ಅನಗತ್ಯವಾಗಿ ಸಂಚರಿಸುತ್ತಿದ್ದ ಸವಾರರಿಗೆ ವಿಶೇಷ ಟ್ರೀಟ್‍ಮೆಂಟ್

ಮಧುಗಿರಿ:       ಕೊರೋನ ಲಾಕ್ ಡೌನ್ ನಿಂದಾಗಿ ಮಧುಗಿರಿಯಲ್ಲಿ ಅನವಶ್ಯಕವಾಗಿ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಸವಾರರಿಗೆ ದಂಡವಿಲ್ಲ, ಲಾಠಿ ರುಚಿ ಇಲ್ಲದೆ ಸರಳವಾಗಿ ಪೆÇಲೀಸ್ ಠಾಣಾ ಆವರಣದಲ್ಲಿ ಕುಳ್ಳರಿಸಿ ಅವರುಗಳಿಗೆ ಊಟವನ್ನು ನೀಡಿ ಮಾನವೀಯತೆಯನ್ನು ಮೆರೆದ ಡಿವೈಎಸ್ಪಿ ಕೆ.ಜಿ. ರಾಮಕೃಷ್ಣ ಅವರ ಕ್ರಮಕ್ಕೆ ಜನ ಮೆಚ್ಚುಗೆ ವ್ಯಕ್ತವಾಗಿದೆ. ಕಳೆದೆರಡು ದಿನಗಳಿಂದ ಮಧುಗಿರಿ ಪೆÇೀಲಿಸರು ದ್ವಿಚಕ್ರವಾಹನಗಳನ್ನು ವಶ ಪಡಿಸಿಕೊಂಡು ಜಾಗೃತಿ ಮೂಡಿಸಲು ಯತ್ನಿಸಿದ್ದಾರೆ. ಆದರೆ ವಾಹನ ವಶಪಡಿಸಿಕೊಂಡ ತಕ್ಷಣವೇ ಶಾಸಕರು, ಮಾಜಿ ಶಾಸಕರು ಪ್ರಭಾವಿ ವ್ಯಕ್ತಿಗಳಿಂದ ವಾಹನ ಬಿಡಿಸಿಕೊಳ್ಳಲು ಇನ್ಫ್ಲೂಯೆನ್ಸ್ ಮಾಡಿಸುತ್ತಿದ್ದ ಸರ್ವಸಾಮಾನ್ಯವಾಗಿತ್ತು. ಒತ್ತಡಕ್ಕೆ ಸಿಲುಕಿದ ಪೆÇಲೀಸರಿಗೆ ಇಂಥ ಕ್ರಮದಿಂದ ರಿಲೀಫ್ ಸಿಕ್ಕಿದಂತಾಗಿದೆ. ಡಿವೈಎಸ್ ಪಿ ಕೆ. ಜಿ .ರಾಮಕೃಷ್ಣ ರವರು ವಿಭಿನ್ನವಾಗಿ ತಮ್ಮ ಕಚೇರಿ ಮುಂಭಾಗದಲ್ಲಿ ವಾಹನಗಳನ್ನು ವಶಪಡಿಸಿಕೊಂಡು ಸವಾರರನ್ನು ಆವರಣದಲ್ಲಿ ಕುಳ್ಳರಿಸಿ ನೂರು ರೂ ದಂಡ ಹಾಕಿದರೆ ಕಟ್ಟುತ್ತಾರೆ ,ಐನೂರು ರೂ ದಂಡ…

ಮುಂದೆ ಓದಿ...

ತುಮಕೂರು : ಮಾನವೀಯತೆ ಮೆರೆದು ಶವಸಂಸ್ಕಾರ ಮಾಡಿದ ತಂಡ

ತುಮಕೂರು:      ಜಿಲ್ಲೆಯ ಕೊರಟಗೆರೆ ತಾಲ್ಲೂಕು ಬೊಮ್ಮಲದೇವಿಪುರ ಗ್ರಾಮದ ರಂಗನಾಥ್ ಎಂಬ 35 ವರ್ಷದ ಯುವಕ ಕೊರೋನದಿಂದ ಮೃತಪಟ್ಟಿದ್ದು ಮೃತ ದೇಹವನ್ನು ಶವಸಂಸ್ಕಾರ ಮಾಡಲು ಸಂಬಂಧಿಕರು ಭಯದಿಂದ ನಿರಾಕರಿಸಿದ್ದರು.      ಈ ಕಾರಣದಿಂದ ಗುಲಾಮಗಿರಿ ಚಿತ್ರದ ನಾಯಕ ಹಾಗೂ ಸಾಮಾಜಿಕ ಕಾರ್ಯಕರ್ತ ಟೈಗರ್ ನಾಗ್. ಜೆಟ್ಟಿ ಅಗ್ರಹಾರ ನಾಗರಾಜು, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ನಯಾಜ್ ಅಹಮದ್ ಮತ್ತು ಮುಸ್ಲಿಂ ತಂಡದವರು ಸ್ಧಳಕ್ಕೆ ಆಗಮಿಸಿ ಮೃತ ದೇಹವನ್ನು ಶವಸಂಸ್ಕಾರ ಮಾಡಿ ಮಾನವಿಯತೆ ಮೆರೆದಿದ್ದಾರೆ.      ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ನಾಗರೀಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂತ್ಯಕ್ರಿಯೆ ಮಾಡಲು ಬೊಮ್ಮಲದೇವಿಪುರ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ವಿಷಯ ತಿಳಿಸಿದರು ಯಾರೋಬ್ಬರೂ ಸಹಾಯಕ್ಕೆ ಬಂದಿಲ್ಲ. ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಎಷ್ಟು ಭಾರಿ ಕರೆ ಮಾಡಿದರೂ ಕರೆಯನ್ನು ನಿರಾಕರಿಸಿದರು. ಇಂತಹ ಅಧಿಕಾರಿಗಳನ್ನ ಅಮಾನತ್ತು…

ಮುಂದೆ ಓದಿ...

ಅಜ್ಜಿಯ ಹಸಿವು ನೀಗಿಸಿದ ಪಿ.ಎಸ್.ಐ ಹರೀಶ್

ಚಿಕ್ಕನಾಯಕನಹಳ್ಳಿ :      ಕೊರೊನಾ ಲಾಕ್ ಡೌನ್ ಹಲವಾರು ಜನರ ಬದುಕಿನಲ್ಲಿ ನುಂಗಲಾರದ ತುತ್ತಾಗಿದ್ದು. ಅನೇಕರ ಹೊಟ್ಟೆಗೆ ತಣ್ಣೀರ ಬಟ್ಟೆ ಹಾಕಿದೆ. ತಾಲೂಕಿನಲ್ಲಿ ಹಲವಾರು ಜನ ಬಡವರು ಒಪ್ಪತ್ತಿನ ಊಟಕ್ಕೂ ಯೋಚನೆ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.        ಅದೇ ರೀತಿ ಪಟ್ಟಣದ ನೆಹರು ಸರ್ಕಲ್ ಬಳಿ ಹಸಿವಿನಿಂದ ಕೂತಿದ್ದ ಅಜ್ಜಿಯನ್ನು ಗಮನಿಸಿದ ಪಿಎಸ್‍ಐ ಹರೀಶ್ ರವರು ಅಜ್ಜಿಗೆ ತಿಂಡಿ ಹಾಗೂ ಬ್ರೆಡ್ ವ್ಯವಸ್ಥೆಯನ್ನು ಮಾಡಿಕೊಟ್ಟರು. ಇವರ ಈ ಕಾರ್ಯಕ್ಕ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ

ಮುಂದೆ ಓದಿ...

ಮಧುಗಿರಿಯಲ್ಲಿ ಗುಡುಗು-ಸಿಡಿಲು ಸಹಿತ ಮಳೆ

ಮಧುಗಿರಿ:       ಬುಧವಾರ ಬೆಳಗಿನ ಜಾವದಲ್ಲಿ ಗುಡುಗು-ಸಿಡಿಲು-ಮಿಂಚಿನ ಸಹಿತ ಸುರಿದ ಮಳೆಗೆ ಪಟ್ಟಣದ ಪುರಸಭಾ ವ್ಯಾಪ್ತಿಯ ಹದಿಮೂರನೆಯ ವಾರ್ಡಿನಲ್ಲಿರುವ ಬಹುತೇಕ ಮನೆಗಳಿಗೆ ಮಳೆ ನೀರಿನ ಜೊತೆ ಚರಂಡಿ ನೀರು ಸೇರಿ ನುಗ್ಗಿರುವ ಘಟನೆ ನಡೆದಿದೆ. ಪುರಸಭಾ ಸದಸ್ಯ ನರಸಿಂಹಮೂರ್ತಿರವರ ಮನೆಗೂ ನೀರು ನುಗ್ಗಿದ್ದು ಅಕ್ಕ ಪಕ್ಕದ ಮನೆಗಳಲ್ಲಿ ಇಂತಹ ಅನುಭವವಾಗಿದೆ. ಈ ವಾರ್ಡಿನಲ್ಲಿ ರಘು ಹೋಟೆಲ್ ಸಮೀಪ ನಿರ್ಮಿಸಿರುವ ಡಕ್ ನ ಒಳಭಾಗದಲ್ಲಿ ಕಾಂಕ್ರೀಟ್ ಹಾಕಿ ಎಷ್ಟೋ ದಿನಗಳಾಗಿದ್ದರೂ ನೀರು ಸರಾಗವಾಗಿ ಹರಿಯುವಂತೆ ಮಾಡದ ಕಾಮಗಾರಿಯೇ ಪ್ರಮುಖ ಕಾರಣ ಎನ್ನುತ್ತಾರೆ ಇಲ್ಲಿನ ನಾಗರಿಕರು. ಬೂರ್ಕನಹಟ್ಟಿಯಲ್ಲಿರುವ ಬಹುತೇಕ ಮನೆಗಳ ಸಂಪುಗಳಲ್ಲಿ ಚರಂಡಿ ನೀರು ತುಂಬಿಕೊಂಡು ದುರ್ವಾಸನೆ ಹೆಚ್ಚಾಗಿ ಸಂಪುಗಳ ಸ್ವಚ್ಚಮಾಡಿಕೊಳ್ಳುವುದರಲ್ಲಿ ಸಾಕು ಸಾಕಾಯಿತು ಗೃಹಿಣಿಯರ ಪಾಡು.       ಟೌನ್ ಹಾಲ್ ರಸ್ತೆಯ ಪೆಟ್ರೋಲ್ ಬಂಕ್ ಸಮೀಪ ಇರುವ ವಾಣಿಜ್ಯ ಮಳಿಗೆಗಳಿಗೆ ಚರಂಡಿ ನೀರು…

ಮುಂದೆ ಓದಿ...

ಕೋವಿಡ್ ಕೇರ್ ಸೆಂಟರ್ : ಸಮರ್ಪಕ ನಿರ್ವಹಣೆಗೆ ಸೂಚನೆ

ತುಮಕೂರು :     ಕೋವಿಡ್ ಸೋಂಕಿತರ ಆರೈಕೆಗಾಗಿ ಸ್ಥಾಪಿಸಿರುವ ಕೋವಿಡ್ ಕೇರ್ ಸೆಂಟರ್‍ಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದರು.       ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಮಾತನಾಡಿದ ಅವರು, ಪ್ರತಿ ಕೋವಿಡ್ ಕೇರ್ ಸೆಂಟರ್‍ಗಳಲ್ಲಿಯೂ ನೀರು, ಊಟದ ವ್ಯವಸ್ಥೆ ವ್ಯವಸ್ಥಿತವಾಗಿರಬೇಕು. ಕಾಲ ಕಾಲಕ್ಕೆ ಅನುಗುಣವಾಗಿ ಔಷಧಗಳನ್ನು ಕೊಡಬೇಕು. ಎಲ್ಲಿಯೂ ಯಾವುದೇ ಸಮಸ್ಯೆಯಾಗದಂತೆ ನಿಭಾಯಿಸಬೇಕು ಎಂದು ನಿರ್ದೇಶಿಸಿದರು.       ಅಗತ್ಯ ಇರುವ ಸೋಂಕಿತರಿಗೆ ಮಾತ್ರವೇ ಆಕ್ಸಿಜನ್ ನೀಡಬೇಕು. ಸೋಂಕಿತರು ಕೇಳಿತ್ತಾರೆಂಬ ಕಾರಣಕ್ಕೆ ಆಕ್ಸಿಜನ್ ಕೊಡಬಾರದು.ವೈದ್ಯರು ಪರೀಕ್ಷಿಸಿ ಸೋಂಕಿತರಿಗೆ ಆಕ್ಸಿಜನ್ ನೀಡುವ ಅಗತ್ಯವಿದ್ದರೆ ಕೊಡಬೇಕು.ಅನಗತ್ಯವಾಗಿ ಆಕ್ಸಿಜನ್ ಕೊಡಬಾರದು ಎಂದು ತಿಳಿಸಿದರು. ಎಲ್ಲಾ ಅಧಿಕಾರಿಗಳು ಸಮನ್ವಯ ಸಾಧಿಸಿ ಕೋವಿಡ್ ನಿಯಂತ್ರಣಕ್ಕೆ ಶ್ರಮಿಸಬೇಕು. ಹಾಸಿಗೆ, ಆಮ್ಲಜನಕ ಕೊರತೆ ನೀಗಿಸಲು ಕೋವಿಡ್…

ಮುಂದೆ ಓದಿ...