ಆಡು ಮುಟ್ಟದ ಸೊಪ್ಪಿಲ್ಲ, ಕುವೆಂಪು ರಚಿಸದ ಸಾಹಿತ್ಯ ಪ್ರಕಾರವಿಲ್ಲ: ಸಾಹಿತಿ ಡಾ.ದೊಡ್ಡರಂಗೇಗೌಡ

 ತುಮಕೂರು :      ಆಡು ಮುಟ್ಟದ ಸೊಪ್ಪಿಲ್ಲ, ಕುವೆಂಪು ರಚಿಸದ ಸಾಹಿತ್ಯ ಪ್ರಕಾರವಿಲ್ಲ ಎಂದು ಕವಿ, ಚಿತ್ರ ಸಾಹಿತಿ ಹಾಗೂ ನಿಯೋಜಿತ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ. ದೊಡ್ಡರಂಗೇಗೌಡ ನುಡಿದರು.       ನಗರದ ಅಮಾನಿಕೆರೆ ರಸ್ತೆಯಲ್ಲಿರುವ ಕನ್ನಡ ಭವನದಲ್ಲಿಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳ ಉದ್ಘಾಟನೆ, ಕುವೆಂಪು ಜಯಂತಿ, ಅಭಿನಂದನಾ ಸಮಾರಂಭ ಹಾಗೂ ಪ್ರೇರಣಾ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜ್ಞಾನಕ್ಕೆ ಮತ್ತೊಂದು ಹೆಸರೇ ಕುವೆಂಪು. ಅವರು ತಮ್ಮ ಜ್ಞಾನದಿಂದ ವಸ್ತು-ವಿಷಯದ ನಿಜವಾದ ಸಾರಸಂಗ್ರಹವನ್ನು ಸಮರ್ಥವಾಗಿ ಬಣ್ಣಿಸುವ ಶಕ್ತಿ ಹೊಂದಿದ್ದರು. ಆದ್ದರಿಂದಲೇ ಅವರೊಬ್ಬ ವಾಗ್ದೇವಿಯ ಶಬ್ದ ಭಂಡಾರವನ್ನು ಸೂರೆಗೈದ ಕನ್ನಡದ ಏಕೈಕ ಮೇರು ಕವಿ ಎಂದರಲ್ಲದೆ, ಕನ್ನಡದ ಮತ್ತೋರ್ವ ಸಾಹಿತ್ಯ ಶ್ರೇಷ್ಠ ವರಕವಿ ದ.ರಾ.ಬೇಂದ್ರೆಯವರು ಕುವೆಂಪು ಅವರನ್ನು ಯುಗದ…

ಮುಂದೆ ಓದಿ...

 ಚಿಕ್ಕನಾಯಕನಹಳ್ಳಿ : ವಿರಕ್ತಮಠಕ್ಕೆ ಭಕ್ತನಾಗಿ ಬಂದ ಎಸ್ಪಿ

 ಚಿಕ್ಕನಾಯಕನಹಳ್ಳಿ :      ಪೊಲೀಸ್ ಠಾಣಾ ಕಟ್ಟಡದ ಶಂಕುಸ್ಥಾಪನೆಗೆ ಆಗಮಿಸಿದ್ದ ತುಮಕೂರು ಜಿಲ್ಲಾ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರ್ ವಾಡ್ ಮಾರ್ಗ ಮಧ್ಯೆದಲ್ಲಿ ಕುಪ್ಪುರು ತಮ್ಮಡಿಹಳ್ಳಿ ವಿರಕ್ತಮಠಕ್ಕೆ ಧಿಡೀರ್ ಭೇಟಿ ನೀಡಿದರು .       ಇದೆ ಸಂದರ್ಭದಲ್ಲಿ ಬೆಟ್ಟದ ಪರ್ವತ ಮಲ್ಲಿಕಾರ್ಜುನ ಸ್ವಾಮಿಗೆ ಭಕ್ತಿ ಸಮರ್ಪಿಸಿದ ಅವರು ಸಮಾಜದ ಉದ್ದಾರ ಹಾಗೂ ಏಳಿಗೆಗಾಗಿ ಹಾಗೂ ಸಮಾಜದ ಶಾಂತಿಗಾಗಿ ಪರ್ವತ ಮಲ್ಲಿಕಾರ್ಜುನ ಸ್ವಾಮಿ ಬಳಿ ಸಂಕಲ್ಪ ಮಾಡುವ ಮೂಲಕ ಕೈ ಅಪ್ಪಣೆಗೆ ಮುಂದಾದರು ಭಕ್ತನಿಗೂ ಮತ್ತು ದೇವರಿಗೂ ನಡುವಿನ ಅಂತರ ದೂರವಿದ್ದ ಕಾರಣ ಕೈಅಪ್ಪನಣೆ 10 ಭಾರಿ ಆಗಲಿಲ್ಲ ಆಗದೆ ಒದರು ಛಲ ಬಿಡದ ತ್ರಿವಿಕ್ರಮನಂತೆ ಜಿಲ್ಲಾ ವರಿಷ್ಠಾಧಿಕಾರಿ ಜನತೆಯ ಶಾಂತಿಗಾಗಿ ಕರ್ಪುರ ದೀವಿಗೆಯನ್ನ ಹಚ್ಚಿ ಕೇಳಿದ ನಂತರ ಬೆಟ್ಟದ ಪರ್ವತ ಮಲ್ಲಿಕಾರ್ಜುನ ತುಂಬೆ ಹೂವಿನ ಮೂಲಕ ಪುಷ್ಪ ವೃಷ್ಟಿ ರೀತಿಯಲ್ಲಿ ಆಶೀರ್ವದಿಸಿದ್ದು ಪವಾಡವೇ…

ಮುಂದೆ ಓದಿ...

 ತುಮಕೂರು : ಡಿ.28ರಿಂದ ನೈಟ್ ಕಫ್ರ್ಯೂ ಜಾರಿ

 ತುಮಕೂರು :      ಹೊಸ ವರ್ಷಾಚರಣೆ ಸನ್ನಿಹಿತದಲ್ಲಿರುವ ಹಿನ್ನೆಲೆಯಲ್ಲಿ ಜನಸಂದಣಿ ನಿಯಂತ್ರಣ ಅತ್ಯಗತ್ಯವಾಗಿದ್ದು, ಸರ್ಕಾರದ ಆದೇಶದನ್ವಯ ಜಿಲ್ಲೆಯಲ್ಲಿ ಇಂದಿನಿಂದ ನೈಟ್ ಕಫ್ರ್ಯೂ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು.       ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ  ಡಿ.28ರಿಂದ ರಾತ್ರಿ 10 ರಿಂದ ಬೆಳಿಗ್ಗೆ 5 ಗಂಟೆಯವರೆಗೆ ನೈಟ್ ಕಫ್ರ್ಯೂ ಜಾರಿಗೆ ಬರಲಿದ್ದು, ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ. ಅದೇ ರೀತಿ ಡಿಸೆಂಬರ್ 30 ರಿಂದ 2022ರ ಜನವರಿ 2ರವರೆಗೆ ಸಾರ್ವಜನಿಕ ಸ್ಥಳಗಳಲ್ಲಿ ಸಭೆ, ಸಮಾರಂಭಗಳನ್ನು ನಡೆಸುವುದನ್ನು ಹಾಗೂ ಹೆಚ್ಚು ಜನ ಸೇರುವುದನ್ನು ನಿಷೇಧಿಸಲಾಗಿದೆ. ಅಗತ್ಯ ಚಟುವಟಿಕೆಗಳನ್ನು ಹೊರತುಪಡಿಸಿ ಅನಗತ್ಯವಾಗಿ ಓಡಾಡುವಂತಿಲ್ಲ. ಮದುವೆಯಲ್ಲಿ 300 ಮಂದಿ ಮಾತ್ರ ಭಾಗವಹಿಸಲು ಅವಕಾಶವಿದೆ ಎಂದು ಅವರು ತಿಳಿಸಿದರು.       ಔಷಧಾಲಯಗಳು,…

ಮುಂದೆ ಓದಿ...

ಜ.1ರಿಂದ ರಾಗಿ ಖರೀದಿ ನೋಂದಣಿ ಪ್ರಾರಂಭಿಸಿ – ಡಿಸಿ

 ತುಮಕೂರು :       ಜಿಲ್ಲೆಯಲ್ಲಿ 2021-22ನೇ ಮುಂಗಾರು ಋತುವಿನ ಅವಧಿಗೆ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿಸಲು 2022ರ ಜನವರಿ 1 ರಿಂದ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಅಗತ್ಯ ಸಿದ್ಧತೆ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.       ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಶುಕ್ರವಾರ ನಡೆದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಸರ್ಕಾರ ನಿಗಧಿಪಡಿಸಿರುವ ಬೆಂಬಲ ಬೆಲೆಯಲ್ಲಿ ರೈತರಿಂದ ರಾಗಿ ಖರೀದಿಸಲು ಜನವರಿ 1 ರಿಂದ 20ರವರೆಗೆ ಕೋವಿಡ್ ನಿಯಮಗಳನ್ನು ಅನುಸರಿಸುವ ಮೂಲಕ ರೈತರ ನೋಂದಣಿಗೆ ಸೂಕ್ತ ಕ್ರಮ ಕೈಗೊಳ್ಳುವುದಲ್ಲದೆ, ವ್ಯವಸ್ಥಿತವಾಗಿ ನೋಂದಣಿ ಪ್ರಕ್ರಿಯೆಯನ್ನು ನಡೆಸಬೇಕೆಂದು ಸೂಚಿಸಿದರು.       ರೈತರು ನೋಂದಣಿಯನ್ನು ಆಯಾ ಖರೀದಿ ಕೇಂದ್ರಗಳಲ್ಲಿ ಆನ್‍ಲೈನ್ ಮೂಲಕ ಮಾಡಿಕೊಳ್ಳಬೇಕಾಗುತ್ತದೆ. ಕೃಷಿ ಇಲಾಖೆ ನೀಡಿರುವ ‘FRUITS ID’’ ಯನ್ನು ಮಾತ್ರ…

ಮುಂದೆ ಓದಿ...

ಕೋವಿಡ್ ಲಸಿಕಾಕರಣದಲ್ಲಿ ಬೇಜವಾಬ್ದಾರಿ ಸಲ್ಲದು: ಡಿಸಿ

 ತುಮಕೂರು :       ಜಿಲ್ಲೆಯಲ್ಲಿ ಬಾಕಿ ಉಳಿಸಿಕೊಂಡಿರುವ ಲಸಿಕೆಗಳನ್ನು ಅರ್ಹರಿಗೆ ನೀಡುವಲ್ಲಿ ಯಾವುದೇ ಬೇಜವಾಬ್ದಾರಿ ತೋರದೆ ಶೀಘ್ರ ಲಸಿಕಾಕರಣ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದರು.       ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ್ರಸ್ತುತ ಒಟ್ಟು 33 ಸಕ್ರಿಯ ಕೋವಿಡ್ ಪ್ರಕರಣಗಳಿದ್ದು, ಈ ಪೈಕಿ 25 ಮಂದಿ ಹೋಂ ಐಸೋಲೇಷನ್‍ನಲ್ಲಿದ್ದು, 8 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಸಿಕೆ ಹಾಕಿಸಿಕೊಳ್ಳದವರಲ್ಲಿ ಜಾಗೃತಿ ಮೂಡಿಸುವುದಲ್ಲದೆ ಆಸ್ಪತ್ರೆಗೆ ದಾಖಲಾಗುವವರಿಗೆ ಕಡ್ಡಾಯವಾಗಿ ಕನಿಷ್ಟ 1 ಅಥವಾ 2 ಡೋಸ್ ಕೋವ್ಯಾಕ್ಸಿನ್ ಅಥವಾ ಕೋವಿಶೀಲ್ಡ್ ಲಸಿಕೆ ನೀಡುವ ಮೂಲಕ ಶೇ.100ರಷ್ಟು ಲಸಿಕಾಕರಣ ಪೂರ್ಣಗೊಳಿಸಬೇಕು.. ಇತ್ತೀಚೆಗೆ ಕೋವಿಡ್‍ನಿಂದ ಮೃತಪಟ್ಟ ಯಾವುದೇ ಪ್ರಕರಣಗಳು ದಾಖಲಾಗಿರುವುದಿಲ್ಲ. ಲಸಿಕಾಕರಣ ವಿಳಂಬವಾದಲ್ಲಿ ಆಯಾ ತಾಲ್ಲೂಕಿನ ಸಂಬಂಧಿತ ಅಧಿಕಾರಿಗಳನ್ನೇ ನೇರ ಹೊಣೆಗಾರನ್ನಾಗಿ…

ಮುಂದೆ ಓದಿ...

‘ನನ್ನ ಕನಸಿನ ಭಾರತ’- ಪ್ರಧಾನಿಗೆ ವಿದ್ಯಾರ್ಥಿಗಳಿಂದ ಪತ್ರ

 ತುಮಕೂರು :       ಅಂಚೆ ಇಲಾಖೆ ಆಶ್ರಯದಲ್ಲಿ ಮಧುಗಿರಿ ತಾಲೂಕಿನ ಕಾರ್ಡಿಯಲ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಂಚೆ ಪತ್ರವನ್ನು ಬರೆದು ಪ್ರಧಾನ ಮಂತ್ರಿಯವರಿಗೆ ರವಾನಿಸಿದರು.       ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ‘ಎಲೆ ಮರೆಯ ಅಪ್ರತಿಮ ದೇಶ ಭಕ್ತ’, ‘ಸ್ವಾತಂತ್ರ್ಯ ಹೋರಾಟಗಾರರು’ ಹಾಗೂ ‘2047ರಲ್ಲಿ ನನ್ನ ಕನಸಿನ ಭಾರತ’ ಎಂಬ ವಿಷಯಗಳ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಅಂಚೆ ಪತ್ರ ಬರೆಯಲಾಯಿತು.      ಕಾರ್ಯಕ್ರಮದಲ್ಲಿ ತುಮಕೂರು ಅಂಚೆ ವಿಭಾಗದ ಅಧೀಕ್ಷಕ ಎನ್.ಗೋವಿಂದರಾಜು, ಸಹಾಯಕ ಅಂಚೆ ಅಧೀಕ್ಷಕ ಗಂಗಪ್ಪ, ಮಧುಗಿರಿ ಅಂಚೆ ಉಪವಿಭಾಗದ ನಿರೀಕ್ಷಕ ಮಹೇಶ್, ಕಾರ್ಡಿಯಲ್ ಇಂಟರ್ ನ್ಯಾಷನಲ್ ಶಾಲೆಯ ಪ್ರಾಂಶುಪಾಲ ರಘು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.  

ಮುಂದೆ ಓದಿ...

ತುಮಕೂರು : ಜಿಲ್ಲಾಧಿಕಾರಿಗಳಿಂದ ಗ್ರಾಮ ವಾಸ್ತವ್ಯ

 ತುಮಕೂರು :       ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಅಭಿಯಾನ ಕಾರ್ಯಕ್ರಮ’ದಡಿ ಡಿಸೆಂಬರ್ 18ರಂದು ತುರುವೇಕೆರೆ ತಾಲ್ಲೂಕು ದಂಡಿನಶಿವರ ಹೋಬಳಿಯ ಸಂಪಿಗೆ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮ ವಾಸ್ತವ್ಯ ಮಾಡಿ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಲಿದ್ದಾರೆ.      ಸರ್ಕಾರದ ಸೂಚನೆಯಂತೆ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವಿಕೆಯಿಂದ ಸ್ಥಗಿತಗೊಳಿಸಲಾಗಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಅಕ್ಟೋಬರ್ 18ರಂದು ಪುನರಾರಂಭಿಸುತ್ತಿರುವುದರಿಂದ ಎಲ್ಲಾ ಕಂದಾಯ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿ ವಾಸ್ತವ್ಯ ಹೂಡಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸಲು ಕ್ರಮ ಕೈಗೊಳ್ಳಲಿದ್ದಾರೆ. ನಿಗಧಿಪಡಿಸಿದ ತಾಲ್ಲೂಕಿನಲ್ಲಿ ಗ್ರಾಮ ವಾಸ್ತವ್ಯಕ್ಕೆ ಡೀಸಿ ಸೂಚನೆ:-       ಸರ್ಕಾರದ ನಿರ್ದೇಶನದಂತೆ ಪ್ರತಿ ತಿಂಗಳ 3ನೇ ಶನಿವಾರ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಅಭಿಯಾನ ಕಾರ್ಯಕ್ರಮದಡಿ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಈ ಕಾರ್ಯಕ್ರಮದಲ್ಲಿ ಆಯಾ ತಾಲ್ಲೂಕು…

ಮುಂದೆ ಓದಿ...

 ತುಮಕೂರು : ಹಲವು ವೈಶಿಷ್ಟಗಳ ಪಾರ್ಕು ಜನರಿಗೆ ಮುಕ್ತ!!

 ತುಮಕೂರು:       ಸಾರ್ವಜನಿಕರು,ಜನಪ್ರತಿನಿಧಿಗಳ ಒತ್ತಾಯದ ಮೇರೆಗೆ ನಗರದ ಹೊಸಬಡಾವಣೆ ಪೊಲೀಸ್ ಠಾಣೆಯ ಹಿಂಭಾಗದಲ್ಲಿದ್ದ ವೀರಸಾರ್ವಕರ್ ಉದ್ಯಾನವನ್ನು ಸ್ಮಾರ್ಟ್‍ಸಿಟಿ ವತಿಯಿಂದ ಅತ್ಯಂತ ವ್ಯವಸ್ಥಿತವಾಗಿ ಅಭಿವೃದ್ದಿ ಪಡಿಸಲಾಗಿದ್ದು, ನಾಗರಿಕರು, ಶುಚಿತ್ವ ಕಾಪಾಡುವ ಮೂಲಕ ಪಾರ್ಕಿನ ಸದುಪಯೋಗ ಪಡೆದುಕೊಳ್ಳಬೇಕು ಎಂದು 15ನೇ ವಾರ್ಡಿನ ಕಾರ್ಪೋರೇಟರ್ ಶ್ರೀಮತಿ ಗಿರಿಜಾ ಧನಿಯಕುಮಾರ್ ಮನವಿ ಮಾಡಿದ್ದಾರೆ.       ಸ್ಮಾರ್ಟ್‍ಸಿಟಿ ವತಿಯಿಂದ ಆಭಿವೃದ್ದಿಪಡಿಸಲಾದ ವೀರ ಸಾರ್ವಕರ್ ಉದ್ಯಾನವನವನ್ನು ಜನರ ಉಪಯೋಗಕ್ಕೆ ಮುಕ್ತಗೊಳಿಸಿ ಮಾತನಾಡಿದ ಅವರು, ಇಡೀ ಪಾರ್ಕ್‍ನ್ನು ಅತ್ಯಂತ ವ್ಯವಸ್ಥಿತವಾಗಿ ಅತ್ಯಾಧುನಿಕವಾಗಿ ಅಭಿವೃದ್ದಿ ಪಡಿಸಲಾಗಿದೆ. ಇದರ ನಿರ್ವಹಣೆಯನ್ನು ಪಾರ್ಕಿನ ಪಕ್ಕದಲ್ಲಿಯೇ ಇರುವ ಅಕ್ಷರ ಐ ಪೌಂಢೇಷನ್ ನವರು ವಹಿಸಿಕೊಂಡಿದ್ದು, ಸೆಕ್ಯೂರಿಟಿಯವರನ್ನು ಇಟ್ಟು, ಬೆಳಗ್ಗೆ ಮತ್ತು ಸಂಜೆ ಪಾರ್ಕಿನ ಬಾಗಿಲು ತೆಗೆಯಲಿದ್ದಾರೆ. ಮಧ್ಯಾಹ್ನ ಯಾವುದೇ ಚಟುವಟಿಕೆಗಳು ಇರುವುದಿಲ್ಲ ಎಂದರು.       ಪಾರ್ಕಿನ ಅಂದ ಹೆಚ್ಚಿಸಲು 16 ಸಣ್ಣ ಮತ್ತು 18…

ಮುಂದೆ ಓದಿ...

ಶ್ರೀ ಶಿವಾತ್ಮನಂದ ಸರಸ್ವತಿ ಸ್ವಾಮೀಜಿ ಅಸ್ತಂಗತ

ತುಮಕೂರು:       ಅಪಘಾತ ದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಹುಲಿಯೂರುದುರ್ಗ ದೀಪಾಂಬುದಿ ಕ್ಷೇತ್ರದ ಹಿಂದಿನ ಗುರುಗಳು ಹಾಗೂ ನಂದಿ ಸಿದ್ದನಗವಿ ಜ್ಞಾನಾನಂದಾಶ್ರಮದ ಶ್ರೀ ಶಿವಾತ್ಮನಂದ ಸರಸ್ವತಿ ಸ್ವಾಮೀಜಿ(59) ಅವರು ಚಿಕಿತ್ಸೆ ಫಲಿಸದೆ ಬುಧವಾರ ಇಹಲೋಕ ತ್ಯಜಿಸಿದ್ದಾರೆ.       ವೇದ, ಉಪನಿಷತ್, ಭಾಷ್ಯ ಗಳು ಸೇರಿದಂತೆ ಸಂಸ್ಕೃತ, ಕನ್ನಡ ಗ್ರಂಥಗಳ ಬಗ್ಗೆ ಆಳ ಪಾಂಡಿತ್ಯ ಹೊಂದಿದ್ದ ಶ್ರೀ ಗಳು ರಾಜ್ಯ, ಹೊರರಾಜ್ಯ ದೇಶ ವಿದೇಶಗಳಲ್ಲಿ ತಮ್ಮ ವಿದ್ವತ್ ಪೂರ್ಣ ಉಪನ್ಯಾಸ ಗಳಿಂದ ರಾಷ್ಟ್ರ ಸಂತರೆಂದು ಬಿರುದಾಂಕಿತ ರಾಗಿದ್ದರು.       ಕವಿ, ಲೇಖಕರು ಆಗಿದ್ದ ಶ್ರೀ ಗಳು ವಿಶ್ವಕರ್ಮ ಸಮಾಜಕ್ಕೆ ದಾರಿದೀಪ ವಾಗಿ, ಎಲ್ಲಾ ಸಮಾಜದ ವರಿಗೂ ಗುರುವಾಗಿ ಮಾರ್ಗದರ್ಶನ ಮಾಡುತ್ತಿದ್ದರು.       ಇಂತಹ ಶ್ರೇಷ್ಠ ಗುರುವಿನ ಅಗಲಿಕೆ ನಾಡಿಗೆ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅರೆಮಾದನಹಳ್ಳಿ ಶ್ರೀಗಳು, ನಿಟ್ಟರಹಳ್ಳಿ…

ಮುಂದೆ ಓದಿ...

ತುಮಕೂರು : ಸ್ಪರ್ಧಾತ್ಮಕ ಪರೀಕ್ಷೆ: ನಿಷೇಧಾಜ್ಞೆ ಜಾರಿ

 ತುಮಕೂರು :       ನಗರದ 21 ಪರೀಕ್ಷಾ ಕೇಂದ್ರಗಳಲ್ಲಿ ಪದವಿ ಪೂರ್ವ ವಿದ್ಯಾರ್ಹತೆಯುಳ್ಳ ಗ್ರೂಪ್-ಸಿ ತಾಂತ್ರಿಕೇತರ ಹುದ್ದೆಗಳಿಗೆ ಡಿಸೆಂಬರ್ 19ರಂದು ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷೆಯನ್ನು ಯಾವುದೇ ಲೋಪದೋಷವಿಲ್ಲದೆ ನಡೆಸಲು ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯೊಳಗಿನ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಆದೇಶಿಸಿದ್ದಾರೆ.       ನಿಷೇಧಾಜ್ಞೆಯು ಡಿಸೆಂಬರ್ 19ರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಮತ್ತು ಮಧ್ಯಾಹ್ನ 2 ರಿಂದ ಸಂಜೆ 4 ಗಂಟೆಯವರೆಗೆ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಇರುವ ಜೆರಾಕ್ಸ್ ಮತ್ತು ಬೆರಳಚ್ಚು ಕೇಂದ್ರಗಳನ್ನು ತೆರೆಯುವಂತಿಲ್ಲ. ಜಿಲ್ಲೆಯಲ್ಲಿ ಪ್ರಶ್ನೆಪತ್ರಿಕೆಗಳ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳಿಗೆ ಉತ್ತೇಜನ ನೀಡುವಂತಹ ವ್ಯಕ್ತಿಗಳು ಕಂಡು ಬಂದಲ್ಲಿ ದಂಡ ಪ್ರಕ್ರಿಯಾ ಸಂಹಿತೆ 1973ರ ಸೆಕ್ಷನ್ 107 ಮತ್ತು 110ರಡಿ ಅಗತ್ಯ ಮುಂಜಾಗ್ರತಾ ಕ್ರಮ…

ಮುಂದೆ ಓದಿ...