ಶೆಟ್ಟಿಗೊಂಡನಹಳ್ಳಿ ಸಮೀಪ ಮೂರು ದ್ವಿಚಕ್ರ ವಾಹನಗಳ ಅಪಘಾತ : ನಾಲ್ವರು ದುರ್ಮರಣ


ತುರುವೇಕೆರೆ: ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಶೆಟ್ಟಿಗೊಂಡನಹಳ್ಳಿ ಸಮೀಪ ಯಡಿಯೂರು ಕಲ್ಲೂರು ಮುಖ್ಯರಸ್ತೆಯಲ್ಲಿ ಏಕಕಾಲದಲ್ಲಿ ಮೂರು ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ. ಜಲಧಿಗೆರೆ ಕಡೆಯಿಂದ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಕಲ್ಲೂರು ಕಡೆಗೆ ಡಿಸ್ ಕವರ್ ಮತ್ತು ಪಲ್ಸರ್ ಬೈಕ್ ಗಳಲ್ಲಿ ತೆರಳುತ್ತಿದ್ದ ನಾಲ್ವರು ತೆರಳುತ್ತಿದ್ದರು ಎನ್ನಲಾಗಿದ್ದು ಇತ್ತ ಕಲ್ಲೂರು ಕಡೆಯಿಂದ ಸ್ಪೆಂಡರ್ ಬೈಕಿನಲ್ಲಿ ಇಬ್ಬರು ಬರುತ್ತಿದ್ದರು ಎನ್ನಲಾಗಿದೆ. ಈ ಮೂರು ಬೈಕ್ ಗಳು ಮುಖಾಮುಖಿ ಡಿಕ್ಕಿಯಾಗಿ ನಾಲ್ಕು ಸಾವನ್ನಪ್ಪಿದ್ದಾರೆ. ಇನ್ನು ಓರ್ವನ ಸ್ಥಿತಿ ಗಂಬೀರವಾಗಿದ್ದು ಸ್ಥಳೀಯರ ಸಹಾಯದಿಂದ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಪಘಾತದಲ್ಲಿ ಒಬ್ಬ ಅಪಾಯದಿಂದ ಪಾರಾಗಿದ್ದಾನೆ. ಮಾಯಸಂದ್ರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ಮುಂದೆ ಓದಿ...

ವಿಎಸ್ಎಸ್ಎನ್ ಸೊಸೈಟಿಯಲ್ಲಿ ಇಟ್ಟಿದ್ದ ಹಣವನ್ನು ಕೊಡಿಸುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ!


ಕೊರಟಗೆರೆ: ವಿಧವಾ ಮಹಿಳೆಯೊಬ್ಬರು ವಿಎಸ್‍ಎಸ್‍ಎನ್ ಸೊಸೈಟಿಯಲ್ಲಿ ಇಟ್ಟಿದ್ದ ಭದ್ರತಾ ಠೇವಣಿಯನ್ನು ಆ ಮಹಿಳೆಗೆ ಕೊಡಿಸುವಂತೆ ಮಹಿಳಾ ಮೂಲಭೂತ ಹಕ್ಕುಗಳ ಸಂರಕ್ಷಣಾ ಸಮಿತಿಯ ತಾಲ್ಲೂಕು ಅಧ್ಯಕ್ಷೆ ಜಿ.ನಾಗಲಕ್ಷ್ಮಿ ಅವರು, ಕರ್ನಾಟಕ ರಾಜ್ಯ ಮಹಿಳಾ ಆಯೋಗ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. ತಾಲ್ಲೂಕಿನ ವಡ್ಡಗೆರೆ ಗಾಮದ ಪದ್ಮಲತಾ ಎಂಬುವವರು ವಿಎಸ್‍ಎಸ್‍ಎನ್ ಸೊಸೈಟಿಯಲ್ಲಿ 2015 ಆಗಸ್ಟ್ 29 ರಂದು 60,000 (ಅರವತ್ತು ಸಾವಿರ) ರೂ.ಗಳನ್ನು ಭದ್ರತಾ ಠೇವಣಿ ಇಟ್ಟಿದ್ದು, ಇದರ ಕಾಲಾವಧಿ ಏಳು ವರ್ಷಗಳು ಇದ್ದು ಈಗ ಬಡ್ಡಿ ಸೇರಿ 1,20,000 (ಒಂದು ಲಕ್ಷ ಇಪ್ಪತ್ತು ಸಾವಿರ) ರೂ.ಗಳು ನೀಡಬೇಕಾಗಿದೆ. ಪದ್ಮಲತಾ ಒಬ್ಬಂಟಿ ಮಹಿಳೆಯಾಗಿದ್ದು, ತುರ್ತಾಗಿ ಮೊಣಕಾಲಿನ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಬೇಕಾಗಿದೆ. ಆದರೆ ವಿಎಸ್‍ಎಸ್‍ಎನ್ ಸೊಸೈಟಿಯಲ್ಲಿ ಇಟ್ಟಿದ್ದ ಬಾಂಡ್ ಮೆಚ್ಯೂರಿಟಿ ಆಗಿದ್ದು, ಕಾರ್ಯನಿರ್ವಹಣಾಧಿಕಾರಿ ಬೋರೇಗೌಡ ಎಂಬುವವರು ನಮ್ಮ ಬಳಿ ಹಣದ ಕೊರತೆ ಇದೆ. ಆಡಿಟ್ ಆಗಬೇಕು, ಕೇಂದ್ರ…


ಮುಂದೆ ಓದಿ...

ಪರಿಶಿಷ್ಟ ಜಾತಿ ವರ್ಗಗಳ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸಿ ಧರಣಿ


ತುಮಕೂರು: ಪರಿಶಿಷ್ಟ ಜಾತಿ ಮತ್ತು ವರ್ಗಗಳ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸಿ ರಾಜನಹಳ್ಳಿಯ ಶ್ರೀವಾಲ್ಮೀಕಿ ಮಹರ್ಷಿಗಳು ನಡೆಸುತ್ತಿರುವ ಧರಣಿಗೆ ಬೆಂಬಲ ವ್ಯಕ್ತಪಡಿಸಿ ಇಂದು ಕರ್ನಾಟಕ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ನಗರದ ಟೌನ್‍ಹಾಲ್ ವೃತ್ತದಲ್ಲಿ ಸಮಾವೇಶಗೊಂಡ ನೂರಾರು ಪರಿಶಿಷ್ಟ ಜಾತಿ ಮತ್ತು ವರ್ಗಗಳ ಮುಖಂಡರುಗಳು ಸರಕಾರದ ವಿರುದ್ದ ಘೋಷಣೆಗಳನ್ನು ಕೂಗುತ್ತಾ ಅಶೋಕ ರಸ್ತೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸಮಾವೇಶಗೊಂಡ ಹೋರಾಟಗಾರರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಸದಸ್ಯೆ ಹಾಗೂ ಶಬರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಶ್ರೀಮತಿ ಶಾಂತಲಾ ರಾಜಣ್ಣ,ಮೀಸಲಾತಿ ಹೆಚ್ಚಳ ಮಾಡಿ ಎಂದು ನಮ್ಮ ಸಂವಿಧಾನ ಬದ್ದವಾದ ಹಕ್ಕನ್ನು ಕೇಳುತ್ತಿದ್ದೆವೆಯೇ ಹೊರತು ಭೀಕ್ಷೆಯನ್ನಲ್ಲ.ಸಂವಿಧಾನದ ಪ್ರಕಾರ ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ಪ್ರಮಾಣ…


ಮುಂದೆ ಓದಿ...

ಕೌಶಲ್ಯಾಭಿವೃದ್ದಿ ತರಬೇತಿಯಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಿ


ತುಮಕೂರು: ಯುವತಿ-ಯುವಕರಿಗೆ ಸೂಕ್ತ ಕೌಶಲ್ಯ ತರಬೇತಿ ನೀಡಿ, ಅಧಿಕೃತ ಪ್ರಮಾಣ ಪತ್ರ ವಿತರಿಸಿ, ಅವರ ಭವಿಷ್ಯ ಉಜ್ವಲವಾಗುವಂತೆ ನೋಡಿಕೊಳ್ಳುವುದು ಜಿಲ್ಲಾ ಕೌಶಲ್ಯ ಸಮಿತಿಯ ಜವಾಬ್ದಾರಿಯಾಗಿದೆ ಎಂದು ಮುಖ್ಯ ಕಾರ್ಯನಿರ್ವಣಾಧಿಕಾರಿ ಡಾ. ವಿದ್ಯಾಕುಮಾರಿ ತಿಳಿಸಿದರು. ಇಂದು ನಗರದ ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಕಾರ್ಯಕ್ರಮಗಳ ಅನುಷ್ಟಾನದ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರದ ಯೋಜನೆಗಳು ಜಿಲ್ಲೆಯಲ್ಲಿ ವಿಫುಲ ಉದ್ಯೋಗದ ಅವಕಾಶ ತೆರೆದಿವೆ. ಸ್ಥಳಿಯ ಯುವತಿ-ಯುವಕರಿಗೆ ಹೆಚ್ಚಿನ ಅವಕಾಶ ಕಲ್ಪಿಸಿ, ಉನ್ನತ ಗುಣಮಟ್ಟದ ಕೈಗಾರಿಕೆಗಳು ಹಾಗೂ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಂದ ಯುವತಿ-ಯುವಕರಿಗೆ ತರಬೇತಿ ನೀಡಬೇಕು. ದುರ್ಬಲ ಆರ್ಥಿಕ ಪರಿಸ್ಥಿತಿಯ ಕುಟುಂಬದ ವಿದ್ಯಾರ್ಥಿಗಳಿಗೆ ಈ ತರಬೇತಿಯು ಅವರ ಭವಿಷ್ಯವನ್ನು ಉತ್ತಮವಾಗಿ ರೂಪಿಸುತ್ತದೆ, ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ವರ್ಗದ ಬಡ ಹಾಗೂ ಮಧ್ಯಮ…


ಮುಂದೆ ಓದಿ...

ಪಾಲಿಕೆಯ 2022-23ನೇ ಸಾಲಿ‌ನ ಆಯವ್ಯಯ ಪ್ರಕಟ: ಸ್ವಚ್ಛತೆ-ಹಸಿರು ತುಮಕೂರು ನಿರ್ಮಾಣಕ್ಕೆ ಆದ್ಯತೆ


ತುಮಕೂರು: ತುಮಕೂರಿನ ನಾಗರೀಕರಿಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಉತ್ತಮ ಆರೋಗ್ಯ, ಬೀದಿ ದೀಪ ವ್ಯವಸ್ಥೆ, ಒಳಚರಂಡಿ, ಉದ್ಯಾನವನಗಳ ಅಭಿವೃದ್ಧಿ ಮೂಲಕ ಸ್ವಚ್ಛ ಮತ್ತು ಹಸಿರು ತುಮಕೂರು ನಿರ್ಮಾಣಕ್ಕೆ 2022-23ನೇ ಸಾಲಿನ ಆಯವ್ಯಯದಲ್ಲಿ ಆದ್ಯತೆ ನೀಡಲಾಗಿದ್ದು, ಸ್ಮಾರ್ಟ್ ಸಿಟಿ ಯೋಜನೆ ವತಿಯಿಂದ ಉತ್ತಮ ಸಾರಿಗೆ, ಸಿಸಿ ಟಿವಿ ಅಳವಡಿಕೆ, ಕ್ರೀಡಾಂಗಣ ಅಭಿವೃದ್ಧಿ, ಗ್ಯಾಸ್‍ಲೈನ್ ಜೋಡಣೆ ಮುಂತಾದ ಸಾರ್ವಜನಿಕ ಅಭಿವೃದ್ಧಿ ಕಾರ್ಯಕ್ರಮಗಳು ಪ್ರಗತಿಯಲ್ಲಿರುತ್ತವೆ ಎಂದು ತುಮಕೂರು ಮಹಾನಗರಪಾಲಿಕೆ ತೆರಿಗೆ ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ನಳಿನ ಇಂದ್ರಕುಮಾರ್ ಅವರು ತಿಳಿಸಿದರು. ಅವರು ತುಮಕೂರು ಮಹಾನಗರಪಾಲಿಕೆಯ 2022-23ನೇ ಸಾಲಿನ ಆಯವ್ಯಯ ಅಂದಾಜು ಮೇಲಿನ ಭಾಷಣ ಮಾಡುತ್ತಾ, ಪಾಲಿಕೆಯು ತನ್ನ ಆರ್ಥಿಕ ಇತಿಮಿತಿಗಳಲ್ಲಿ ಲಭ್ಯವಿರುವ ಸಂಪನ್ಮೂಲ ಬಳಸಿಕೊಂಡು ಆಯವ್ಯಯ ಅಂದಾಜು ತಯಾರಿಸಿದ್ದು, ಒಟ್ಟು ರೂ. 415.94ಲಕ್ಷಗಳ ಉಳಿತಾಯ ಬಜೆಟ್ ಮಂಡಿಸಲು ಸಂತಸವಾಗುತ್ತಿದೆ ಎಂದು ನುಡಿದರು. 2022-23ನೇ ಸಾಲಿಗೆ…


ಮುಂದೆ ಓದಿ...