡ್ ಲೈಟ್‍ನಲ್ಲಿ ಅಂತ್ಯಕ್ರಿಯೆ ನಡೆಸಿದ ಘಟನೆ ಹುಳಿಯಾರಿನ ಮುಕ್ತಿಧಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.         ಹುಳಿಯಾರಿನ ರಂಗಲಕ್ಷ್ಮಮ್ಮ ಅವರು ಶುಕ್ರವಾರ ಮಧ್ಯಾಹ್ನ ಚಿಕ್ಕನಾಯಕನಹಳ್ಳಿ ಆಸ್ಪತ್ರೆಯಲ್ಲಿ ನಿಧನರಾದರು. ಆಸ್ಪತ್ರೆಯ ಪ್ರೊಸಿಜರ್‍ಗಳನ್ನು ಮುಗಿಸಿ ಮೃತ ದೇಹ ತರುವಷ್ಟರಲ್ಲಿ ಶುಕ್ರವಾರ ರಾತ್ರಿಯಾಗಿತ್ತು. ಚಿಕ್ಕನಾಯಕನಹಳ್ಳಿಯ ಪೌರಕಾರ್ಮಿಕರು ಮೃತದೇಹವನ್ನು ಹುಳಿಯಾರಿಗೆ ತಂದಾಗ ಮುಕ್ತಿಧಾಮದಲ್ಲಿ ಮಾತ್ರ ವಿದ್ಯುತ್ ಇಲ್ಲದೆ ಕಾರ್ಗತ್ತಲಾಗಿತ್ತು.       ಮುಕ್ತಿಧಾಮದ ಪರಿಚಯ ಇಲ್ಲದ ಚಿಕ್ಕನಾಯಕನಹಳ್ಳಿ ಪೌರಕಾರ್ಮಿಕರು ಕತ್ತಲಲ್ಲಿ ಅಂತ್ಯಕ್ರಿಯೆ ಮಾಡಲು ಅಕ್ಷರಶಃ ಪರದಾಡಿದರು. ಆಂಬ್ಯೂಲೆನ್ಸ್ ಬೆಳಕಲ್ಲಿ ಚಿತಾಗಾರ ಹುಡುಕಿದರು. ಅಲ್ಲಿಗೆ ಮೃತದೇಹ ಸಾಗಿಸುವಷ್ಟರಲ್ಲಿ ಮೃತರ ಸಂಬಂಧಿಕರು ತಮ್ಮ ಕಾರು ತಂದು ಹೆಡ್‍ಲೈಟ್ ಹಾಕಿ ಮತ್ತೊಷ್ಟು ಬೆಳಕಿನ ವ್ಯವಸ್ಥೆ ಮಾಡಿದರು.       ಚಿತಾಗಾರದ ಮೇಲೆ ಮೃತದೇಹವಿಟ್ಟು ಅದರ…

ಮುಂದೆ ಓದಿ...

ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಸರ್ಕಾರಗಳು : ಕೆ.ಎನ್.ರಾಜಣ್ಣ

ಮಧುಗಿರಿ:      ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಶಾಪಗ್ರಸ್ಥ ಸರ್ಕಾರಗಳು ಎಂದು ಮಾಜಿ ಶಾಸಕ ಕೆ.ಎನ್. ರಾಜಣ್ಣ ಟೀಕೆ ವ್ಯಕ್ತಪಡಿಸಿದರು. ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ಇರುವ ಕಾಂಗ್ರೆಸ್ ಸಮಿತಿ ಕಚೇರಿ ಮುಂಭಾಗ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆ-ಪೆÇಲೀಸ್ ಇಲಾಖೆ -ಕಂದಾಯ ಇಲಾಖೆ ಮತ್ತು ಆರೋಗ್ಯ ಇಲಾಖೆಯವರಿಗೆ ಕೊರೋನ ಎದುರಿಸಲು ಬೇಕಾಗಿರುವ ಸಲಕರಣೆಗಳು ಮತ್ತು 2 ಆಂಬ್ಯುಲೆನ್ಸ್ ಗಳನ್ನು ತಾಲ್ಲೂಕು ಆಡಳಿತಕ್ಕೆ ವಿತರಿಸಿ ನಂತರ ನಿರೀಕ್ಷಣಾ ಮಂದಿರದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು ಸಿಎಂ ಬಿಎಸ್ ಯಡಿಯೂರಪ್ಪ ತಮ್ಮ ಇಳಿವಯಸ್ಸಿನಲ್ಲಿ ನಿರಂತರ ಸಭೆಗಳನ್ನು ನಡೆಸುತ್ತಿದ್ದಾರೆ. ಅವರನ್ನು ಟೀಕಿಸುವುದಿಲ್ಲ ಆದರೆ ಅವರಿಗೆ ಆಡಳಿತದ ಮೇಲೆ ಹಿಡಿತ ಇಲ್ಲದಂತೆ ಕಾಣುತ್ತಿದೆ, ದಿಕ್ಕುದೆಸೆಯಿಲ್ಲದ ಇಂತಹ ಸರ್ಕಾರ ಕೊನೆಗಾಣಬೇಕು. ಬಿಎಸ್ ವೈರವರು ಅಸಹಾಯಕತೆಗೆ ಅವರು ಅಣ್ಣಮ್ಮ ದೇವಿಯ ಮೊರೆ ಹೋಗಿರುವುದು ಸಾಕ್ಷಿ ಎಂದರು. ಮಾಜಿ ಸಿಎಂ ಸಿದ್ದರಾಮಯ್ಯ…

ಮುಂದೆ ಓದಿ...