ಶಂಕರಮಠದ ಬೀಗ ಮುರಿದು ಹುಂಡಿ ಕಳ್ಳತನ

ತುಮಕೂರು: ನಗರದ ಬಿ.ಹೆಚ್. ರಸ್ತೆಯಲ್ಲಿರುವ ಶಂಕರಮಠದ ಬೀಗ ಒಡೆದು ಒಳನುಗ್ಗಿರುವ ಕಳ್ಳರು ಹುಂಡಿ ಒಡೆದು ಅದರಲ್ಲಿದ್ದ ಕಾಣಿಕೆ ಹಣವನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ಕಳೆದ ರಾತ್ರಿ ನಡೆದಿದೆ. ನಗರದ ಭದ್ರಮ್ಮ ವೃತ್ತದಲ್ಲಿರುವ ಶಂಕರಮಠದಲ್ಲಿರುವ ಶ್ರೀ ಶಂಕರಾಚಾರ್ಯ ಮತ್ತು ಅಮ್ಮನವರ ದೇವಾಲಯದ ಬಾಗಿಲು ಬೀಗ ಒಡೆಯುವ ಮುನ್ನ ಪಕ್ಕದಲ್ಲೇ ಇದ್ದ ಅರ್ಚಕರ ಮನೆಗೆ ಬಾಗಿಲಿಗೆ ಹೊರಗಡೆಯಿಂದ ಬೀಗ ಜಡಿದಿರುವ ಕಳ್ಳರು ಮನೆಯ ಮುಂಭಾಗದಲ್ಲಿ ಬಲ್ಬ್‍ನ್ನು ತೆಗೆದು ದೇವಾಲಯದ ಬೀಗ ಒಡೆದು ಹುಂಡಿಯನ್ನು ದೇವಾಲಯದ ಹೊರಗೆ ತೆಗೆದುಕೊಂಡು ಹೋಗಿ ಕಾಂಪೌಂಡ್ ಪಕ್ಕದಲ್ಲಿ ಅದನ್ನು ಒಡೆದು ಅದರೊಳಗಿದ್ದ ಕಾಣಿಕೆ ಹಣವನ್ನು ದೋಚಿಕೊಂಡು ಹುಂಡಿಯನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಪ್ರತಿನಿತ್ಯ ಶಂಕರಮಠದ ಅರ್ಚಕರು ಬೆಳಗಿನ ಜಾವ 5 ಗಂಟೆಗೆ ಎದ್ದು ಪೂಜೆಗೆ ತೆರಳುವುದು ರೂಢಿ. ಅದರಂತೆ ಇಂದು ಬೆಳಗಿನ ಜಾವ 5 ಗಂಟೆಗೆ ಎದ್ದಿರುವ ಅರ್ಚಕರು ಮನೆಯ ಬಾಗಿಲನ್ನು ತೆರೆಯಲು ಪ್ರಯತ್ನಿಸಿದಾಗ ಬಾಗಿಲು…

ಮುಂದೆ ಓದಿ...

ಅಭಿಮಾನಿಗಳ ಒತ್ತಾಸೆಯಿಂದ ರಾಜಕೀಯಕ್ಕೆ ಮರಳುತ್ತಿದ್ದೇನೆ: ಮಾಜಿ ಶಾಸಕ ಎಚ್.ನಿಂಗಪ್ಪ

ತುಮಕೂರು: ರಾಜಕಾರಣವೇ ಬೇಡ ಎಂದುಕೊಂಡಿದ್ದ ನನಗೆ, ಅಭಿಮಾನಿಗಳು ಮತ್ತು ಗ್ರಾಮಾಂತರ ಕ್ಷೇತ್ರದ ಜನರ ಒತ್ತಾಸೆಯ ಮೇರೆಗೆ ಸಕ್ರಿಯ ರಾಜಕಾರಣಕ್ಕೆ ಮರಳುತಿದ್ದು, ಕ್ಷೇತ್ರದ ಮತದಾರರ ಬಳಿ ಬಂದಾಗ, ಒರ್ವ ರಾಜಕಾರಣಿಯಾಗಿ ನೋಡದೆ, ನಿಮ್ಮ ಕ್ಷೇತ್ರದ ಮನೆ ಮಗನಂತೆ ಕಂಡು, ಸಹಕಾರ ನೀಡಿ ಎಂದು ಮಾಜಿ ಶಾಸಕ ಹೆಚ್.ನಿಂಗಪ್ಪ ಮನವಿ ಮಾಡಿದ್ದಾರೆ. ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಹೆಬ್ಬೂರು ಸಮೀಪದ ಬಸವಣ್ಣನ ಗುಡಿಯ ಬಳಿ ತುಮಕೂರು ಗ್ರಾಮಾಂತರ ಜನತೆ ಹಾಗೂ ಸ್ವಾಭಿಮಾನಿ ಹೆಚ್.ನಿಂಗಪ್ಪ ಅಭಿಮಾನಿ ಬಳಗದವತಿಯಿಂದ ಆಯೋಜಿಸಿದ್ದ ಜಗಜ್ಯೋತಿ ಶ್ರೀಗುರು ಬಸವೇಶ್ವರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತಿದ್ದ ಅವರು, ನಾನು ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ಮತದಾರ ರನ್ನು ಘನತೆಯಿಂದ ನಡೆಸಿಕೊಂಡಿದ್ದೇನೆ.ಮನೆ ಬಾಗಿಲಿಗೆ ಬಂದವರನ್ನು ಅನಾವಶ್ಯಕವಾಗಿ ಕಾಯಿಸಿಲ್ಲ.ಅಲ್ಲದೆ ನಾನು ಕ್ಷೇತ್ರದ ವರು, ಎಲ್ಲಿಂದಲೋ ವಲಸೆ ಬಂದವನಲ್ಲ. ಇದನ್ನು ಕ್ಷೇತ್ರದ ಪ್ರತಿಯೊಬ್ಬ ಮತದಾರರು ಅರ್ಥ ಮಾಡಿಕೊಳ್ಳಬೇಕೆಂದರು. ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವನ್ನು ಕಟ್ಟಿ ಬೆಳೆಸಿದವನು…

ಮುಂದೆ ಓದಿ...

24 ಗಂಟೆಯೂ ಜನರ ಸೇವೆಗೆ ಸದಾ ಸಿದ್ಧ: ಮಾಜಿ ಶಾಸಕ ಸುರೇಶ್ ಗೌಡ

ತುಮಕೂರು: ಸೇವೆಯೇ ಜೀವನವನ್ನಾಗಿಸಿಕೊಂಡಿರುವ ನಾನು ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ದಿನದ 24 ಗಂಟೆ ವಾರದ ಏಳು ದಿನಗಳ ಕಾಲ ಜನರ ಸೇವೆಗೆ ಸದಾ ಸಿದ್ಧನಾಗಿಯೇ ಬಂದಿದ್ದೇನೆ. ಸೇವೆಯೇ ನನ್ನ ಜೀವನ ಎಂದು ಮಾಜಿ ಶಾಸಕ ಸುರೇಶಗೌಡ ತಿಳಿಸಿದರು. ತುಮಕೂರು ಗ್ರಾಮಾಂತರ ಕ್ಷೇತ್ರದ ಕುಣಿಗಲ್ ರಸ್ತೆಯ ಬಾಣಾವರ ಗೇಟಿನಲ್ಲಿ ಇಂದು ಜನಸಂಪರ್ಕ ಕಾರ್ಯಾಲಯಕ್ಕೆ ಅಡಿಗಲ್ಲು ಹಾಕುವ ಮುಖೇನ ಭೂಮಿ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿ ಬಿ.ಸುರೇಶ್ ಗೌಡ ಮಾತನಾಡಿದರು. ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಳೆದ 18 ವರ್ಷಗಳಿಂದ ನಿತ್ಯ ನಿರಂತರವಾಗಿ ಜನರ ಸೇವೆಯಲ್ಲಿ ತೊಡಗಿಸಿಕೊಂಡಿರುವ ನಾನು ಇಲ್ಲಿನ ಜನತೆಗೆ ಯುವಕರಿಗೆ ಏನಾದರೂ ಉತ್ತಮ ಕಾರ್ಯ ಮಾಡಬೇಕೆಂಬ ಮಹದಾಕಾಂಕ್ಷೆಯೊಂದಿಗೆ ಕ್ಷೇತ್ರದ ಜನರ ಬದುಕು ಅಕ್ಷಯವಾಗಲಿ ಎಂಬ ನಿಟ್ಟಿನಲ್ಲಿ ಅಕ್ಷಯ ತೃತೀಯ ಮತ್ತು ಬಸವ ಜಯಂತಿಯ ದಿನ ಜನತೆಗೆ ಉತ್ತಮ ಸೇವೆ ನೀಡುವ ಸಲುವಾಗಿ ಸಂಕಲ್ಪ ಮಾಡಿ ಎಲ್ಲರಿಗೂ ಪ್ರೇರಣಾದಾಯಕವಾಗಿರುವ ಕಟ್ಟಡ ನಿರ್ಮಾಣ…

ಮುಂದೆ ಓದಿ...

ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರಿಂದ ರಂಜಾನ್ ಸಡಗರ

ತುಮಕೂರು: ಮುಸ್ಲಿಂ ಬಾಂಧವರ ಪವಿತ್ರ ಹಬ್ಬಗಳಲ್ಲಿ ಒಂದಾದ ಈದ್ ಉಲ್ ಫಿತರ್ ರಂಜಾನ್ ಹಬ್ಬವನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಕಳೆದ ಎರಡು ವರ್ಷಗಳಿಂದ ಕೊರೊನಾ ಮಹಾಮಾರಿಯ ಆರ್ಭಟದಿಂದಾಗಿ ರಂಜಾನ್ ಹಬ್ಬವನ್ನು ಮುಸ್ಲಿಂ ಬಾಂಧವರು ಯಾವುದೇ ಅದ್ದೂರಿ, ಆಡಂಬರ ಇಲ್ಲದೆ ತಮ್ಮ ಮನೆಗಳಲ್ಲೇ ಆಚರಿಸಿದ್ದರು. ಆದರೆ ಈ ಬಾರಿ ಕೊರೊನಾ ಸೋಂಕಿನ ಪ್ರಮಾಣ ಗಣನೀಯವಾಗಿ ತಗ್ಗಿ, ಕಠಿಣ ಕ್ರಮಗಳನ್ನು ತೆರವುಗೊಳಿಸಿರುವುದರಿಂದ ಮುಸ್ಲಿಂ ಬಾಂಧವರು ರಂಜಾನ್ ಹಬ್ಬವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಅದ್ದೂರಿಯಾಗಿ ಆಚರಿಸಿದರು. ಬೆಳಿಗ್ಗೆ 9.15ಕ್ಕೆ ನಗರದ ಮೆಳೇಕೋಟೆ ಸಮೀಪ ಇರುವ ಮಾಜಿ ಶಾಸಕ ಡಾ. ನಜೀರ್ ಅಹ್ಮದ್ ಈದ್ಗಾ (ಕೆಂಪು ಈದ್ಗಾ) ಮೈದಾನದಲ್ಲಿ ಮುಸ್ಲಿಂ ಬಾಂಧವರು ಸಮಾವೇಶಗೊಂಡು ಪ್ರಾರ್ಥನೆ ಸಲ್ಲಿಸುವ ಮೂಲಕ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದರು. ನಂತರ ಕುಣಿಗಲ್ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಜಮಾಯಿಸಿದ ಸಾವಿರಾರು ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ,…

ಮುಂದೆ ಓದಿ...

ಬಸವಣ್ಣನ ನೀರಾವರಿ ಯೋಜನೆ ಇಂದಿಗೂ ಮಾದರಿ

ತುಮಕೂರು: ಜಗತ್ತಿಗೆ ಬೇಕಾದ ಇಬ್ಬರು ಮಹಾನ್ ದಾರ್ಶನಿಕರು ಬಸವಣ್ಣ, ಸಿದ್ದರಾಮೇಶ್ವರರು, ಕೆರೆಕಟ್ಟೆಗಳನ್ನು ಕಟ್ಟಿಸಿ ನೀರಾವರಿ ಯೋಜನೆ ಮಾಡಿದರು, ಅದೇ ಇಂದಿಗೂ ಮಾದರಿಯಾಗಿದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ತಿಳಿಸಿದರು. ನಗರದ ಸ್ನೇಹ ಸಂಗಮ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದಿಂದ ಹಮ್ಮಿಕೊಂಡಿದ್ದ ಜಗಜ್ಜ್ಯೋತಿ ಬಸವವೇಶ್ವರ ಮತ್ತು ಕಾಯಕಯೋಗಿ ಸಿದ್ದರಾಮೇಶ್ವರರ ಜಯಂತಿಯಲ್ಲಿ ಅವರು ಮಾತನಾಡಿದರು. ಸಮಾಜದ ಋಣ ತೀರಿಸುವ ನಿಟ್ಟಿನಲ್ಲಿ ಎಲ್ಲರು ಚಿಂತಿಸಬೇಕಿದೆ, ಇರುವುದರಲ್ಲಿಯೇ ಸಮಾಜಕ್ಕೆ ಒಳಿತನ್ನೇ ಮಾಡುವ ಮನೋಭಾವನೆಯನ್ನು ರೂಢಿಸಿಕೊಂಡಾಗ ಮಾತ್ರ ಸಮುದಾಯ ಶಕ್ತವಾಗಲಿದೆ, ಸಮುದಾಯಕ್ಕೆ ಕೊಡುವ ನಿಟ್ಟಿನಲ್ಲಿ ಸಮುದಾಯ ಮುಖಂಡರು ಚಿಂತಿಸಬೇಕಿದೆ ಎಂದು ಹೇಳಿದರು. ವೀರಶೈವ ಬ್ಯಾಂಕ್ ಮಾಜಿ ನಿರ್ದೇಶಕ ಹೆಚ್.ಜಿ.ಬಸವರಾಜು ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್ ಅವರು ದೇಶದ ಸಮಾನತೆಯ ಆಶಯಗಳು, ಭಗವಾನ್ ಬುದ್ಧ ವೈಚಾರಿಕ ವಿಚಾರಗಳನ್ನು ತಿಳಿಸಿದರೆ ಅಣ್ಣ ಬಸವಣ್ಣ ಅದಕ್ಕೆ ಸ್ಥಿತಪ್ರಜ್ಞೆಯನ್ನು ಮೂಡಿಸಿದರು, ಅಂಬೇಡ್ಕರ್ ಅದಕ್ಕೊಂದು ಚೌಕಟ್ಟು ನೀಡಿದರು ಅದನ್ನು ಪಾಲಿಸುವ…

ಮುಂದೆ ಓದಿ...