ಚಿಕ್ಕನಾಯಕನಹಳ್ಳಿ: ದೇವಾಲಯ ಕಟ್ಟಡ ಕಾರ್ಯದಲ್ಲಿ ತನು-ಮನ-ಧನ ಎಲ್ಲವನ್ನೂ ಅರ್ಪಿಸುವ ಮೂಲಕ ನಾನು ಮಣ್ಣಿಗೆ ಹೋಗೋವರೆಗೂ ನಿಮ್ಮೊಂದಿಗೆ ಇರುತ್ತೇನೆ ಎಂದು ತಮ್ಮಡಿಹಳ್ಳಿ ವಿರಕ್ತ ಮಠಾಧೀಶ ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಮಹಾಸ್ವಾಮಿಗಳು ಹೇಳಿದರು ತಾಲೂಕಿನ ಹಂದನಕೆರೆ ಹೋಬಳಿ ಬೇವಿನಹಳ್ಳಿ ಗ್ರಾಮದಲ್ಲಿರುವ ಅಂತರಘಟ್ಟೆ ಕರಿಯಮ್ಮದೇವಿ ದೇವಾಲಯದ ಕಟ್ಟಡ ಕಾಮಗಾರಿಗೆ ರಸೀತಿ ವಿತರಿಸುವ ಕಾರ್ಯಕ್ರಮ ಹಾಗೂ ಎಸೆಸೆಲ್ಸಿ ಉತ್ತೀರ್ಣರಾದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಭಾಗವಹಿಸಿ ಮಾತನಾಡುತ್ತಾ, 36 ಹಳ್ಳಿಗಳ ಗ್ರಾಮದೇವತೆ ಜಗನ್ಮಾತೆಯ ಕಾರ್ಯ ಯಾರ್ಯಾರ ಕೈಯಲ್ಲಿ ಕಾರ್ಯ ಮಾಡಿಸುವವಳೋ ಈ ಕ್ಷೇತ್ರ ಎಲ್ಲರ ಸಹಕಾರದಿಂದ ಅಭಿವೃದ್ಧಿ ಆಗಬೇಕು ನಾವು ಸಹ ಕ್ಷೇತ್ರಕ್ಕೆ ಸಂದರ್ಭದಲ್ಲಿ ಸಹಕರಿಸುವ ಮೂಲಕ ನಾನು ನಿಮ್ಮೊಂದಿಗೆ ಇರುತ್ತೇನೆ ಎಂದರು. ತುಮಕೂರು ಜಿಲ್ಲಾ ಪೆÇೀಲಿಸ್ ಅಧೀಕ್ಷಕ ರಾಹುಲ್ ಕುಮಾರ್ ಶಹಪುರ್ ವಾಡ್ ಇವರು ಮಾತನಾಡುತ್ತಾ ನಾನು ವಿರಕ್ತಮಠದ ಭಕ್ತನಾಗಿದ್ದು ನನ್ನ ನಂಬಿಕೆಗೆ ದೇವರು ಸತ್ಯವಾಗಿದ್ದರೆ ನನ್ನ ಕುಟುಂಬದೊಂದಿಗೆ…
ಮುಂದೆ ಓದಿ...