ತುಮಕೂರು :  ಮದುವೆಗೆ ಅನುಮತಿ ಕಡ್ಡಾಯ

ತುಮಕೂರು :         ಕೋವಿಡ್-19 ತಡೆಗಟ್ಟಲು ಹಿನ್ನೆಲೆಯಲ್ಲಿ ಸರ್ಕಾರದ ನೂತನ ಮಾರ್ಗ ಸೂಚಿಗಳಂತೆ ಆಯಾ ತಾಲ್ಲೂಕು ವ್ಯಾಪ್ತಿಯಲ್ಲಿ 40ಕ್ಕಿಂತ ಹೆಚ್ಚಿನ ಜನ ಸೇರದಂತೆ ಈಗಾಗಲೇ ನಿಗಧಿಯಾಗಿರುವ ಮದುವೆ ಕಾರ್ಯವನ್ನು ನೆರವೇರಿಸಿಕೊಳ್ಳಲು ಮಾತ್ರ ಅನುಮತಿ ನೀಡಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಜಿಲ್ಲೆಯ ಎಲ್ಲ ತಾಲೂಕು ತಹಸೀಲ್ದಾರ್ ಗಳಿಗೆ ಸೂಚಿಸಿದ್ದಾರೆ.        ಮದುವೆ ಕಾರ್ಯ ನೆರವೇರಿಸಿಕೊಳ್ಳು ಸರ್ಕಾರದ ನಿರ್ದೇಶನದಂತೆ ಷರತ್ತುಗಳಿಗೊಳಪಡಿಸಿಯೇ ಅನುಮತಿ ನೀಡಬೇಕು. ಅನುಮತಿ ಪತ್ರ ಮತ್ತು ಗರಿಷ್ಠ 40 ಪಾಸ್ ಗಳನ್ನು ವಿತರಿಸಬೇಕು. ಸದರಿ ಪಾಸ್‍ಗಳು ದುರ್ಬಳಕೆಯಾಗದಂತೆ ಅಗತ್ಯ ಕ್ರಮವಹಿಸಲು ಆಗಿಂದಾಗ್ಗೆ ತಮ್ಮ ವ್ಯಾಪ್ತಿಯಲ್ಲಿ ಪರಿವೀಕ್ಷಣೆ ಕೈಗೊಳ್ಳಬೇಕು. ಕೋವಿಡ್-19 ನಿಯಂತ್ರಣ ಮಾರ್ಗಸೂಚಿಯನ್ನು ಪಾಲಿಸದೇ ಇರುವವರ ವಿರುದ್ಧ ವಿಪತ್ತು ನಿರ್ವಹಣ ಕಾಯ್ದೆ ಮತ್ತು ಸಾಂಕ್ರಾಮಿಕ ರೋಗ ತಡೆ ಅಧಿನಿಯಮಗಳ ಅನ್ವಯ ಶಿಸ್ತು ಕ್ರಮ ಜರುಗಿಸಬೇಕು ಎಂದು ನಿರ್ದೇಶಿಸಿದ್ದಾರೆ.        …

ಮುಂದೆ ಓದಿ...

ಹುಳಿಯಾರು ಮುಕ್ತಿಧಾಮಕ್ಕೆ ತಾತ್ಕಾಲಿಕ ವಿದ್ಯುತ್ ವ್ಯವಸ್ಥೆ

ಹುಳಿಯಾರು:       ಪತ್ರಿಕೆಯ ವರದಿಯ ಫಲಶೃತಿಯಾಗಿ ಹುಳಿಯಾರು ಮುಕ್ತಿಧಾಮಕ್ಕೆ ಬೆಸ್ಕಾಂನಿಂದ ತಾತ್ಕಾಲಿಕ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.        ಹುಳಿಯಾರಿನ ಮುಕ್ತಿಧಾಮದಲ್ಲಿ ವಿದ್ಯುತ್ ವ್ಯವಸ್ಥೆ ಇಲ್ಲದೆ ಕತ್ತಲೆಯಲ್ಲಿ ಅಂತ್ಯಕ್ರಿಯೆ ನಡೆಸುವ ಅನಿವಾರ್ಯ ಕರ್ಮ ದಶಕಗ ಳಿಂದಲೂ ಇತ್ತು. ಟಿ.ಬಿ.ಜಯಚಂದ್ರ ಅವರೊಮ್ಮೆ, ಜೆ.ಸಿ.ಮಾಧುಸ್ವಾಮಿ ಅವರೊ ಮ್ಮೆ ಮುಕ್ತಿಧಾಮದ ಅಭಿವೃದ್ಧಿಗೆ ಹಣ ಕೊಟ್ಟರಾದರೂ ವಿದ್ಯುತ್ ಸಮಸ್ಯೆ ಮಾತ್ರ ಬಗೆಹರಿದಿರಲಿಲ್ಲ. ಪರಿಣಾಮ ಟಾರ್ಚ್, ಚಾರ್ಜರ್ ಲೈಟ್, ಮೊಬೈಲ್ ಲೈಟ್, ಕಾರು, ಬೈಕ್ ಹೆಡ್‍ಲೈಟ್ ಬೆಳಕಲ್ಲಿ ರಾತ್ರಿವೊತ್ತು ಅಂತ್ಯಕ್ರಿಯೆ ನಡೆಸುತ್ತಿದ್ದರು.        ಮುಕ್ತಿಧಾಮದ ಸುತ್ತ ಕಾಂಪೌಂಡ್ ವ್ಯವಸ್ಥೆ ಯಿಲ್ಲದೆ ತಂತಿಬೇಲಿ ಮಾತ್ರ ಹಾಕಲಾಗಿತ್ತು. ಬೇಲಿಯ ಸುತ್ತಲೂ ಜಾಲಿಗಿಡಗಳು ಸೇರಿದಂತೆ ಅನಗತ್ಯ ಗಿಡ ಗಂಟೆಗಳು ಬೆಳದಿದ್ದು ರಾತ್ರಿ ಅಂತ್ಯಕ್ರಿಯೆಗೆ ಬರುವವರು ವಿಷಜಂತುಗಳ ಭಯದಲ್ಲಿ ಗಂಟೆಗಟ್ಟಲೆ ನಿಂತು ಅಂತ್ಯಕ್ರಿಯೆ ನೆರವೇರಿಸುತ್ತಿದ್ದಾರೆ. ಕೆಲ ಸಮುದಾಯದವರು ರಾತ್ರಿ ಕತ್ತಲೆಯಲ್ಲೇ ಸ್ನಾನ, ಸೇರಿದಂತೆ…

ಮುಂದೆ ಓದಿ...

ತುಮಕೂರು :  ಪಾಲಿಕೆಯಿಂದ ವ್ಯಾಕ್ಸಿನೇಷನ್ -ಸೋಂಕಿತ ಬಡವರ ವೆಚ್ಚಕ್ಕೆ ಕ್ರಮ

ತುಮಕೂರು :        ಮಹಾನಗರ ಪಾಲಿಕೆ, ಎನ್.ಆರ್ ಕಾಲೋನಿ ಅಭಿವೃದ್ಧಿ ಸಂಘ ಹಾಗೂ ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಜಂಟಿಯಾಗಿ ನಗರದ 19 ಮತ್ತು 20ನೇ ವಾರ್ಡಿನ ಮುಖಂಡರ ಸಭೆಯನ್ನು ಎನ್,ಆರ್ ಕಾಲೋನಿ ಶೈಕ್ಷಣಿಕ ಭವನದಲ್ಲಿ ಕರೆದು ಕೋವಿಡ್ 2ನೇ ಅಲೆಯ ಮುಂಜಾಗ್ರತೆ ಹಾಗೂ ಲಸಿಕೆ ಜಾಗೃತಿಗೆ ಸಂಬಂಧಿಸಿದಂತೆ ಮೇಯರ್ ಮತ್ತು ಆಯುಕ್ತರಿಂದ ಅರಿವಿನ ಕಾರ್ಯಕ್ರಮ ಮಾಡಲಾಯಿತು.       ಸಭೆಯಲ್ಲಿ ಮೊದಲಿಗೆ ಕೋತಿತೋಪಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಮಹೇಶ್ ಮತ್ತು ಪಾವನ ಆಸ್ಪತ್ರೆಯ ಡಾ. ಮುರುಳೀಧರ್ ಮಾತನಾಡಿ ಪ್ರತಿನಿತ್ಯ 2 ವಾರ್ಡ್‍ಗಳಿಂದ 50 ರಿಂದ 60 ಸೋಂಕಿತರು ಪತ್ತೆಯಾಗುತ್ತಿದ್ದು ಕೋವಿಡ್ 2ನೇ ಅಲೆಯಲ್ಲಿನ ಅಪಾಯದ ಬಗ್ಗೆ ತಿಳಿವಳಿಕೆಯಿಲ್ಲದ ಬಹುತೇಕ ಈ ಭಾಗದ ಬಡವರಿಗೆ ಚಿಕಿತ್ಸೆ ಪಡೆಯಲು ಕಷ್ಟವಾಗಿದೆ. ಕೊನೆಯ ಹಂತದಲ್ಲಿ ಚಿಕಿತ್ಸೆಗೆ ಬಂದಾಗ ಚಿಕಿತ್ಸೆ ನೀಡಲು ಸಾಧ್ಯವಾಗುವುದಿಲ್ಲ ಕೃತಕವಾಗಿ…

ಮುಂದೆ ಓದಿ...

ತುರುವೇಕೆರೆ : ಪಟ್ಟಣದಲ್ಲಿ ಕೋವಿಡ್ ನಿಯಮ ಉಲ್ಲಂಘನೆ

ತುರುವೇಕೆರೆ :        ಕೋವಿಡ್ ಮಾರ್ಗ ಸೂಚಿ ಮರೆತು ಸಾರ್ವಜನಿಕರು ಪಟ್ಟಣದಲ್ಲಿ ಭಾನುವಾರವಾದರೂ ಸಹ ಮುಂಜಾವಿನಿಂದಲೇ ಪಟ್ಟಣದ ಬೀದಿಗಳಲ್ಲಿ ಜನಜಂಗುಳಿ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದರು.       ಭಾನುವಾರ ಬೆಳಿಗ್ಗೆಯಿಂದಲೇ ಪಟ್ಟಣದಲ್ಲಿ ಜನಜಂಗುಳಿ ಜಾತ್ರೆಯಂತಿತ್ತು. ನಗರದ ಬಾಣಸಂದ್ರ ರಸ್ತೆಯಲ್ಲಿ ಜನತೆ ವಸ್ತುಗಳನ್ನು ಖರೀದಿಸಲು ತಮ್ಮ ವಾಹನಗಳನ್ನು ರಸ್ತೆಯಲ್ಲೇ ನಿಲ್ಲಿಸಿದ್ದರಿಂದ ಕೆಲಕಾಲ ಸಂಚಾರ ದಟ್ಟಣೆ ಹೆಚ್ಚಾಗಿದ್ದರಿಂದ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿತ್ತು.       ಅಂಬೇಡ್ಕರ್ ವೃತ್ತ ಮತ್ತು ಬಿರ್ಲಾ ಕಾರ್ನರ್ ರಸ್ತೆಗಳಲ್ಲಿ ವ್ಯಾಪಾರ-ವಹಿವಾಟು ಜೋರಾಗಿತ್ತು. ಜನ ಸಾಮಾನ್ಯರು ನಿಯಮಾನುಸಾರ ಅಂತರ ಕಾಪಾಡಿಕೊಳ್ಳದೆ, ಸರಿಯಾದ ರೀತಿಯಲ್ಲಿ ಮಾಸ್ಕ್ ಧರಿಸದೇ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದರು.       ಬಾಣಸಂದ್ರ, ದಬ್ಬೇಘಟ್ಟ ಹಾಗೂ ಮಾಯ ಸಂದ್ರ ರಸ್ತೆ ಬದಿಗಳಲ್ಲಿನ ದಿನಸಿ ಅಂಗಡಿ, ಮಾಂಸದಂಗಡಿ, ಗಿರಣಿ, ಮೆಡಿಕಲ್, ರಸಗೊಬ್ಬರ, ಕಬ್ಬಿಣ ಮತ್ತು ಸಿಮೆಂಟ್ ಅಂಗಡಿ, ಅಕ್ಕಿ…

ಮುಂದೆ ಓದಿ...

ಹುಳಿಯಾರು : ವಾಹನ ಸಂಚಾರ ವಿಲ್ಲದೆ ಪಟ್ಟಣ ರಸ್ತೆಗಳು ನಿಶಬ್ದ

  ಹುಳಿಯಾರು:       ಕೊರೊನಾ ತಡೆಗಟ್ಟುವ ನಿಟ್ಟಿನ್ನಲ್ಲಿ ಸರಕಾರ ಜಾರಿಗೆ ತಂದಿರುವ ಲಾಕ್‍ಡೌನ್ ಹಿನ್ನೆಲೆಯಲ್ಲಿ ಪಟ್ಟಣ ಸೇರಿದಂತೆ ಹೋಬಳಿಯ ಎಲ್ಲ ಗಾಡಿಭಾಗದ ಪ್ರದೇಶದಲ್ಲಿ ಹುಳಿಯಾರು ಪಿ.ಎಸ್.ಐ. ಕೆ.ಟಿ.ರಮೇಶ್ ರವರು ಕಟ್ಟುನಿಟ್ಟಿನ ಬಿಗಿ ಪೊಲೀಸ್ ಬಂದುಬಸ್ತು ಕೈಗೊಂಡಿದ್ದು.       ತಾಲೂಕು ಗಡಿ ಭಾಗಗಳಾದ ಕೆಂಕೆರೆ ಪುರದಮಠ, ಯಳನಾಡು ಗಡಿ, ದೊಡ್ಡ ಎಣ್ಣೆಗೆರೆ ಗಡಿಭಾಗದಲ್ಲಿ ಯಾವುದೆ ವಾಹನ ಬಾರದಂತೆ ಬಿಗಿ ಕ್ರಮ ಜರುಗಿಸಲಾಗಿದೆ.       ಹುಳಿಯಾರು ಪಟ್ಟಣಕ್ಕೆ ಪ್ರವೇಶಿಸುವ ಮಾರ್ಗಗಳಾದ ಕೆಂಕೆರೆ ರಸ್ತೆ, ತಿಪಟೂರು ಮತ್ತು ಹೊಸದುರ್ಗ ಮಾರ್ಗದ ರಸ್ತೆ, ಗಾಣದಾಳ್, ಹೋಯ್ಸಳಕಟ್ಟೆ ಹಾಗೂ ಚಿಕ್ಕನಾಯಕನಹಳ್ಳಿ ಮಾರ್ಗದ ರಸ್ತೆಗಳಲ್ಲಿ ಪೊಲೀಸ್ ಸಿಬ್ಬಂದಿಗಳನ್ನ ನಿಯೋಜಿಸುವ ಮೂಲಕ ಗುಡ್ಸ ವಾಹನ ಹೊರೆತು ಪಡಿಸಿ ಹುಳಿಯಾರು ಪಟ್ಟಣಕ್ಕೆ ಯಾವುದೆ ಒಂದು ಬೈಕ್, ಕಾರು, ಬಾರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಅಲ್ಲದೆ ಪಟ್ಟಣದ ಒಳಭಾಗದಲ್ಲಿನ ನಿವಾಸಿಗಳು ಸಹಾ…

ಮುಂದೆ ಓದಿ...