ಅರ್ಹ ವ್ಯಕ್ತಿಗಳು ರಾಜಕೀಯ ಪ್ರವೇಶಿಸಲಿ : ಕೆಎನ್‍ಆರ್

ತುಮಕೂರು:      ರಾಜಕಾರಣದಲ್ಲಿ ಬಡವರು ಮತ್ತು ಯಾರು ಅರ್ಹರಿರುತ್ತಾರೆ ಅವರೆಲ್ಲಾ ಅಧಿಕಾರಕ್ಕೆ ಬರುವಂತಹ ವಾತಾವರಣ ಸೃಷ್ಠಿಯಾದಾಗ ಮಾತ್ರ ಉತ್ತಮ ಅಭಿವೃದ್ಧಿ ಕೆಲಸಗಳನ್ನು ನಿರೀಕ್ಷೆ ಮಾಡಬಹುದು ಎಂದು ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಅಭಿಪ್ರಾಯಪಟ್ಟರು. ನಗರದ ಹೊರಪೇಟೆಯಲ್ಲಿರುವ ಶ್ರೀ ವಾಲ್ಮೀಕಿ ಕನ್ವೆಷನ್ ಹಾಲ್‍ನಲ್ಲಿ ಶ್ರೀ ವಾಲ್ಮೀಕಿ ವಿದ್ಯಾವರ್ಧಕ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ತುಮಕೂರು ಮಹಾನಗರಪಾಲಿಕೆ ಮೇಯರ್ ಬಿ.ಜಿ.ಕೃಷ್ಣಪ್ಪ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಚುನಾವಣೆಯಲ್ಲಿ ದುಡ್ಡಿರುವವರು, ಕಳ್ಳ ದುಡ್ಡಿರುವವರು ಮುಂದೆ ಕಳ್ಳ ದುಡ್ಡು ಮಾಡುವವರು ಇಂತಹವರೇ ಅಧಿಕಾರಕ್ಕೆ ಬಂದರೆ ನಾವು ಅವರಿಂದ ಏನೂ ನಿರೀಕ್ಷೆ ಮಾಡುವುದಕ್ಕಾಗುವುದಿಲ್ಲ ಆದುದರಿಂದ ಬಡವರು ಮತ್ತು ಅರ್ಹರನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕಾಗುತ್ತದೆ ಎಂದರು. ಇಂದು ಯಾರೂ ಸಹ ಪ್ರಾಮಾಣಿಕವಾಗಿ ಬದುಕುವುದಕ್ಕೆ ರಾಜಕಾರಣದ ವ್ಯವಸ್ಥೆ ಬಿಡುತ್ತಿಲ್ಲ, ಇಂದು ಗ್ರಾಮ ಪಂಚಾಯಿತಿ ಸದಸ್ಯರಾಗಬೇಕೆಂದರೆ…

ಮುಂದೆ ಓದಿ...

ಕೈಗಾರಿಕೆಗಳಿಗೆ ಭೂಗತ ವಿದ್ಯುತ್ ಸಂಪರ್ಕ ಕಲ್ಪಿಸಬೇಕಿದೆ : ಜೆಸಿಎಂ

ತುಮಕೂರು:       ಕೈಗಾರಿಕಾ ಪ್ರದೇಶಗಳ ಸಮಸ್ಯೆ ಬಗೆಹರಿಸಲು ಕೆಎಸ್ ಎಸ್ ಐಡಿಸಿ, ಕೆಐಎಡಿಬಿ, ಮಹಾನಗರ ಪಾಲಿಕೆ ಸಂಯೋಜಿತ ಕಾರ್ಯನಿರ್ವಹಿಸುವ ಮೂಲಕ ಬಗೆಹರಿಸಬೇಕು ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.       ನಗರದ ಎಪಿಎಂಸಿ ಆವರಣದಲ್ಲಿರುವ ಟಿಡಿಸಿಸಿಐ ಕಚೇರಿ ಸಭಾಂಗಣದಲ್ಲಿ ಟಿಡಿಸಿಸಿಐ, ಅಂತರಸನಹಳ್ಳಿ ಸಣ್ಣ ಕೈಗಾರಿಕೆಗಳ ಸಂಘ, ಅಂತರಸನಹಳ್ಳಿ ಮತ್ತು ಸತ್ಯ ಮಂಗಲ ಕೈಗಾರಿಕೆಗಳ ಸಂಘ, ಕೆಎಸ್‍ಎಸ್‍ಐಡಿಸಿ,ನಗರ, ಹಿರೇಹಳ್ಳಿ ಹಾಗೂ ಇತರೆ ಕೈಗಾರಿಕೆಗಳ ಸಂಘಗಳ ವತಿಯಿಂದ ಹಮ್ಮಿಕೊಂಡಿದ್ದ ಕೈಗಾರಿಕ ಪ್ರದೇಶದ ಕುಂದುಕೊರತೆ ಬಗ್ಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತಿದ್ದ ಅವರು, ನೀರಾವರಿ ಮತ್ತು ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತು ನೀಡಿದ್ದು, ಕೈಗಾರಿಕೆಗಳಿಗೆ ಉತ್ತಮ ವಿದ್ಯುತ್ ಪೂರೈಕೆ ಮಾಡಲು ಕ್ರಮ ವಹಿಸಲಾಗಿದೆ ಎಂದರು. ಭೂಗತ ವಿದ್ಯುತ್ ಸಂಪರ್ಕ ವ್ಯವಸ್ಥೆಯನ್ನು ಕೈಗಾರಿಕ ಪ್ರದೇಶಗಳಿಗೆ ನೀಡಬೇಕಿದೆ, ಕೈಗಾರಿಕೆಗಳಿಗೆ ಈಗ ಇರುವ ವ್ಯವಸ್ಥೆ ಸರಿಯಲ್ಲ, ಒಂದು ಟಿಸಿ ಹೋದರೆ…

ಮುಂದೆ ಓದಿ...