ವಾರದೊಳಗೆ ಕೊರೋನಾ ಸೋಂಕಿತರ ಸಂಖ್ಯೆ ಶೇ. 5ರಷ್ಟು ಇರಬೇಕು – ಸಂಸದ

ಮಧುಗಿರಿ: ತಾಲ್ಲೂಕಿನಲ್ಲಿ ಇನ್ನೊಂದು ವಾರದೊಳಗೆ ಕೊರೋನಾ ಸೋಂಕಿತರ ಸಂಖ್ಯೆ ಶೇಕಡ 5ರಷ್ಟು ಇರಬೇಕು, ಇದಕ್ಕಾಗಿ ತಾಲ್ಲೂಕು ಆಡಳಿತ ಮತ್ತು ಪಿಡಿಒಗಳು,ಇತರೆ ಇಲಾಖೆಯ ಅಧಿಕಾರಿಗಳು ಇನ್ನಷ್ಟು ಶ್ರಮವಹಿಸಿ ಕೆಲಸ ಮಾಡಬೇಕೆಂದು ಸಂಸದ ಜಿ.ಎಸ್. ಬಸವರಾಜು ತಿಳಿಸಿದರು. ಸೋಮವಾರದಂದು ಪಟ್ಟಣದಲ್ಲಿರುವ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಪಿಡಿಒಗಳು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಲ್ಲಿಯವರೆಗೆ ಹಗಳಿರುಳು ಶ್ರಮವಹಿದ ಎಲ್ಲಾ ಅಧಿಕಾರಿಗಳು,ವ್ಯೆಧ್ಯರು,ಅಂಗನವಾಡಿ,ಅಶಾಕಾರ್ಯಕರ್ತರು,ಪಿಡಿಓಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಕರೋನಾ ಪರೀಕ್ಷೆ ನಡೆಸಿದ ಬಳಿಕ ಸೋಂಕಿತ ನನ್ನು ಬೇಗ ಪತ್ತೆ ಹಚ್ಚುತ್ತೀರಿ, ಆರ್ ಟಿಪಿಸಿಆರ್ ನೆಗೆಟಿವ್ ಬಂದವರ ವರದಿ ತಡವಾಗಿ ಬರುತ್ತಿರುವುದರಿಂದ ಆತಂಕ ಹೆಚ್ಚಾಗುತ್ತಿದ್ದು ಬೇಗ ವರದಿ ನೀಡಿದರೆ ಸಾರ್ವಜನಿಕರು ನಿರಾಳರಾಗುತ್ತಾರೆ ಎಂದರು. ಸೋಂಕಿತರು ಪತ್ತೆಯಾದ ತಕ್ಷಣ ಆಶಾ ಕಾರ್ಯಕರ್ತರು ಕೋವಿಡ್ ಕೇರ್ ಸೆಂಟರ್ ಗೆ ಕಳುಹಿಸಬೇಕು. ಇವರಿಗೆ ಪೊಲೀಸರು ಸಹಕಾರ ನೀಡುವಂತೆ ತಿಳಿಸಿದರು. ಲಸಿಕೆ ಬಗ್ಗೆ ಅಪಪ್ರಚಾರ ಬೇಡ :ಪ್ರತಿಯೊಬ್ಬರು…

ಮುಂದೆ ಓದಿ...

ತುಮಕೂರು : ಕೊರೋನಾ ಮುಕ್ತ ಮೊದಲ ಜಿಲ್ಲೆಯನ್ನಾಗಿಸಿ

ತುಮಕೂರು:       ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಸಂಪೂರ್ಣ ಉಚಿತವಾಗಿ ಮಹಾಮಾರಿ ಕೊರೋನಾ ವೈರಸ್ ಸೋಂಕಿಗೆ ಚಿಕಿತ್ಸೆ ನೀಡಬೇಕು, ಜಿಲ್ಲೆಯ ಯುವಜನತೆಗೆ 1 ಮತ್ತು 2ನೇ ಡೋಸ್ ಲಸಿಕೆ, ಕೋವಿಡ್ ಅಲೆಯಿಂದ ಮಕ್ಕಳ ರಕ್ಷಣೆ, ಆಕ್ಸಿಜನ್ ರೆಮಿಡಿಸಿವರ್, ಆಂಬುಲೆನ್ಸ್, ಕೋವಿಡ್ ಹಾಗೂ ಫಂಗಸ್ ಔಷಧಿಗಾಗಿ ಕ್ರಿಯಾಯೋಜನೆ ಸಿದ್ಧಪಡಿಸುವ ಮೂಲಕ ಕೋವಿಡ್ ಮುಕ್ತ ಮೊದಲ ಜಿಲ್ಲೆಯಾಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕರಾದ ಮುರಳೀಧರ ಹಾಲಪ್ಪ ಅವರು ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಒತ್ತಾಯಿಸಿದರು.        ನಗರದ ಅಮಾನಿಕೆರೆ ಬಳಿ ಇರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗೇಂದ್ರ ಅವರೊಂದಿಗೆ ಚರ್ಚೆ ನಡೆಸಿ ಮಾತನಾಡಿದ ಅವರು, ಕೋವಿಡ್ 2ನೇ ಅಲೆಯು ಇಡೀ ದೇಶಾದ್ಯಂತ ಹಾಗೂ ರಾಜ್ಯದಲ್ಲಿ ಹೆಚ್ಚಾಗುತ್ತಿದ್ದು,…

ಮುಂದೆ ಓದಿ...

ತುಮಕೂರು : ಡಾ||ರುದ್ರಮೂರ್ತಿ ವರ್ಗಾವಣೆ ರದ್ದುಗೊಳಿಸಲು ಒತ್ತಾಯ

ತುಮಕೂರು:       ಜಿಲ್ಲಾಸ್ಪತ್ರೆಯಲ್ಲಿ ಪ್ಲೋರೆನಿಸಿಕ್ ಲ್ಯಾಬ್ ಹಾಗೂ ಮರಣೋತ್ತರ ಪರೀಕ್ಷೆ ತಜ್ಞರಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ರುದ್ರಮೂರ್ತಿ ಅವರ ವರ್ಗಾವಣೆಯನ್ನು ರದ್ದುಗೊಳಿಸಿ, ತುಮಕೂರು ಜಿಲ್ಲಾಸ್ಪತ್ರೆ ಯಲ್ಲಿಯೇ ಮುಂದುವರೆಸುವಂತೆ ಚಾರಿಟಬಲ್ ಟ್ರಸ್ಟ್‍ನ ಅಧ್ಯಕ್ಷ ಟಿ.ಎಸ್.ಗೌಸ್‍ಪಾಷಶೇಖ್ ಅವರ ನೇತೃತ್ವದಲ್ಲಿ ನಾಗರಿಕರು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.       ಕಳೆದ 10 ವರ್ಷಗಳಿಂದಲೂ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ವಿಭಾಗ ಹಾಗೂ ಬೆರಳಚ್ಚು ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ರುದ್ರಮೂರ್ತಿ ಅವರ ಸೇವೆ ಅನನ್ಯ, ಸಾರ್ವಜನಿಕರಿಗೆ ಸ್ಪಂದಿಸಿ ಕೆಲಸ ಮಾಡುತ್ತಿದ್ದಾರೆ. ಸಾವನ್ನಪ್ಪಿದವರ ಸಂಬಂಧಿಕರ ಕೋರಿಕೆಯ ಮೇರೆಗೆ ತಡರಾತ್ರಿಯಾದರೂ ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹವನ್ನು ಹಸ್ತಾಂತರಿಸಿರುವ ಉದಾಹರಣೆ ಇದೆ. ಇವರ ಸೇವೆ ಇನ್ನು ಎರಡುವರೆ ವರ್ಷ ಬಾಕಿ ಇರುವ ವೇಳೆ ಸರಕಾರ ಜಿಲ್ಲಾ ಸರ್ಜನ್ ಆಗಿ ಮುಂಬಡ್ತಿ ನೀಡಿ ಬೇರೆ ಜಿಲ್ಲೆಗೆ ವರ್ಗಾಯಿಸಿದೆ. ಇವರ ಸೇವೆ ಜಿಲ್ಲಾಸ್ಪತ್ರೆಗೆ…

ಮುಂದೆ ಓದಿ...

ವೈದ್ಯ ನಡೆ ಹಳ್ಳಿ ಕಡೆ : ನೂತನ ಕಾರ್ಯಕ್ಕೆ ಜೆಸಿಎಂ ಚಾಲನೆ

ತುಮಕೂರು :         ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯಕೀಯ ಸೌಲಭ್ಯಗಳ ಕೊರತೆ ಮತ್ತು ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ಲ್ಯಾಬ್ ಬ್ಯುಲ್ಟ್ ಆನ್ ವೀಲ್ಸ್ ಎನ್ನುವ ಮೊಬೈಲ್ ಕ್ಲಿನಿಕ್‍ಗೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಚಾಲನೆ ನೀಡಿದರು.       ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಸೋಮವಾರ ಬೆಂಗಳೂರು ಹೈಗ್ರೌಂಡ್ಸ್ ರೋಟರಿ, ಸಾಯಿಕಾರ್ಪ್ ಸಂಸ್ಥೆಯೊಂದಿಗೆ ಟಾಟಾ ಮೆಡಿಕಲ್ ಡಯೋಗ್ನಿಸ್ಟಿಕ್ ಸಂಸ್ಥೆಯವರು ಸಿಆರ್‍ಐಎಸ್‍ಪಿಆರ್ ತಂತ್ರಜ್ಞಾನದ ಮೊಬೈಲ್ ಕ್ಲಿನಿಕ್‍ಗೆ ಪೂಜೆ ಸಲ್ಲಿಸುವ ಮೂಲಕ ಸಚಿವ ಜೆ.ಸಿ.ಮಾಧುಸ್ವಾಮಿ ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು.       ರೋಟರಿ ಹೈಗ್ರೌಂಡ್ಸ್ ಮತ್ತು ಆಟೋಮೋಟಿವ್ ಆಕ್ಸಿಸ್ ಕಂಪನಿಯವರು ತನ್ನ ಸಿಎಸ್‍ಆರ್ ನಿಧಿಯಿಂದ 1 ಕೋಟಿ ರೂ ವೆಚ್ಚದ ವಾಹನ ಮತ್ತು ಟಾಟಾ ಮೆಡಿಕಲ್ ಅಂಡ್ ಡಯಾಗ್ನಾಸ್ಟಿಕ್ ಕಂಪನಿಯವರು 80 ಲಕ್ಷ ರೂ.ವೆಚ್ಚದ ತಾಂತ್ರಿಕ ಉಪಕರಣಗಳನ್ನು ನೀಡಿದ್ದಾರೆ. ಇದು…

ಮುಂದೆ ಓದಿ...