ಪಡಿತರ ವಿತರಣೆಯಲ್ಲಿ ಲೋಪದೋಷ: ಲಿಖಿತ ದೂರು ಸಲ್ಲಿಸಿ

 ತುಮಕೂರು :       ಪಡಿತರ ಚೀಟಿದಾರರಿಗೆ ಪಡಿತರ ವಿತರಣೆಯಲ್ಲಿ ಸಮಸ್ಯೆ/ಲೋಪದೋಷಗಳು ಉಂಟಾದಲ್ಲಿ ಆಯಾ ತಾಲ್ಲೂಕಿನ ತಹಸೀಲ್ದಾರ್/ಆಹಾರ ಇಲಾಖೆಯ ಆಹಾರ ಶಿರಸ್ತೇದಾರ್/ಆಹಾರ ನಿರೀಕ್ಷಕರಿಗೆ ಲಿಖಿತವಾಗಿ ದೂರು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದ್ದಾರೆ. ಸರ್ಕಾರ ನಿಗದಿಪಡಿಸಿದ ಪ್ರಮಾಣಕ್ಕಿಂತ ಕಡಿಮೆ ಪಡಿತರ ವಿತರಣೆ, ಕಾರ್ಡುದಾರದಿಂದ ಹಣ ಪಡೆಯುವಿಕೆ, ನಿಗದಿತ ಸಮಯಕ್ಕೆ ನ್ಯಾಯಬೆಲೆ ಅಂಗಡಿ ಬಾಗಿಲು ತೆರೆಯದೇ ಇರುವುದು, ಒಂದೆರಡು ದಿನ ಮಾತ್ರ್ರ ಪಡಿತರ ವಿತರಣೆ ಮಾಡಿ ನಂತರ ಬಂದವರಿಗೆ ಪಡಿತರ ಇಲ್ಲವೆಂದು ನಿರಾಕರಿಸುವುದು, ಪಡಿತರ ಪದಾರ್ಥಗಳ ಜೊತೆಗೆ ಮುಕ್ತ ಮಾರುಕಟ್ಟೆ ವಸ್ತುಗಳನ್ನು ಖರೀದಿಸುವಂತೆ ಒತ್ತಾಯಿಸುವುದು, ಕಾರ್ಡುದಾರರೊಂದಿಗೆ ಅಸಭ್ಯವಾಗಿ ವರ್ತಿಸುವುದು, ಬಯೋಮೆಟ್ರಿಕ್ ಪಡೆದು ಮರುದಿನ ಪಡಿತರ ವಿತರಿಸುವುದು, ಒಂದು ದಿನ ಟೋಕನ್ ವಿತರಣೆ ಮಾಡಿ ಮತ್ತೊಂದು ದಿನ ಪಡಿತರ ವಿತರಿಸುವುದು, ಕಳಪೆ ಗುಣಮಟ್ಟದ ಪಡಿತರ ವಿತರಣೆ ಸೇರಿದಂತೆ ಇನ್ನಿತರ ಸಮಸ್ಯೆಗಳು ಕಂಡುಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ ದೂರು…

ಮುಂದೆ ಓದಿ...

ಕಟ್ಟಡ ಕಾರ್ಮಿಕರಿಗೆ ಕಳಪೆ ಪಡಿತರ ಕಿಟ್ ; ತನಿಖೆ ಒತ್ತಾಯಿಸಿ ಪ್ರತಿಭಟನೆ

ತುಮಕೂರು:       ಕಟ್ಟಡ ಕಾರ್ಮಿಕರಿಗೆ ಲಾಕ್‍ಡೌನ್ ಪರಿಹಾರವಾಗಿ 10 ಸಾವಿರ ಹಾಗೂ ಕಟ್ಟಡ ಕಾರ್ಮಿಕರಿಗೆ ವಿತರಿಸಿರುವ ಕಳಪೆ ಪಡಿತರ ಕಿಟ್ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿ ರಾಜ್ಯ ಕಟ್ಟಡ ಕಾರ್ಮಿಕರ ಸಂಘಟನೆಯ ಸಮನ್ವಯ ಸಮಿತಿ ನೇತೃತ್ವದಲ್ಲಿ ಕಟ್ಟಡ ಕಾರ್ಮಿಕ ಮುಂಡರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಅವರು, ಕೊರೋನಾ ಎರಡನೇ ಅಲೆಯಿಂದಾಗಿ ಸರ್ಕಾರ ಲಾಕ್‍ಡೌನ್ ಘೋಷಿಸಿತು, ಈ ಲಾಕ್‍ಡೌನ್‍ನಿಂದಾಗಿ ಅಸಂಘಟಿತ ವಲಯದ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ, ಕಟ್ಟಡ ಕಾರ್ಮಿಕರಿಗೆ ಕೆಲಸ ದೊರೆಯದೇ ಸಂಕಷ್ಟಕ್ಕೆ ಸಿಲುಕಿದ್ದು, ಪ್ರತಿ ಕಟ್ಟಡ ಕಾರ್ಮಿಕರಿಗೆ 10 ಸಾವಿರ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.       ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಗೂ ಶಾಸಕರಿಗೂ ಏನು ಸಂಬಂಧ, ನೈಜ ಕಟ್ಟಡ ಕಾರ್ಮಿಕರಿಗೆ ಸೌಲಭ್ಯ ದೊರೆಯಬೇಕಾದರೆ, ಶಾಸಕರ ಮಧ್ಯ ಪ್ರವೇಶವನ್ನು…

ಮುಂದೆ ಓದಿ...

ಪತ್ರಿಕಾ ಮುದ್ರಣಕಾರರಿಗೆ ರಾಮಕೃಷ್ಣ ಸೇವಾಶ್ರಮದಿಂದ ಆಹಾರ ಕಿಟ್‍

ತುಮಕೂರು :       ಜಿಲ್ಲೆಯಲ್ಲಿ ಮಾತ್ರವಲ್ಲದೆ ಹೊರ ಜಿಲ್ಲೆಗಳಲ್ಲೂ ಸಹ ಕೋವಿಡ್‍ನಿಂದ ಸಂಕಷ್ಟಕ್ಕೊಳಗಾದವರಿಗೆ ಆಹಾರದ ಕಿಟ್‍ಗಳನ್ನು ವಿತರಿಸಲಾಗುತ್ತಿದೆ ಎಂದು ಪಾವಗಡ ರಾಮಕೃಷ್ಣ ಸೇವಾಶ್ರಮದ ಮುಖ್ಯಸ್ಥರಾದ ಸ್ವಾಮಿ ಜಪಾನಂದಾಜೀ ತಿಳಿಸಿದರು.       ನಗರದ ಪತ್ರಿಕಾ ಭವನದಲ್ಲಿ ಗುರುವಾರ ಜಿಲ್ಲಾ ಮುದ್ರಣಕಾರರ ಸಂಘದಿಂದ ನಗರದಲ್ಲಿರುವ ಮುದ್ರಣಕಾರರಿಗೆ ಆಹಾರದ ಕಿಟ್‍ಗಳನ್ನು ವಿತರಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇದುವರೆಗೂ ಸುಮಾರು 20 ಸಾವಿರಕ್ಕೂ ಅಧಿಕ ಆಹಾರದ ಕಿಟ್‍ಗಳನ್ನು ವಿತರಿಸಲಾಗಿದ್ದು, ಇಂದೂ ಕೂಡ ಮಧುಗಿರಿಯಲ್ಲಿ ಕುಂಚ ಕಲಾವಿದರು ಮತ್ತು ಛಾಯಾಗ್ರಾಹಕರಿಗೆ ಆಹಾರದ ಕಿಟ್‍ಗಳನ್ನು ವಿತರಿಸಿ ಬಂದಿದ್ದೇನೆ ಎಂದರು.       ಕೊರೊನಾ ಸೋಂಕು ತಡೆಗಟ್ಟುವ ಉದ್ದೇಶದಿಂದ ಕೇಂದ್ರ ರಾಜ್ಯ ಸರ್ಕಾರಗಳು ಲಾಕ್‍ಡೌನ್ ಜಾರಿಗೊಳಿಸಿದ ಪರಿಣಾಮ ಮುದ್ರಣ ಕೆಲಸಗಳು ಸಂಪೂರ್ಣ ಸ್ಥಗಿತಗೊಂಡಿದ್ದು, ಮಧುವೆ, ನಾಮಕರಣ, ಗೃಹಪ್ರವೇಶ, ಜಾತ್ರೆ, ಧಾರ್ಮಿಕ ಕಾರ್ಯಕ್ರಮಗಳು ಫೆಬ್ರವರಿ, ಮಾರ್ಚ್, ಏಪ್ರಿಲ್ ತಿಂಗಳಲ್ಲೇ ಹೆಚ್ಚು ನಡೆಯುತ್ತಿದ್ದವು,…

ಮುಂದೆ ಓದಿ...