ಶಿರಾ : ನಗರದ ಹೊರವಲಯದಲ್ಲಿನ ಅಂಬೇಡ್ಕರ್ ವಸತಿ ಶಾಲೆಯ (ಪ್ರೀ ಮೆಟ್ರಿಕ್) 25 ಮಕ್ಕಳಿಗೆ ಕೊರೋನಾ ಹಾಗೂ ನಾಲ್ವರು ಅಡುಗೆಯವರಿಗೆ ಸೇರಿ 29 ಮಂದಿಗೆ ಪಾಸಿಟೀವ್ ಕಂಡುಬಂದಿದ್ದು, ವಿದ್ಯಾರ್ಥಿಗಳಿಗೆ ಸ್ಥಳದಲ್ಲೇ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ವಸತಿ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯೊಬ್ಬರಿಗೆ ಮೂರು ದಿನಗಳ ಹಿಂದೆ ಸಣ್ಣದಾಗಿ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಶಿರಾ ಸಾರ್ವಜ£ಕ ಆಸ್ಪತೆಯಲ್ಲಿ ಕೊರೋನಾ ರ್ಯಾಟ್ ಪರೀಕ್ಷೆ ನಡೆಸಲಾಗಿತ್ತು. ಆದರೆ ಫಲಿತಾಂಶ ನೆಗೆಟಿವ್ ಬಂದಿದ್ದ ಕಾರಣ, ಆರ್.ಟಿ.ಪಿ. ಸಿ.ಆರ್. ಸ್ಯಾಂಪಲ್ ಸಂಗ್ರಹಿಸಿ, ಜ್ವರಕ್ಕೆ ಚಿಕಿತ್ಸೆ ನೀಡಿ ವಾಪಸ್ ವಸತಿ ಶಾಲೆಗೆ ಕಳುಹಿಸಲಾಗಿತ್ತು. ಆದರೆ ವಿದ್ಯಾರ್ಥಿಯ ಆರ್.ಟಿ.ಪಿ.ಸಿ.ಆರ್. ಫಲಿತಾಂಶ ಪಾಸಿಟೀವ್ ಬಂದಿದೆ ಎಂದು ಆಕೆಯ ಪೆÇೀಷಕರಿಗೆ ಆಸ್ಪತ್ರೆಯಿಂದ ಮೆಸೇಜ್ ಹೋಗಿದ್ದು, ಸೋಮವಾರ ಸಂಜೆಗೆ ವಿಷಯ ತಿಳಿಯುತ್ತಿದ್ದಂತೆ ತಾಲ್ಲೂಕು ಆಡಳಿತದ ನಿರ್ದೇಶನದಂತೆ ವಸತಿ ಶಾಲೆಯ ಎಲ್ಲ ವಿದ್ಯಾರ್ಥಿಗಳನ್ನೂ ಮಂಗಳವಾರ…
ಮುಂದೆ ಓದಿ...Day: January 12, 2022
ಗುಬ್ಬಿ : ಅರಣ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ
ಗುಬ್ಬಿ : ಸುಮಾರು 40 ವರ್ಷಗಳಿಂದ ಭೂ ಸಾಗುವಳಿ ಮಾಡುತ್ತಿರುವ ರೈತರ ಭೂಮಿಯನ್ನು ಅರಣ್ಯ ಪ್ರದೇಶವೆಂದು ದಾಖಲಾತಿಗಳು ಇಲ್ಲದಿದ್ದರೂ ಅಧಿಕಾರಿಗಳು ಒಕ್ಕಲೆಬ್ಬಿಸಲು ಹೋಗುತ್ತಿರುವುದು ಎಷ್ಟು ಸಮಂಜಸವೆಂದು ಗುಬ್ಬಿ ವಲಯ ಅರಣ್ಯ ಇಲಾಖೆಯ ಅಧಿಕಾರಿ ದುಗ್ಗಪ್ಪನವರ ಮೇಲೆ ಶಾಸಕ ಎಸ್.ಆರ್.ಶ್ರೀನಿವಾಸ್ ಕಿಡಿಕಾರಿದರು. ಪಟ್ಟಣದ ತಾಲ್ಲೂಕು ಪಂಚಾಯ್ತಿ ಆವರಣಲ್ಲಿ ಕರೆದಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅರಣ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಇಂದು ನಡೆಯಿತು. ರಂಗನಹಳ್ಳಿ ಸರ್ವೆ ನಂ 7ರಲ್ಲಿ ಸುಮಾರು 40 ವರ್ಷಗಳಿಂದ 35ಜನ ರೈತರು ಭೂ ಸಾಗುವಳಿ ಮಾಡಿಕೊಂಡು ತಮ್ಮ ಜೀವನವನ್ನು ನಡೆಸುತ್ತಿದ್ದು ಈಗಾಗಲೇ ಈ ಕೃಷಿ ಭೂಮಿಯಲ್ಲಿ ಕೊಳವೆಬಾವಿ ಕೊರೆಸಿದ್ದು ಹಾಗೂ ತೆಂಗಿನಗಿಡ, ಹುಣಸೇಗಿಡಗಳನ್ನು ಬೆಳೆಸಿರುವುದು ಅಧಿಕಾರಿಗಳ ಕಣ್ಣಿಗೆ ಕಾಣಲಿಲ್ಲವೇ ? ಈಗ ಒಕ್ಕಲೆಬ್ಬಿಸುವ ಹಂತಕ್ಕೆ ಹೋಗಲು ಕಾರಣವೇನು ? ತಾಲ್ಲೂಕು ದಂಡಾಧಿಕಾರಿಗಳೇ ಭೂಒಡೆತನದ ಹಕ್ಕುಪತ್ರ ನೀಡಿದ್ದು ಸರ್ಕಾರ ನೀಡಿದಂತಾಗಲಿಲ್ಲವೇ…
ಮುಂದೆ ಓದಿ...ತುಮಕೂರು : ಕೋವಿಡ್ ಹೆಚ್ಚಳ : ಅಧಿಕಾರಿಗಳು ಕೇಂದ್ರ ಸ್ಥಾನ ಬಿಡಬೇಡಿ – ಡಿಸಿ
ತುಮಕೂರು : ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚಳವಾಗುತ್ತಿರುವ ಕೋವಿಡ್ ಸೋಂಕು ಪ್ರಕರಣಗಳನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಯಾವುದೇ ಅಧಿಕಾರಿಗಳು ಜಿಲ್ಲಾಡಳಿತದ ಅನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡಬಾರದು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚಿಸಿದರು. ತಮ್ಮ ಕಚೇರಿಯಲ್ಲಿಂದು ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಜನವರಿ 11ರ ವರದಿಯನ್ವಯ ಕೋವಿಡ್ ಸೋಂಕು ಪ್ರಕರಣಗಳ ಪಾಸಿಟಿವಿಟಿ ದರ ಶೇ.13.4ರಷ್ಟಿರುವುದರಿಂದ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಕೋವಿಡ್ ಹರಡುವಿಕೆಯನ್ನು ತಡೆಯಬೇಕೆಂದು ಸೂಚಿಸಿದರು. ಜಿಲ್ಲೆಯಲ್ಲಿ ಕೋವಿಡ್ ಲಸಿಕಾಕರಣ ಶೇ.100ರಷ್ಟು ಪೂರ್ಣಗೊಳಿಸಿಲ್ಲದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ಪರಿಸ್ಥಿತಿ ಗಂಭೀರ ಸ್ವರೂಪ ಪಡೆಯುವ ಮುನ್ನ ಎರಡೂ ಡೋಸ್ ಲಸಿಕೆ ನೀಡುವ ಮೂಲಕ ಶೇ.100ರಷ್ಟು ಲಸಿಕಾಕರಣ ಪೂರ್ಣಗೊಳಿಸಬೇಕು ಎಂದರಲ್ಲದೆ ಶಾಲೆಗಳಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿದ್ದು, ಮಕ್ಕಳು ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸುವುದರ ಜೊತೆಗೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಈ ಬಗ್ಗೆ…
ಮುಂದೆ ಓದಿ...ತುಮಕೂರು : ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ!!
ತುಮಕೂರು : ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿ ಮಾರನಾಯಕನಪಾಳ್ಯ ಗ್ರಾಮಕ್ಕೆ ಹೋಗುವ ಪೂರ್ವದ ಕಡೆ ಪಂಪ್ಹೌಸ್ ಕಟ್ಟಡದ ಹಿಂಭಾಗ ಗುಡ್ಡ ಪ್ರದೇಶದ ಕಲ್ಲು ಬಂಡೆಗಳ ಮಧ್ಯದಲ್ಲಿರುವ ಆಲದ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಜನವರಿ 10ರಂದು ಸುಮಾರು 40 ವರ್ಷದ ಅಪರಿಚಿತ ವ್ಯಕ್ತಿ ಶವವೊಂದು ಪತ್ತೆಯಾಗಿದ್ದು, ವಾರಸುದಾರರ ಬಗ್ಗೆ ಮಾಹಿತಿ ತಿಳಿದು ಬಂದಿರುವುದಿಲ್ಲ. ಮೃತ ವ್ಯಕ್ತಿಯು 5.8 ಅಡಿ ಎತ್ತರ, ತೆಳ್ಳನೆ ಶರೀರ, ಕೋಲುಮುಖ ಹೊಂದಿದ್ದು, ಮೈಮೇಲೆ ತುಂಬುತೋಳಿನ ನೀಲಿ ಬಣ್ಣದ ಚುಕ್ಕೆಗಳಿರುವ ಅಂಗಿ, ತಿಳಿ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಇರುತ್ತದೆ. ಮೃತನ ವಾರಸುದಾರರಿದ್ದಲ್ಲಿ ದೂ.ಸಂ. 0816-2281124/ 2281120/ 2278000 ಅಥವಾ ಹತ್ತಿರದ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕೆಂದು ಪೊಲೀಸ್ ಸಬ್ಇನ್ಸ್ಪೆಕ್ಟರ್ ಬಿ. ಓಂಪ್ರಕಾಶ್ ಗೌಡ ಮನವಿ ಮಾಡಿದ್ದಾರೆ.
ಮುಂದೆ ಓದಿ...