ಅನೈತಿಕ ಸಂಬಂಧಕ್ಕಾಗಿ ಅಮಾನತ್ತಾದ ಇಂಜಿನಿಯರ್ ಶಂಭುಕುಮಾರ್!


ತುಮಕೂರು: ನಗರದ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಶಂಭುಕುಮಾರ್ ಅವರನ್ನು ಅಮಾನತ್ತು ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ತುಮಕೂರು ನಗರ ಲೋಕೋಪಯೋಗಿ ಉಪ ವಿಭಾಗದ ಸಹಾಯಕ ಇಂಜಿನಿಯರ್ ಶಂಭುಕುಮಾರ್ ಅವರನ್ನು ಅಮಾನತ್ತು ಮಾಡಲಾಗಿದ್ದು, ಕರ್ನಾಟಕ ಸರ್ಕಾರ ಲೋಕೋಪಯೋಗಿ ಇಲಾಖೆಯ ಅಧೀನ ಕಾರ್ಯದರ್ಶಿರವರು ವರದಿ ಪಡೆದು ಅಮಾನತ್ತು ಆದೇಶವನ್ನು ಹೊರಡಿಸಿರುತ್ತಾರೆ. ಸಹಾಯಕ ಇಂಜಿನಿಯರ್ ಮೇಲೆ ದಲಿತ ದೌರ್ಜನ್ಯ ಕಾಯ್ದೆ ಮತ್ತು ಕೊಲೆ ಯತ್ನದ ಪ್ರಕರಣ ದಾಖಲಾಗಿದ್ದು, ತುಮಕೂರು ಜಿಲ್ಲೆಯ ಬಿಜೆಪಿ ಎಸ್.ಸಿ ಮೋರ್ಚಾ ಅಧ್ಯಕ್ಷನನ್ನೇ ಹತ್ಯೆಗೈಯಲು ಮುಂದಾದಾಗ ತಪ್ಪಿಸಿಕೊಂಡ ಬಿಜೆಪಿ ಮುಖಂಡ ಬೆಂಗಳೂರು ನಗರದ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕ್ರಿಮಿನಲ್ ಮೊಕದ್ದಮೆ ದಾಖಲಾದ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಶಂಭುಕುಮಾರ್ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದ. ಈ ಆರೋಪಿತ ಇಂಜಿನಿಯರ್ ಶಂಭುಕುಮಾರನ ಪತ್ತೆಗೆ ವಿಶೇಷ ತಂಡ ರಚಿಸಿ ಬಂಧಿಸುವ ಸಲುವಾಗಿ ಪೊಲೀಸ್ ಇಲಾಖೆ ಕಾರ್ಯಪ್ರವೃತ್ತವಾಗಿದ್ದರೂ ಸಹ ಇಲಾಖೆಯ…


ಮುಂದೆ ಓದಿ...

ವಿವಿಯಲ್ಲಿ ಅಂಬೇಡ್ಕರ್ ಪಠ್ಯ ಕಡಿತ: ಕುಲಪತಿ ಕಚೇರಿ ಬಳಿ ಪ್ರತಿಭಟನೆ


ತುಮಕೂರು: ತುಮಕೂರು ವಿವಿಯ ಬಿ.ಎ., ಬಿಎಸ್ಸಿ, ಬಿ.ಕಾಮ್‍ನ 2ನೇ ಸೆಮಿಸ್ಟರ್ ಪಠ್ಯದಲ್ಲಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದಿರುವ ಜಾತಿ ವಿನಾಶ ಲೇಖನವನ್ನು ಪಠ್ಯದಿಂದ ಕೈಬಿಟ್ಟು, ಅಸ್ಪøಷ್ಯತೆ ನಿವಾರಣೆ ಕುರಿತಂತೆ ಅರ್ಟಿಕಲ್ 17ರ ಮೇಲಿನ ಚರ್ಚೆಯಲ್ಲಿ ಸಂವಿಧಾನ ರಚನಾ ಸಮಿತಿಯ ಸದಸ್ಯರಾದ ಬ್ಯಾನರ್ಜಿ ಮತ್ತು ಠಾಕೂರ್ ಅವರುಗಳು ಮಾಡಿರುವ ಭಾಷಣವನ್ನು ಸೇರಿಸಿ, ಅಂಬೇಡ್ಕರ್ ಅವರನ್ನು ಪಠ್ಯದಿಂದ ಹೊರಗಿಡುವ ಕೆಲಸ ಮಾಡಲಾಗಿದೆ ಎಂದು ಆರೋಪಿಸಿ, ಅಂಬೇಡ್ಕರ್ ಅನುಯಾಯಿಗಳು ವಿವಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಪಾಲಿಕೆಯ ವಿರೋಧ ಪಕ್ಷದ ನಾಯಕ ಜೆ.ಕುಮಾರ್, ಅತಿಥಿ ಉಪನ್ಯಾಸಕ ಹೆತ್ತೇನಹಳ್ಳಿ ಮಂಜು, ಹಿಂದುಳಿದ ವರ್ಗಗಳ ಒಕ್ಕೂಟದ ಸಂಚಾಲಕ ಧನಿಯಕುಮಾರ್, ಬೆಳ್ಳಿ ಲೋಕೇಶ್ ಸೇರಿದಂತೆ ಹಲವಾರು ಯುವಜನರು ತುಮಕೂರು ವಿವಿಗೆ ಮುತ್ತಿಗೆ ಹಾಕಿ, ಪಠ್ಯದಿಂದ ತೆಗೆದಿರುವ ಜಾತಿ ವಿನಾಶ ಚಾಪ್ಟರ್ ಸೇರಿಸಬೇಕು ಹಾಗೂ ಪಠ್ಯ ಪರಿಷ್ಕರಣಾ ಸಮಿತಿಯಲ್ಲಿದ್ದ ಸದಸ್ಯರನ್ನು ವಜಾಗೊಳಿಸಬೇಕೆಂದು ಆಗ್ರಹಿಸಿದರು. ಈ…


ಮುಂದೆ ಓದಿ...

ತೃತೀಯ ರಂಗದ ಸುಳಿವು ನೀಡಿದ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ


ತುಮಕೂರು: ರಾಜ್ಯದಲ್ಲಿ ಹಾಗೂ ದೇಶದಲ್ಲಿ ಯಾವುದೇ ರಾಜಕೀಯ ಪಕ್ಷ ಸುಧೀರ್ಘವಾಗಿ ಆಡಳಿತ ನಡಸಿಲ್ಲ. ಹಾಗಾಗಿ ಪ್ರಾದೇಶಿಕ ಪಕ್ಷಗಳೆಲ್ಲಾ ಒಗ್ಗೂಡಿ ಆಡಳಿತ ನಡೆಸುವ ಕಾಲ ಒಂದಲ,ಒಂದು ದಿನ ಬಂದೇ ಬರುತ್ತದೆ ಎಂದು ಹೇಳುವ ಮೂಲಕ ಜೆಡಿಎಸ್ ವರಿಷ್ಸ ಹೆಚ್.ಡಿ.ದೇವೇಗೌಡ ತೃತೀಯ ರಂಗದ ಸುಳಿವನ್ನು ಬಿಚ್ಚಿಟ್ಟಿದ್ದಾರೆ. ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಳ್ಳಗೆರೆ ಗ್ರಾಮದ ಶ್ರೀಚಿಕ್ಕಮ್ಮದೇವಿ ಅಮ್ಮನವರ ನೂತನ ದೇವಾಲಯ ಮತ್ತು ಮೂಲಶಿಲಾಬಿಂಬ ಪ್ರತಿಷ್ಟಾಪನೆ ಹಾಗೂ ವಿಮಾನಗೋಪುರ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮದಲ್ಲಿ ದೇವಾಲಯದ ಲೋಕಾರ್ಪಣೆ ಮಾಡಿ ಮಾತನಾಡುತಿದ್ದ ಅವರು, ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಇದೆ.ರಾಜಧಾನಿಯಲ್ಲಿ ಏನೇನು ನಡೆಯುತ್ತಿದೆ ಎಂಬ ವಿದ್ಯಾಮಾನಗಳ ಅರಿವಿದೆ.ಇದುವರೆಗೂ ರಾಜ್ಯದ ಮತದಾರರು ನಮಗೆ ಪೂರ್ಣ ಬಹುಮತ ನೀಡಿಲ್ಲ. ಹಾಗಿದ್ದೂ ಸಹ ಸಿದ್ದರಾಮಯ್ಯನ ವಿರೋಧದ ನಡುವೆಯೂ 25 ಸಾವಿರ ಕೋಟಿ ಸಾಲ ಮನ್ನಾ ಮಾಡುವ ಮೂಲಕ ಈ ರಾಜ್ಯದ ರೈತರ ಬೆನ್ನಿಗೆ ನಿಂತಿದ್ದೇವೆ ಎಂದರು. ಸಿದ್ದರಾಮಯ್ಯ ಅಹಿಂದ ಸೋಗಿನಲ್ಲಿ…


ಮುಂದೆ ಓದಿ...

ಹೊಸ ತಂತ್ರಜ್ಞಾನ ಸಮಾಜದ ಅಭಿವೃದ್ಧಿಗೆ ಬಳಕೆಯಾಗಬೇಕು


ತುಮಕೂರು: ಪ್ರಸ್ತುತ ದಿನಗಳಲ್ಲಿ ಹೊಸ ಹೊಸ ತಂತ್ರಜ್ಞಾನ ಸಮಾಜದ ಅಭಿವೃದ್ಧಿಗೆ ಬಳಕೆಯಾಗಬೇಕು ಎಂದು ಅಸ್ಸಾಂನ ಗುವ್ಹಾಟಿಯ ಐಐಟಿ ಕಾಲೇಜಿನ ಪೆÇ್ರಫೆಸರ್ ಡಾ. ರಾಯ್ ಪಿ. ಪೈಲಿ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಟೆಕ್ನಿಷಿಯಮ್-2022 ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ವಿದ್ಯಾರ್ಥಿಗಳು ಬಹಳ ಆಸಕ್ತಿ ವಹಿಸಿ ಸಮಾಜದ ಪ್ರಗತಿಗೆ ಕೊಡುಗೆ ನೀಡಬೇಕು. ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ತಂತ್ರಜ್ಞಾನದ ಬಗ್ಗೆ ಒಲವು ತೋರಬೇಕು ಎಂದು ಅವರು ಹೇಳಿದರು. ನವೀನ ತಂತ್ರಜ್ಞಾನ ಬಳಕೆಯಿಂದ ಭವ್ಯ ಭಾರತ ಮತ್ತು ವಿಜ್ಞಾನಯುತ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಅವರು ಸಲಹೆ ನೀಡಿದರು. ವಿದ್ಯಾರ್ಥಿಗಳ ಹವ್ಯಾಸಿ ಮಾದರಿ ಪ್ರದರ್ಶನ ಉದ್ಘಾಟಿಸಿದ ಧಾರವಾಡದ ಐಐಟಿಯ ಪೆÇ್ರ. ಡಾ ಎಸ್.ಆರ್. ಮಹಾದೇವ ಪ್ರಸನ್ನ ಮಾತನಾಡಿ, ಹೊಸ ಹೊಸ ಆಲೋಚನೆಗಳೊಂದಿಗೆ ಯುವ ಸಮುದಾಯ ತಂತ್ರಜ್ಞಾನದ ಸದ್ಭಳಕೆ ಮಾಡಿಕೊಂಡು,…


ಮುಂದೆ ಓದಿ...

ಬದುಕು ಕಟ್ಟಿಕೊಳ್ಳಲು ಪ್ರೇರೇಪಿಸುವ ವ್ಯಕ್ತಿಯೇ ನಿಜವಾದ ಶಿಕ್ಷಕ


ತುಮಕೂರು: ಮಕ್ಕಳಿಗೆ ಆತ್ಮವಿಶ್ವಾಸ ತುಂಬಿ, ಬದುಕು ಕಟ್ಟಿಕೊಳ್ಳುವಂತೆ ಪ್ರೇರೆಪಿಸುವ ವ್ಯಕ್ತಿಯೇ ನಿಜವಾದ ಶಿಕ್ಷಕ, ಅದೇ ನಿಜವಾದ ಶಿಕ್ಷಣ ಎಂದು ಚಿಂತಕ ಕೆ.ದೊರೈರಾಜು ಅಭಿಪ್ರಾಯಪಟ್ಟಿದ್ದಾರೆ. ನಗರದ ಕನ್ನಡ ಭವನದಲ್ಲಿ ಶ್ರೀಸಿದ್ದಾರ್ಥ ಪಿಯು ಕಾಲೇಜು ವಿದ್ಯಾರ್ಥಿಗಳ ಒಕ್ಕೂಟದ ವತಿಯಿಂದ ನಿವೃತ್ತ ಪ್ರಾಂಶಪಾಲರಾದ ಎಂ.ರಾಜಯ್ಯ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ಮಕ್ಕಳ ವ್ಯಕ್ತಿತ್ವ ನಿರ್ಮಾಣದ ಜೊತೆಗೆ, ಬದುಕು ಕಟ್ಟಿಕೊಡುವಂತಹ ಮಾನವೀಯ ಸಂಬಂಧಗಳನ್ನು ಎಂ.ರಾಜಯ್ಯ ರೂಢಿಸಿಕೊಂಡಿದ್ದರು. ಇದರ ಫಲವಾಗಿಯೇ ಇಂದು ಅವರ ಶಿಷ್ಯ ವೃಂದ ಮತ್ತು ಸಹಪಾಠಿಗಳು ಸೇರಿ ಅಭಿನಂದಿಸುತ್ತಿರುವುದು ಅಪರೂಪದ ಕಾರ್ಯಕ್ರಮ ಎಂದರು. ವರ್ತಮಾನದ ಎಚ್ಚರಿಕೆ ಇಲ್ಲದೆ, ಭವಿಷ್ಯ ಕಟ್ಟಲು ಸಾಧ್ಯವಿಲ್ಲ.ಹಾಗಾಗಿ ಶಿಕ್ಷಕರಾದವರಿಗೆ ವರ್ತಮಾನದ ತಲ್ಲಣಗಳಿಗೆ ಉತ್ತರ ಹುಡುಕುತ್ತಾ ಮಕ್ಕಳ ಭವಿಷ್ಯ ರೂಪಿಸುವ ಕೆಲಸ ಆಗಬೇಕಾಗಿದೆ. ನನ್ನ ಜೊತೆಗೆ, ನಾನು ಬದುಕುತ್ತಿರುವ ಸಮಾಜವೂ ಚನ್ನಾಗಿರಬೇಕು ಎಂಬ ಅಂಬೇಡ್ಕರ್ ಅವರ ತತ್ವವನ್ನು ಅಳವಡಿಸಿಕೊಂಡು ಮುನ್ನೆಡೆಯಬೇಕಿದೆ.ಶೋಷಿತ ಸಮುದಾಯಗಳಿಗೆ, ಬಡತನದಿಂದ ಬದುಕುತ್ತಿರುವ…


ಮುಂದೆ ಓದಿ...