ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿರೆ 7 ದಿನ ರಜೆ

ತುಮಕೂರು :       ಜಿಲ್ಲೆಯಲ್ಲಿ ಪ್ರತಿದಿನವೂ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ದೃಢಪಟ್ಟು ವರದಿ ಬಂದ ದಿನದಿಂದ ಆಯಾ ಶಾಲೆಗಳಿಗೆ 7 ದಿನಗಳ ಕಾಲ ರಜೆ ಘೋಷಿಸಲು ಕ್ರಮಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ತಮ್ಮ ಕಚೇರಿಯಲ್ಲಿ ಗುರುವಾರ ಬೆಳಿಗ್ಗೆ ವಿವಿಧ ಅಧಿಕಾರಿಗಳೊಂದಿಗೆ ಜûೂಮ್ ಮೀಟಿಂಗ್ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೋವಿಡ್ ದೃಢಪಡುವ (ಪಾಸಿಟಿವಿಟಿ) ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿರುವುದು ಕಂಡು ಬಂದಿದ್ದು, ಮಕ್ಕಳಲ್ಲೂ ಸಹ ಕೋವಿಡ್ ಸೋಂಕು ಹೆಚ್ಚಾಗಿ ಹರಡುತ್ತಿದೆ. ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಸಂಬಂಧಿಸಿದ ಎಲ್ಲಾ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕೆಂದು ನಿರ್ದೇಶಿಸಿದರು. ಕೋವಿಡ್ ಮೊದಲ ಹಾಗೂ ಎರಡನೇ ಅಲೆಗಿಂತ 3ನೇ ಅಲೆ ಹರಡುವಿಕೆಯ ಸ್ವರೂಪ ಭಿನ್ನವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಿಸಲು ಸಂಬಂಧಿಸಿದ ಅಧಿಕಾರಿಗಳ…

ಮುಂದೆ ಓದಿ...

 ತುಮಕೂರು : ಹಾಸಿಗೆಗಳನ್ನು ಮೀಸಲಿಡಲು ಆಸ್ಪತ್ರೆಗಳಿಗೆ ಡೀಸಿ ಸೂಚನೆ

 ತುಮಕೂರು :      ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್ ಸೋಂಕು ಪ್ರಕರಣಗಳನ್ನು ನಿಯಂತ್ರಿಸಲು ಸರ್ಕಾರಿ/ ಖಾಸಗಿ ಆಸ್ಪತ್ರೆ ಸೇರಿದಂತೆ ಮೆಡಿಕಲ್ ಕಾಲೇಜುಗಳಲ್ಲಿ ಶೇ. 75ರಷ್ಟು ಹಾಸಿಗೆಗಳನ್ನು ಮೀಸಲಿಡಬೇಕೆಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಖಾಸಗಿ ಆಸ್ಪತ್ರೆಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜುಗಳಲ್ಲಿ ಆಕ್ಸಿಜನ್, ಬೆಡ್, ಐಸಿಯು, ವೆಂಟಿಲೇಟರ್ ಬೆಡ್ ಸೇರಿದಂತೆ ಎಲ್ಲಾ ವಿಭಾಗಗಳಲ್ಲಿ ಅವುಗಳ ಸಾಮಥ್ರ್ಯದ ಶೇ.75ರಷ್ಟು ಬೆಡ್‍ಗಳನ್ನು ಮೀಸಲಿಡಬೇಕೆಂದು ತಿಳಿಸಿದರು. ಕೋವಿಡ್ ಮೊದಲ ಹಾಗೂ ಎರಡನೇ ಅಲೆಯಲ್ಲಿ ಹಾಸಿಗೆಗಳು ಸಿಗದೆ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಈ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬೆಡ್‍ಗಳನ್ನು ಮೀಸಲಿಡಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಕೋವಿಡ್ 2ನೇ ಅಲೆಯಲ್ಲಿದ್ದಷ್ಟು ಒತ್ತಡ 3ನೇ ಅಲೆಯಲ್ಲಿ ಕಂಡು ಬಂದಿಲ್ಲ ಎಂದರಲ್ಲದೆ, 1400 ಸಕ್ರಿಯ ಪ್ರಕರಣಗಳು ವರದಿಯಾಗಿದ್ದರೂ ಆಸ್ಪತ್ರೆಯಲ್ಲಿ 80 ಮಂದಿ ಮಾತ್ರ ದಾಖಲಾಗಿದ್ದು, ಮುಂದಿನ 2…

ಮುಂದೆ ಓದಿ...

ಪಾವಗಡ : ಕೆಎಂಎಫ್ ನಿರ್ದೇಶಕರಿಂದ ಹೆಲ್ಪ್ ಸೋಸೈಟಿ ಕಚೇರಿ ಉದ್ಘಾಟನೆ

ಪಾವಗಡ :        ತಾಲ್ಲೂಕಿನ ಗಡಿನಾಡಿನ ಜನತೆಯ ಆಶೋತ್ತರಗಳಿಗೂ ಹಾಗೂ ದಿನನಿತ್ಯದ ಸಮಸ್ಯೆಗಳಿಗೆ ಹೆಲ್ಪ್ ಸೊಸೈಟಿ ಸಂಘಟನೆಯು ಶೀಘ್ರವಾಗಿ ಸ್ಪಂದಿಸುತ್ತಿರುವುದು ಶ್ಲಾಘನೀಯ ಎಂದು ಕೆಎಂಎಫ್ ನಿರ್ದೇಶಕರಾದ ಚನ್ನಮ್ಮನವರ ತಿಳಿಸಿದರು. ಪಟ್ಟಣದ ಹೊಸ ಬಸ್ ನಿಲ್ದಾಣದ ಸಮೀಪದ ಎಸ್ ಬಿಐ ಬ್ಯಾಂಕ್ ಪಕ್ಕದಲ್ಲಿ ಹೆಲ್ಪ್ ಸೊಸೈಟಿ ಗುರುವಾರ ನೂತನ  ಕಚೇರಿಯ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕೆಎಂಎಫ್ ನಿರ್ದೇಶಕರಾದ ಚನ್ನಮಲ್ಲಯ್ಯ ನವರು ಕಚೇರಿಯ ಉದ್ಘಾಟನೆ ಮಾಡಿ ನಂತರ ಮಾತನಾಡುತ್ತಾ , ತಾಲ್ಲೂಕಿನ ಜನತೆಯ ಸಮಸ್ಯೆಗೆ ಶೀಘ್ರ ಸ್ಪಂದಿಸುತ್ತಿರುವುದರಿಂದ ಜನರಲ್ಲಿ ವಿಶ್ವಾಸಗಳಿಸಿದೆ. ಯಾವುದೇ ಪಲಾಪೇಕ್ಷವಿಲ್ಲದೆ, ಕೊರೋನದ ಸಂಕಷ್ಟ ಸಮಯದಲ್ಲಿ ಜನತೆಗೆ ಮಾಸ್ಕೊ ಹಯ ಆಹಾರ ಕಿಟ್ ಗಳನ್ನು ನೀಡಲಾಗಿದೆ.ಮೂರನೇ ಅಲೆಗೆ ಸಹ ವ್ಯಾಪಕವಾಗಿ ಹರಡುತ್ತಿದ್ದು ಬುಧ ವಾರ 34 ಪ್ರಕರಣಗಳು ದಾಖಲಾಗಿರುವುದರಿಂದ ಜನತೆಯು ಸರ್ಕಾರದ ಕಾರ್ಯಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ತಿಳಿಸಿದರು. ಪುರಸಭೆಯ ಮಾಜಿ ಅಧ್ಯಕ್ಷರಾದ ಮಾನ ವೆಂಕಟಸ್ವಾಮಿ ಅವರು…

ಮುಂದೆ ಓದಿ...

ತುಮಕೂರು : ಕೊರೊನಾ ಆರ್ಭಟದ ನಡುವೆಯೂ ವೈಕುಂಠ ಏಕಾದಶಿ

ತುಮಕೂರು :       ಕೊರೊನಾ ಮಹಾಮಾರಿ ಆರ್ಭಟದ ನಡುವೆಯೂ ನಗರದ ವಿವಿಧ ಬಡಾವಣೆಗಳಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯಗಳಲ್ಲಿ ವೈಕುಂಠ ಏಕಾದಶಿಯನ್ನು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆಚರಿಸಿದ್ದು, ಮುಂಜಾನೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಇಲ್ಲಿನ ಜಯನಗರ ರಿಂಗ್ ರಸ್ತೆಯ ತಿರುಮಲ ನಗರ ದಕ್ಷಿಣದ ಕೆ.ಹೆಚ್.ಬಿ. ಕಾಲೋನಿಯಲ್ಲಿರುವ ತಿರುಮಲ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ಬೆಳಿಗ್ಗೆ 4 ಗಂಟೆ ಪಂಚಾಮೃತ ಅಭಿಷೇಕ, ಅಲಂಕಾರ, ಉಯ್ಯಾಲೆ ಸೇವೆ, ಪ್ರಕಾರೋತ್ಸವಗಳು ಜರುಗಿದವು. ವೈಕುಂಠ ಏಕಾದರ್ಶಿ ದರ್ಶನಕ್ಕಾಗಿ ದೇವಾಲಯಕ್ಕೆ ಬಂದ ಭಕ್ತಾದಿಗಳು ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದ್ದು, ಮಾಸ್ಕ್ ಧರಿಸಿದ ಭಕ್ತರಿಗಷ್ಟೇ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು. ಈ ದೇವಾಲಯಕ್ಕೆ ಬಂದ ಭಕ್ತರು ಮಾಸ್ಕ್ ಧರಿಸಿ, ಕೈಗಳಿಗೆ ಸ್ಯಾನಿಟೈಸ್ ಮಾಡಿಕೊಂಡು ದೇವರ ದರ್ಶನ ಪಡೆಯುತ್ತಿದ್ದ ದೃಶ್ಯ ಕಂಡು ಬಂತು. ಈ ಸಂದರ್ಭದಲ್ಲಿ ಮಾತನಾಡಿದ…

ಮುಂದೆ ಓದಿ...

ಸೋಂಕಿನ ಹೆಚ್ಚಳ : ಸಾಮೂಹಿಕ ಸಾನಿಟೈಜರ್ ಸಿಂಪಡಣೆ

ತುಮಕೂರು :       ನಗರದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಹಾನಗರಪಾಲಿಕೆ ವತಿಯಿಂದ ನಗರದ ಎಲ್ಲಾ ವಾರ್ಡುಗಳಲ್ಲಿಯೂ ಸಾಮೂಹಿಕ ಸಾನಿಟೈಜರ್ ಸಿಂಪರಣೆ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಲಾಗಿದೆ.       ಸುಮಾರು 10 ಕಿ.ಮಿ.ಸುತ್ತಳತೆಯನ್ನು ಹೊಂದಿರುವ ತುಮಕೂರು ನಗರದಲ್ಲಿ 35 ವಾರ್ಡುಗಳಿದ್ದು, 3.50 ಲಕ್ಷಕ್ಕೂ ಅಧಿಕ ಜನರು ವಾಸ ಮಾಡುತ್ತಿದ್ದು,ವಿವಿಧ ಕೆಲಸಗಳಿಗಾಗಿ ತುಮಕೂರು ನಗರಕ್ಕೆ ಬರುವವರು, ಇಲ್ಲಿಂದ ಬೇರೆಡೆಗೆ ಹೋಗುವವರ ಸಂಖ್ಯೆಯೂ ಹೆಚ್ಚಿದ್ದು, ಅದರಲ್ಲಿಯೂ ಬೆಂಗಳೂರು ನಗರಕ್ಕೆ ದಿನವೊಂದಕ್ಕೆ 9 ರಿಂದ 10 ಸಾವಿರ ಜನರು ವೃತ್ತಿ ನಿರತರಾಗಿ ಪ್ರತಿದಿನ ಬಸ್ಸು,ರೈಲುಗಳಲ್ಲಿ ಸಂಚರಿಸುವವರಿದ್ದಾರೆ. ಬೆಂಗಳೂರು ನಗರದಲ್ಲಿ ಸೋಂಕಿನ ಪ್ರಮಾಣ ಹೆಚ್ಚಿದ್ದು, ತುಮಕೂರು ನಗರದ ಮೇಲು ಪ್ರಭಾವ ಬೀರುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ನಗರಪಾಲಿಕೆ ಜನವರಿ 11 ರಿಂದ ನಗರದಾದ್ಯಂತ ಸಾಮೂಹಿಕ ಸಾನಿಟೈಜರ್‍ಗೆ ಮುಂದಾಗಿದೆ.      ಜನವರಿ11ರ ಮಂಗಳವಾರ ನಗರಪಾಲಿಕೆಯ ಕಚೇರಿ, ಕೆ.ಎಸ್.ಆರ್.ಟಿ.ಸಿ,…

ಮುಂದೆ ಓದಿ...