ಕೆರೆಯಲ್ಲಿ ಮುಳುಗಿ ಯುವಕ ಸಾವು

ತುಮಕೂರು; ಕೆರೆಯಲ್ಲಿ ಈಜಲು ತೆರಳಿದ್ದ ನಾಲ್ವರು ಯುವಕರ ಪೈಕಿ ಓರ್ವ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಸಿದ್ದಾಪುರ ಕೆರೆಯಲ್ಲಿ ಘಟನೆ ಸಂಭವಿಸಿದ್ದು, ಆಸೀಫ್(17)ಮೃತ ದುರ್ದೈವಿ. ತುಮಕೂರಿನ ಗುಬ್ಬಿಗೇಟ್ ನಿವಾಸಿಯಾದ ಈತ ಸ್ನೇಹಿತರೊಂದಿಗೆ ಮಧುಗಿರಿ ಬಳಿಯಿರುವ ಸಿದ್ದಾಪುರದ ದರ್ಗಾಗೆ ಪೂಜೆ ಸಲ್ಲಿಸಲು ತೆರಳಿದ್ದನು. ಈ ವೇಳೆ ನಾಲ್ವರು ಸ್ನೇಹಿತರು ಈಜಲು ಸಿದ್ದಾಪುರ ಕೆರೆಗೆ ಇಳಿದಿದ್ದು, ಆಸೀಫ್ ನೀರಿನಲ್ಲಿ ಮುಳುಗಿ ಮೃತನಾಗಿದ್ದಾನೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಮಧುಗಿರಿ ಪೆÇಲೀಸರು ಭೇಟಿದ್ದು ಮೃತ ದೇಹವನ್ನು ಹೊರ ತೆಗೆದಿದ್ದಾರೆ. ಈ ಕುರಿತು ಮಧುಗಿರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆರೆಯಲ್ಲಿ ಯುವಕನೋರ್ವ ಮುಳುಗಿ ಸಾವನ್ನಪ್ಪಿದ್ದಾನೆಂಬ ವಿಷಯ ತಿಳಿಯುತ್ತಿದ್ದಂತೆ ನೂರಾರು ಮಂದಿ ಸ್ಥಳಕ್ಕೆ ಓಡೋಡಿ ಬಂದಿದ್ದು, ಜನರನ್ನು ನಿಯಂತ್ರಣ ಮಾಡಲು ಪೋಲೀಸರು ಹರಸಾಹಸ ಪಡಬೇಕಾಯಿತು. ಘಟನೆ ಸ್ಥಳದಲ್ಲಿ ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಮುಂದೆ ಓದಿ...

ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಆದ್ಯತೆ ನೀಡಿ

ತುಮಕೂರು : ಕೋವಿಡ್-19 ಪರಿಣಾಮದಿಂದ ಕಳೆದ 2 ವರ್ಷದಿಂದ ನಿರ್ದಿಷ್ಟವಾದ ರೀತಿಯಲ್ಲಿ ತರಗತಿಗಳ ನಡೆಯದೆ ಶೈಕ್ಷಣಿಕ ಚಟುವಟಿಕೆಗಳು ಕುಂಠಿತಗೊಂಡಿದ್ದವು. ಆದರೆ ಸದ್ಯದ ಸುಧಾರಿತ ಪರಿಸ್ಥಿತಿಯಲ್ಲಿ ಶೈಕ್ಷಣಿಕ ಚಟುವಟಿಕೆಗಳ ವೇಗ ಹೆಚ್ಚಿಸಿಕೊಳ್ಳುವ ಅಗತ್ಯವಿದ್ದು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕಾಗಿದೆ ಎಂದು ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಂ.ಎಸ್.ರವಿಪ್ರಕಾಶ್ ಕರೆ ನೀಡಿದರು. ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಎನರ್ಜಿ ಕ್ಲಬ್ ಹಾಗೂ ಸ್ಮಾರ್ಟ್ ಸಿಟಿ ಲಿಮಿಟೆಡ್ ಸಂಯುಕ್ತಾಶ್ರಯದಲ್ಲಿ ಎಸ್‍ಎಸ್‍ಐಟಿ ಕ್ಯಾಂಪಸ್‍ನಲ್ಲಿ ಏರ್ಪಡಿಸಿದ್ದ ‘ಸ್ಮಾರ್ಟ್ ಸಿಟಿ ಕಾಮಗಾರಿಗಳಲ್ಲಿ ಕೇಬಲ್ ಅಳವಡಿಕೆ’ ವಿಷಯ ಕುರಿತ ತಾಂತ್ರಿಕ ಸಮ್ಮೇಳನವನ್ನು ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ನವದೆಹಲಿಯ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತಿನ ಧನಸಹಾಯದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ನಡೆಸುತ್ತಿರುವ ಎನರ್ಜಿ ಕ್ಲಬ್ ಮೂಲಕ ನಡೆಯುತ್ತಿರುವ ಸಾಮಾಜಿಕ ಚಟುವಟಿಕೆಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿವೆ. ಸದ್ಯದ…

ಮುಂದೆ ಓದಿ...

ರಭಸದ ಗಾಳಿ ಮಳೆಗೆ ನೆಲಕ್ಕುರುಳಿದ ಮರಗಳು

ತುಮಕೂರು: ತುಮಕೂರು ತಾಲ್ಲೂಕಿನ ಕೆಲವು ಭಾಗಗಳಲ್ಲಿ ನಿನ್ನೆ ಸಂಜೆ ವಿಪರೀತ ಗಾಳಿ ಬೀಸಿ ಸಾಕಷ್ಟು ಮರಗಳು ನೆಲಕ್ಕುರುಳಿರುವ ಘಟನೆ ವರದಿಯಾಗಿದೆ. ತುಮಕೂರು ನಗರ ಸೇರಿದಂತೆ ತಾಲ್ಲೂಕಿನ ಹಲವೆಡೆ ಸಂಜೆ ಮಳೆ ಆರಂಭವಾಯಿತು. ಮಳೆಗಿಂತ ಗಾಳಿ ಹೆಚ್ಚು ಬೀಸಿದ ಪ್ರದೇಶಗಳಲ್ಲಿ ಮರಗಳು ಬಿದ್ದು ಹೋಗಿವೆ. ಕೆಲವೆಡೆ ರಸ್ತೆಗೆ ಅಡ್ಡಲಾಗಿ ರಸ್ತೆಯ ಬದಿಯಲ್ಲಿರುವ ಮರಗಳಲ್ಲಿ ಬಿದ್ದಿದ್ದು, ಅರಣ್ಯ ಸಿಬ್ಬಂದಿಗಳು, ಬೆಸ್ಕಾಂ ಸಿಬ್ಬಂದಿಗಳು ಹೊರತೆಗೆಯಲು ಹರಸಾಹಸ ಪಟ್ಟರು. ಮೈಲನಹಟ್ಟಿ ಮಾರನಹಟ್ಟಿ ಅದಲಾಪುರ ಸುತ್ತ ಮುತ್ತ ಬಾರಿ ಗಾಳಿ ಮಳೆ ಯಿಂದಾಗಿ ತುಂಬಾ ಬೆಲೆ ಬಾಳುವಅಡಿಕೆ ಹಾಗೂ ತೆಂಗಿನ ಮರಗಳು ಭೂಮಿಗೆ ಉರುಳಿವೆ. ಅಲ್ಲದೆ ಈ ಭಾಗದ ಸುತ್ತ ಮುತ್ತ ಸಾಕಷ್ಟು ಮನೆಗಳಿಗೆ ಹಾನಿಯಾಗಿದೆ. ಸಂಜೆ 4 ಗಂಟೆಯಿಂದ ಮಳೆ ಆರಂಭವಾಯಿತು. ಮಳೆಗಿಂತ ಗಾಳಿಯೇ ಅಧಿಕವಾಗಿತ್ತು. ಒಂದೊಂದು ತೋಟದಲ್ಲಿ ಗಾಳಿಯ ರಭಸಕ್ಕೆ 10 ರಿಂದ 20 ಮರಗಳ ತನಕ ಬಿದ್ದು ಹೋಗಿವೆ. ಅಡಿಕೆ…

ಮುಂದೆ ಓದಿ...

ತ್ಯಾಗ-ವೈರಾಗ್ಯದ ತತ್ವಕ್ಕೆ ಅನ್ವರ್ಥ ಶಂಕರಾಚಾರ್ಯ: ವೀರೇಶಾನಂದ ಸರಸ್ವತಿ

ತುಮಕೂರು : ಉತ್ಕೃಷ್ಟ ತತ್ವಜ್ಞಾನಿ ಶಂಕರಾಚಾರ್ಯರು ತ್ಯಾಗ ಮತ್ತು ವೈರಾಗ್ಯದ ತತ್ವಕ್ಕೆ ಅನ್ವರ್ಥರಾಗಿದ್ದರು ಎಂದು ರಾಮಕೃಷ್ಣ ಆಶ್ರಮದ ಡಾ.ವೀರೇಶಾನಂದ ಸರಸ್ವತಿ ಸ್ವಾಮಿಜೀ ತಿಳಿಸಿದರು. ನಗರದ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತುಮಕೂರು ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಬ್ರಾಹ್ಮಣ ಮಹಾಸಭಾ, ಶ್ರೀ ಶಂಕರ ಸೇವಾ ಸಮಿತಿ ಇವರುಗಳ ಸಂಯುಕ್ತಾಶ್ರಯದಲ್ಲಿ ಜರುಗಿದ ಶ್ರೀ ಶಂಕರಾಚಾರ್ಯರ ಜಯಂತಿ ಆಚರಣೆಯಲ್ಲಿ ಪ್ರವಚನ ನೀಡುತ್ತಾ ಮಾತನಾಡಿದ ಅವರು ಶಂಕರಾಚಾರ್ಯರ ಬಗ್ಗೆ ಜಗತ್ತು ಕಣ್ಣು ತೆರೆದಿದೆ. ಅವರು ಶ್ರೇಷ್ಠ ಸಂತ, ದಾರ್ಶನಿಕ, ಪ್ರವಾದಿ ಎಂದು ಗೌರವಿಸಲ್ಪಟ್ಟಿದ್ದಾರೆ ಎಂದು ನುಡಿದರು. ಶಂಕರಾಚಾರ್ಯರು ಬದುಕಿದ್ದು ವರ್ಷಗಳಲ್ಲಿ ಕೇವಲ 32. ಆದರೆ ಬೇರೆಯವರು ವರ್ಷಗಳಲ್ಲಿ ಮಾಡುವ ಕೆಲಸವನ್ನು ಶಂಕರರು ವಾರಗಳಲ್ಲಿ ಮಾಡಿದವರು ಎಂಬ ವಿದೇಶಿ ಚಿಂತಕ ಥಾಮಸ್ ಬೇಕನ್ ಅವರ ಮಾತನ್ನು ಶ್ರೀಗಳು ಉಲ್ಲೇಖಿಸಿ…

ಮುಂದೆ ಓದಿ...