ತುಮಕೂರು : ಕೋವಿಡ್ ಕೇರ್ ಸೆಂಟರ್‍ನಲ್ಲಿ ಸೋಂಕಿತರಿಂದ ಜೂಜು

ತುಮಕೂರು:      ಕೋವಿಡ್ ಕೇರ್ ಸೆಂಟರ್‍ನಲ್ಲಿ ಕೊರೋನಾ ಸೋಂಕು ತಗುಲಿರುವವರಿಗೆ ಚಿಕಿತ್ಸೆ ನೀಡಲಾಗುತ್ತದೆ. ಸಾಧ್ಯವಾದಷ್ಟು ಬೇಗ ಕೊರೋನಾ ಸೋಂಕು ನಿವಾರಣೆಯಾಗಿ ಮನೆಗಳಿಗೆ ತೆರಳಲಿ ಹಾಗೂ ಗ್ರಾಮದಲ್ಲಿ ಇತರರಿಗೆ ಸೋಂಕು ತಗುಲದೆ ಇರಲಿ ಅಂತಾ ಜಿಲ್ಲಾ ಆರೋಗ್ಯ ಇಲಾಖೆ ಆಯಾ ತಾಲೂಕುಗಳಲ್ಲಿ ಕೊವಿಡ್ ಕೇರ್ ಸೆಂಟರ್‍ಗಳನ್ನು ತೆರದಿದೆ. ಪಾಸಿಟಿವ್ ಬಂದವರನ್ನು ಕೂಡಲೇ ಕೊವಿಡ್ ಕೇರ್ ಸೆಂಟರ್‍ಗೆ ದಾಖಲಿಸಿ ಚಿಕಿತ್ಸೆ ನೀಡುವ ಜೊತೆಗೆ ಮೂರು ಹೊತ್ತು ಆಹಾರ, ಬಿಸಿ ನೀರು ವ್ಯವಸ್ಥೆ ಕೂಡ ಕಲ್ಪಿಸಲಾಗುತ್ತದೆ. ಈ ನಡುವೆ ಸೋಂಕಿತರು ಕೊವಿಡ್ ಕೇರ್ ಸೆಂಟರ್‍ನಲ್ಲಿ ಯಾರ ಭಯವಿಲ್ಲದೆ ಇಸ್ಪೀಟ್ ಆಟವನ್ನು ಶುರು ಮಾಡಿದ್ದಾರೆ.      ಸೋಂಕು ನಿವಾರಿಸಿಕೊಂಡು ಸಾಧ್ಯವಾದಷ್ಟು ಬೇಗ ತಮ್ಮ ಊರಿಗೆ ತೆರಳಬೇಕಾಗಿರುವ ಸೋಂಕಿತರು, ಸೋಂಕು ಬಂದಿರುವುದನ್ನು ಮರೆತು ಕೊವಿಡ್ ಕೇರ್ ಸೆಂಟರ್‍ನಲ್ಲಿ ಜೂಜಾಟ ಆಡಿದ್ದಾರೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಇರುವ ಕೊವಿಡ್ ಕೇರ್ ಸೆಂಟರ್‍ನಲ್ಲಿ…

ಮುಂದೆ ಓದಿ...

ವಾರದಿಂದ ಕರೆಂಟ್ ಇಲ್ಲದೆ ಕತ್ತಲೆಯಲ್ಲಿ ಗೊಲ್ಲರಹಟ್ಟಿ ನಿವಾಸಿಗಳು

ಹುಳಿಯಾರು:       ಅರಳಿ ಮರದ ಕೊಂಬೆ ಬಿದ್ದು ಮುರಿದಿರುವ ವಿದ್ಯುತ್ ಕಂಬ ದುರಸ್ಥಿ ಮಾಡದೆ ನಿರ್ಲಕ್ಷ್ಯಿಸಿರುವ ಪರಿಣಾಮ ಹುಳಿಯಾರು ಹೋಬಳಿಯ ತಮ್ಮಡಿಹಳ್ಳಿಗೊಲ್ಲರಹಟ್ಟಿಯ ಕೆಲ ನಿವಾಸಿಗಳು ಕತ್ತಲೆಯಲ್ಲಿ ರಾತ್ರಿ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.       ಇಲ್ಲಿನ ಬಾವಿಯ ಹತ್ತಿರದ ವಿದ್ಯುತ್ ಕಂಬದಿಂದ ಕಿರುನೀರು ಸರಬರಾಜು ವ್ಯವಸ್ಥೆಗೆ ಹಾಗೂ ಕೆಲ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿತ್ತು. ಆದರೆ ಈ ಕಂಬ ಕಳೆದ ಒಂದು ವಾರದ ಹಿಂದೆ ಮಳೆಗಾಳಿಗೆ ಬಿದ್ದ ಮರದ ಕೊಂಬೆಯಿಂದ ಮುರಿದಿದೆ. ವಿಷಯ ತಿಳಿದ ಬೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದು ಬಿಟ್ಟರೆ ಕಂಬ ಬದಲಾವಣೆಗೆ ಮುಂದಾಗಿಲ್ಲ.       ಪರಿಣಾಮ ಒಂದು ವಾರದಿಂದ ನೀರು ಸರಬರಾಜು ಇಲ್ಲದೆ ಇಲ್ಲಿನ ನಿವಾಸಿಗಳು ಸಮೀಪದ ತೋಟಗಳಿಂದ ಹಾಗೂ ಕೈ ಪಂಪುಗಳಿಂದ ನೀರನ್ನು ತರುತ್ತಿದ್ದಾರೆ. ಅಲ್ಲದೆ ವಾರದಿಂದ ಮನೆಗಳಿಗೆ ಕರೆಂಟ್ ಇಲ್ಲದೆ…

ಮುಂದೆ ಓದಿ...

ಮೋದಿ ನೇತೃತ್ವದ ಸರ್ಕಾರಕ್ಕೆ ಎರಡು ವರ್ಷ

ತುಮಕೂರು:       ಕೇಂದ್ರದಲ್ಲಿ ಪ್ರಧಾನ ಮಂತ್ರಿ ನರೇಂದ್ರಮೋದಿ ಅವರು ಎರಡನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ,ಮೇ 30ಕ್ಕೆ ಎರಡು ವರ್ಷಗಳು ಪೂರೈಸುವ ಹಿನ್ನೆಲೆಯಲ್ಲಿ ಇಂದು ಬಿಜೆಪಿ ಯುವಮೋರ್ಚಾ ವತಿಯಿಂದ ನಗರದಲ್ಲಿರುವ ಕೋವಿಡ್-19 ಸೋಂಕಿತ ರೋಗಿಗಳಿಗೆ ಪೌಷ್ಠಿಕ ಆಹಾರವಾದ ಡ್ರೈಪ್ರೂಟ್ಸ್‍ಗಳ ಕಿಟ್ ವಿತರಿಸಲಾಯಿತು.       ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಸುರೇಶಗೌಡ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಅರಕೆರೆ ರವೀಶ್, ಪ್ರಧಾನ ಕಾರ್ಯದರ್ಶಿ ಯಶಸ್ಸ್, ಶಿವಕುಮಾರಸ್ವಾಮಿ ಕಾರ್ಯದರ್ಶಿ ಚೇತನ್, ಗ್ರಾಮಾಂತರ ತಾಲೂಕು ಅಧ್ಯಕ್ಷರಾದ ಶಂಕರಣ್ಣ, ಮುಖಂಡರಾದ ಮಾಸ್ತಿಗೌಡರು, ವೈ.ಟಿ.ನಾಗರಾಜು, ಶ್ರೀಧರ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಸಿದ್ದೇ ಗೌಡ,ಹಾಗೂ ಯುವಮೋರ್ಚಾ ಮುಖಂಡರು ಜಲ್ಲಾಸ್ಪತ್ರೆ, ಸಿದ್ದಗಂಗಾಮಠ ಕೋವಿಡ್ ಸೆಂಟರ್, ಕ್ಯಾತ್ಸಂದ್ರದ ಕೋವಿಡ್ ಸೆಂಟರ್ ಹಾಗು ಕೋಡಿ ಮುದ್ದನಹಳ್ಳಿಯ ಮೂರಾರ್ಜಿ ದೇಸಾಯಿ ವಸತಿ ಶಾಲೆಯ ಕೋವಿಡ್ ಸೆಂಟರ್‍ಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಮಾರು 600 ರೋಗಿಗಳಿಗೆ…

ಮುಂದೆ ಓದಿ...