ಕಣ್ಣಿನ ಆಪರೇಷನ್ ನೆಪವೊಡ್ಡಿ ವೃದ್ಧೆಯೊಬ್ಬರ ಒಡವೆ ದೋಚಿ ಪರಾರಿ


ಕೊರಟಗೆರೆ: ಪಟ್ಟಣದ ದೊಡ್ಡಪೇಟೆ ಬಡಾವಣೆಯ ಗಿರಿಜಮ್ಮ ರೇಣುಕಪ್ಪ ಎಂಬ ವೃದ್ಧ ದಂಪತಿ ಮನೆಯಲ್ಲಿ ಬೆಳಿಗ್ಗೆ 9ಗಂಟೆ ಸುಮಾರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕಣ್ಣಿನ ಆಪರೇಶನ್ ಮಾಡಿಸಿದರೆ ಹತ್ತು ಸಾವಿರ ಉಚಿತ ಹಣವನ್ನು ಕೊಡುತ್ತಾರೆ ಎನ್ನುವ ನೆಪದಲ್ಲಿ ಮನೆಯೊಳಗೆ ಬಂದ ಆಸಾಮಿ ಅಜ್ಜಿ ಮತ್ತು ತಾತ ನನ್ನ ನಂಬಿಸಲು ಆಧಾರ್ ಕಾರ್ಡ್ ರೇಷನ್ ಕಾರ್ಡ್ ಹಾಗೂ ಪೆನ್ಷನ್ ಕ್ಲಿಪ್ ಪಡೆದು ಅಧಿಕಾರಿಗಳಿಗೆ ಕಾಲ್ ಮಾಡುವಂತೆ ಮಾಡಿದೆ ಅಜ್ಜಿ ತಾತನನ್ನು ನಂಬಿಸಿದ್ದಾನೆ. ನಂತರ ಅಜ್ಜಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ನೆಪದಲ್ಲಿ ತನ್ನ ಬೈಕ್ ನಲ್ಲಿ ಕೂರಿಸಿಕೊಂಡು ಆಸ್ಪತ್ರೆಯ ಬಳಿ ಹೋದಾಗ ಆಪರೇಷನ್ ಮಾಡುತ್ತಾರೆ ಯಾರಾದರೂ ಒಡವೆಗಳನ್ನು ಕೇಳುತ್ತಾರೆ ಆದ್ದರಿಂದ ನನ್ನ ಬಳಿ ಕೊಡಿ ಎಂದು ಎಂದು ನಂಬಿಸಿ ಒಡವೆಗಳನ್ನೆಲ್ಲ ತೆಗೆದುಕೊಂಡು ಆತ ತಿರುಗಿ ನೋಡುವಷ್ಟರಲ್ಲಿ ಅಪರಿಚಿತ ವ್ಯಕ್ತಿಯು ನಾಪತ್ತೆಯಾಗಿರುತ್ತಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೊರಟಗೆರೆ ಪೆÇಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ…


ಮುಂದೆ ಓದಿ...

ಮಕ್ಕಳ ಸಹಾಯವಾಣಿ 1098 ದಿನಾಚರಣೆ: ಜಾಗೃತಿ ಜಾಥಾ


ತುಮಕೂರು : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಂಯುಕ್ರಾಶ್ರಯದಲ್ಲಿ ಇಂದು ನಡೆದ ಮಕ್ಕಳ ಸಹಾಯವಾಣಿ 1098 ದಿನಾಚರಣೆ ಮತ್ತು ಮಾಸಾಚರಣೆ ಕುರಿತ ಜಾಥಾ ಕಾರ್ಯಕ್ರಮಕ್ಕೆ ನಗರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ವಿದ್ಯಾರ್ಥಿಗಳು, ಜಾಥಾ ಉದ್ದೇಶವನ್ನು ಅರ್ಥ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಬುದ್ದಿವಂತರು, ವಿಚಾರ ಮಾಡುವ ಶಕ್ತಿಯುಳ್ಳವರು, ಸಾಧಿಸುವಂತ ಛಲವುಳ್ಳರಾಗಿರಬೇಕು ಎಂದರಲ್ಲದೇ, ಮಕ್ಕಳ ಯಾವುದೇ ರೀತಿಯ ಸಹಾಯಕ್ಕಾಗಿ 1098 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರೆ ಅಗತ್ಯ ರಕ್ಷಣೆ ಮತ್ತು ಪೋಷಣೆ ನೀಡಲಾಗುವುದು ಎಂದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ರಾಘವೇಂದ್ರ ಶೆಟ್ಟಿಗಾರ್ ಮಾತನಾಡಿ, ಮಕ್ಕಳ ಮೇಲೆ ವಿವಿಧ ರೀತಿಯ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಮಕ್ಕಳು ಯಾವುದೇ ತೊಂದರೆಗೆ ಒಳಗಾದಾಗ ಮಕ್ಕಳ ಸಹಾಯವಾಣಿ ಸಂಖ್ಯೆ1098…


ಮುಂದೆ ಓದಿ...

ನಿರಂತರ ಪರಿಶ್ರಮದಿಂದ ಮಾತ್ರ ನಿಗದಿತ ಗುರಿ ತಲುಪಲು ಸಾಧ್ಯ


ತುಮಕೂರು: ಶಿಕ್ಷಣದಲ್ಲಿ ಕಲಾ, ವಾಣಿಜ್ಯ, ವಿಜ್ಞಾನ ಇವುಗಳಲ್ಲಿ ಯಾವುದು ಕೀಳಲ್ಲ. ನಿರಂತರ ಪರಿಶ್ರಮದಿಂದ ನಿಗಧಿತ ಗುರಿಯನ್ನು ತಲುಪಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್ ಅಭಿಪ್ರಾಯಪಟ್ಟಿದ್ದಾರೆ. ನಗರದ ಬಾಲಭವನದಲ್ಲಿ ಶ್ರೀರಾಮ್ ಫೈನಾನ್ಸ್ ಸಂಸ್ಥೆ ಆಯೋಜಿಸಿದ್ದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ಕಲಾ ವಿಭಾಗದಲ್ಲಿ ಓದುವವರು ದಡ್ಡರು, ಬಡವರು ಎಂಬ ಕೀಳಿರಿಮೆ ಬೇಡ. ಆರ್ಟ್ ವಿಷಯ ಓದಿಯೇ ಇಂದು ನ್ಯಾಯಾಧೀಶನಾಗಿದ್ದೇನೆ. ಹಾಗಾಗಿ ಯಾವುದು ಕೀಳಲ್ಲ. ಮೇಲಲ್ಲ. ಗುರಿ ತಲುಪಲು ನಾವು ಅಡ್ಡದಾರಿ ಹಿಡಿಯದೆ ಸರಿಯಾದ ದಾರಿಯಲ್ಲಿ ಮುನ್ನೆಡೆದರೆ ಮಾತ್ರ ಸಾಧನೆಯ ಶಿಖರ ಹೇರಲು ಸಾಧ್ಯ ಎಂದರು. ಪ್ರತಿಭಾವಂತ ವಿದ್ಯಾರ್ಥಿಗಳ ಕಲಿಕೆಗೆ ಬಡತನ ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ ಇಂದು ಸರಕಾರದ ಜೊತೆಗೆ, ಶ್ರೀರಾಮ್ ಫೈನಾನ್ಸ್ ನಂತಹ ಹಲವಾರು ಸಂಘ ಸಂಸ್ಥೆಗಳು ಶಿಕ್ಷಣಕ್ಕೆ ಉತ್ತೇಜನ ನೀಡಲು…


ಮುಂದೆ ಓದಿ...

ಗರಿಷ್ಠ ಪ್ರಮಾಣದಲ್ಲಿ ಆಯುಷ್ಮಾನ್ ಕಾರ್ಡ್ ನೀಡಲು ಜಿಲ್ಲಾಧಿಕಾರಿ ಸೂಚನೆ


ತುಮಕೂರು: ಜಿಲ್ಲೆಯ ಜನರ ಆರೋಗ್ಯ ರಕ್ಷಣೆಗಾಗಿ ಗ್ರಾಮ-ಒನ್, ತುಮಕೂರು ಒನ್, ಸಾಮಾನ್ಯ ಸೇವಾ ಕೇಂದ್ರ, ತಾಲ್ಲೂಕು ಆರೋಗ್ಯ ಕೇಂದ್ರ, ಜಿಲ್ಲಾಸ್ಪತ್ರೆಗಳ ಮೂಲಕ ಅರ್ಹರಿಗೆ ಆಯುμÁ್ಮನ್ ಭಾರತ್-ಆರೋಗ್ಯ ಕರ್ನಾಟಕ(ಂಃಂಖಏ) ಕಾರ್ಡುಗಳನ್ನು ವಿತರಿಸಲು ತುರ್ತಾಗಿ ಕ್ರಮಕೈಗೊಳ್ಳಲು ಆಯಾ ತಹಶೀಲ್ದಾರ್, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿಗಳು, ಪಾಲಿಕೆ ಆಯುಕ್ತರು ಹಾಗೂ ಮುಖ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಈಗಾಗಲೇ 7 ಲಕ್ಷ ಂಃಂಖಏ ಕಾರ್ಡುಗಳನ್ನು ವಿತರಿಸಲಾಗಿದ್ದು, ತಾಲ್ಲೂಕುವಾರು ಗ್ರಾಮವಾರು ಈ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಲಾಯಿತು. ಕೋವಿಡ್-19 ತಡೆಗಟ್ಟಲು ಲಸಿಕಾಕರಣ ಮುಂದುವರೆದಿದ್ದು, 12 ರಿಂದ 14 ಮತ್ತು 15-17 ವಯಸ್ಸಿನೊಳಗಿನ ಮಕ್ಕಳಿಗೆ ನೀಡುವ ಲಸಿಕೆಯನ್ನು ಶೇ.100ರಷ್ಟು ಪೂರ್ಣಗೊಳಿಸಬೇಕು ಎಂದರಲ್ಲದೇ, ಮೇ 16ರಿಂದ ಶಾಲೆಗಳು ಪ್ರಾರಂಭವಾಗಿದ್ದು, ಎಲ್ಲಾ ತಾಲ್ಲೂಕು ವೈದ್ಯಾಧಿಕಾರಿಗಳು, ತಹಶೀಲ್ದಾರರು, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿಗಳು…


ಮುಂದೆ ಓದಿ...