ಅಪಘಾತದಿಂದ ಹೊರಗುತ್ತಿಗೆ ನೌಕರ ಸಾವು: ಶವ ಪುರಸಭೆ ಆವರಣದಲ್ಲಿಟ್ಟುಕೊಂಡು ಪರಿಹಾರಕ್ಕೆ ಒತ್ತಾಯ

ಚಿಕ್ಕನಾಯಕನಹಳ್ಳಿ: ಸುಮಾರು 25 ವರ್ಷಗಳಿಂದ ಹೊರಗುತ್ತಿಗೆ ನೌಕರನಾಗಿ ಪುರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರೇಣುಕಪ್ಪ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದ ವ್ಯಕ್ತಿಯ ಶವವನ್ನು ಪುರಸಭೆಯ ಆವರಣದಲ್ಲಿ ಇಟ್ಟು ಕುಟುಂಬಕ್ಕೆ ಪರಿಹಾರ ನೀಡಬೇಕು ಮತ್ತು ಮಗನಿಗೆ ನೌಕರಿ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಯಿತು ಮೃತ ರೇಣುಕಪ್ಪ 50 ವರ್ಷದವನಾಗಿದ್ದು ಸುಮಾರು 25 ವರ್ಷಗಳಿಂದ ಪುರಸಭೆಯ ಟ್ರ್ಯಾಕ್ಟರ್ ಚಾಲಕನಾಗಿ ಹೊರಗುತ್ತಿಗೆ ನೌಕರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಂದು ತಿಳಿಯಲಾಗಿದೆ ಕಳೆದ ರಾತ್ರಿ ಸುಮಾರು ಎಂಟು ಗಂಟೆ ಸಮಯದಲ್ಲಿ ಪಟ್ಟಣದ ಲಕ್ಷ್ಮಿ ನರಸಿಂಹ ಚಿತ್ರಮಂದಿರದ ಎದುರು ರಸ್ತೆ ದಾಟುವಾಗ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಈತನಲ್ಲಿ ರಕ್ತಸ್ರಾವ ಹೆಚ್ಚಾಗಿ ರಾತ್ರಿಯೇ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಈತನ ಶವವನ್ನು ಪುರಸಭಾ ಕಚೇರಿ ಆವರಣಕ್ಕೆ ಪುರಸಭಾ ಸಿಬ್ಬಂದಿಗಳು ಕರೆತರುವ ಮೂಲಕ ಪ್ರತಿಭಟಿಸಿದರು. ಪಟ್ಟಣದ ಸ್ವಚ್ಛತೆಗೆ 25 ವರ್ಷಗಳಿಂದ ದೇಹವನ್ನು ಸವೆಸಿದ್ದು ಯಾವುದೇ ಪರಿಹಾರ ಇಲ್ಲವಾಗಿದೆ ಈಗಾಗಲೇ ಹೊರಗುತ್ತಿಗೆ ನೌಕರರು ಆತನನ್ನು…

ಮುಂದೆ ಓದಿ...

ವಿವಿಧೆಡೆ ಬೈಕ್ ಕಳವು ಮಾಡುತ್ತಿದ್ದ ಖದೀಮರ ಬಂಧನ: ಸಾರ್ವಜನಿಕ ವಲಯದಲ್ಲಿ ಎಸ್ಪಿ ರಾಹುಲ್ ಕುಮಾರ್ ಅವರಿಗೆ ಪ್ರಶಂಸೆ

ತುಮಕೂರು: ನಗರದ ವಿವಿಧೆಡೆ ಬೈಕ್ ಕಳ್ಳತನ ಮಾಡುತ್ತಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಇಲ್ಲಿನ ಜಯನಗರ ಪೆÇಲೀಸರು ಬಂಧಿಸಿ, 2.5 ಲಕ್ಷ ರೂ. ಮೌಲ್ಯದ 5 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ನಗರದಲ್ಲಿ ಕಳೆದ ಕೆಲವು ದಿನಗಳಿಂದ ಬೈಕ್ ಕಳವು ಪ್ರಕರಣಗಳು ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಕಳ್ಳರ ಪತ್ತೆಗಾಗಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರ್ ವಾಡ್ ವಿಶೇಷ ತನಿಖಾ ತಂಡವನ್ನು ರಚಿಸದ್ದರು. ಅಂದಿನ ತಿಲಕ್ ಪಾರ್ಕ್ ಸಿಪಿಐ ಮುನಿರಾಜು ನೇತೃತ್ವದಲ್ಲಿ ಜಯನಗರ ಪೋಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಬಿ.ಸಿ ಮಂಜುನಾಥ್, ಹಾಗೂ ಸಿಬ್ಬಂದಿಗಳ ತಂಡ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಶ್ರಮಿಸಿದ್ದಾರೆ. ಬಂಧಿತರಾಗಿದ್ದ ನಾಲ್ವರ ಪೈಕಿ ಇಬ್ಬರು ಅಪ್ರಾಪ್ತ ಬಾಲಕರಾಗಿದ್ದು, ಇಬ್ಬರು ಪ್ರಾಪ್ತ ವಯಸ್ಕರಾಗಿದ್ದಾರೆ ಎಂದು ತಿಳಿದು ಬಂದಿದೆ. ಸದರಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷರೋಪಣೆ ಪತ್ರ ಸಲ್ಲಿಸಲಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ. ಇನ್ನು ನಗರದಲ್ಲಿ ದಿನೇ ದಿನೆ ಬೈಕ್…

ಮುಂದೆ ಓದಿ...

ನಿವೃತ್ತ ನೌಕರರಿಗೆ ಸರ್ಕಾರ ಸ್ಪಂದಿಸಲಿ : ಡಾ.ಎಲ್ ಭೈರಪ್ಪ

ತುಮಕೂರು: ಜನಸಾಮಾನ್ಯರಿಗೆ ಅವರ ಕಷ್ಟ ಸುಖಗಳಿಗೆ ಸ್ಪಂದಿಸಿ ನಿವಾರಣೆ ಮಾಡಿಕೊಡಲು ಸರ್ಕಾರ ಉದ್ಯೋಗ ನೀಡಿರುತ್ತದೆ. ಅದರಂತೆ ಕೆಲಸ ಮಾಡಿ ನಿವೃತ್ತರಾಗುತ್ತೇವೆ. ವೃತ್ತಿಯಲ್ಲಿದ್ದಾಗ ಒಂದು ರೀತಿ ನಿವೃತ್ತರಾದ ನಂತರ ಒಂದು ರೀತಿ ಸಮಸ್ಯೆಗಳಿರುತ್ತವೆ. ನಾಯಕತ್ವ ವಹಿಸಿ ಸಂಘಟನಾತ್ಮಕವಾಗಿ ಕೆಲಸ ಮಾಡಿ, ಉತ್ತಮ ಮಾರ್ಗದಲ್ಲಿ ನಡೆದರೆ ಅದಕ್ಕೆ ಸೂಕ್ತ ಪ್ರತಿಫಲ ಸಿಕ್ಕೇ ಸಿಗುತ್ತದೆ. ಸಂಘ-ಸಂಘಟನೆಗಳು ಸದಸ್ಯರ ಸಮಸ್ಯೆಗಳನ್ನು ಗುರುತಿಸಿ ಸೂಕ್ತ ಪರಿಹಾರ ಕಂಡುಕೊಳ್ಳುವುದೇ ಸಂಘದ ಗುರಿಯಾಗಿರಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಡಾ. ಎಲ್. ಭೈರಪ್ಪ ಅಭಿಪ್ರಾಯಪಟ್ಟರು. ಅವರು ಇಂದು ತುಮಕೂರು ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘವು ಸಂಘಟಿಸಿದ್ದ ಮಾಸಿಕ ಸಭೆ ಮತ್ತು ಸಂಘದ ಕರಪತ್ರ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು. ನಿವೃತ್ತರ ಬೇಡಿಕೆಗಳ ಈಡೇರಿಕೆಗಾಗಿ 2019 ರಿಂದಲೂ ಸಂಘ ಹೋರಾಟ ಮಾಡುತ್ತ ಬಂದಿದ್ದರೂ ಇನ್ನೂವರೆಗು ನಮ್ಮ ಯಾವ ಬೇಡಿಕೆಯೂ ಈಡೇರಿಲ್ಲ. ಆದರೆ ಮುಖ್ಯಮಂತ್ರಿಗಳೂ…

ಮುಂದೆ ಓದಿ...

ಕೇಂದ್ರದ ಗಮನ ಸೆಳೆದ ಜಿಲ್ಲೆಯ ರೈತ: ಮಷಣಾಪುರದ ರೈತನ ತೋಟ ವೀಕ್ಷಣೆಗೆ ಬಂದ ಸಚಿವ ಗಿರಿರಾಜ್ ಸಿಂಗ್!

ತುಮಕೂರು: ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಗಿರಿರಾಜ್ ಸಿಂಗ್ ಅವರು ಜಿಲ್ಲೆಯ ಬೆಳ್ಳಾವಿ ಹೋಬಳಿ ಮಷಣಾಪುರ ಗ್ರಾಮದ ಪ್ರಗತಿಪರ ರೈತ ಎಂ.ಎಸ್. ಮೃತ್ಯುಂಜಯ ಅವರ ತೋಟಕ್ಕೆ ಭೇಟಿ ನೀಡಿ ಸಮಗ್ರ ಸಾವಯವ ಕೃಷಿ ವ್ಯವಸ್ಥೆಯಡಿ ಬೆಳೆದಿರುವ ವಿವಿಧ ತೋಟಗಾರಿಕಾ ಮಿಶ್ರ ತಳಿ ಬೆಳೆಗಳನ್ನು ವೀಕ್ಷಿಸಿದರು. ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ತೆಂಗು, ಅಡಿಕೆ, ಮೆಣಸು, ಏಲಕ್ಕಿ, ಕಾಫಿ, ಸಪೋಟ, ಸೀಬೆ, ಮಾವು, ಡ್ರ್ಯಾಗನ್ ಫ್ರೂಟ್, ರೋಸ್‍ಆ್ಯಪಲ್, ಮಲೆಯನ್ ಆ್ಯಪಲ್, ಎಗ್‍ಪ್ರೂಟ್, ಜಾಕಾಯಿ ಸೇರಿದಂತೆ 250ಕ್ಕೂ ಹೆಚ್ಚು ದೇಸಿ-ವಿದೇಶಿ ಫಲ-ಪುಷ್ಪ ತೋಟಗಾರಿಕೆ ಬೆಳೆಗಳನ್ನು ಬೆಳೆದಿದ್ದು, ರೈತ ಎಂ.ಎಸ್. ಮೃತ್ಯುಂಜಯ ಅವರ ಮಗ ಕೇಶವಸ್ವಾಮಿ ಅವರೊಂದಿಗೆ ತೋಟಕ್ಕೆ ತೆರಳಿದ ಸಚಿವರು ಪ್ರತಿಯೊಂದು ಬೆಳೆಯ ಬಗ್ಗೆಯೂ ತೀವ್ರ ಕುತೂಹಲದೊಂದಿಗೆ ಮಾಹಿತಿ ಪಡೆದರು. ನಂತರ ಸಚಿವರು, ಸದರಿ ರೈತ ಮಾಡಿರುವ ಸಾವಯವ ಕೃಷಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸದರಿ…

ಮುಂದೆ ಓದಿ...