ಹೆಚ್ಚು ಪ್ರಕರಣಗಳಿರುವ ಗ್ರಾಮಗಳಿಗೆ ಸಿಇಒ ಭೇಟಿ

 ತುಮಕೂರು :       ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ವಿದ್ಯಾಕುಮಾರಿ ಅವರು ಇಂದು ಮಧುಗಿರಿ ತಾಲ್ಲೂಕಿನ ಬಡವನಹಳ್ಳಿ, ಚಂದ್ರಗಿರಿ, ಸಿದ್ದಾಪುರ, ಮಿಡಿಗೇಶಿ , ಐ.ಡಿ. ಹಳ್ಳಿ ಗ್ರಾಮ ಪಂಚಾಯತ್‍ಗಳ ಗ್ರಾಮಗಳಲ್ಲಿ ಕೋವಿಡ್ 19 ಪ್ರಕರಣಗಳು ಧೃಡಪಟ್ಟ ಸೋಂಕಿತರ ಮನೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿ ಸಾರ್ವಜನಿಕರಲ್ಲಿ ಕೋವಿಡ್ ನಿಯಂತ್ರಿಸುವ ಕ್ರಮಗಳ ಬಗ್ಗೆ ಅರಿವು ಮೂಡಿಸಿದರು.       ಈ ಪಂಚಾಯತಿ ವ್ಯಾಪ್ತಿಗಳಲ್ಲಿ ಕೋವಿಡ್-19 ಧನಾತ್ಮಕ ಪ್ರಕರಣಗಳು ಇಳಿಮುಖ ವಾಗುತ್ತಿರುವುದರಿಂದ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ ಕೋವಿಡ್ ಮುಕ್ತ ಗ್ರಾ.ಪಂ ಆಗಿ ಮಾಡಲು ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಿಗೆ ಸೂಚಿಸಿದರು.       ಚಂದ್ರಗಿರಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿಯ ಸಭೆಯನ್ನು ಉದ್ದೇಶಿಸಿ ಕೋವಿಡ್-19 ನಿಯಂತ್ರಣಕ್ಕೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಸಮಿತಿಯ ಜವಾಬ್ದಾರಿಗಳನ್ನು ಯಶಸ್ವಿಯಾಗಿ…

ಮುಂದೆ ಓದಿ...

ಜೂ.7 ರವರೆಗೆ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಊಟ

 ತುಮಕೂರು :      ರಾಜ್ಯ ಸರ್ಕಾರ ಕೊರೋನಾ ಸೋಂಕಿನ ನಿಯಂತ್ರಣಾ ಕ್ರಮಗಳನ್ನು ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ಮೇ 24 ರಿಂದ ಜೂನ್ 7ರವರೆಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿರುವ ಇಂದಿರಾ ಕ್ಯಾಂಟೀನ್‍ಗಳಲ್ಲಿ ಉಚಿತವಾಗಿ ಬೆಳಗಿನ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟಗಳನ್ನು ವಿತರಣೆ ಮಾಡಲು ಅಗತ್ಯ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದ್ದಾರೆ.

ಮುಂದೆ ಓದಿ...

ತುಮಕೂರು : ಸ್ಲಂ ನಿವಾಸಿಗಳ ನಿರ್ಲಕ್ಷ್ಯ ಖಂಡಿಸಿ ಮನೆ ಮುಂದೆ ಪ್ರತಿಭಟನೆ

ತುಮಕೂರು:       ಕರ್ನಾಟಕ ಸರ್ಕಾರ ಕೋವಿಡ್-19 2ನೇ ಅಲೆಯ ಲಾಕ್‍ಡೌನ್‍ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಸ್ಲಂ ನಿವಾಸಿಗಳು ನಗರದ ಭಾರತಿ ನಗರದಲ್ಲಿ ಮನೆ ಮುಂದೆ ಪ್ರತಿಭಟನೆ ಮಾಡಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಸ್ಥಳೀಯ ಮುಖಂಡ ಕೆಂಪಣ್ಣ ಮಾತನಾಡಿ ಸರ್ಕಾರ ಲಾಕ್‍ಡೌನ್ ಮಾಡಿದೆ. ಆದರೆ ಯಾವುದೇ ಪರಿಹಾರ ಕೊಡದೆ ಸ್ಲಂಗಳಲ್ಲಿ ದಿನೇ ದಿನೇ ಕೊರೊನಾ ಪಾಸಿಟಿವ್ ಕೇಸ್‍ಗಳು ದಾಖಲಾಗುತ್ತಿದ್ದು, ಸ್ಥಳೀಯ ಆರೋಗ್ಯ ಇಲಾಖೆಯಿಂದ ಕೊರೊನಾ ಬಂದವರನ್ನು ಕೋವಿಡ್ ಕೇರ್ ಸೆಂಟರ್‍ಗೆ ಕರೆದೊಯ್ಯಬೇಕು, ಇಲ್ಲಿ ಅತೀ ಹೆಚ್ಚಾಗಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುವವರೆ ಹೆಚ್ಚಾನಿದ್ದು ಸರ್ಕಾರ 18 ವರ್ಷದಿಂದ 45 ವರ್ಷದೊಳಗಿನ ಎಲ್ಲರಿಗೂ ಆನ್‍ಲೈನ್ ರಿಜಿಸ್ಟರ್ ಮಾಡಿಕೊಂಡು ಉಚಿತ ಲಸಿಕೆ ಪಡೆಯುವಂತೆ ತಿಳಿಸಿದೆ. ಆದರೆ ಸ್ಲಂಗಳಲ್ಲಿ ಹೆಚ್ಚು ಅನಕ್ಷರಸ್ಥರು ಇದ್ದು ವ್ಯಾಕ್ಸಿನೇಷನ್ ಪಡೆಯಲು ತೊಂದರೆಯಾಗುತ್ತಿದೆ. ಆದ್ದ ರಿಂದ ಸ್ಥಳೀಯ ಆರೋಗ್ಯ ಅಧಿಕಾರಿಗಳು ಇಲಾಖೆಯ ಸಿಬ್ಬಂಧಿಗಳನ್ನು ಸ್ಲಂಗಳಿಗೆ ಕಳಿಸಿ ವ್ಯಾಕ್ಸಿನ್…

ಮುಂದೆ ಓದಿ...

ತುರುವೇಕೆರೆ : ಕೊರೋನಾ ವಾರಿಯರ್ಸ್‍ಗೆ ವೈದ್ಯಕೀಯ ಕಿಟ್ ವಿತರಣೆ

ತುರುವೇಕೆರೆ:       ಪಟ್ಟಣದ ರೋಟರಿ ಕ್ಲಬ್‍ನ ವತಿಯಿಂದ ಕೋವಿಡ್-19 ರೋಗದ ವಿರುದ್ಧ ಹೋರಾಟ ನಡೆಸುತ್ತಿರುವ ತಾಲ್ಲೂಕಿನ ವಾರಿಯರ್ಸ್‍ಗಳಾದ ಆಶಾಕಾರ್ಯಕರ್ತೆಯರು ಮತ್ತು ಹೋಂಗಾರ್ಡ್ ಹಾಗೂ ಪ.ಪಂಚಾಯ್ತಿ ಸಿಬ್ಬಂದಿಗಳಿಗೆ ಫೇಸ್ ಶೀಲ್ಡ್, ಎನ್-95 ಮಾಸ್ಕ್, ಸ್ಯಾನಿಟೈಸರ್‍ಗಳನ್ನು ಉಚಿತವಾಗಿ ವಿತರಿಸಲಾಯಿತು.       ಈ ಸಂದರ್ಭದಲ್ಲಿ ರೋಟರಿಕ್ಲಬ್‍ನ ಅಧ್ಯಕ್ಷರು, ಪದಾಧಿಕಾರಿಗಳು, ಪ.ಪಂ ಅಧ್ಯಕ್ಷರು, ಸದಸ್ಯರು, ಪ.ಪಂ ಮುಖ್ಯಾಧಿಕಾರಿ, ಮುಖಂಡರುಗಳೊಂದಿಗೆ ಭಾಗವಹಿಸಿರುವ ಶಾಸಕ ಮಸಾಲ ಜಯರಾಮ್‍ರವರು ತುರುವೇಕೆರೆ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಶೆಟ್ಟಗೊಂಡನಹಳ್ಳಿ, ಮಾಯಸಂದ್ರ, ಮಾಚೇನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಕೋವಿಡ್-19 ಪ್ರಕರಣಗಳ ಮಾಹಿತಿ ಪಡೆದರು.       ಪಾಸಿಟಿವ್ ಬಂದಂತಹ ಪ್ರಕರಣಗಳನ್ನು ಕ್ವಾರಂಟೈನ್ ಒಳಪಡಿಸುವಂತೆ, ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸ್ಯಾನಿಟೈಸರ್ ಸಿಂಪಡಿಸಿ, ಎಲ್ಲರಿಗೂ ಮಹಿತಿ ನೀಡುವಂತೆ ಆಶಾಕಾರ್ಯಕರ್ತೆಯರಿಗೆ ಸೂಚಿಸಲಾಯಿತು. ಶಾಸಕ ಮಸಾಲ ಜಯರಾಮ್‍ರವರು  ಕೋವಿಡ್ ರೋಗಕ್ಕೆ ಸಂಬಂಧಿಸಿದಂತೆ ಔಷದಿಗಳು, ಮಾಸ್ಕ್, ಸ್ಯಾನಿಟೈಸರ್‍ಗಳನ್ನು ಉಚಿತವಾಗಿ…

ಮುಂದೆ ಓದಿ...

ತುಮಕೂರು : ವಾರದಲ್ಲಿ ಮೂರು ದಿನ ಅಂಗಡಿ ತೆರೆಯಲು ಮನವಿ

ತುಮಕೂರು:       ನಗರದ 26ನೇ ವಾರ್ಡಿನ ಕೋವಿಡ್ ನಿರ್ವಹಣಾ ಸಮಿತಿ ಹಾಗೂ ವಾರ್ಡಿನ ವರ್ತಕರು ಸರಕಾರದ ವಿಧಿಸಿರುವ ಲಾಕ್‍ಡೌನ್ ಮುಗಿಯುವವರೆಗೂ ವಾರದಲ್ಲಿ ಮೂರು ದಿನ ಮಾತ್ರ ಅಂಗಡಿ ಮುಂಗಟ್ಟುಗಳನ್ನು ಬೆಳಗ್ಗೆ 6-10ರವರೆಗೆ ಮಾತ್ರ ತೆರೆದಿರಲು ನಿರ್ಧರಿಸಿದ್ದು, ಉಳಿದ ನಾಲ್ಕು ದಿನ ಸಂಪೂರ್ಣ ಲಾಕ್‍ಡೌನ್‍ಗೆ ಅನುಮತಿ ಕೋರಿ ಇಂದು ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.       ನಗರದ ಹೃದಯ ಭಾಗವಾದ ಅಶೋಕ ನಗರ, ಎಸ್.ಎಸ್.ಪುರಂ ಮತ್ತು ಎಸ್‍ಐಟಿ ಬಡಾವಣೆಯಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚಾಗಿರುವುದಲ್ಲದೆ ಸುಮಾರು 40ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ರೋಗ ಮತ್ತಷ್ಟು ಉಲ್ಬಣಗೊಳ್ಳುವುದನ್ನು ತಡೆಯುವ ನಿಟ್ಟಿನಲ್ಲಿ ವರ್ತಕರು ಹಾಗೂ ಕೋವಿಡ್ ನಿರ್ವಹಣಾ ಸಮಿತಿಯ ಸದಸ್ಯರುಗಳು ಚರ್ಚೆ ನಡೆಸಿ, ವಾರದ ಏಳು ದಿನಗಳಲ್ಲಿ ಸೋಮವಾರ, ಮಂಗಳವಾರ ಮತ್ತು ಬುಧವಾರ ಮಾತ್ರ ಬೆಳಗ್ಗೆ 6 ರಿಂದ 10ವರೆಗೆ ಅಂಗಡಿ ಮುಂಗಟ್ಟುಗಳನ್ನು…

ಮುಂದೆ ಓದಿ...