ದಶಕ ಕಳೆದರೂ ಮುಗಿಯದ ನಟ ನರಸಿಂಹರಾಜು ಸ್ಮರಣಾರ್ಥ ಭವನ ನಿರ್ಮಾಣ ಕಾಮಗಾರಿ

ತಿಪಟೂರು: ಹಾಸ್ಯ ಚಕ್ರವರ್ತಿ ಟಿ.ಆರ್.ನರಸಿಂಹರಾಜು ಅವರ ಹುಟ್ಟುರಾದ ತಿಪಟೂರಿನಲ್ಲಿ ಅವರ ಸ್ಮರಣಾರ್ಥ ನಿರ್ಮಾಣವಾಗುತ್ತಿರುವ ಸ್ಮಾರಕ ಭವನದ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು, ದಶಕಗಳು ಕಳೆದರೂ ಪೂರ್ಣಗೊಂಡಿಲ್ಲ. 1923 ಜುಲೈ 24ರಂದು ಜನಿಸಿದ್ದ ನರಸಿಂಹರಾಜು ಸುಮಾರು 250ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಬೆಳ್ಳಿತೆರೆಯ ಜೊತೆಗೆ ರಂಗಭೂಮಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಚಲನಚಿತ್ರ ನಿರ್ಮಾಣದಲ್ಲಿಯೂ ತೊಡಗಿದ್ದರು. ತಮ್ಮ 56ನೇ ವಯಸ್ಸಿನಲ್ಲಿ ನಿಧನರಾದರು. ನರಸಿಂಹರಾಜು ಸ್ಮರಣಾರ್ಥ ವಿವಿಧ ಕಲಾವಿದರಿಗೆ ಅವರ ಕಲೆ ಪ್ರದರ್ಶನಕ್ಕೆ ಸಹಕಾರಿಯಾಗಲು ಹಾಗೂ ಸರ್ಕಾರದ ವಿವಿಧ ಕಾರ್ಯಕ್ರಮ ನಡೆಸಲು ಅನುಕೂಲವಾಗಲೆಂದು ಸ್ಮಾರಕ ನಿರ್ಮಾಣಕ್ಕೆ ಮುಂದಾಗಿ ದಶಕಗಳೇ ಕಳೆದಿವೆ. ಆದರೆ ಕಾಮಗಾರಿ ಇನ್ನೂ ಪ್ರಗತಿಯಲ್ಲೇ ಇದ್ದು, ಸದ್ಯದಲ್ಲಿ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. 2011-12ನೇ ಸಾಲಿನಲ್ಲಿ 5.2 ಕೋಟಿ ವೆಚ್ಚದಲ್ಲಿ 680 ಜನ ಕುಳಿತುಕೊಳ್ಳಲು ಅನುಕೂಲವಾಗುವಂತಹ ಬೃಹತ್ ಸಭಾಂಗಣ ನಿರ್ಮಾಣ ಮಾಡುವ ಹೊಣೆಯನ್ನು ತುಮಕೂರಿನ ನಿರ್ಮಿತಿ ಕೇಂದ್ರಕ್ಕೆ ಸರ್ಕಾರ ನೀಡಿತ್ತು. ಕಾಮಗಾರಿ ಪ್ರಾರಂಭಗೊಂಡ…

ಮುಂದೆ ಓದಿ...

ತುಮಕೂರು : ಮಂದಿರ-ಮಸೀದಿಗಳಲ್ಲಿ ಪೂಜೆ ಮುಂದುವರೆಸಲು ಅನುಮತಿ

ತುಮಕೂರು:       ಜಿಲ್ಲೆಯಲ್ಲಿ ದೇವಾಲಯ, ಮಂದಿರ, ಮಸೀದಿ, ಚರ್ಚು, ಗುರುದ್ವಾರ ಸೇರಿದಂತೆ ಇತರೆ ಧಾರ್ಮಿಕ ಸ್ಥಳಗಳಲ್ಲಿ ಲಾಕ್ ಡೌನ್ ನಿಂದ ಸ್ಥಗಿತಗೊಂಡಿದ್ದ ಪೂಜಾ ಕೈಂಕರ್ಯಗಳನ್ನು 25-7-2021 ರಿಂದ ಮುಂದುವರೆಸಲು ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.       ಸರ್ಕಾರದ ಹೊಸ ಕೋವಿಡ್ 19 ಮಾರ್ಗಸೂಚಿಯಲ್ಲಿ ಇನ್ನಷ್ಷು ಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡಲಾಗಿದ್ದು, ಇದರನ್ವಯ ಕೋವಿಡ್ ನಿಯಮಗಳನ್ನು ಅನುಸರಿಸುವುದರೊಂದಿಗೆ ಧಾರ್ಮಿಕ ಸ್ಥಳಗಳಲ್ಲಿ ಕಟ್ಟುನಿಟ್ಟಾಗಿ ಪೂಜಾ ಚಟುವಟಿಕೆಗಳನ್ನು ನಡೆಸಲು ಅನುಮತಿ ನೀಡಲಾಗಿದೆ. ಆದರೆ, ಜಾತ್ರೆ, ದೇವಾಲಯ ಉತ್ಸವ, ಮೆರವಣಿಗೆ, ಸಭೆಗಳಿಗೆ ಅವಕಾಶವಿಲ್ಲ.       ಅದೇ ರೀತಿ ಕಟ್ಟುನಿಟ್ಟಿನ ಕೋವಿಡ್ ನಿಯಮಗಳನ್ನು ಪಾಲಿಸುವುದರೊಂದಿಗೆ ಮನೋರಂಜನಾ ಸ್ಥಳ, ಉದ್ಯಾನವನ/ ಪಾರ್ಕ್ ಗಳನ್ನು ಪುನಃ ತೆರೆಯಲು ಅನುಮತಿ ಇದೆ. ಆದರೆ ಜಲ ಕ್ರೀಡೆ / ಜಲ ಸಂಬಂಧಿತ ಸಾಹಸ ಚಟುವಟಿಕೆಗಳಿಗೆ ಅನುಮತಿ…

ಮುಂದೆ ಓದಿ...