ಇದು ನನ್ನ ಕೊನೆಯ ಚುನಾವಣೆ ಒಗ್ಗಟ್ಟಿನಿಂದ ಗೆಲ್ಲಿಸಿ: ಕೆ.ಎನ್ ರಾಜಣ್ಣ

ಮಧುಗಿರಿ: ಇದು ನನ್ನ ಕೊನೆಯ ಚುನಾವಣೆ ಮುಖಂಡರುಗಳು ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕೆಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಮಾಜಿ ಶಾಸಕ .ಕೆ ಎನ್ ರಾಜಣ್ಣ ತಿಳಿಸಿದ್ದಾರೆ. ತಾಲ್ಲೊಕಿನ ಮಿಡಿಗೇಶಿ ಹೋಬಳಿಯ ಬಿದರೆಕೆರೆ ಗ್ರಾಮದ ಬಯಲಾಂಜನೇಯ ಸ್ವಾಮಿ ದೇವಾಲಯದ ಅವರಣದಲ್ಲಿ ಬೇಡತ್ತೂರು ಪಂಚಾಯಿತಿಯ ಬೂತ್ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿ ಮಧುಗಿರಿ ಕ್ಷೇತ್ರದಲ್ಲಿ ಈಗಾಗಲೆ ಕೆಲವು ಮಂದಿ ಅಭ್ಯರ್ಥಿಗಳಾಗಲು ಓಡಾಡುತ್ತಿದ್ದಾರೆ ಅವರುಗಳು ನಮ್ಮ ಆಸ್ತಿ ಉಳಿಸಿಕೊಳ್ಳಲು ರಾಜಕಾರಣಕ್ಕೆ ಬರುತ್ತಿದ್ದಾರೆ ಅವರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ.ಮನವಿ ಮಾಡಿದ ಅವರು ಕಳೆದ ಬಾರಿ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಕೆಎನ್‍ಆರ್ ಗಿಂತ ಹತ್ತು ಪಟ್ಟು ಕೆಲಸ ಮಾಡುತ್ತೇನೆ ಎಂದು ಹೇಳಿ ಸೀರೆ ಹಂಚಿ ಗೆಲುವು ಸಾಧಿಸಿದ ಅವರ ಅಭಿವೃದ್ಧಿ ಕಾರ್ಯಗಳ ಬಗ್ಗೆ ನನ್ನ ಅವಧಿಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ಕಾರ್ಯಕರ್ತರು ಮತದಾರರು ಆತ್ಮಾವಲೋಕನೆ ಮಾಡಿಕೊಳ್ಳಿ ನನ್ನ ಕಾರ್ಯಗಳ ಬಗ್ಗೆ ಹೇಳಿಕೊಳ್ಳುವುದು ಏನಿಲ್ಲ…

ಮುಂದೆ ಓದಿ...

ದಲಿತ ಯುವಕರ ಸಾವಿಗೆ ಸ್ಪಂದನೆಯೇ ಇಲ್ಲದಂತಾಗಿದೆ: ಆರ್.ರಾಜೇಂದ್ರ

ತುಮಕೂರು: ರಾಜ್ಯದಲ್ಲಿರುವ ಎಲ್ಲಾ ವರ್ಗದ ಜನರನ್ನು ರಕ್ಷಿಸುವುದಾಗಿ ಪ್ರಮಾಣ ವಚನ ಸ್ವೀಕರಿಸುವ ಶಾಸಕರು, ಸಚಿವರುಗಳು, ಇಬ್ಬರು ದಲಿತ ಯುವಕರ ಕೊಲೆಯಾಗಿ 8 ದಿನಗಳು ಕಳೆಯುತ್ತಾ ಬಂದರೂ ಇದುವರೆಗೂ ಸೌಜನ್ಯಕ್ಕಾದರೂ ಒಬ್ಬರು ಭೇಟಿ ನೀಡದಿರುವುದು ದಲಿತರ ಬಗ್ಗೆ ಸರಕಾರಕ್ಕೆ ಇರುವ ಕಾಳಜಿಯನ್ನು ತೋರಿಸುತ್ತದೆ ಎಂದು ವಿಧಾನಪರಿಷತ್ ಸದಸ್ಯ ಆರ್.ರಾಜೇಂದ್ರ ಸರಕಾರದ ವಿರುದ್ದ ಕಿಡಿ ಕಾರಿದ್ದಾರೆ. ಇಂದು ಏಪ್ರಿಲ್ 22 ರಂದು ಭರ್ಬರವಾಗಿ ತನ್ನ ಗ್ರಾಮದವರಿಂದಲೇ ಕೊಲೆಯಾದ ಪೆದ್ದನಹಳ್ಳಿಯ ಗಿರೀಶ್ ಮತ್ತು ಮಂಚಲದೊರೆಯ ಗಿರೀಶ್ ಮನೆಗೆ ಭೇಟಿ ನೀಡಿ,ಅವರು ಕುಟುಂಬಗಳಿಗೆ ಸಾಂತ್ವಾನ ಹೇಳಿ, ತಮ್ಮ ಕೈಲಾದ ಅರ್ಥಿಕ ನೆರವು ನೀಡಿ,ನಿಮ್ಮ ಕುಟುಂಬದೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಲ್ವರ್ಗದ ಜನರು ಕೊಲೆಯಾದಾಗÀ, ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟನೆ ನಡೆಸಿ, ಶವದ ಮೆರವಣಿಗೆ ನಡೆಸಿ,ಪರಿಹಾರ ವಿತರಿಸುವ ಸರಕಾರದ ಸಚಿವರುಗಳು, ತುಮಕೂರು ಜಿಲ್ಲೆಯಲ್ಲಿ ದಲಿತ ಯುವಕರ…

ಮುಂದೆ ಓದಿ...

200 ಕೋಟಿ ವೆಚ್ಚದಲ್ಲಿ 100 ಪೊಲೀಸ್ ಠಾಣೆ ನಿರ್ಮಾಣ: ಅರಗ ಜ್ಞಾನೇಂದ್ರ

ತುಮಕೂರು: ಪೊಲೀಸರು ನೆಮ್ಮದಿಯಿಂದ ಕರ್ತವ್ಯ ನಿರ್ವಹಿಸಬೇಕಾದರೆ ಅವರು ಕೆಲಸ ಮಾಡುವ ಪೊಲೀಸ್ ಠಾಣೆ ಹಾಗೂ ವಾಸಿಸುವ ಮನೆ ಸುಸಜ್ಜಿತವಾಗಿರಬೇಕು, ಈ ನಿಟ್ಟಿನಲ್ಲಿ 200 ಕೋಟಿ ವೆಚ್ಚದಲ್ಲಿ 100 ಹೊಸ ಪೊಲೀಸ್ ಠಾಣೆ ಮತ್ತು 20 ಸಾವಿರ ಪೊಲೀಸರಿಗೆ ಎರಡು ಕೊಠಡಿಗಳುಳ್ಳ ನೂತನ ವಸತಿ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅರಗ ಜ್ಞಾನೇಂದ್ರ ಅವರು ತಿಳಿಸಿದರು. ಅವರಿಂದು ಸುಮಾರು 2.64 ಕೋಟಿ ರೂ.ಗಳ ವೆಚ್ಚದಲ್ಲಿ ಪೊಲೀಸ್ ಗೃಹ ನಿರ್ಮಾಣ ಮಂಡಳಿ ವತಿಯಿಂದ ನಿರ್ಮಿಸಲಾಗುತ್ತಿರುವ ಶಿರಾ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರ ಕಚೇರಿ, ಶಿರಾ ಸಿಪಿಐ ಹಾಗೂ ಪೊಲೀಸ್ ಠಾಣೆಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಿದ್ದರು. ಎಫ್‍ಎಸ್‍ಎಲ್ ಲ್ಯಾಬ್‍ಗಳನ್ನು ಬಲಗೊಳಿಸುವ ನಿಟ್ಟಿನಲ್ಲಿ ವಿಧಿ-ವಿಜ್ಞಾನ ಪ್ರಯೋಗಾಲಯಗಳನ್ನು ಹೆಚ್ಚಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಈ ವರ್ಷವೇ ಬಳ್ಳಾರಿ, ಹುಬ್ಬಳ್ಳಿ ಜಿಲ್ಲೆಯಲ್ಲಿ ಎಫ್‍ಎಸ್‍ಎಲ್ ಪ್ರಯೋಗಾಲಯ…

ಮುಂದೆ ಓದಿ...

ವೈದ್ಯರ ನಿರ್ಲಕ್ಷ್ಯದಿಂದ ಮಹಿಳೆ ಸಾವು: ಆಸ್ಪತ್ರೆಯ ಮುಂದೆ ಶವವನ್ನಿಟ್ಟು ಪ್ರತಿಭಟನೆ ನಡೆಸಿದ ಕುಟುಂಬಸ್ಥರು

ಚಿಕ್ಕನಾಯಕನಹಳ್ಳಿ: ಪಟ್ಟಣದ ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯರ ನಿರ್ಲಕ್ಷದಿಂದಾಗಿ ಚಿಕಿತ್ಸೆ ಪಡೆದಿದ್ದ ಮಹಿಳೆಯು ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಹಾಗೂ ಸಾರ್ವಜನಿಕರು ಮಹಿಳೆಯ ಶವವನ್ನಿಟ್ಟು ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆದಿದೆ. ತಾಲ್ಲೂಕಿನ ಮುದ್ದೆನಹಳ್ಳಿ ಗ್ರಾಮದ ವಿಜಯಲಕ್ಷ್ಮಿ ಎಂಬುವರು ಹೊಟ್ಟೆನೋವಿನಿಂದಾಗಿ ಪಟ್ಟಣದ ಸಾಯಿಗಂಗಾ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಈಕೆಯನ್ನು ಪರೀಕ್ಷಿಸಿದ ವೈದ್ಯರಾದ ಡಾ. ವಿಜಯರಾಘವೇಂದ್ರರವರು ಕಿಡ್ನಿಯಲ್ಲಿ ಕಲ್ಲಿದೆ ಎಂದು ತಿಳಿಸಿ, ಅದರ ನಿವಾರಣೆಗಾಗಿ ಶಸ್ತ್ರಚಿಕಿÀತ್ಸೆಯ ಅಗತ್ಯವಿದೆ ಎಂದು ಏ.22 ರಂದು ಬೆಳಿಗ್ಗೆ ಶಸ್ತ್ರಚಿಕಿತ್ಸೆ ನಡೆಸಿ ವಿಶೇಷ ವಾರ್ಡ್‍ಗೆ ದಾಖಲಿಸಿದರು. ಆದರೆ ಸಂಜೆ ಮಹಿಳೆಯ ಆರೋಗ್ಯಸ್ಥಿತಿ ಗಂಭೀರವಾದ ಕಾರಣ ಸದರಿ ವೈದ್ಯರು ಆತುರಾತುರವಾಗಿ, ಆಂಬುಲೆನ್ಸ್‍ನ್ನು ವ್ಯವಸ್ಥೆ ಮಾಡಿ ಮಹಿಳೆಯನ್ನು ತುಮಕೂರಿನ ವಿನಾಯಕ ಆಸ್ಪತೆಗೆ ಕಳುಹಿಸಿದರು. ಅಲ್ಲಿ ಎರಡುದಿನ ಚಿಕಿತ್ಸೆನಡೆಸಿದರೂ ಆಕೆಯು ಚೇತರಿಸಿಕೊಳ್ಳದ ಕಾರಣ ಅಲ್ಲಿನ ವೈದ್ಯರು ತುರ್ತಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗಿ ಎಂದರು. ಕುಟುಂಬಸ್ಥರು ಆಕೆಯನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ಏ.24 ರಂದು…

ಮುಂದೆ ಓದಿ...

ತವರು ಮನೆಗೆ ಹೋಗಿ ಗಂಡನ ಮನೆಗೆ ಬಂದ ತಕ್ಷಣವೇ ಮಸಣ ಸೇರಿದ ವಿವಾಹಿತೆ!

ಚಿಕ್ಕನಾಯಕನಹಳ್ಳಿ: ಚಿಕ್ಕನಾಯಕನಹಳ್ಳಿ ಪಟ್ಟಣದ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಾಲಯ ಬಳಿ ಮಾರ್ಕೆಟ್ ಬಳಿ ವಿವಾಹಿತ ಮಹಿಳೆಯನ್ನು ಆಕೆಯ ಜುಟ್ಟಿಗೆ ಬಟ್ಟೆಕಟ್ಟಿ ಫ್ಯಾನಿಗೆ ನೇತು ಹಾಕಿರುವ ಘಟನೆ ನಡೆದಿದೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ದಿಲೀಪನ ಹೆಂಡತಿ ಚೈತ್ರ ತುರುವೇಕೆರೆ ತಾಲೂಕಿನ ಸಂಪಿಗೆ ತನ್ನ ತಾಯಿ ಹಾಗೂ ಚೈತ್ರಾಳ ತಂಗಿ ಬಾಣಂತಿ ಆಗಿದ್ದ ಕಾರಣ ಬಾಣಂತಿ ಹಾಗೂ ಮಗುವನ್ನು ನೋಡಿಕೊಂಡು ಬರಲು ಹೋಗಿದ್ದ ಚೈತ್ರ ಎರಡು ದಿನ ತಡವಾದ ಕಾರಣ ಗಂಡ-ಹೆಂಡತಿಯರ ನಡುವೆ ಜಗಳವಾಡಿ ಈ ಅವಘಡ ಸಂಭವಿಸಿದೆ. ಮೃತ ಮಹಿಳೆ ಚೈತ್ರ ನೆನ್ನೆ ಸೋಮವಾರ ಸಂಜೆ ಚಿಕ್ಕನಾಯಕನಹಳ್ಳಿಗೆ ವಾಪಸಾಗಿದ್ದಾಳೆ ಇಂದು ಬೆಳಿಗ್ಗೆ ಶವವಾಗಿ ಸುದ್ದಿಯಾಗಿದ್ದಾಳೆ. ಚೈತ್ರ ಸುಮಾರು ಐದು ಅಡಿ ಎತ್ತರವಿದ್ದು ಕಾಲುಗಳು ಮಡಚಿ ಇದ್ದು ಆಕೆಯ ಕುತ್ತಿಗೆಗೆ ಹಗ್ಗ ಬಿಗಿದು ಕೊಂಡಿಲ್ಲ ಫ್ಯಾನಿಗೆ ಕಟ್ಟಿರುವ ಬಟ್ಟೆ ಸೀದಾ ಆಕೆಯ ತಲೆ ಜುಟ್ಟಿಗೆ ಕಟ್ಟಿ ಕೊಂಡಿರುವುದನ್ನು ಬಿಟ್ಟರೆ…

ಮುಂದೆ ಓದಿ...

ವಚನ ಸಾಹಿತ್ಯ ರಚನೆಯಲ್ಲಿಯೇ ಅಕ್ಕನದು ಮೇರು ಪ್ರತಿಭೆ

ತುಮಕೂರು: “ಪುರುಷನ ಮುಂದೆ ಮಾಯೆ ಸ್ತ್ರೀಯೆಂಬ ಅಭಿಮಾನವಾಗಿ ಕಾಡುವುದು. ಸ್ತ್ರೀಯ ಮುಂದೆ ಮಾಯೆ ಪುರುಷನೆಂಬ ಅಭಿಮಾನವಾಗಿ ಕಾಡುವುದು’’ ಎಂದು ಸಾರುತ್ತಾ ಸ್ತ್ರೀ ಪುರುಷ ಸಮಾನತೆಯ ತತ್ತ ್ವವನ್ನು, ಲೋಕಕ್ಕೆ ತಿಳಿಸಿ, ಹೆಣ್ಣಿನ ಬಗೆಗಿನ ಅನೇಕ ಮೌಢ್ಯಗಳಿಗೆ, ಕಂದಾಚಾರಗಳಿಗೆ ದಿಟ್ಟತೆಯ ಉತ್ತರವನ್ನು ನೀಡಿದ ವೈಚಾರಿಕ ಚಿಂತನೆ ಮಾಡಿದ ವೀರವಿರಾಗಿಣಿ ಅಕ್ಕಮಹಾದೇವಿ ಕನ್ನಡದ ಮೊಟ್ಟಮೊದಲ ಕವಯತ್ರಿ ಹಾಗೆಯೇ ಭಾರತದ ಮೊಟ್ಟ ಮೊದಲ ಸ್ತ್ರೀವಾದಿ. ಲಭ್ಯವಿರುವ 434 ವಚನಗಳಲ್ಲೂ ಅಕ್ಕ ಸಮಾಜ ಚಿಂತನೆಯ ಜೊತೆ ಆಧ್ಯಾತ್ಮದ ಔನ್ನತ್ಯವನ್ನು ಅನುಭಾವಿಕ ವಿಸ್ತಾರವನ್ನು ಅಭಿವ್ಯಕ್ತಿಸಿದ್ದಾಳೆ. ವಚನ ಸಾಹಿತ್ಯ ರಚನೆಯಲ್ಲಿಯೇ ಅಕ್ಕನದು ಮೇರು ಪ್ರತಿಭೆ. ಮಹಿಳೆಯ ಮೇಲೆ ನಡೆಯುವ ಕೌಟುಂಬಿಕ ಸಾಮಾಜಿಕ ದೌರ್ಜನ್ಯಗಳನ್ನು ಮೆಟ್ಟಿನಿಂತು, “ಸಾವ ಕೆಡುವ ಗಂಡಂದಿರ ಒಲೆಯೊಳಗಿಕ್ಕು’’ ಎಂದು ಪುರುಷ ಪ್ರಧಾನ ವ್ಯವಸ್ಥೆಗೇ ಸವಾಲು ಹಾಕಿದವಳು ಅಕ್ಕ. ಇಂದಿಗೂ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಗೆ, 12ನೆಯ ಶತಮಾನದಲ್ಲೇ ದಿಟ್ಟವಾಗಿ ಉತ್ತರ ಹೇಳಿದ ಅಕ್ಕ…

ಮುಂದೆ ಓದಿ...

ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣದೊಂದಿಗೆ ಸಂಸ್ಕಾರ ಅವಶ್ಯಕ

ಚಿಕ್ಕನಾಯಕನಹಳ್ಳಿ:  ಉತ್ತಮ ಸಮಾಜ ನಿರ್ಮಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಕೂಡ ಕಲ್ಪಿಸಬೇಕು ಜೊತೆಗೆ ನಾವು ನಮ್ಮ ಭೂಮಿಯ ರಕ್ಷಣೆ ಕೂಡ ಮಾಡುವಂತೆ ಮಕ್ಕಳಲ್ಲಿ ಪ್ರೇರೇಪಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ವೆಂಕಟೇಶಪ್ಪ ವಿ ತಿಳಿಸಿದರು ಅವರು ಇಂದು ಶ್ರೀರಾಮ ಫೌಂಡೇಶನ್ ವತಿಯಿಂದ ಭೂಮಿಯ ಸಂರಕ್ಷಣೆ ದಿನವಾಗಿ ಕಾನೂನು ಅರಿವು ಕಾರ್ಯಕ್ರಮವನ್ನು ನೆಹರು ವೃತ್ತದ ಹೊಯ್ಸಳ ಪಾರ್ಟಿ ಹಾಲ್ನ ಆರ್ ಆರ್ ಕಾಂಪ್ಲೆಕ್ಸ್ ಆಗಮಿಸುವ ಮೊದಮೊದಲು ನೆಹರು ವೃತ್ತದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು ಪಾರ್ಟಿ ಹಾಲ್ ನಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪೆÇ್ರೀತ್ಸಾಹಧನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡುತ್ತಾ ಭೂಮಿಯ ಸುರಕ್ಷತಾ ದಿನ ಅದರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ ಆಗಿದ್ದರು ಮಾನವನ ಸ್ವಾರ್ಥ ಸಾಧನೆಗಾಗಿ ಭೂಮಿಯಲ್ಲಿ ಸಿಗುವ ಖನಿಜ ಸಂಪತ್ತು ನಿಕ್ಷೇಪಗಳನ್ನು ಪಡೆಯುವ ಸಲುವಾಗಿ ಬ್ಲಾಸ್ಟ್ ಮಾಡಿ ಜಲ ಸಂಪತ್ತು ನೈಸರ್ಗಿಕ…

ಮುಂದೆ ಓದಿ...

ನಿಖಿಲ್ ಇನ್ನು ಚಿಕ್ಕವನು ಅವನ ಹೇಳಿಕೆಗೆ ಪ್ರತಿಕ್ರಿಯಿಸುವ ಅವಶ್ಯಕತೆಯಿಲ್ಲ: ವಾಸಣ್ಣ

ಗುಬ್ಬಿ: ಜೆಡಿಎಸ್ ನಿಂದ ಯಾರು ನನ್ನನ್ನು ಕಳುಹಿಸಿರುವವರು ನಾನೇನು ಹೋಗಿದ್ದೀನಾ ನಾನು ಜನತಾ ದಳದಲ್ಲೇ ಇದ್ದೀನಲ್ಲ, ನಿಖಿಲ್ ಇನ್ನು ಚಿಕ್ಕ ಹುಡುಗ ಅವನ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಅವಶ್ಯಕತೆ ಇಲ್ಲ ಎಂದು ಶಾಸಕ ಎಸ್.ಆರ್. ಶ್ರೀನಿವಾಸ್ ತಿಳಿಸಿದರು. ತಾಲೂಕಿನ ದೊಡ್ಡಗುಣಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಕಲ್ಲೇನಹಳ್ಳಿ, ಹಂಡನಹಳ್ಳಿ, ನೆರಲೇಕೆರೆ, ತಗ್ಗಿಹಳ್ಳಿ ಪೇರಮಸಂದ್ರ ಹಾಗೂ ದೊಡ್ಡಗುಣಿ ಗ್ರಾಮದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಅವರೇ ಹೇಳಿದಾರಲ್ಲ ಜೆಡಿಎಸ್‍ನಿಂದ ಯಾರು ನನ್ನನ್ನು ಕಳುಹಿಸಿರುವವರು ನಾನೇನು ಹೋಗಿದ್ದೀನಾ? ನಾನು ಜನತಾ ದಳದಲ್ಲೇ ಇದ್ದೀನಲ್ಲ, ನಿಖಿಲ್ ಇನ್ನು ಚಿಕ್ಕ ಹುಡುಗ ಅವನ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಅವಶ್ಯಕತೆ ಇಲ್ಲ ಎಂದ ಅವರು ಅವರಪ್ಪನನ್ನು ಹೋಗಿ ಕೇಳುವಂತೆ ಹೇಳಿದ ಅವರು ಅವರಪ್ಪನನ್ನು ಕೇಳಿದರೆ ಸರಿಯಾದ ಉತ್ತರವನ್ನು ಅವರೆ ಕೊಡುತ್ತಾರೆ ಅವನು ಇನ್ನು ಚಿಕ್ಕ ಹುಡುಗ ಅವನ ಮಾತಿಗೆ ಉತ್ತರ…

ಮುಂದೆ ಓದಿ...

ಅರಗ ಜ್ಞಾನೇಂದ್ರ-ಮಾಧುಸ್ವಾಮಿಯವರಿಗೆ ದಲಿತರ ಬಗ್ಗೆ ಕಾಳಜಿಯಿಲ್ಲ!

ಗುಬ್ಬಿ: ತಾಲ್ಲೂಕಿನ ಕಡಬ ಹೋಬಳಿಯ ಪೆದ್ದನಹಳ್ಳಿ ಜೋಡಿ ಹತ್ಯೆಯ ಘಟನೆ ಇಡೀ ರಾಜ್ಯವೇ ಬೆಚ್ಚಿ ಬೀಳುವಂತಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯ ಉಸ್ತುವಾರಿ ಸಚಿವ ಅರಗ ಜ್ಞಾನೇಂದ್ರ ಹಾಗೂ ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಈ ವಿಚಾರದಲ್ಲಿ ಇದುವರೆಗೂ ತುಟಿ ಬಿಚ್ಚಿಲ್ಲ ಅವರಿಗೆ ದಲಿತರ ಬಗ್ಗೆ ಯಾವುದೇ ರೀತಿಯ ಕಾಳಜಿ ಇಲ್ಲ ಹಾಗಾಗಿ ಅವರಿಬ್ಬರು ಕೂಡ ರಾಜಿನಾಮೆಯನ್ನು ನೀಡಬೇಕು ಎಂದು ಒತ್ತಾಯಿಸಿದ ಅವರು ಈ ಘಟನೆ ಮಾಡಿರುವಂತಹ ನಂದೀಶ್ ಹಾಗೂ ರೌಡಿ ತಂಡವನ್ನು ಕೂಡಲೆ ಬಂಧಿಸಬೇಕು ಇದು ಕೇವಲ ಆಕಸ್ಮಿಕವಾಗಿ ನಡೆದಿರುವ ಘಟನೆಯಲ್ಲ ಮಾಡಬೇಕು ಎಂಬ ಸಂಚಿನಿಂದಲೇ ಮಾಡಲಾಗಿದೆ ಈ ಘಟನೆ ಹೊಂದಿರುವಂತಹ ನಂದೀಶ್ ಹಾಗೂ ಪಟಾಲಂ ಅವರ ಆಸ್ತಿಯನ್ನು ಸರ್ಕಾರ ಜಪ್ತಿ ಮಾಡಬೇಕು ಎಂದು…

ಮುಂದೆ ಓದಿ...

ದಲಿತ ಯುವಕರ ಹತ್ಯೆಗೆ ಖಂಡನೆ: ಆರೋಪಿಗಳ ಬಂಧನಕ್ಕೆ ಒತ್ತಾಯ

ತುಮಕೂರು: ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್ ತುಮಕೂರು ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಪೆದ್ದನಹಳ್ಳಿ ಗ್ರಾಮದಲ್ಲಿ ನಡೆದ ಇಬ್ಬರು ಪರಿಷ್ಟ ಜಾತಿ ಮತ್ತು ಪಂಗಡದ ಯುವಕರ ಅಮಾನವೀಯ ಹತ್ಯೆಯನ್ನು ಖಂಡಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಎ.ಎಸ್.ಪಿ ಉದೇಶ್ ಮುಖಾಂತರ ಘಟನೆಗೆ ಸಂಬಂಧಿಸಿದವರನ್ನು ಬಂಧಿಸಿ ಸೂಕ್ತ ತನಿಖೆ ಮತ್ತು ಕಾನೂನು ಕ್ರಮಕ್ಕೆ ಒತ್ತಾಯಿಸಿ ಹಾಗೂ ಗ್ರಾಮಗಳಲ್ಲಿ ಬಲಿಷ್ಠರು ಗುಂಪುಗೂಡಿ ಕಾನೂನನ್ನು ಕೈಗೆತ್ತುಗೊಂಡು ದುರ್ಬಲರ ಜೀವ ಹತ್ಯೆ ಮಾಡುವ ಇಂತಹ ಘಟನೆಗಳು ಜಿಲ್ಲೆಯಲ್ಲಿ ಮತ್ತೆ ಮರುಕಳಿಸದಂತೆ ಪೊಲೀಸ್ ಇಲಾಖೆಯಿಂದ ನಾಗರೀಕರಿಗೆ ಕಾನೂನಿನ ಅರಿವನ್ನು ನೀಡಬೇಕೆಂದು ಆಗ್ರಹಿಸಲಾಯಿತು. ಇತ್ತಿಚ್ಛೆಗೆ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಪೆದ್ದನಹಳ್ಳಿ ಗ್ರಾಮದಲ್ಲಿ ಇಬ್ಬರು ದಲಿತ ಯುವಕರನ್ನು ಬಲಿಷ್ಠ ಸಮುದಾಯಗಳು ಅಮಾನುಷವಾಗಿ ಹತ್ಯೆ ಮಾಡಿರುವ ಘಟನೆಯು ನಾಗರೀಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಈ ಘಟನೆಯಿಂದ ಗ್ರಾಮದಲ್ಲಿ ಭಯದ ವಾತವರಣ ಸೃಷ್ಠಿಯಾಗಿದ್ದು…

ಮುಂದೆ ಓದಿ...