ಪಡಿತರಕ್ಕಾಗಿ ಮುಂಜಾನೆಯಿಂದಲೇ ಮೈಲುದ್ದದ ಸಾಲು

ಹುಳಿಯಾರು :       ಲಾಕ್‍ಡೌನ್ ಕಾರಣ ಪಡಿತರ ಪಡೆಯಲು ಫಲಾನುಭವಿಗಳು ಬೆಳ್ಳಂಬೆಳಿಗ್ಗೆ ನ್ಯಾಯಬೆಲೆ ಅಂಗಡಿಗಳ ಮುಂಭಾಗದಲ್ಲಿ ರಸ್ತೆಯುದ್ದಕ್ಕೂ ಮೈಲುದ್ದದ ಸಾಲು ನಿಂತು ಗಂಟೆಗಟ್ಟಲೆ ಕಾದು ಪಡಿತರ ಪಡೆಯುವ ದೃಶ್ಯ ಹುಳಿಯಾರು ಪಟ್ಟಣದಲ್ಲಿ ಸಾಮಾನ್ಯವಾಗಿದೆ.       ಬೆಳಗ್ಗೆ 6 ರಿಂದ 10 ಗಂಟೆಯವರೆವಿಗೆ ಲಾಕ್‍ಡೌನ್ ಸಡಿಲಿಕೆ ಇದೆ. ನಂತರ ಓಡಾಡಿದರೆ ಪೊಲೀಸ್ ಲಾಠಿ ರುಚಿ ನಿಶ್ಚಿತ. ಹಾಗಾಗಿ ಹಳ್ಳಿಗಳಿಂದ ಫಲಾನುಭವಿಗಳು ಸೈಕಲ್, ಬೈಕ್ ಮೂಲಕ ಬೆಳ್ಳಂಬೆಳಗ್ಗೆಯೇ ನ್ಯಾಯಬೆಲೆ ಅಂಗಡಿಗಳ ಮುಂದೆ ಬಂದು ಕ್ಯೂ ನಿಲ್ಲುತ್ತಿದ್ದಾರೆ. ಹಳ್ಳಿಗರು ಬರುವುದನ್ನು ನೋಡಿ ಪಟ್ಟಣದವರು ಬಂದು ಸರತಿಯಲ್ಲಿ ಸೇರುತ್ತಿದ್ದಾರೆ. ಹಾಗಾಗಿ ಪ್ರತಿ ನ್ಯಾಯಬೆಲೆ ಅಂಗಡಿಗಳ ಮುಂದೆ ಮೈಲುದ್ದ ಸರತಿ ಇದ್ದೇ ಇರುತ್ತದೆ. ಬಯೋಮೆಟ್ರಿಕ್ ಮೂಲಕ ಪಡಿತರ ವಿತರಿಸುತ್ತಿರುವುದರಿಂದ ಒಬ್ಬೊಬ್ಬರಿಗೆ ಕನಿಷ್ಠ ಎಂದರೂ ಹದಿನೈದಿಪ್ಪತ್ತು ನಿಮಿಷ ಸಮಯ ಹಿಡಿಯುತ್ತಿದೆ. ಹಾಗಾಗಿ ಗಂಟೆಗಟ್ಟಲೆ ಕ್ಯೂ ನಿಲ್ಲುವುದು ಅನಿವಾರ್ಯ. ಅಲ್ಲದೆ ಮೊದಲೆಲ್ಲ…

ಮುಂದೆ ಓದಿ...

ಹುಳಿಯಾರು : ಕೋವಿಡ್ ಕೇರ್ ಸೆಂಟರ್ ಆರಂಭ

ಹುಳಿಯಾರು:       ಹುಳಿಯಾರಿನ ಅಂಬೇಡ್ಕರ್ ಭವನದ ಹಿಂಭಾಗದಲ್ಲಿರುವ ಸರ್ಕಾರಿ ಸಾರ್ವಜನಿಕ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯವು ಈಗ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆಯಾಗಿದೆ.        ಹುಳಿಯಾರು ಪಟ್ಟಣ ಸೇರಿದಂತೆ ಕೆಂಕೆರೆ, ಲಿಂಗಪ್ಪನಪಾಳ್ಯ, ಕೆ.ಸಿ.ಪಾಳ್ಯ, ವಳಗೆರೆಹಳ್ಳಿ ಮುಂತಾದಡೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು ತುರ್ತಾಗಿ ಹುಳಿಯಾರಿನಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸುವಂತೆ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರು ಸೂಚಿಸಿದ ಹಿನ್ನೆಲೆಯಲ್ಲಿ ಆರಂಭಿಸಲಾಗಿದೆ.       ಮೇ. 20ನೇ ತಾರೀಖಿನಿಂದ ಈಚೆಗೆ ಪಾಸಿಟಿವ್ ಬಂದಿರುವವರು, ಹೋಂ ಕ್ವಾರಂಟೈನ್‍ನಲ್ಲಿರುವವರನ್ನು ಈ ಕೋವಿಡ್ ಕೇರ್ ಸೆಂಟರ್‍ಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದ್ದು ಆಶಾ, ಅಂಗನವಾಡಿ ಮತ್ತು ಪಪಂ ಸಿಬ್ಬಂದಿಗಳು ಸೋಂಕಿತರನ್ನು ಕೇರ್ ಸೆಂಟರ್‍ಗೆ ಕರೆತರಲಿದ್ದಾರೆ. ಸೋಂಕಿತರು ನಿರಾಕರಿಸಿದರೆ ಪೊಲೀಸ್ ಸಹಕಾರ ಸಹ ಪಡೆಯುವುದಾಗಿ ಪಪಂ ಮುಖ್ಯಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.       ಕೋವಿಡ್ ಕೇರ್ ಸೆಂಟರ್‍ನ…

ಮುಂದೆ ಓದಿ...

ತುಮಕೂರು : ಕೋವಿಡ್ ಆರೈಕೆ ಕೇಂದ್ರಕ್ಕೆ ಡಿ.ಸಿ.ಗೌರಿ ಶಂಕರ್ ಭೇಟಿ

ತುಮಕೂರು:       ನಗರಕ್ಕೆ ಸಮೀಪವಿರುವ ಬೆಳಗುಂಬ ರೆಡ್‍ಕ್ರಾಸ್ ಕಟ್ಟಡದಲ್ಲಿ ನಡೆಯುತ್ತಿರುವ ಕೋವಿಡ್ ಆರೈಕೆ ಕೇಂದ್ರಕ್ಕೆ ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್, ತಹಶೀಲ್ದಾರ್ ಮೋಹನ್ ಕುಮಾರ್, ತಾಲ್ಲೂಕು ವೈದ್ಯಾಧಿಕಾರಿ ಮೋಹನ್ ಸೇರಿದಂತೆ ಹಲವರು ಗುರುವಾರ ಭೇಟಿ ನೀಡಿ ಸೋಂಕಿತರಿಗೆ ಸಿಗುತ್ತಿರುವ ಸೌಲಭ್ಯಗಳು ಮತ್ತು ಸ್ವಚ್ಚತೆಗೆ ಆಧ್ಯತೆ ನೀಡಿರುವುದನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.       ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಡಿ.ಸಿ.ಗೌರಿಶಂಕರ್ ಬೆಳಗುಂಬ ರೆಡ್ ಕ್ರಾಸ್ ಕಟ್ಟಡದಲ್ಲಿ ವಿವಿಧ ಸಂಘ ಸಂಸ್ಥೆಗಳೊಡಗೂಡಿ ಮುರಳೀಧರ್ ಹಾಲಪ್ಪ ಮತ್ತು ರೆಡ್ ಕ್ರಾಸ್ ಸಂಸ್ಥೆಯ ಛೇರ್ಮೆನ್ ನಾಗಣ್ಣ ಅವರು ಕೋವಿಡ್ ಆರೈಕೆ ಕೇಂದ್ರವನ್ನು ಆರಂಭಿಸಿರುವುದು ಈ ಭಾಗದ ಜನರಿಗೆ ಅಷ್ಟೇ ಅಲ್ಲದೇ ವಿವಿಧೆಡೆಗಳಿಂದ ಬರುವ ಸೋಂಕಿತರಿಗೂ ಅನುಕೂಲವಾಗಿದೆ ಎಂದರು.  ಇಲ್ಲಿ ಸ್ವಚ್ಚತೆಗೆ ಹೆಚ್ಚಿನ ಆಧ್ಯತೆ ನೀಡಲಾಗಿದೆ. ಸೋಂಕಿತರಿಗೆ ಔಷಧಿ, ಊಟೋಪಚಾರ, ಹಣ್ಣುಗಳು, ಡ್ರೈಫ್ರೂಟ್ಸ್ ಸೇರಿದಂತೆ ಮನೆಗಿಂತಲೂ ಇಲ್ಲೇ ಹೆಚ್ಚಿನ ಸೌಲಭ್ಯಗಳನ್ನು…

ಮುಂದೆ ಓದಿ...

ಕೊರೋನಾ ನಿಯಂತ್ರಣದ ಜೊತೆಗೆ ಅಭಿವೃದ್ಧಿ ಕಾರ್ಯಕ್ಕೂ ಆದ್ಯತೆ

ತುಮಕೂರು:       ಕೋವಿಡ್ ನಿಯಂತ್ರಣದ ಜವಾಬ್ದಾರಿಯ ಜೊತೆಗೆ ನಗರದ ಅಭಿವೃದ್ಧಿ ಕಾರ್ಯಗಳಿಗೂ ಆದ್ಯತೆ ನೀಡಬೇಕು. ಪಾಲಿಕೆಯ ಎಲ್ಲಾ ವಾರ್ಡ್‍ಗಳಿಗೂ ಸಮಾನವಾಗಿ ಅಭಿವೃದ್ಧಿ ಅನುದಾನ ನೀಡಬೇಕು. ಕೋವಿಡ್ ಸಂಕಷ್ಟದಲ್ಲಿರುವ ಬಡ ಕುಟುಂಬಗಳಿಗೆ ನೆರವಾಗಿ ಆಹಾರ ಕಿಟ್ ವಿತರಣೆ ಮಾಡಬೇಕು ಎಂದು ಪಾಲಿಕೆ ಸದಸ್ಯರು ಒಮ್ಮತದಿಂದ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.        ಕೊರೋನಾತಂಕದ ನಡುವೆಯೂ ಇಂದು ಸಾಮಾಜಿಕ ಅಂತರ ಕಾಪಾಡುಕೊಳ್ಳುವಿಕೆಯ ಹಿತದೃಷ್ಟಿಯಿಂದ ಗೂಗಲ್ ಮೀಟ್ ಆ್ಯಪ್ ಮೂಲಕ ನಡೆದ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಪಾಲಿಕೆ ಸದಸ್ಯರು ಮೊದಲಾದ್ಯತೆ ಕೋವಿಡ್ ನಿರ್ಮೂಲನೆಗೆ ಹೆಚ್ಚು ಒತ್ತು ಕೊಡಬೇಕು. ಜೊತೆಯಲ್ಲಿಯೇ ಅಭಿವೃದ್ಧಿಯ ಕಡೆಗೂ ಗಮನಹರಿಸಬೇಕು ಎಂದು ಒತ್ತಾಯಿಸಿದರು.       ಸಭೆಯಲ್ಲಿ ಸಂಸದ ಜಿ.ಎಸ್. ಬಸವರಾಜು ಮಾತನಾಡಿ, ನಗರದಲ್ಲಿ ಕೋವಿಡ್ ನಿರ್ವಹಣೆ ಮತ್ತಷ್ಟು ಸಮರ್ಪಕವಾಗಿ ನಡೆಯಬೇಕು. ಕನಿಷ್ಠ ಮೂರು ವಾರ್ಡ್ ಗಳಿಗೆ ಒಂದರಂತೆ ಕೊರೋನಾ…

ಮುಂದೆ ಓದಿ...