ಪೊಲೀಸರು – ಪತ್ರಕರ್ತರ ನಡುವಿನ ಬಾಂಧವ್ಯ ಬೆಸೆದ ಕ್ರೀಡಾಕೂಟ

ತುಮಕೂರು :         ಜಿಲ್ಲಾ ಪೊಲಿಸ್ ಇಲಾಖೆ ಆಯೋಜಿಸಿದ್ದ ಪೊಲಿಸ್ ಕ್ರೀಡಾ ಕೂಟದಲ್ಲಿ ಪತ್ರಕರ್ತರು ಮತ್ತು ಪೊಲಿಸ್ ಇಲಾಖೆಯ ತಂಡಗಳು ಭಾಗವಹಿಸಿದ್ದವು.        ಕ್ರಿಕೆಟ್ ಪಂದ್ಯದಲ್ಲಿ ರೋಚಕವಾದ ಆಟ ಆಡುವ ಮುಖೇನ ತಂಡಗಳು ಉತ್ತಮ ಪ್ರದರ್ಶನ ನೀಡಿದವು.       ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪುರ್‍ವಾಡ್ ನೇತೃತ್ವದಲ್ಲಿ ನಡೆದ ಸೌಹಾರ್ದಯುತ ಕ್ರೀಡಾ ಕೂಟದ ಪಂದ್ಯ ಪೊಲಿಸ್ ಇಲಾಖೆ ಮತ್ತು ಪತ್ರಕರ್ತರ ನಡುವಿನ ಬಾಂಧವ್ಯ ಬೆಸೆಯುವ ಅವಿನಾಭಾವ ಸಂಬಂಧ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕಂಡು ಬಂದಿತು.

ಮುಂದೆ ಓದಿ...

ತುಮಕೂರು : ಜಿಲ್ಲೆಯ ಇಬ್ಭಾಗಕ್ಕೆ ಮುನ್ನುಡಿ ಬರೆದ ಬಿಜೆಪಿ

ತುಮಕೂರು:        ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಏಕಕಾಲಕ್ಕೆ ಇಬ್ಬರು ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಸುರೇಶ್ ಗೌಡ ರಾಜೀನಾಮೆ ನೀಡಿದ ನಂತರ ಖಾಲಿಯಿದ್ದ ಸ್ಥಾನಕ್ಕೆ ತಿಗಳ ಸಮುದಾಯದ ಲಕ್ಷ್ಮೀಶ್, ಕುರುಬ ಸಮುದಾಯದ ಬಿ.ಕೆ.ಮಂಜುನಾಥ್ ಅವರನ್ನು ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇಮಕ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಬಿಜೆಪಿಗೆ ಇಬ್ಬರನ್ನು ಅಧ್ಯಕ್ಷ ಗಾದಿಗೆ ಕೂರಿಸಲಾಗಿದೆ.       ಲಕ್ಷ್ಮೀಶ್ ಅವರಿಗೆ 7 ತಾಲೂಕುಗಳಾದ ತುಮಕೂರು ನಗರ, ಗ್ರಾಮಾಂತರ, ಕುಣಿಗಲ್, ತುರುವೇಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ, ಗುಬ್ಬಿ ತಾಲೂಕಿನ ಜವಾಬ್ದಾರಿ ವಹಿಸಲಾಗಿದೆ. ಮಧುಗಿರಿ, ಕೊರಟಗೆರೆ, ಶಿರಾ, ಪಾವಗಡ 4 ತಾಲೂಕಿನ ಉಸ್ತುವಾರಿಯನ್ನು ಬಿ.ಕೆ.ಮಂಜುನಾಥ್ ಹೆಗಲಿಗೆ ನೀಡಲಾಗಿದೆ.        ಸಂಘ ಪರಿವಾರದಲ್ಲಿ ಗುರುತಿಸಿಕೊಂಡಿರುವ ಲಕ್ಷ್ಮೀಶ್ ಅವರು ಅಧ್ಯಕ್ಷ ಗಾದಿಯ ಮೇಲೆ ಬಹಳ ದಿನಗಳಿಂದ ಕಣ್ಣಿಟ್ಟಿದ್ದರು. ಶಿರಾ ಭಾಗದಲ್ಲಿ ಬಿಜೆಪಿ ಯನ್ನು ಸಂಘಟಿಸುತ್ತಿರುವ ಮಂಜುನಾಥ್ ಅವರಿಗೆ ಬಯಸದೆ…

ಮುಂದೆ ಓದಿ...