ಅವೈಜ್ಞಾನಿಕ ಕಾಮಗಾರಿ : ತೋಟಕ್ಕೆ ಬಂದ ಮಣ್ಣು

ಹುಳಿಯಾರು:      ಪ್ರಧಾನ ಮಂತ್ರಿ ಗ್ರಾಮಸಡಕ್ ಯೋಜನೆಯಡಿ ನಿರ್ಮಿಸಲಾದ ರಸ್ತೆ ಬದಿಯ ಮಣ್ಣು ಸುರಿದ ಭಾರಿ ಮಳೆಗೆ ತೋಟಕ್ಕೆ ನುಗ್ಗುತ್ತಿದ್ದು ಗುಣಮಟ್ಟದ ಕಾಮಕಾರಿ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.       ತಿಮ್ಲಾಪುರ ಗೇಟ್‍ನಿಂದ ಹೊಸಹಳ್ಳಿ, ಹೊಸಹಳ್ಳಿಪಾಳ್ಯದ ಮೂಲಕ ಬಾಣಾವರ-ಹುಳಿಯಾರಿನ ರಾಷ್ಟ್ರೀಯ ಹೆದ್ದಾರಿಗೆ ಸೇರುವ ರಸ್ತೆ ಬಹಳ ವರ್ಷಗಳಿಂದ ಗುಂಡಿಗಳು ಬಿದ್ದು ಓಡಾಡಲು ತೀರ್ವ ತೊಂದರೆಯಾಗಿತ್ತು. ಈ ರಸ್ತೆಯ ಅವ್ಯವಸ್ಥೆ ಅರಿತು ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗೆ ಸೇರಿಸಿ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿದರು.       ಐದಾರು ತಿಂಗಳಿಂದ ನಡೆಯುತ್ತಿದ್ದ ರಸ್ತೆ ಕಾಮಗಾರಿ ಸ್ಥಗಿತಗೊಂಡಿದೆ. ಹಿಂದೆ ರಸ್ತೆ ಬದಿಯಲ್ಲಿ ಮಣ್ಣು ಹಾಕುವ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಸಮಸ್ಯೆ ಸೃಷ್ಠಿಗೆ ಕಾರಣ ಎನ್ನಲಾಗಿದೆ. ಹೊಸಹಳ್ಳಿಯಿಂದ ರಾಷ್ಟ್ರೀಯ ಹೆದ್ದಾರಿಗೆ ಸೇರುವ 1 ಕಿ.ಮೀ.ಭಾಗದ ರಸ್ತೆಯ ಪಕ್ಕದಲ್ಲಿ ಮಣ್ಣು ಹಾಕಿದ್ದು ಈ ಮಣ್ಣು…

ಮುಂದೆ ಓದಿ...

ತುಮಕೂರು : ಕೋವಿಡ್ ಸವಾಲಿಗೆ ವಿವಿ ಪರ್ಯಾಯ ಮಾದರಿ

ತುಮಕೂರು:       ಕೋವಿಡ್ ಎರಡನೇ ಅಲೆ ಶಿಕ್ಷಣರಂಗಕ್ಕೆ ಒಡ್ಡಿರುವ ಸವಾಲುಗಳ ನಡುವೆಯೂ ತುಮಕೂರು ವಿಶ್ವವಿದ್ಯಾ ನಿಲಯವು ಯಶಸ್ವಿ ಆನ್ಲೈನ್ ತರಗತಿಗಳನ್ನು ನಡೆಸುವ ಮೂಲಕ ಪರ್ಯಾಯ ಮಾದರಿಯೊಂದನ್ನು ರೂಪಿಸಿಕೊಟ್ಟಿದೆ.       ವಿಶ್ವವಿದ್ಯಾನಿಲಯದ ಪರೀಕ್ಷೆಗಳ ಕೊನೆಯ ಹಂತದಲ್ಲಿ ಲಾಕ್ಡೌನ್ ಘೋಷಣೆ ಯಾಗಿ ಒಂದೆರಡು ಪರೀಕ್ಷೆಗಳು ಉಳಿದುಕೊಂಡರೂ, ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗದಂತೆ ಹೊಸ ಸೆಮಿಸ್ಟರಿನ ಪಾಠಪ್ರವಚನಗಳನ್ನು ಆನ್ಲೈನ್ ವಿಧಾನದಲ್ಲಿ ವ್ಯವಸ್ಥಿತವಾಗಿ ಆರಂಭಿಸಲಾಗಿದೆ.       ಮೇ 3ರಿಂದ ಸ್ನಾತಕೋತ್ತರ ತರಗತಿಗಳನ್ನೂ, ಮೇ 5ರಿಂದ ಪದವಿ ತರಗತಿಗಳನ್ನೂ ಆನ್ಲೈನ್ ಮುಖಾಂತರ ಆರಂಭಿಸಿದ್ದೇವೆ. ಪದವಿಯಲ್ಲಿ ಎರಡು, ನಾಲ್ಕು ಹಾಗೂ ಆರನೇ ಸೆಮಿಸ್ಟರ್‍ಗಳು ಮತ್ತು ಸ್ನಾತಕೋತ್ತರ ಹಂತದಲ್ಲಿ ಎರಡನೇ ಹಾಗೂ ನಾಲ್ಕನೇ ಸೆಮಿಸ್ಟರ್‍ಗಳು ನಡೆಯುತ್ತಿವೆ. ಕಳೆದೆರಡು ವಾರಗಳಿಂದ ಪಾಠಪ್ರವಚನಗಳು ಯಶಸ್ವಿಯಾಗಿ ನಡೆಯುತ್ತಿವೆ ಎಂದು ಕುಲಪತಿ ಕರ್ನಲ್ (ಪ್ರೊ.) ವೈ. ಎಸ್. ಸಿದ್ದೇಗೌಡ ಹೇಳಿದ್ದಾರೆ.       ಸ್ನಾತಕೋತ್ತರ…

ಮುಂದೆ ಓದಿ...

ತುಮಕೂರು : ಸೋಂಕಿತರಿಗೆ ಆತ್ಮ ಸ್ಥೈರ್ಯ ತುಂಬಿದ ಡಿಸಿ

ತುಮಕೂರು : ತಾಲೂಕಿನ ಗೂಳೂರಿನಲ್ಲಿ ಕೋವಿಡ್ ಸೋಂಕಿನಿಂದ ಮನೆಯಲ್ಲೇ ಐಸುಲೇಷನ್ ಒಳಗಾಗಿರುವ ಜನರನ್ನು ಭೇಟಿ ಮಾಡಿದ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಹಾಗೂ ಜಿಲ್ಲಾ ಪೊಲೀಸ್ ಅಧಿಕಾರಿ ಡಾ.ಕೋನ ವಂಸಿ ಕೃಷ್ಣ, ಐಪಿಎಸ್ ರವರು ಭೇಟಿ ಮಾಡಿ ಆತ್ಮ ಸ್ಥೈರ್ಯ ತುಂಬಿ,ಯಾವುದೇ ಆತಂಕಕ್ಕೆ ಒಳಗಾಗದೆ ನಿರ್ಬೀತಿಯಿಂದ ಇರುವಂತೆ ಹಾಗೂ ಜಾಗರೂಕತೆ ವಹಿಸುವಂತೆ ಸಲಹೆ ನೀಡಿದರು.

ಮುಂದೆ ಓದಿ...