ಪರಿಶಿಷ್ಟರ ಅಭಿವೃದ್ಧಿ ಯೋಜನೆ ತ್ವರಿತಗತಿಯಲ್ಲಿ ಜಾರಿಯಾಗಲಿ: ಜಿಲ್ಲಾಧಿಕಾರಿ


ತುಮಕೂರು: ಪರಿಶಿಷ್ಟ ಜಾತಿ ವಿಶೇಷ ಘಟಕ ಯೋಜನೆ, ಗಿರಿಜನ ಉಪಯೋಜನೆಯಡಿ ಕೈಗೊಳ್ಳುವ ಪರಿಶಿಷ್ಟ ಕಲ್ಯಾಣಾಭಿವೃದ್ದಿ ಕಾಮಗಾರಿಗಳನ್ನು ಸರ್ಕಾರದ ಮಾರ್ಗಸೂಚಿಗಳನ್ವಯ ನಿಗಧಿತ ಅವಧಿಯಲ್ಲಿ ಅನುμÁ್ಠನ ಮಾಡಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದರು. ತಮ್ಮ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿಂದು ಪರಿಶಿಷ್ಟ ಜಾತಿ ಉಪಯೋಜನೆ/ ಗಿರಿಜನ ಉಪಯೋಜನೆ 2013&2017ರ ಅನುμÁ್ಠನ ಕುರಿತ ಜಿಲ್ಲಾ ಮೇಲ್ವಿಚಾರಣ ಸಮಿತಿ ಸಭೆಗೆ ಮಾರ್ಚ್ 2022ರ ಮಾಹೆಯ ಅಂತ್ಯಕ್ಕೆ ವಿವಿಧ ಇಲಾಖೆಗಳ ಅನುμÁ್ಠನಾಧಿಕಾರಿಗಳು ಸಾಧಿಸಿರುವ ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು. ಪರಿಶಿಷ್ಟರ ಕಲ್ಯಾಣಕ್ಕಾಗಿ ಸರ್ಕಾರವು ಹಲವು ಯೋಜನೆಗಳನ್ನು ಅನುμÁ್ಠನಕ್ಕೆ ತಂದಿದ್ದು ಅಧಿಕಾರಿಗಳು ಯಾವುದೇ ರೀತಿಯ ವಿಳಂಬ ಮಾಡದೇ ತ್ವರಿತಗತಿಯಲ್ಲಿ ಅರ್ಹ ಫಲಾನುಭವಿಗಳಿಗೆ ಯೋಜನೆಗಳನ್ನು ತಲುಪಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು. ಪರಿಶಿಷ್ಟ ಜಾತಿ ವಿಶೇಷ ಘಟಕ ಯೋಜನೆ/ ಗಿರಿಜನ ಉಪಯೋಜನೆಯಡಿ ಸರ್ಕಾರವು ಸಾಕಷ್ಟು ಅನುದಾನವನ್ನು ಒದಗಿಸಿದ್ದು ಯಾವುದೇ ಕಾರಣಕ್ಕೂ ಪರಿಶಿಷ್ಟರ ಕಲ್ಯಾಣಕ್ಕೆ ಒದಗಿಸಿರುವ ಅನುದಾನ…


ಮುಂದೆ ಓದಿ...

ಜಾಮೀನು ರಹಿತ ಪ್ರಕರಣ ದಾಖಲಿಸುವುದು ಸರಿಯಲ್ಲ: ರಕ್ಷಾ ರಾಮಯ್ಯ


ತುಮಕೂರು: ಕುವೆಂಪು, ಬಸವಣ್ಣ ಅವರನ್ನು ಪಠ್ಯ ಪುಸ್ತಕದಲ್ಲಿ ಅವಹೇಳನ ಮಾಡಿರುವುದನ್ನು ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ, ಆದರೆ ಜಾಮೀನು ರಹಿತ ಪ್ರಕರಣಗಳನ್ನು ದಾಖಲಿಸಿರುವುದು ಸರಿಯಲ್ಲ ಎಂದು ರಾಷ್ಟ್ರೀಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತುಮಕೂರು ಜಿಲ್ಲಾ ಕಾರಾಗೃಹದಲ್ಲಿರುವ ಎನ್.ಎಸ್.ಯು.ಐ. ಕಾರ್ಯಕರ್ತರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಣ ಸಚಿವರ ಮನೆ ಮುಂದೆ ಪ್ರತಿಭಟನೆ ನಡೆಸಿದ 24 ಮಂದಿ ಮೇಲೆ ಪ್ರಕರಣ ದಾಖಲಿಸಿದ್ದಾರೆ, ಪ್ರತಿಭಟಿಸಿದ ಎನ್.ಎಸ್.ಯು.ಐ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿರುವ ವಿಡಿಯೋಗಳಿದ್ದರು ಸಹ ಎನ್.ಎಸ್.ಯು.ಐ ಕಾರ್ಯಕರ್ತರ ಮೇಲೆಯೇ ಹಲ್ಲೆ ಪ್ರಕರಣ ದಾಖಲಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದರು. ಸಚಿವರ ಮನೆ ಮುಂದೆ ಪ್ರತಿಭಟನೆ ನಡೆಸಿ, ಚೆಡ್ಡಿಗೆ ಬೆಂಕಿ ಹಚ್ಚಲು ಹೋದಾಗ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ, ಆದರೆ ಮನೆಗೆ ಬೆಂಕಿ ಹಚ್ಚಲು ಮುಂದಾಗಿದ್ದಾರೆ ಎಂದು ರಾಜಕೀಯ ಪ್ರೇರಿತ ದೂರು ದಾಖಲಿಸಿದ್ದಾರೆ,…


ಮುಂದೆ ಓದಿ...

‘ಹಿಂದುಳಿದ ವರ್ಗದವರ ಪರ ನಿಲ್ಲುವೆ ಎಂದಿದ್ದ ಶಾಸಕರು ಉಲ್ಟಾ ಹೊಡೆದಿದ್ದಾರೆ’!


ತುಮಕೂರು: ಚುನಾವಣಾ ಪೂರ್ವದಲ್ಲಿ ಹಿಂದುಳಿದ ವರ್ಗಗಳಿಗೆ ಮೊದಲ ಅದ್ಯತೆ ನೀಡುವುದಾಗಿ ಹೇಳಿದ್ದ ತುಮಕೂರು ನಗರ ಶಾಸಕರು, ನಗರದಲ್ಲಿ ನಿರ್ಮಾಣವಾದ ದೇವರಾಜು ಅರಸು ಭವನ ಉದ್ಘಾಟನೆಗೆ ಹಿಂದುಳಿದ ವರ್ಗಗಳ ಮುಖಂಡರಿಗೆ ಕನಿಷ್ಠ ಆಹ್ವಾನವನ್ನು ನೀಡದೆ ಅಪಮಾನ ಮಾಡಿದ್ದಾರೆ. ಇದು ಖಂಡನೀಯ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಸಂಚಾಲಕ ಧನಿಯಕುಮಾರ್ ಆರೋಪಿಸಿದ್ದಾರೆ. ನಗರದ ಯಾದವ ಹಾಸ್ಟಲ್‍ನಲ್ಲಿ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ 40ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಿಂದುಳಿದ ವರ್ಗದವರು ನನ್ನನ್ನು ಬೆಂಬಲಿಸಿ, ನಾನು ನಿಮ್ಮ ಬೆನ್ನಿಗೆ ನಿಂತು ಕೆಲಸ ಮಾಡುತ್ತೇನೆ ಎಂದಿದ್ದ ಶಾಸಕರು, ಈಗ ಉಲ್ಟಾ ಹೊಡೆದಿದ್ದಾರೆ ಎಂದರು. ದೇವರಾಜ ಅರಸು ಎಂಬುದು ಒಂದು ಹೆಸರಲ್ಲ. ಅದು ಹಿಂದುಳಿದ ವರ್ಗಗಳ ಶಕ್ತಿ. ಸಣ್ಣ ಸಣ್ಣ ಶ್ರಮ ಸಂಸ್ಕøತಿಯ ಜಾತಿಗಳನ್ನು ಗುರುತಿಸಿ, ಅವರಿಗೆ ರಾಜಕೀಯ ಅಧಿಕಾರ ನೀಡುವ ಮೂಲಕ ನಿಮ್ನ ವರ್ಗಗಳಿಗೆ ಅವಕಾಶದ ಭಾಗಿಲುಗಳು…


ಮುಂದೆ ಓದಿ...

ಇಂದಿನ ದಿನಗಳಲ್ಲಿ ವಿಚಾರಕ್ಕಿಂತ ಆಚಾರ ಮುಖ್ಯ


ತುಮಕೂರು: ಇಂದಿನ ದಿನಗಳಲ್ಲಿ ವಿಚಾರಕ್ಕಿಂತ ಆಚಾರ ಮುಖ್ಯ. ವಿಕೇಂದ್ರಿಕರಣ ಇಂದಿನ ಜಾಗತಿಕ ಅಗತ್ಯ ಸ್ಥಳೀಕರಣ ಮತ್ತು ವಿಕೇಂದ್ರಿಕರಣಕ್ಕೆ ಇಂದು ಜನಾಂದೋಲನದ ಅಗತ್ಯವಿದೆ ಎಂದು ಗ್ರಾಮ ಸೇವಾ ಸಂಘದ ರಂಗಕರ್ಮಿ ಪ್ರಸನ್ನ ಅಭಿಪ್ರಾಯಪಟ್ಟರು. ಕೃಷಿ ಗ್ರಾಮೀಣಾಭಿವೃದ್ಧಿಯ ಹೃದಯ. ಅದು ಇಂದು ಭೂ ಹಿಡುವಳಿ ವಿಶಿಷ್ಟವಾಗಬೇಕು. ಹಾಗಾದರೆ ಮಾತ್ರ ಕೃಷಿ ವಾಯುಗುಣ ವೈಪರಿತ್ಯದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವೆಂದು ಸಹಜ ಬೇಸಾಯ ಶಾಲೆಯ ಕೃಷಿ ತಜ್ಞಾ ಡಾ|| ಹೆಚ್ ಮಂಜುನಾಥ ಹೇಳಿದರು. ಇಂದಿನ ಪರಿಸರ ಅಸಮತೋಲನ ಹಾಗೂ ವಿನಾಶಗಳ ದುಶ್ಪರಿಣಾಮಗಳನ್ನು ಎದುರಿಸಲು ವಿಕೇಂದ್ರಿಕರಣ ಅತ್ಯಗತ್ಯ ಎಂದು ಸಿ. ಯತಿರಾಜ ಹೇಳಿದರು. ಸುಮನವನದ ಸಂಜೀವಕುಲಕರ್ಣಿ ಮಾತನಾಡಿ ಗಾಂಧೀ ತೊರಿದ ವಿಕೇಂದ್ರಿಕರಣದ ಹಾದಿಯಲ್ಲಿ ನಾವಿಂದು ಸಾಗಬೇಕಾದ ಅನಿವಾಂiÀರ್iತೆ ಇದೆ ಎಂದರು. ವಿಕೇಂದ್ರೀಕರಣ ಜನಾಂದೋಲನದಲ್ಲಿ ಜಿ.ಹೆಚ್. ಪಟೇಲ್ ಟ್ರಸ್ಟ್ ಸಂಪೂರ್ಣ ಸಹಕಾರ ನೀಡುತ್ತದೆ ಎಂದು ಹೇಳಿದರು. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಉದ್ದರಿಸಲು ವಿಕೇಂದ್ರಕರಣದಿಂದ ಮಾತ್ರ…


ಮುಂದೆ ಓದಿ...