ಲಸಿಕೆಹಾಕುವ ನೆಪದಲ್ಲಿ ಚಿನ್ನಾಭರಣ ದೋಚಿ ಪರಾರಿ!!

ಚಿಕ್ಕನಾಯಕನಹಳ್ಳಿ:      ಲಸಿಕೆಹಾಕುವ ನೆಪದಲ್ಲಿ ಬಂದು ಚಿನ್ನಾಭರಣ ವಂಚಿಸಿದ ಘಟನೆ ತಾಲ್ಲೂಕಿನ ಮಾದಿಹಳ್ಳಿ ಗ್ರಾಮz ತೋಟದ ಮನೆಯಲ್ಲಿ ನಡೆದಿದೆ.       ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಮಾದಿಹಳ್ಳಿ ಗ್ರಾಮದ ರವಿ ಎಂಬುವರಿಗೆ ಅಪರಿಚಿತರು ಕರೆಮಾಡಿ ನಿಮ್ಮ ಮನೆಗೆ ಲಸಿಕೆ ಹಾಕಲು ಬರುತ್ತಿದ್ದೇವೆ ಎಂದು ಮನವಿ ಮಾಡಿದಾಗ ರವೀಶ್ ರವರು ನಾವು ಊರಿನಲ್ಲಿ ಇಲ್ಲವೆಂದು ತಿಳಿಸಿದ್ದಾರೆ.       ಆದರೆ ಅವರು ನಿಮ್ಮ ಕುಟುಂಬದವರಿಗೆ ಲಸಿಕೆ ನೀಡುವುದಾಗಿ ತಿಳಿಸಿದ್ದಾರೆ. ನಂತರ ಇಬ್ಬರು ವ್ಯಕ್ತಿಗಳು ಅವರ ಮನೆಗೆ ಬಂದು ಮನೆಯಲ್ಲಿರುವ ಮಹಿಳೆಗೆ ಲಸಿಕೆ ಹಾಕುವುದಾಗಿ ತಿಳಿಸಿ ಲಸಿಕೆ ಹಾಕಲು ಒಡವೆ ತೆಗೆಯಬೇಕೆಂದು ತೆಗೆಸಿಕೊಂಡು ನಂತರ ಬಿಸಿನೀರು ತರಲು ಹೇಳಿದ್ದಾರೆ. ಮನೆಯಿಂದ ಬಿಸಿನೀರು ತರುವಷ್ಟರಲ್ಲಿ ವಂಚಕರು ಒಡೆವೆಯೊಂದಿಗೆ ಪರಾರಿಯಾಗಿದ್ದಾರೆ. ಸುಮಾರು 1.5ಲಕ್ಷರೂ. ಮೌಲ್ಯದ ಚಿನ್ನಾಭರಣ ವಂಚಿಸಲಾಗಿದೆ ಎಂದು ತಿಳಿದುಬಂದಿದ್ದು ಪ್ರಕರಣ ಚಿಕ್ಕನಾಯಕನಹಳ್ಳಿಠಾಣೆಯಲ್ಲಿ ದಾಖಲಾಗಿದ್ದು ತನಿಖೆ ನಡೆದಿದೆ.

ಮುಂದೆ ಓದಿ...

ಚಿ.ನಾ.ಹಳ್ಳಿ : ಸರಳವಾಗಿ ನಡೆದ ಆಂಜನೇಯಸ್ವಾಮಿ ಉತ್ಸವ

ಚಿಕ್ಕನಾಯಕನಹಳ್ಳಿ:       ಪ್ರಸಿದ್ದ ಹಳೆಯೂರು ಆಂಜನೇಯಸ್ವಾಮಿ ದೇವಾಲಯದ ಏಕಾದಶಿ ಉತ್ಸವವು ಅತ್ಯಂತ ಸರಳವಾಗಿ, ದೇವಾಲಯದ ಪ್ರಾಂಗಾಣದೊಳಗೆ ಆಂಜನೇಯಸ್ವಾಮಿಯವರ ಬೆಳ್ಳಿ ಪಲ್ಲಕ್ಕಿ ಉತ್ಸವದೊಂದಿಗೆ ನಡೆಯಿತು. ಜಾತ್ರೆಯ ಸಡಗರವಿಲ್ಲದೆ ದೇವರಿಗೆ ಅರ್ಪಿಸುವ ಪೂಜಾ, ವಿಧಿ ವಿಧಾನಗಳು ಮಾತ್ರ ದೇವಾಲಯದಲ್ಲಿ ಜರುಗಿತು. ಕೋವಿಡ್-19 ಕಳೆದ ವರ್ಷದಂತೆ ಈ ವರ್ಷವೂ ಇರುವುದರಿಂದ ಸರಳವಾಗಿ ದೇವರ ಪೂಜೆಯು ನಡೆಯಿತು. ದೇವಾಲಯದ ಆಡಳಿತ ಮಂಡಳಿ ಹಾಗೂ ತಾಲ್ಲೂಕು ಆಡಳಿತದ ಮಂದಿ ಹಾಗೂ ಪೂಜಾರರು,ಗೊರವಯ್ಯನವರು, ದಾಸಪ್ಪನವರು, ಕೆಂಚರಾಯಸ್ವಾಮಿಗಳು ಈ ವೇಳೆ ಹಾಜರಿದ್ದರು. ಜುಲೈ 21 ಹಾಗೂ 22ರ ಬುಧವಾರವೂ ದೇವರ ರಥೋತ್ಸವವು ದೇವಾಲಯದ ಆವರಣದೊಳಗೆ ನಡೆಯಲಿದೆ. ದೇವಾಲಯದ ಒಳಗಿನ ಆವರಣದಲ್ಲಿ ಸಂಚರಿಸಲು ಸಾಧ್ಯವಾಗುವಂತಹ ಚಿಕ್ಕದಾದ ರಥವಿದೆ, ಆ ರಥದಲ್ಲಿ ಆಂಜನೇಯಸ್ವಾಮಿ ಪ್ರತಿಮೆಯನ್ನು ಕೂರಿಸಿ ದೇವಾಲಯದ ಪ್ರಾಂಗಣದ ಚಿಕ್ಕ ರಥವನ್ನು ಎಳೆಯಲಾಗುವುದು.

ಮುಂದೆ ಓದಿ...

ಗೋಹತ್ಯೆ ಮಾಡಿದರೆ ಜೈಲು ಶಿಕ್ಷೆ ನಿಶ್ಚಿತ : ಪಿಎಸ್‍ಐ

ಹುಳಿಯಾರು:       ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದ್ದು ಕಾನೂನು ಉಲ್ಲಂಘಿಸಿ ಗೋಹತ್ಯೆ ಮಾಡಿದರೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಬೇಕಾಗುತ್ತದೆ ಎಂದು ಹುಳಿಯಾರು ಪಿಎಸ್‍ಐ ಕೆ.ಟಿ.ರಮೇಶ್ ಎಚ್ಚರಿಸಿದ್ದಾರೆ. ಇಲ್ಲಿನ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಗೋಹತ್ಯೆ ನಿಯಂತ್ರಣ ಮತ್ತು ಜಾನುವಾರು ಸಂರಕ್ಷಣೆ ವಿದೇಯಕ ಯಥಾವತ್ತು ಜಾರಿ ಕುರಿತು ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು. 15 ವರ್ಷ ಆಗಿರುವ ಹಾಲು ಕೊಡಲು ಯೋಗ್ಯವಲ್ಲ, ಉಳಿಮೆ ಮಾಡಲು ಯೋಗ್ಯವಲ್ಲ ಎನ್ನುವ ಪ್ರಮಾಣ ಪತ್ರವನ್ನು ಪಶು ವೈದ್ಯರು ಕೊಟ್ಟ ನಂತರ ಗೋಹತ್ಯೆ ಮಾಡಬಹುದಿದೆ. ಮಾರುವವನೂ ಸಹ ಗ್ರಾಪಂನಿಂದ ಹಸು ಸಾಕುತ್ತಿರುವ ಬಗ್ಗೆ ದಾಖಲಾತಿ ಇಟ್ಟಿರಬೇಕು. ಹಾಗಾಗಿ ಇನ್ಮುಂದೆ ಗೋಹತ್ಯೆ ಮಾಡುವುದು ಅಸಾಧ್ಯವಾಗಿದ್ದು ಕೋಳಿ, ಕುರಿ ಮಾಂಸ ಮಾರಿ ಜೀವನ ನಿರ್ವಹಿಸಿ. ಇಲ್ಲವಾದಲ್ಲಿ ಪರ್ಯಾಯ ಉದ್ಯೋಗ ನೋಡಿಕೊಳ್ಳಿ ಎಂದು ಸಲಹೆ ನೀಡಿದರು. ಸರ್ಕಾರದಿಂದ ಗೋಶಾಲೆ ತೆರೆಯುತ್ತಿದ್ದು ಹಸುಗಳನ್ನು ಸಾಕಲಾಗುವುದಿಲ್ಲ…

ಮುಂದೆ ಓದಿ...

ಸಿಎಂ ಬದವಾವಣೆಗೆ ಸ್ವ-ಪಕ್ಷದವರೇ ಕಾರಣ : ಪರಮೇಶ್ವರ್

ತುಮಕೂರು:       ರಾಜ್ಯ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಬದಲಾಯಿಸಲು ಅವರ ಪಕ್ಷದವರೇ ಹೊರಟಿರುವುದು ದುರಾದೃಷ್ಟಕರ ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹೇಳಿದರು. ಯಡಿಯೂರಪ್ಪನವರು ಶಾಸಕರುಗಳನ್ನು ಖರೀದಿ ಮಾಡಿ ಕಷ್ಟಬಿದ್ದು ಸರ್ಕಾರ ರಚನೆ ಮಾಡಿದ್ದಾರೆ. ಬಹಳ ಆಸೆ ಇಟ್ಟುಕೊಂಡು ಮುಖ್ಯಮಂತ್ರಿಯಾಗಿದ್ದಾರೆ. ಆದರೆ ಸಂಪುಟದಲ್ಲಿದ್ದುಕೊಂಡು ಸಂಪುಟದ ಮುಖ್ಯಸ್ಥರನ್ನೆ ಬದಲಾಯಿಸಲು ಕೆಲವರು ಹೊರಟಿದ್ದಾರೆ. ಯಡಿಯೂರಪ್ಪನವರು ಶಕ್ತಿಯುತವಾಗಿದ್ದರೆ ಅಂತಹವರನ್ನು ಸಂಪುಟದಿಂದ ಕೈ ಬಿಡಬೇಕು ಎಂದರು. ನಗರದಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರನ್ನು ಬದಲಾಯಿಸಲು ಹೊರಟಿರುವವರು ಶಕ್ತಿಯುತವಾಗಿದ್ದರೆ ಮುಖ್ಯಮಂತ್ರಿಗಳನ್ನು ಬದಲಾಯಿಸಬೇಕು. ಇದ್ಯಾವುದನ್ನೂ ಮಾಡದೆ ವಿನಾ ಕಾರಣ ಕಾಲ ಹರಣ ಮಾಡುತ್ತಿರುವುದರಿಂದ ರಾಜ್ಯದ ಆಡಳಿತ ಮತ್ತು ಜನಸಮುದಾಯದ ಮೇಲೆ ಭಾರೀ ಪರಿಣಾಮ ಬೀರುತ್ತಿದೆ ಎಂದರು. ಸರ್ಕಾರದ ಜಿಲ್ಲಾ ಪಂಚಾಯ್ತಿಗಳಿಗೆ ಹಣ ಬಿಡುಗಡೆ ಮಾಡುತ್ತಿಲ್ಲ. ಕಾಮಗಾರಿಗಳು ಮಾಡಿರುವ 15 ಸಾವಿರ ಕೋಟಿ ಬಿಲ್‍ಗಳು…

ಮುಂದೆ ಓದಿ...