ಟೂಡಾದಿಂದ 12 ಪಾರ್ಕ್‍ಗಳ ಅಭಿವೃದ್ಧಿ: ಶಾಸಕ ಜ್ಯೋತಿಗಣೇಶ್


ತುಮಕೂರು: ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ 2022-23ನೇ ಸಾಲಿನಲ್ಲಿ ನಗರದ 12 ಪಾರ್ಕ್‍ಗಳ ಅಭಿವೃದ್ಧಿಗೆ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಇಲ್ಲಿಯ ಮಾರುತಿನಗರ 3ನೇ ಕ್ರಾಸ್‍ನಲ್ಲಿರುವ ಸಂಜೀವಿನಿ ಉದ್ಯಾನವನದಲ್ಲಿ ಗುರುವಾರ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ಪಾರ್ಕ್‍ಗಳ ಅಭಿವೃದ್ಧಿಗೆ ನಾಗರೀಕ ಸಮಿತಿಗಳ ಸಹಕಾರ ಅತೀ ಮುಖ್ಯವಾಗಿದೆ ಎಂದರು. 1.74 ಕೋಟಿ ರೂ. ವೆಚ್ಚದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದಿಂದ 12 ಪಾರ್ಕ್‍ಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಕಳೆದ ಒಂದು ವರ್ಷದ ಹಿಂದೆಯೇ ಪಾರ್ಕ್‍ಗಳ ಅಭಿವೃದ್ಧಿ ಕಾಮಗಾರಿಗೆ ಟೆಂಡರ್ ಕರೆಯಲಾಗಿತ್ತು. ಕೋವಿಡ್ ಹಿನ್ನಲೆಯಲ್ಲಿ ಯಾರೂ ಟೆಂಡರ್ ಹಾಕದ ಕಾರಣ, ಟೆಂಡರ್ ವಾಪಸ್ ಹೋಗಿತ್ತು. ಮತ್ತೆ ರೀಟೆಂಡರ್ ಆಗಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು. ಮಾರುತಿನಗರದ ಸಂಜೀವಿನಿ ಉದ್ಯಾನವನ ದೊಡ್ಡ ಪಾರ್ಕ್ ಆಗಿರುವುದರಿಂದ 22 ಲಕ್ಷ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಸ್ಮಾರ್ಟ್‍ಸಿಟಿಯಿಂದ ಸುಮಾರು 30-35 ಕೋಟಿ…


ಮುಂದೆ ಓದಿ...

ಜಿ ಮಂಚೇನಹಳ್ಳಿ ಗೊಲ್ಲರಹಟ್ಟಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಆಗ್ರಹ


ತುರುವೇಕೆರೆ: ತಾಲೂಕಿನ ಜಿ.ಮಂಚೇನಹಳ್ಳಿಯ ಗೊಲ್ಲರಹಟ್ಟಿಗೆ ಸೂಕ್ತ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ಕೇಂದ್ರ ತೆಂಗು ಮತ್ತು ನಾರು ಅಭಿವೃದ್ಧಿ ಮಂಡಲಿಯ ನಿರ್ದೇಶಕ ಎಂ.ಟಿ.ಕೃಷ್ಣಮೂರ್ತಿ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಜಿ.ಮಂಚೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ಬಹುಪಾಲು ಹಿಂದುಳಿದ ವರ್ಗಗಳ ಜನಾಂಗದ ಜನರು ವಾಸಿಸುತ್ತಿದ್ದಾರೆ. ಇಲ್ಲಿ ಯಾವುದೇ ಮೂಲಭೂತ ಸೌಕರ್ಯವನ್ನು ಒದಗಿಸಲು ತಾಲೂಕು ಆಡಳಿತ ವಿಫಲವಾಗಿದೆ. ಈ ಸಂಬಂಧಿಸಿದಂತೆ ಹತ್ತಾರು ಬಾರಿ ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ದೂರಿದರು. ಸಾರ್ವಜನಿಕರ ದೇಣಿಗೆಯಲ್ಲಿ ಗೊಲ್ಲರಹಟ್ಟಿಯ ರಸ್ತೆಯನ್ನು ಸಿಮೆಂಟ್ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲಾಗಿದೆ. ಆದರೆ ದಾರಿಯ ಆರಂಭದಲ್ಲಿರುವ ಜಮೀನಿನ ಮಾಲೀಕರೋರ್ವರು ಇಲ್ಲದ ತಕರಾರು ತೆಗೆದು ರಸ್ತೆಯನ್ನು ಸಂಪೂರ್ಣಗೊಳಿಸಲು ಅವಕಾಶ ನೀಡುತ್ತಿಲ್ಲ. ಇದರಿಂದಾಗಿ ಜನರು ಓಡಾಡಲು ತೊಂದರೆಯಾಗಿದೆ. ಮಳೆ ಬಂದರೆ ಗೊಲ್ಲರಹಟ್ಟಿಯೊಳಗೆ ಜನರು ಬರುವುದು ಅಸಾಧ್ಯವಾಗಿದೆ. ಅಲ್ಲದೇ ಸದರಿ ವ್ಯಕ್ತಿ ಗ್ರಾಮದಲ್ಲಿರುವ ಬಡವರಿಗೆ ಬೆದರಿಕೆ ಒಡ್ಡಿ ಅವರ ಆಸ್ತಿಗಳನ್ನು ಕಿತ್ತುಕೊಂಡಿದ್ದಾನೆ. ಹಲವಾರು…


ಮುಂದೆ ಓದಿ...

ರಾಜ್ಯಕ್ಕೆ ವಿಚಾರದ ನಾಯಕತ್ವ ಕೊಟ್ಟವರು ಬಿ.ಕೃಷ್ಣಪ್ಪ: ಕೆ.ದೊರೈರಾಜ್


ತುಮಕೂರು: ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕರಾದ ಬಿ.ಕೃಷ್ಣಪ್ಪನವರ 84ನೇ ಜಯಂತಿಯನ್ನು ಎನ್,ಆರ್ ಕಾಲೋನಿಯ ಶೈಕ್ಷಣಿಕ ಭವನದಲ್ಲಿ ಸಾಮಾಜಿಕ ಪರಿವರ್ತನೆಗಾಗಿ ಬಿ,ಕೃಷ್ಣಪ್ಪ ಪ್ರತಿಷ್ಠಾನ(ರಿ)ದಿಂದ ಆಯೋಜಿಸಲಾಗಿತ್ತು. ಬಿ.ಕೃಷ್ಣಪ್ಪ ನವರ ಅನುಯಾಯಿಗಳು ಮತ್ತು ದಸಂಸದ ಪ್ರಾರಂಭದ ದಿನಗಳಲ್ಲಿ ಬಿ.ಕೆ ಯವರ ಜೊತೆ ತುಮಕೂರು ಜಿಲ್ಲೆಯಲ್ಲಿ ದಲಿತ ಚಳುವಳಿಯನ್ನು ಕಟ್ಟಿದ ಕೆ.ದೊರೈರಾಜ್ ನುಡಿ ನೆನಪುಗಳ ಮೂಲಕ ಅಂದಿನ ಹೋರಾಟದ ದಿನಗಳನ್ನು ಎನ್.ಆರ್ ಕಾಲೋನಿಯ ಯುವಜನರೊಂದಿಗೆ ಹಂಚಿಕೊಂಡರು ನಮ್ಮ ವಿಮೋಚನೆಗೆ ಶ್ರಮಿಸಿದವರನ್ನು ಸ್ಮರಿಸಿಕೊಂಡು ಗೌರವಿಸುವುದು ನಮ್ಮ ಜವಾಬ್ದಾರಿ ಇದರಿಂದ ತುಳಿತಕ್ಕೆ ಒಳಪಟ್ಟಿರುವ ಜನರ ವಿಮೋಚನೆಗೆ ನಾವು ಪ್ರೇರಣೆಗೊಳ್ಳುತ್ತೇವೆ. ಭಾರತದಲ್ಲಿ ಮಾದರಿ ಚಳುವಳಿಯನ್ನು ಕಟ್ಟಿದವರು ಬಿ.ಕೆಯವರು ನಮ್ಮ ಜನಾಂಗದ ಧೌರ್ಬಲ್ಯ ನಮ್ಮ ಜೊತೆಗಿನ ನಾಯಕತ್ವವನ್ನು ಒಪ್ಪಿಕೊಳ್ಳುವುದಿಲ್ಲ. ಕಾರಣ ನಮ್ಮಲ್ಲಿರುವ ಗುಲಾಮಗಿರಿ ಆದರೆ 70ರ ದಶಕದಲ್ಲಿ ದಲಿತ ಚಳುವಳಿಯ ಮೂಲಕ ಅಸ್ಪøಶ್ಯ ಜನಾಂಗಕ್ಕೆ ಸ್ವಾಭಿಮಾನದ ನಡೆಯನ್ನು ಕಲಿಸಿ ಇಡೀ ರಾಜ್ಯಕ್ಕೆ ವಿಚಾರದ ನಾಯಕತ್ವವನ್ನು ಕೃಷ್ಣಪ್ಪ ಕೊಟ್ಟರು. 1977…


ಮುಂದೆ ಓದಿ...

ಎನ್‍ಎಸ್‍ಯುಐ ಕಾರ್ಯಕರ್ತರಿಗೆ ಜಾಮೀನು


ತುಮಕೂರು: ತಿಪಟೂರು ನಗರದಲ್ಲಿ ಶಿಕ್ಷಣ ಸಚಿವರ ಮನೆ ಮುಂದೆ ಎನ್‍ಎಸ್‍ಯುಐ ಕಾರ್ಯಕರ್ತರು ನಡೆಸಿರುವ ಪ್ರತಿಭಟನೆಗೆ ಸಂಬಂಧಿಸಿದಂತೆ ಕಾರಾಗೃಹದಲ್ಲಿರುವ 25 ಮಂದಿ ಎನ್‍ಎಸ್‍ಯುಐ ಕಾರ್ಯಕರ್ತರಿಗೆ ಗೌರವಾನ್ವಿತ ನ್ಯಾಯಾಲಯ ಬುಧವಾರ ಸಂಜೆ ಜಾಮೀನು ಮಂಜೂರು ಮಾಡಿದ್ದು, ಸತ್ಯಕ್ಕೆ ಸಿಕ್ಕ ಜಯ ಎಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ ತಿಳಿಸಿದರು. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಿಪಟೂರು ಜಿಲ್ಲಾ ಸತ್ರ ನ್ಯಾಯಾಧೀಶರಾದ ಪುಷ್ಪಾವತಿ ಅವರು ಬೇಲ್ ಮಂಜೂರು ಮಾಡಿ ಆದೇಶಿಸಿದ್ದು, ಆದೇಶ ಪತ್ರದಲ್ಲಿ ಒಬ್ಬರಿಗೆ ಇಬ್ಬರು ಶ್ಯೂರಿಟಿ ನೀಡಬೇಕೆಂದು ಆ ಆದೇಶದಲ್ಲಿ ತಿಳಿಸಲಾಗಿದೆ. ನ್ಯಾಯಾಲಯದ ವಿಧಿ ವಿಧಾನಗಳು ಕಾರಾಗೃಹದ ಮುಖ್ಯಸ್ಥರಿಗೆ ತಲುಪಿದ ನಂತರ ಬಂಧಿಯಾಗಿರುವ ಎಲ್ಲಾ ಎನ್ ಎಸ್‍ಯುಐ ಕಾರ್ಯಕರ್ತರು ಗುರುವಾರ ಬಿಡುಗಡೆಯಾಗಲಿದ್ದಾರೆ ಎಂದು ಹೇಳಿದರು. ವಿದ್ಯಾರ್ಥಿಗಳು ಪಠ್ಯ ಪರಿಷ್ಕರಣೆ ವಿರೋಧಿಸಿ ಹಾಗೂ ಇದುವರೆಗೂ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಸರಬರಾಜು ಮಾಡದೇ ಇರುವುದನ್ನು ಖಂಡಿಸಿ ಶಿಕ್ಷಣ…


ಮುಂದೆ ಓದಿ...

ಆರ್.ಎಸ್.ಎಸ್ ಚಡ್ಡಿ ಸುಡುವ ಅಭಿಯಾನಕ್ಕೆ ಖಂಡನೆ!


ತುಮಕೂರು: ರಾಜ್ಯದಾದ್ಯಂತ ಆರ್.ಎಸ್.ಎಸ್ ಚಡ್ಡಿ ಸುಡುವ ಅಭಿಯಾನ ನಡೆಸುವುದಾಗಿ ಹೇಳಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಖಂಡಿಸಿ, ಇಂದು ಜಿಲ್ಲಾ ಬಿಜೆಪಿ ಎಸ್.ಸಿ.ಮೋರ್ಚಾ ಅಧ್ಯಕ್ಷ ಓಂಕಾರ್ ನೇತೃತ್ವದಲ್ಲಿ ಇಂದು ಚಡ್ಡಿ ರವಾನಿಸುವ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ನಗರದ ಟೌನ್‍ಹಾಲ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಸೇರಿದ್ದ ಬಿಜೆಪಿ ಹಿರಿಯ, ಕಿರಿಯ ಮುಖಂಡರು ಹಾಗೂ ಎಸ್ಸಿ ಮೋರ್ಚಾದ ಪದಾಧಿಕಾರಿಗಳು, ಸಿದ್ದರಾಮಯ್ಯ ವಿರುದ್ದ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಓಂಕಾರ್, ಬಿಜೆಪಿಗೆ ಆರ್.ಎಸ್.ಎಸ್ ಮಾತೃ ಸಮಾನ. ನನ್ನಂತಹ ಲಕ್ಷಾಂತರ ಜನರನ್ನು ಬೆಳೆಸಿ, ಪಕ್ಷದಲ್ಲಿ ಹಲವು ಹುದ್ದೆಗಳನ್ನು ನೀಡಿದೆ. ಇದರ ಅರಿವಿಲ್ಲದ ಸಿದ್ದರಾಮಯ್ಯ ಆರ್.ಎಸ್.ಎಸ್.ನಲ್ಲಿ ದಲಿತರನ್ನು ಕೀಳಾಗಿ ಕಾಣಲಾಗುತ್ತಿದೆ.ನಿಮ್ಮ ಯೋಗ್ಯತೆ ಇಷ್ಟೇ ಎಂದು ಚಡ್ಡಿ ರವಾನೆ ಆಂದೋಲನದ ನೇತೃತ್ವ ವಹಿಸಿರುವ ಚಲವಾದಿ ನಾರಾಯಣಸ್ವಾಮಿ ಅವರ ಬಗ್ಗೆ ಲಘುವಾಗಿ ಮಾತನಾಡಿರುವುದು ಖಂಡನೀಯ…


ಮುಂದೆ ಓದಿ...