ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಆರ್.ರಾಜೇಂದ್ರ ಭೇಟಿ


ತುಮಕೂರು: ಪಠ್ಯಪುಸ್ತಕದಲ್ಲಿರುವ ಲೋಪದೋಷಗಳನ್ನು ಸರಿಪಡಿಸಬೇಕೆಂದು ಆಗ್ರಹಿಸಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮನೆಮುಂದೆ ಪ್ರತಿಭಟನೆ ನಡೆಸುತ್ತಿದ್ದ ಎನ್.ಎಸ್.ಯು.ಐ ಕಾರ್ಯಕರ್ತರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ, ಅವರನ್ನು ಬಂಧಿಸಿ, ಜೈಲಿಗೆ ಹಾಕಿರುವುದ್ನು ಖಂಡಿಸಿರುವ ವಿಧಾನಪರಿಷತ್ ಸದಸ್ಯ ಆರ್.ರಾಜೇಂದ್ರ, ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ, ಬಂಧಿತ ಎನ್.ಎಸ್.ಯು.ಐ ಕಾರ್ಯಕರ್ತರಿಗೆ ಸಾಂತ್ವನ ಹೇಳಿ ಧೈರ್ಯ ತುಂಬುವ ಕೆಲಸ ಮಾಡಿದರು. ನಗರದ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ, ಬಂಧಿತರೊಂದಿಗೆ ಕೆಲ ಕಾಲ ಮಾತನಾಡಿ, ಪ್ರಕರಣದ ಸಂಪೂರ್ಣ ವಿವರಣೆ ಪಡೆದ ಆರ್.ರಾಜೇಂದ್ರ ಅವರು,ಬಂಧಿತರಿಗೆ ಧೈರ್ಯ ತುಂಬಿರುವುದಲ್ಲದೆ,ಶಾಂತಿಯುತ ಪ್ರತಿಭಟನೆ ನಡಸಲು ಮುಂದಾದ ಕಾರ್ಯಕರ್ತರನ್ನು ಮನೆಗೆ ಬೆಂಕಿ ಹಚ್ಚಲು ಬಂದಿದ್ದರು ಎಂದು ಸುಳ್ಳು ಆರೋಪ ಹೊರಸಿ ಜೈಲಿಗೆ ಅಟ್ಟಿರುವುದು ಸರಿಯಲ್ಲ.ಶಾಂತಿಯುತ ಪ್ರತಿಭಟನೆಯ ಭಾಗವಾಗಿಯೇ ಆರ್.ಎಸ್.ಎಸ್.ಸಂಕೇತವಾದ ಚಡ್ಡಿಗೆ ಬೆಂಕಿ ಹಚ್ಚಿದ್ದಾರೆ. ಆದರೆ ಇದನ್ನು ಸಹಿಸದ ಬಿಜೆಪಿ ಮುಖಂಡರು, ಎನ್.ಎಸ್.ಯು.ಐ ಕಾರ್ಯಕರ್ತರು ಗುಂಡಾಗಳು ಎಂಬಂತೆ ಬಿಂಬಿಸಿ,ವಿದ್ಯಾರ್ಥಿ ಸಂಘಟನೆಗೆ ಮಸಿ ಬಳಿಯುವ…


ಮುಂದೆ ಓದಿ...

ನಿಟ್ಟೂರಿನಲ್ಲಿ ಅಂಡರ್‍ಪಾಸ್ ನಿರ್ಮಾಣಕ್ಕೆ ಒತ್ತಾಯಿಸಿ ಪ್ರತಿಭಟನೆ


ಗುಬ್ಬಿ: ತಾಲೂಕಿನ ನಿಟ್ಟೂರಿನಲ್ಲಿ ಹಾದು ಹೋಗಿರುವ ಎನ್.ಎಚ್ 206 ನಲ್ಲಿ ಅಂಡರ್ ಪಾಸ್ ನೀಡುವಂತೆ ಏನ್ ಎಚ್ 206 ಅಧಿಕಾರಿಗಳ ವಿರುದ್ದ ಗ್ರಾಮದ ಸಾರ್ವಜನಿಕರು ರೈತರು ವ್ಯಾಪಾರಸ್ಥರು ಹಾಗೂ ಈ ಮುಖಂಡರುಗಳು ರಸ್ತೆ ತಡೆದು ಬೃಹತ್ ಪ್ರತಿಭಟನೆ ಮಾಡಿದರು. ಪ್ರತಿಭಟನೆಯಲ್ಲಿ ಮಾತನಾಡಿದ ಗ್ರಾಮ ಪಂಚಾಯತಿ ಸದಸ್ಯ ಏನ್.ಸಿ ಗಿರೀಶ್ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಜನರು ಈ ಭಾಗದಲ್ಲಿ ದಿನನಿತ್ಯ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಓಡಾಟ ಮಾಡುತ್ತಾರೆ ಆದರೆ ಇಲ್ಲಿ ಅಂಡರ್ ಪಾಸ್ ಇಟ್ಟಿಲ್ಲ ಹಲವು ಬಾರಿ ಮನವಿ ಮಾಡಿದರು ಅಧಿಕಾರಿಗಳು ಇದರ ಬಗ್ಗೆ ತಲೆ ಕೆಡಿಸಿ ಕೊಂಡಿಲ್ಲ ಇಡೀ ಊರನ್ನೇ ಎರಡು ಭಾಗ ಮಾಡಿದ್ದಾರೆ ಪ್ರತಿನಿತ್ಯ ರೈತರು ದನಕರು, ಹಸು, ಒಡೆದು ಕೊಂಡು ತೋಟಗಳಿಗೆ ಹೋಗಬೇಕು ಅಂದರೆ ಅರ್ಧ ಕಿ. ಮೀ ಗೂ ಹೆಚ್ಚು ದೂರ ಸಾಗಬೇಕಿದೆ ಇದರಿಂದ ಸಾಕಷ್ಟು ಸಮಸ್ಯೆ ಇದೆ ಇದನ್ನು…


ಮುಂದೆ ಓದಿ...

ಅನಧಿಕೃತ ಅಂಗಡಿಗಳ ಮೇಲೆ ಎಪಿಎಂಸಿ ಸಮಿತಿ ದಿಢೀರ್ ದಾಳಿ: ದಂಡ ವಸೂಲಿ-ಅಂಗಡಿಗಳ ತೆರವಿಗೆ ಗಡುವು!


ತುಮಕೂರು: ಶುಕ್ರವಾರ ಏಕಾಏಕಿ ದಿಢೀರನೇ ಮಾರುಕಟ್ಟೆಗೆ ಎಪಿಎಂಸಿ ಅಧ್ಯಕ್ಷ ಉಮೇಶ್ ಗೌಡ ನೇತೃತ್ವದ ಅಧಿಕಾರಿಗಳು ಹಾಗೂ ಎಪಿಎಂಸಿ ಸದಸ್ಯರ ತಂಡ ಬೇಟಿ ನೀಡಿ ಅನದಿಕೃತ ಅಂಗಡಿ ಮಳಿಗೆಗಳಿಗೆ ಶಾಕ್ ನೀಡಿದ್ದಲ್ಲದೇ ಅನಧಿಕೃತ ಅಂಗಡಿ ಮಳಿಗೆಗಳು ಹಾಗೂ ಸ್ವಚ್ಚತೆ ಕಾಪಾಡದ ಅಂಗಡಿಗಳಿಗೆÉ 1,07,500-00 ದಂಡ ವಿಧಿಸಿದ್ದಾರೆ. ಸ್ವಚ್ಚತೆ ಇಲ್ಲದವರಿಗೆ ಒತ್ತುವರಿಯವರಿಗೂ ದಂಡ: ಅಂಗಡಿ ಮಳಿಗೆಗಳ ಮುಂದೆ ಕಸಕಡ್ಡಿ, ತ್ಯಾಜ್ಯ ಎಸೆದು ಸರಿಯಾಗಿ ಬಳಕೆ ಮಾಡದೆ, ರೋಗರುಜಿನಗಳು ಉದ್ಬವವಾಗುವಂತೆ ಸ್ವಚ್ಚತೆ ಕಾಪಾಡದ ಅಂಗಡಿಗಳನ್ನಾ, ಸ್ವತಃ ಕಾಲ್ನೆಡಿಗೆಯ ಮೂಲಕ ಸುತ್ತಿ ಹುಡುಕಿ ದಂಡ ವಿದಿಸಲಾಯಿತು. ಹಾಗೆಯೇ ಎಪಿಎಂಸಿ ನೀಡಿದ ಜಾಗ ಬಿಟ್ಟು ರಸ್ತೆ ತುಂಬಾ ತರಕಾರಿ ಸುರಿದು ವಾಹನಗಳಿಗೆ, ಸಾರ್ವಜನಿಕರಿಗೆ ತೊಂದರೆಯುಂಟುಮಾಡುತ್ತಿದ್ದ ವರ್ತಕರಿಗೆ ಸ್ಥಳದಲ್ಲೇ ದಂಡ ವಿಧಿಸಲಾಗಿದೆ. ಅನಧಿಕೃತ ಅಂಗಡಿಗಳಿಗೆ ಶುಕ್ರವಾರದವರೆಗೆ ಗಡುವು..! ಅನದಿಕೃತವಾಗಿ ಸಿಕ್ಕಸಿಕ್ಕ ಜಾಗದಲ್ಲೇ ಶೆಡ್ ನಿರ್ಮಿಸಿಕೊಂಡು, ನೈಜ ವ್ಯಾಪಾರಸ್ಥರಿಗೆ ತೊಂದರೆಯುಂಟು ಮಾಡುತ್ತಿದ್ದ ಅನಧಿಕೃತ ವ್ಯಾಪಾರಸ್ಥರಿಗೆ ಸ್ಥಳದಲ್ಲೇ ಚಳಿಬಿಡಿಸಿದ…


ಮುಂದೆ ಓದಿ...

ಅನಗತ್ಯ ಶಸ್ತ್ರಚಿಕಿತ್ಸೆ ಹೆರಿಗೆ ಪ್ರಮಾಣ ಕಡಿಮೆ ಮಾಡಿ: ಜಿಲ್ಲಾಧಿಕಾರಿ ಸೂಚನೆ


ತುಮಕೂರು: ಜಿಲ್ಲೆಯಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡುವ ಪ್ರಮಾಣ ಜಾಸ್ತಿಯಾಗಿದ್ದು, ಇದನ್ನು ತಗ್ಗಿಸುವ ಅಗತ್ಯವಿದೆ. ಆಸ್ಪತ್ರೆಗಳಿಗೆ ದಾಖಲಾಗುವ ಗರ್ಭಿಣಿಯರಿಗೆ ಅಗತ್ಯ ಪರೀಕ್ಷೆಗಳನ್ನು ನಡೆಸಿ, ಅನಗತ್ಯವಾಗಿ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸುವುದನ್ನು ಕಡಿಮೆ ಮಾಡಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿಂದು ಜರುಗಿದ ಜಿಲ್ಲಾ ಮಟ್ಟದ ಲಸಿಕಾ ಕಾರ್ಯಪಡೆ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ತಾಯಿ ಮತ್ತು ಶಿಶುಗಳ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಮಾರ್ಗಸೂಚಿಗಳನ್ನು ರಚಿಸಿ ಕರ್ತವ್ಯವನ್ನು ನಿರ್ವಹಿಸಬೇಕೆಂದು ನಿರ್ದೇಶನ ನೀಡಿದರು. ಜಿಲ್ಲೆಯಲ್ಲಿ ಕಳೆದ ಏಪ್ರಿಲ್ 2021 ರಿಂದ 2022ರ ಮಾರ್ಚ್‍ವರೆಗೆ ಒಟ್ಟು 37 ತಾಯಿ ಮರಣ ಹಾಗೂ 23 ಶಿಶು ಮರಣ ಪ್ರಕರಣ ದಾಖಲಾಗಿದ್ದು, ತಾಯಿ ಮತ್ತು ಶಿಶು ಮರಣ ಪ್ರಮಾಣವನ್ನು ತಗ್ಗಿಸಲು ಅಗತ್ಯ ಕ್ರಮವಹಿಸಬೇಕು ಇಲ್ಲವಾದಲ್ಲಿ ತಮ್ಮಗಳ ವಿರುದ್ಧ ಸೂಕ್ತಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಖಡಕ್…


ಮುಂದೆ ಓದಿ...