ಪೋಷಕರು ಮಕ್ಕಳ ಆರೋಗ್ಯದ ಕಡೆ ಗಮನ ಹರಿಸಿ

ತುಮಕೂರು: ಪೋಷಕರು ಕೇವಲ ಮಕ್ಕಳ ಸಂತೋಷದ ಕಡೆ ಗಮನ ಹರಿಸಿದರೆ ಸಾಲದು ಅವರ ಪಾಲನೆ ಪೋಷಣೆ ಜೊತೆ ಜೊತೆಗೆ ಅವರ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು,ಇಂದು ಮಕ್ಕಳನ್ನು ವೈದ್ಯಕೀಯ ಪರೀಕ್ಷೆ ನಡೆಸಿದಾಗ ಅವರಲ್ಲಿ ಮೂರು ಅಂಶಗಳ ಸಮಸ್ಯೆಗಳು ಕಂಡು ಬಂದಿದೆ ಮೊದಲನೆಯದು ರಕ್ತಹೀನತೆ,ಎರಡನೆಯದು ಸ್ಥೂಲಕಾಯ,ಮೂರನೆಯದು ಹಲ್ಲಿನ ಸಮಸ್ಯೆ ಎಂದು ಹೇಳಿದರು. ಅವರು ತುಮಕೂರು ನಗರದ 26ನೇ ವಾರ್ಡಿನ ಡಾ||ಚಂದ್ರಶೇಖರ ಆಜಾದ್ ಉದ್ಯಾನವನದಲ್ಲಿ ಕ್ಲಬ್ 26 ಮತ್ತು ಕಿಡ್ಸ್ ಯೂನಿವರ್ಸ್ ಪ್ರೀಸ್ಕೂಲ್ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಪಾಲಿಕೆಯ ಸದಸ್ಯರಾದ ಮಲ್ಲಿಕಾರ್ಜುನ್ ರವರ ಸಹಕಾರದಿಂದ ಕಳೆದ 15 ದಿನಗಳಿಂದ ಬೇಸಿಗೆ ಶಿಬಿರ ನಡೆಯುತ್ತಿರುವುದು ಸಂತೋಷದಾಯಕ,ಮಕ್ಕಳಿಗೆ ವಿದ್ಯೆಯ ಜೊತೆಗೆ ಉತ್ತಮ ಸಂಸ್ಕಾರವನ್ನು ಕಲಿಸಿದಾಗ ರಾಷ್ಟ್ರ ಪ್ರಗತಿಯಾಗುತ್ತದೆ ಇದರಿಂದ ಹೆತ್ತವರಿಗೂ,ದೇಶಕ್ಕೂ ಗೌರವ ಬರುತ್ತದೆ ಎಂದು ತಿಳಿಸಿದರು. ಮಧುಮೇಹ ತಜ್ಞ ಡಾ||…

ಮುಂದೆ ಓದಿ...

ಮಿಂಚಿನ ಕಾರ್ಯಾಚರಣೆ: ಎಸಿಬಿ ಬಲೆಗೆ ಬಿದ್ದ ಅರಕೆರೆ ಗ್ರಾ.ಪಂ. ಕಾರ್ಯದರ್ಶಿ

ತುಮಕೂರು: ಸಾಮಾಜಿಕ ಹೋರಾಟಗಾರ ಜೆಟ್ಟಿ ಅಗ್ರಹಾರ ನಾಗರಾಜು ಹೋರಾಟ ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ಪ್ರತಿ ಮನೆಯ ಮಾತಾಗುತ್ತಿದ್ದಾರೆ ತಿಂಗಳು ಕಾಲೆಳೆಯುವ ಒಳಗೆ ಒಬ್ಬ ಭ್ರಷ್ಟ ಅಧಿಕಾರಿಗಳ ಬೇಟೆ ತಪ್ಪುವುದಿಲ್ಲ. ಸರ್ಕಾರಿ ಇಲಾಖೆಗಳಿಗೆ ಸಂಬಂಧಿಸಿದ ಯಾವುದೇ ಕೆಲಸ ಪಡೆಯಬೇಕಿದ್ದರೆ ಅಧಿಕಾರಿಗಳಿಗೆ ಲಂಚ ನೀಡಲೇಬೇಕು ಇದ್ದ ಸಮಯದಲ್ಲಿ ಎಸಿಬಿ ಅಧಿಕಾರಿಗಳಿಂದ ಹೋರಾಟಗಾರ ಜೆಟ್ಟಿ ಅಗ್ರಹಾರ ನಾಗರಾಜು ಇವರುಗಳ ಹೋರಾಟದಿಂದ ಬಡ ರೈತರು ಮತ್ತು ಮಧ್ಯಮ ವರ್ಗದ ಸಾರ್ವಜನಿಕರು ಅಲ್ಪಪ್ರಮಾಣದ ನಿಟ್ಟುಸಿರು ಬಿಟ್ಟಂತೆ ಇದೆ ತಿಂಗಳಲ್ಲಿ ಒಬ್ಬ ಭ್ರಷ್ಟ ಅಧಿಕಾರಿಗಳು ಸಿಕ್ಕಿ ಜೈಲು ಪಾಲುದಾರ ಭ್ರಷ್ಟಾರ ಬಿಡದೆ ಅಧಿಕಾರಿಗಳು. ಸರಣಿ ಭ್ರಷ್ಟಾರ ಮುಂದುವರೆಸಿದ್ದಾರೆ ತುಮಕೂರು ತಾಲ್ಲೂಕು ಅರಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಖಾಲಿ ನಿವೇಶನದ ಈ ಸ್ವತ್ತು ಮಾಡಿಸಿ ಕೊಳ್ಳಲು ಅರುಣ್ ಕುಮಾರ್ ಅರ್ಜಿ ನೀಡಿದ್ದು ಪಂಚಾಯಿತಿ ಕಾರ್ಯದರ್ಶಿ ಶ್ರೀಧರ್ 7500 ಲಂಚಕ್ಕೆ ಬೇಡಿಕೆ ಇಟ್ಟು 3000 ಹಣ ಮುಂಗಡವಾಗಿ ಪಡೆದು…

ಮುಂದೆ ಓದಿ...

ಜನಪರ ಕಲ್ಯಾಣ ಕಾರ್ಯಕ್ರಮಗಳು ಅನುಷ್ಠಾನಗೊಳ್ಳಲಿ: ಅಗರ ಜ್ಞಾನೇಂದ್ರ

ತುಮಕೂರು : ಸರ್ಕಾರದ ಬಗ್ಗೆ ಜನಸಾಮಾನ್ಯರ ಮನದಲ್ಲಿ ಗೌರವ ಮೂಡಬೇಕಾದರೆ, ಜನಪರ ಕಲ್ಯಾಣ ಕಾರ್ಯಕ್ರಮಗಳು ತಳಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ದಕ್ಷತೆಯಿಂದ ಮತ್ತು ಬದ್ಧತೆಯಿಂದ ಕೆಲಸ ನಿರ್ವಹಿಸಬೇಕು ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೋವಿಡ್ ಪರಿಸ್ಥಿತಿ, ಪೂರ್ವ ಮುಂಗಾರು ಮಳೆ, ಬಿತ್ತನೆ ಬೀಜ, ಗೊಬ್ಬರ ದಾಸ್ತಾನು, ಮತ್ತಿತರ ವಿಷಯಗಳ ಕುರಿತು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿ.ಪಂ. ಸಿಇಓ ಮತ್ತು ಜಿಲ್ಲಾ ಮಟ್ಟದ ಪ್ರಮುಖ ಇಲಾಖೆಗಳ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಜಿಲ್ಲೆಯ ರೈತರಿಗೆ ತೊಂದರೆಯಾಗದಂತೆ ಸಕಾಲದಲ್ಲಿ ಬಿತ್ತನೆ ಬೀಜ, ಗೊಬ್ಬರ ಪೂರೈಕೆಯಾಗಬೇಕು ಮತ್ತು ಬಿತ್ತನೆ ಬೀಜ, ಗೊಬ್ಬರ ದಾಸ್ತಾನಿಗೆ ಒತ್ತುಕೊಡಬೇಕು ಎಂದರು. ಜಿಲ್ಲೆಯಲ್ಲಿ ಶೇಂಗಾ ಬಿತ್ತನೆ ಬೀಜದ ಕೊರತೆಯಾಗದಂತೆ ಸಾಕಾಗುವಷ್ಟು ಗುಣಮಟ್ಟದ ಬಿತ್ತನೆ ಬೀಜವನ್ನು ಸರಬರಾಜುದಾರರಿಂದ ಖರೀದಿಸಬೇಕು ಎಂದು…

ಮುಂದೆ ಓದಿ...