ಪ್ರತಿಯೊಬ್ಬರು ಅರಣ್ಯವನ್ನು ಬೆಳೆಸುವ ಕೆಲಸ ಮಾಡಬೇಕು: ಸಚಿವ ಜೆ. ಸಿ ಮಾಧುಸ್ವಾಮಿ


ಚಿಕ್ಕನಾಯಕನಹಳ್ಳಿ: ಪ್ರಕೃತಿ ಕೊಟ್ಟ ಸಾಲವನ್ನು ಹೊತ್ತುಕೊಂಡು ಜೀವನ ಮಾಡುತ್ತಿದ್ದೇವೆ ಆ ಋಣ ತೀರಿಸಬೇಕಾದ ರೆ ಕನಿಷ್ಠಪಕ್ಷ ಪ್ರತಿಯೊಬ್ಬರು ಅರಣ್ಯವನ್ನು ಬೆಳೆಸಬೇಕು ಮುಂದಿನ ಪೀಳಿಗೆಗೆ ಉಳಿಸುವ ಕೆಲಸ ಮಾಡಬೇಕು ಎಂದು ಕಾನೂನು ಸಂಸದೀಯ ವ್ಯವಹಾರಗಳ ಹಾಗೂ ಸಣ್ಣ ನೀರಾವರಿ ಸಚಿವ ಜೆ ಸಿ ಮಾಧುಸ್ವಾಮಿ ಹೇಳಿದರು ಅವರು ಪ್ರಾದೇಶಿಕ ಹಾಗೂ ಸಾಮಾಜಿಕ ವಲಯ ಅರಣ್ಯ ಇಲಾಖೆಯು ತಾಲೂಕಿನ ಶೆಟ್ಟಿಕೆರೆ ಹೋಬಳಿ ಸಾಸಲು ಗ್ರಾಮದ ಹೊರವಲಯದ ನಿರ್ಮಾಣಗೊಂಡಿರುವ ಅಂಬೇಡ್ಕರ್ ವಸತಿ ಶಾಲಾ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಾಲಾ ಆವರಣದಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು ನಾವೆಲ್ಲಾ ಪ್ರಕೃತಿಯ ಕೂಸುಗಳು ಪ್ರಕೃತಿಯ ನೀಡಿದ ಋಣ ಹೊತ್ತುಕೊಂಡು ಹುಟ್ಟಿದ್ದೇವೆ ಹಾಗೆ ಸಾಯುತ್ತೇವೆ ಪ್ರಕೃತಿ ನಮಗೆ ಕೊಟ್ಟ ಸಾಲವನ್ನು ಋಣ ತೀರಿಸುವ ಕೆಲಸ ಮಾಡಬೇಕಾದರೆ ಅದರ ಸದ್ಬಳಕೆ ಬಳಸಿಕೊಂಡು ಅಭಿವೃದ್ಧಿಪಡಿಸಿ ಮುಂದಿನ ಪೀಳಿಗೆಗೆ ಬಿಟ್ಟು ಹೋಗಬೇಕು ಪ್ರಕೃತಿ…


ಮುಂದೆ ಓದಿ...

ಮಾಜಿ ಶಾಸಕ ಎಂ.ಟಿ ಕೃಷ್ಣಪ್ಪನ ಕಾಲದಲ್ಲಿ ಎಲ್ಲವೂ ಕಳಪೆ ಕಾಮಗಾರಿಗಳು! : ಶಾಸಕ ಮಸಾಲ ಜಯರಾಮ್


ತುರುವೇಕೆರೆ: ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪನವರ ಕಾಲದಲ್ಲಿ ನಡೆದಿರುವ ಅಪೂರ್ಣ ಹಾಗೂ ಕಳಪೆ ಕಾಮಗಾರಿಗಳು ಅವರ ಕಿಕ್ ಬ್ಯಾಕ್ ಹಾಗೂ ಕಮಿಷನ್ ಸಂಸ್ಕೃತಿಯನ್ನು ಸಾರಿ ಹೇಳುತ್ತಿವೆ ನನಗೆ ಗೊತ್ತಿರುವುದು ಅಭಿವೃದ್ಧಿ ಒಂದು ಎಂದು ಶಾಸಕ ಮಸಾಲ ಜಯರಾಮ್ ಎಂ.ಟಿ.ಕೃಷ್ಣಪ್ಪನ ವಿರುದ್ದ ವ್ಯಂಗ್ಯವಾಡಿದರು. ತಾಲ್ಲೂಕಿನ ಮಾಯಸಂದ್ರ ಹೋಬಳಿಯ ತುಯಲಹಳ್ಳಿ ಗ್ರಾಮದ ಹತ್ತಿರ ಸಣ್ಣ ನೀರಾವರಿ ಇಲಾಖೆಯ 1.60ಕೋಟಿ ವೆಚ್ಚದ ಚೆಕ್ ಡ್ಯಾಮ್ ಹಾಗೂ ಬ್ರಿಡ್ಜ್ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ತಾಲ್ಲೂಕಿನ ಸಮಗ್ರ ಅಭಿವೃದ್ಧಿ ಆಗುತ್ತಿರುವುದನ್ನು ಸಹಿಸದೆ ಮಾಜಿ ಶಾಸಕರು ಕಿಕ್ ಬ್ಯಾಕ್ ಬಗ್ಗೆ ಮಾತನಾಡುತ್ತಾರೆ ನನಗೆ ಅಂತಹ ಸಂಸ್ಕೃತಿಗಳ ಅರಿವಲ್ಲ ಕಾರಣ ನನ್ನ ಕಾಲದ ಅಭಿವೃದ್ಧಿ ಕೆಲಸಗಳು ಎಲ್ಲೂ ಅರ್ಧಕ್ಕೆ ನಿಂತಿಲ್ಲ ನಿರಂತರವಾಗಿ ನಡೆಯುತ್ತಿವೆ ಅವರ ಕಾಲದಲ್ಲಾದ ಪಟ್ಟಣದ ಯುಜಿಡಿ ಅಧ್ವಾನ ಹಾಗೂ ವಾಣಿಜ್ಯ ಸಂಕೀರ್ಣ ಅಪೂರ್ಣ ಕಾಮಗಾರಿ ಹಾಗೂ ಏತನೀರಾವರಿ ಕಳಪೆ ಕಾಮಗಾರಿಗಳು ಅವರ ಕಿಕ್…


ಮುಂದೆ ಓದಿ...

ಸುಸ್ಥಿರ ಪರಿಸರ ನಮ್ಮೆಲ್ಲರ ಹೊಣೆ: ಶಾಸಕ ರಾಜೇಶ್‍ಗೌಡ


ತುಮಕೂರು: ಮಾಲಿನ್ಯ ನಿಂತ್ರಣ ಮಾಡಿ ಸುಸ್ಥಿರ ಪರಿಸರ ವ್ಯವಸ್ತೆಯನ್ನು ನಿರ್ಮಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ಶಾಸಕ ರಾಜೇಶ್‍ಗೌಡ ಅಭಿಪ್ರಾಯ ಪಟ್ಟರು. ತುಮಕೂರು ವಿಶ್ವವಿದ್ಯಾನಿಲಯ ಪರಿಸರ ವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಹಾಗೂ ಸಿರಾದ ಸ್ನಾತಕ್ಕೋತ್ತರ ಅಧ್ಯಯನ ಕೇಂದ್ರ ಸಿರಾ ಕ್ಯಾಂಪಸ್‍ನಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನ 2022 ಅನ್ನು ಗಿಡನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಪರಿಸರದ ಅವನತಿಗೆ ಕಾರಣವಾಗುವ ಮಾನವನ ಚಟುವಟಿಕೆಗಳು ಮಾಲಿನ್ಯ, ದೋಷಯುಕ್ತ ಪರಿಸರ ನೀತಿಗಳು, ರಾಸಾಯನಿಕಗಳು, ಹಸಿರುಮನೆ ಅನಿಲಗಳು, ಜಾಗತಿಕ ತಾಪಮಾನ ಏರಿಕೆ, ಓಝೋನ್ ಸವಕಳಿ ಇವೆಲ್ಲವೂ ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಇದಲ್ಲದೆ ನೈಸರ್ಗಿಕ ಸಂಪನ್ಮೂಲಗಳ ಅತಿಯಾದ ಬಳಕೆಯು ಮನುಷ್ಯನಿಗೆ ಹಾನಿಯಂಟುಮಾಡಿ, ಜೀವಂತ ಗಾಳಿಯು ಅವಶ್ಯಕತೆಯನ್ನು ಕಲುಶಿತಗೊಳಿಸಿ ಉಸಿರಾಡಲು ಬಾಟಲಿಯ ಆಮ್ಲಜನಕವನ್ನು ಬಳಸಬೇಕಾಗುತ್ತದೆ. ಪರಿಸರವನ್ನು ರಕ್ಷಿಸುವುದು ಅಷ್ಟು ಸುಲಭವಲ್ಲ, ಇದು ಸಾಕಷ್ಟು ಶ್ರಮ ತೆಗೆದುಕೊಳ್ಳುತ್ತದೆ. ಮಾಲಿನ್ಯ ನಿಯಂತ್ರಣಕ್ಕೆ ಜನರು ಕಠಿಣ…


ಮುಂದೆ ಓದಿ...

ಜೂ.12: ವಿಶ್ವ ಬಾಲಕಾರ್ಮಿಕರ ವಿರೋಧಿ ದಿನ


ತುಮಕೂರು: ಜೂನ್ 12ರಂದು ನಡೆಯಲಿರುವ ‘ವಿಶ್ವ ಬಾಲಕಾರ್ಮಿಕರ ವಿರೋಧಿ ದಿನ’ದ ಅಂಗವಾಗಿ ಜೂನ್ 9ರಂದು ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಚರ್ಚಾ ಸ್ಪರ್ಧೆಗಳನ್ನು ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಾಭಂಗಣದಲ್ಲಿ ಶನಿವಾರ ನಡೆದ ‘ವಿಶ್ವ ಬಾಲಕಾರ್ಮಿಕ ವಿರೋಧಿ’ ದಿನ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಜೂನ್ 12ರಂದು ವಿಶ್ವ ಬಾಲಕಾಮಿಕ ವಿರೋಧಿ ದಿನ ಕಾರ್ಯಕ್ರಮದ ಅಂಗವಾಗಿ ಜೂ. 9ರಂದು ಬೆಳಿಗ್ಗೆ. 10 ಗಂಟೆಗೆ ನಗರದ ಬಾಲಭವನದ ಆವರಣದಲ್ಲಿ ಪ್ರೌಢಶಾಲಾ ಮಕ್ಕಳಿಗೆ ‘ಬಾಲಕಾರ್ಮಿಕರ ಸಂಕಷ್ಟಗಳು’ ವಿಷಯ ಕುರಿತು ಚಿತ್ರಕಲೆ ಸ್ಪರ್ಧೆ, ಪಿಯುಸಿ ವಿದ್ಯಾರ್ಥಿಗಳಿಗೆ ‘ಬಾಲಕಾರ್ಮಿಕತೆಯಿಂದ ಸಮಾಜದ ಮೇಲೆ ಪರಿಣಾಮ’ ವಿಷಯದ ಕುರಿತು ಪ್ರಬಂಧ ಹಾಗೂ ಚರ್ಚಾ ಸ್ಪರ್ಧೆಗಳನ್ನು ಆಯೋಜಿಸಲಾಗುವುದು. ಪ್ರತಿ ಸ್ಪರ್ಧೆಗಳಲ್ಲೂ ಕನಿಷ್ಠ 10 ಜನ ವಿದ್ಯಾರ್ಥಿಗಳು ಭಾಗವಹಿಸಬೇಕು. ಸ್ಪರ್ಧೆಯ ಸಂಪೂರ್ಣ ಜವಾಬ್ದಾರಿಯನ್ನು ಡಿಡಿಪಿಐ ವಹಿಸಿಕೊಳ್ಳಬೇಕೆಂದು ಡಿಡಿಪಿಐ ನಂಜಯ್ಯನವರಿಗೆ ತಿಳಿಸಿದರು. ಸ್ಪರ್ಧೆಯಲ್ಲಿ ವಿಜೇತರಾದ…


ಮುಂದೆ ಓದಿ...