ಸಮವಸ್ರ್ತಧಾರಿ ಸಿಬ್ಬಂದಿಗೆ ವರ್ತನೆ ಬಹುಮುಖ್ಯ: ಟಿ.ಜೆ ಉದೇಶ್

ತುಮಕೂರು: ಸಮವಸ್ತ್ರದಲ್ಲಿರುವ ನಮ್ಮ ವರ್ತನೆಗಳನ್ನು ಸಮಾಜವು ಸೂಕ್ಷ್ಮವಾಗಿ ಗಮನಿಸುತ್ತದೆ ಆದ್ದರಿಂದ ಯಾವುದೇ ಇಲಾಖೆಯ ಸಮವಸ್ತ್ರಧಾರಿ ಸಿಬ್ಬಂದಿಗೆ ವರ್ತನೆ ಎಂಬುದು ಬಹಳ ಮುಖ್ಯ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಟಿ.ಜೆ.ಉದೇಶ್ ಅಭಿಪ್ರಾಯಪಟ್ಟರು. ಜಿಲ್ಲಾ ಗೃಹ ರಕ್ಷಕ ದಳವು ಶನಿವಾರ ಸಿದ್ಧಗಂಗಾಮಠದಲ್ಲಿ ನೂತನ ಗೃಹ ರಕ್ಷಕರಿಗೆ ಆಯೋಜಿಸಿದ್ದ 10 ದಿನಗಳ ಮೂಲ ತರಬೇತಿ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಪೊಲೀಸ್, ಅಗ್ನಿಶಾಮಕ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿ ಒಬ್ಬರಿಗೊಬ್ಬರು ಪೂರಕವಾಗಿ ಸಮನ್ವಯದಿಂದ ಕರ್ತವ್ಯ ನಿರ್ವಹಿಸುತ್ತಾರೆ. ಕರ್ತವ್ಯದ ವೇಳೆ ನಾವೆಲ್ಲ ನಮ್ಮ ಸಮವಸ್ತ್ರದ ಶರ್ಟಿನ ತೋಳನ್ನು ಅರ್ಧಕ್ಕೆ ಮಡಚಿರುತ್ತೇವೆ. ಶರ್ಟಿನ ತೋಳನ್ನು ಪೂರ್ತಿ ಬಿಟ್ಟುಕೊಂಡು ಓಡಾಡಬಹುದು ಆದರೆ ನಾವು ಆ ರೀತಿ ಮಾಡುವುದಿಲ್ಲ, ಶರ್ಟಿನ ಅರ್ಧ ತೋಳನ್ನು ಮಡಚುವುದು ನಾವು ಸದಾ ಕಾಲ ಕರ್ತವ್ಯಕ್ಕೆ ಸಿದ್ಧ ಎಂಬುದನ್ನು ಸಂಕೇತಿಸುತ್ತದೆ ಎಂದು ಗೃಹ ರಕ್ಷಕ ದಳದ ಪ್ರಶಿಕ್ಷಾಣಾರ್ಥಿಗಳಿಗೆ…

ಮುಂದೆ ಓದಿ...

ದಲಿತ ಸಮುದಾಯಕ್ಕೆ ರುದ್ರಭೂಮಿ ಮಂಜೂರು ಮಾಡುವಂತೆ ಒತ್ತಾಯ

ಗುಬ್ಬಿ : ತಾಲ್ಲೂಕಿನ ದಲಿತ ಸಮುದಾಯದವರಿಗೆ ರುದ್ರ ಭೂಮಿ ಮಂಜೂರಾತಿ ಮಾಡಬೇಕು ಎಂದು ದಲಿತ ಮುಖಂಡರು ಸಭೆಯಲ್ಲಿ ತಾಲೂಕು ಆಡಳಿತವನ್ನು ಆಗ್ರಹಿಸಿದರು. ದ.ಸಂ.ಸ ಜಿಲ್ಲಾ ಸಂಚಾಲಕ ನಿಟ್ಟೂರು ರಂಗಸ್ವಾಮಿ ಮಾತನಾಡಿ ತಾಲೂಕು ಆಡಳಿತದ ವತಿಯಿಂದ ತಾಲೂಕು ಪಂಚಾಯಿತಿ ಸಂಭಾಗಣದಲ್ಲಿ ಆಯೋಜಿಸಿದ್ದ ದಲಿತರ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಮುಖಂಡರು ತಾಲ್ಲೂಕಿನ ಯಾವುದೇ ದಲಿತ ಗ್ರಾಮದಲ್ಲಿ ದಲಿತರಿಗೆ ಸ್ಮಶಾನ ವಿಲ್ಲ ಇರುವ ಕಡೆ ಪ್ರಭಾವಿಗಳು ಜಾಗವನ್ನು ಒತ್ತುವರಿ ಹಾಗೂ ಖಾತೆ ಮಾಡಿಸಿಕೊಂಡಿದ್ದಾರೆ ದಲಿತರು ಸತ್ತರೆ ಶವ ಸಂಸ್ಕಾರಕ್ಕೆ ಬಹಳ ತೊಂದರೆ ಯಾಗುತ್ತಿದೆ.ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ದಲಿತರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಮುಂದಾಗುತ್ತಿಲ್ಲ ಕೇವಲ ಸಭೆಯಲ್ಲಿ ಮಾತ್ರ ದಲಿತರ ಸಮಸ್ಯೆ ಬಗೆಹರಿಸುತ್ತೇವೆ ಎಂದು ಹೇಳುವ ಅಧಿಕಾರಿಗಳು ಇದುವರೆವಿಗೂ ಸಮಸ್ಯೆ ಬಗೆಹರಿದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಖಂಡ ನಿಟ್ಟೂರು ನಾಗರಾಜ್ ಮಾತನಾಡಿ ತಾಲ್ಲೂಕಿನಲ್ಲಿ ದಲಿತರ ಜಮೀನು ಒತ್ತುವರಿಯಾಗಿದೆ ಕೆಲವು ಗ್ರಾಮದಲ್ಲಿ ದಲಿತರಿಗೆ ಮೀಸಲಿರುವ…

ಮುಂದೆ ಓದಿ...