ಕೊರಟಗೆರೆ : ಗೋವುಗಳನ್ನು ರಕ್ಷಿಸಿದ ಯುವಕರು

ಕೊರಟಗೆರೆ:       ತಾಲ್ಲೂಕಿನ ಕಸಬಾ ಹೋಬಳಿಯ ಬೋಡಬಂಡೇನಹಳ್ಳಿ ಗ್ರಾಮದ ಯುವಕರಿಂದ ಕಸಾಯಿ ಖಾನೆಗೆ ಹೋಗುತ್ತಿದ್ದ ಗೋವುಗಳ ರಕ್ಷಣೆ ಮಾಡಲಾಗಿದೆ.       ಮಲ್ಲೇಶ್ವರ ಗ್ರಾಮದಿಂದ ಬೋಡಬಂಡೇನಹಳ್ಳಿ ಮಾರ್ಗವಾಗಿ ಎರಡು ಹಸುವಿನ ಕರುಗಳನ್ನು ಕಸಾಯಿಖಾನೆಗೆ ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿರುವುದನ್ನು ಸ್ಥಳೀಯ ಯುವಕರು ಕಂಡು ನಿಲ್ಲಿಸಿ ವಿಚಾರಿಸಿದಾಗ ಅವುಗಳನ್ನು ಸಾಕಲು ತೆಗೆದುಕೊಂಡು ಹೋಗುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಅನುಮಾನಗೊಂಡ ಯುವಕರು ಸ್ಥಳೀಯ ಪತ್ರಕರ್ತರಾದ ಹರೀಶ್‍ರವರಿಗೆ ಕರೆ ಮಾಡಿದ್ದಾರೆ. ಕರೆ ಮಾಡಿದ ತಕ್ಷಣ ಅಲ್ಲಿಗೆ ತೆರಳುವಷ್ಟರಲ್ಲಿ ಕಸಾಯಿ ಖಾನೆಯ ಕಟುಕರು ಕರುಗಳನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.       ಕರುಗಳು ಸದ್ಯಕ್ಕೆ ಪತ್ರಕರ್ತರಾದ ಹರೀಶ್ ಅವರ ಮನೆಯ ಬಳಿ ಇದ್ದು ಮರುದಿನ ಬೆಳಿಗ್ಗೆ ಆ ಕರುಗಳನ್ನು ಸ್ಥಳಿಯ ಯಾವುದಾದರೂ ಮಠಕ್ಕೆ ಬಿಟ್ಟು ಬರುವುದಾಗಿ ಅವರು ತಿಳಿಸಿದ್ದಾರೆ. ಕರುಗಳನ್ನು ರಕ್ಷಿಸಿರುವ ಯುವಕರನ್ನು ಗ್ರಾಮಸ್ಥರು ಹಾಗೂ ಗೋ ಪ್ರಿಯರು ಹರ್ಷಿಸಿದರು.

ಮುಂದೆ ಓದಿ...

ಜಿ.ಪರಮೇಶ್ವರ ಸಿಎಂ ಆದರೆ ಇಡೀ ತುಮಕೂರು ಜಿಲ್ಲೆ ಝಿರೋ

ತುಮಕೂರು:       ಕಾಂಗ್ರೆಸ್‍ನಲ್ಲಿ ಭವಿಷ್ಯದ ಸಿಎಂ ಅಭ್ಯರ್ಥಿ ಬಗ್ಗೆ ಬಿಜೆಪಿ ಸಂಸದ ಜಿ.ಎಸ್.ಬಸವರಾಜು ಪ್ರತಿಕ್ರಿಯಿಸಿ, ಕೈ ಹೈಕಮಾಂಡ್ ಒಪ್ಪಿದರೆ ಡಿ.ಕೆ.ಶಿವಕುಮಾರ್ ಕೂಡಾ ಮುಖ್ಯಮಂತ್ರಿ ಆಗಬಹುದು ಎಂದಿದ್ದಾರೆ. ಜೊತೆಗೆ ಜಿ.ಪರಮೇಶ್ವರ್ ಡಿಸಿಎಂ ಆಗಿದ್ದಾಗಲೇ ಝೀರೋ ಟ್ರಾಫಿಕ್ ಮಾಡಿಕೊಂಡು ಓಡಾಡುತಿದ್ದರು. ಮುಖ್ಯಮಂತ್ರಿಯಾದರೆ ಇಡೀ ತುಮಕೂರು ಜಿಲ್ಲೆಯನ್ನೇ ಝೀರೋ ಮಾಡುತ್ತಾರೆ ಎಂದು ಸಂಸದ ಬಸವರಾಜು ಹೇಳಿದರು. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ಸಂಸದೆ ಸುಮಲತಾ ನಡುವಿನ ಮಾತಿನ ಸಮರಕ್ಕೆ ಪ್ರತಿಕ್ರಿಯಿಸಿದ ಬಸವರಾಜು, ಸುಮಲತಾ ಒಬ್ಬ ಡಿಗ್ನಿಪೈಡ್ ಮಹಿಳಾ ಸಂಸದೆ. ಅವರು ಸಂಸತ್ತಿನಲ್ಲಿ ಮಾತನಾಡುವ ಗಾಂಭೀರ್ಯತೆ ನೋಡಿದರೆ ನಾವು ಹೆಮ್ಮೆ ಪಡಬೇಕು. ಆದರೆ ಕುಮಾರಸ್ವಾಮಿ ಹೆಣ್ಣು ಮಗಳ ಬಗ್ಗೆ ಹಾಗೆ ಹೇಳಬಾರದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರಜ್ವಲ್ ರೇವಣ್ಣರನ್ನ ಕೇವಲ ಸುಮಲತಾ ಮಾತ್ರ ಹೊಗಳಲಿಲ್ಲ. ನಾನು ಹೊಗಳಿದ್ದೇನೆ. ಆತ ಸಂಸತ್ತಿನಲ್ಲಿ ಮಾತಾಡಿದ್ದು ನೋಡಿ ನಾನು ಬೆನ್ನು ತಟ್ಟಿ ಬಂದಿದ್ದೇನೆ. ಇದನ್ನೇ…

ಮುಂದೆ ಓದಿ...