ವಿಶ್ವ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ತುಮಕೂರಿನ ಕೃಷಿಕ್ ಆಯ್ಕೆ


ತುಮಕೂರು: ಗುಜರಾತ್‍ನಲ್ಲಿ ನಡೆದ ಅಥ್ಲೇಟಿಕ್ಸ್ ಫೆಡರೇಶನ್ ಬಾಲಕರ ವಿಭಾಗದಲ್ಲಿ 110 ಮೀಟರ್ ಓಟವನ್ನು ಕೇವಲ 14.2 ಸೆಕೆಂಡ್‍ಗಳಲ್ಲಿ ಓಡಿ ಗುರಿಮುಟ್ಟಿ ಚಿನ್ನದ ಪದಕ ಪಡೆದು ಕೊಲಂಬಿಯದಲ್ಲಿ ನಡೆಯಲಿರುವ ವಿಶ್ವಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಭಾರತವನ್ನು ಪ್ರತಿನಿಧಿಸುವ ಅವಕಾಶವನ್ನು ತುಮಕೂರು ನಗರದ ಮಂಜುನಾಥ ಪುತ್ರ ಕೃಷಿಕ್ ಪಡೆದು ನಾಡಿಗೆ ಕೀರ್ತಿಯನ್ನು ತಂದಿದ್ದಾರೆ. ವಿಶ್ವಮಟ್ಟದ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ತುಮಕೂರು ನಗರದ ಕೃಷಿಕ್ ಅವರನ್ನ ತುಮಕೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಮುಂಜಾನೆ ಗೆಳೆಯರ ಬಳಗದ ವತಿಯಿಂದ ಅಂತರಾಷ್ಟ್ರೀಯ ಹಿರಿಯ ಕ್ರೀಡಾಪಟು ಟಿ.ಕೆ ಆನಂದ್ ಮತ್ತು ಸದಸ್ಯರು ಅಭಿನಂದಿಸಿದರು. ಪತ್ರಕರ್ತ ಎಸ್ ನಾಗಣ್ಣ ಮಾತನಾಡಿ ಶತಮಾನಗಳಿಂದಲೂ ತುಮಕೂರು ನಗರದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಅನೇಕ ದಿಗ್ಗಜರು ಇಲ್ಲಿ ಇದ್ದಾರೆ 12 ವರ್ಷಗಳಿಂದ ತುಮಕೂರು ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದೆ ಇಂದಿನ ಮಕ್ಕಳು ಐಎಎಸ್ ಐಪಿಎಸ್ ಮತ್ತು ಇಂಜಿನಿಯರಿಂಗ್ ಪದವಿಗಳನ್ನು…


ಮುಂದೆ ಓದಿ...

ಶಾಸಕ ಶ್ರೀನಿವಾಸ್ ಕ್ಷಮೆಗೆ ಮಾಜಿ ಶಾಸಕ ಆಗ್ರಹ


ಕೊರಟಗೆರೆ: ರೈತಪರ ನಾಯಕ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಣ್ಣ ವಿರುದ್ದ ಗುಬ್ಬಿ ಕ್ಷೇತ್ರದ ಶಾಸಕ ಶ್ರೀನಿವಾಸ್ ನೀಡಿರುವ ನಿಂದನೆಯೇ ಹೇಳಿಕೆ ಖಂಡನೀಯ. ಗುಬ್ಬಿ ಕ್ಷೇತ್ರದ ಶಾಸಕ ಶ್ರೀನಿವಾಸ್ ತಕ್ಷಣ ಜೆಡಿಎಸ್ ಕಾರ್ಯಕರ್ತರ ಕ್ಷಮೆಯಾಚನೆ ಮಾಡಬೇಕು ಎಂದು ಕೊರಟಗೆರೆ ಕ್ಷೇತ್ರದ ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ಆಗ್ರಹ ಮಾಡಿದರು. ಕೊರಟಗೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಾತ್ಯಾತೀತಾ ಜನತಾದಳ ಪಕ್ಷದ ವತಿಯಿಂದ ಬುಧವಾರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದರು. ಗುಬ್ಬಿ ಕ್ಷೇತ್ರದಲ್ಲಿ ಜೆಡಿಎಸ್‍ನಿಂದ ಗೆದ್ದು ಸಚಿವ ಸ್ಥಾನ ಅನುಭವಿಸಿ ಈಗ ಪಕ್ಷದ ವರಿಷ್ಠರ ವಿರುದ್ದವಾಗಿ ಹೇಳಿಕೆ ನೀಡಿರುವುದು ಶೋಭೆ ತರುವುದಿಲ್ಲ. ಪಕ್ಷ ಬಿಡುವುದು ಅವರ ವೈಯಕ್ತಿಕ ವಿಚಾರ. ಆದರೇ ಪಕ್ಷವನ್ನು ನಿಂದನೆ ಮಾಡಿರುವುದೇ ಖಂಡನೀಯ. ರಾಜ್ಯದ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರ ಕ್ಷಮೆ ಕೇಳುಬೇಕು ಎಂದು ಒತ್ತಾಯ ಮಾಡಿದರು. ತುಮಕೂರು ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ಮಹಾಲಿಂಗಪ್ಪ ಮಾತನಾಡಿ ತುಮಕೂರು ಜಿಲ್ಲೆಯ ನಾಯಕತ್ವವನ್ನು ಜೆಡಿಎಸ್…


ಮುಂದೆ ಓದಿ...

ಶಾಲಾ ಆವರಣದಲ್ಲಿ ಅಂಗನವಾಡಿ ಇರಲಿ: ಶಾಸಕ ಜಿ.ಬಿ.ಜ್ಯೋತಿಗಣೇಶ್


ತುಮಕೂರು: ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ವಿವಿಧ ಬಡಾವಣೆಗಳ ಪ್ರಾಥಮಿಕ ಶಾಲೆಗಳ ಆವರಣದಲ್ಲಿ ಅಂಗನವಾಡಿ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ದುಸ್ಥಿತಿಯಲ್ಲಿರುವ ಅಂಗನವಾಡಿ ಕಟ್ಟಡಗಳನ್ನು ಗುರುತಿಸಿ ಸುಸಜ್ಜಿತವಾಗಿ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು. ನಗರದ 20ನೇ ವಾರ್ಡಿನ ಬಿ.ಎ.ಗುಡಿ ಪಾಳ್ಯದ ಸರ್ಕಾರಿ ಶಾಲೆ ಆವರಣದಲ್ಲಿ ನಿರ್ಮಿಸಲಾಗಿರುವ ಅಂಗನವಾಡಿ ಕಟ್ಟಡ ಉದ್ಘಾಟಿಸಿ, ಶಾಲಾ ಆವರಣದಲ್ಲೇ ಅಂಗನವಾಡಿಗಳನ್ನು ಸ್ಥಾಪಿಸಿದರೆ ಮಕ್ಕಳ ಮುಂದಿನ ಶಿಕ್ಷಣಕ್ಕೆ ಸೂಕ್ತ ವಾತಾವರಣ ರೂಪಿಸಿದಂತಾಗುತ್ತದೆ. ಶಾಲೆಯಿಂದ ದೂರ ಅಂಗನವಾಡಿಗಳು ಇರುವುದಕ್ಕೆ ಬದಲು ಶಾಲಾವರಣದಲ್ಲಿ ಇದ್ದರೆ ಉತ್ತಮ ಎಂದರು. ನಗರದ ಅನೇಕ ಕಡೆ ಅಂಗನವಾಡಿ ಕಟ್ಟಡಗಳು ದುಸ್ಥಿತಿಯಲ್ಲಿವೆ. ಅಗತ್ಯ ಸೌಕರ್ಯಗಳಿಲ್ಲದ ಕೊಟ್ಟಿಗೆಯಂತಿವೆ. ಅಂತಹ ಕಡೆ ಉತ್ತಮ ಕಟ್ಟಡ ಕಟ್ಟಲಾಗುವುದು ಎಂದು ಹೇಳಿದರು. ಸ್ಮಾರ್ಟ್ ಸಿಟಿ ಯೋಜನೆಯಡಿ 5-6 ಕೋಟಿ ರೂ.ಗಳನ್ನು ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಬಳಸಲಾಗುತ್ತದೆ. ಪ್ರತಿ ಕಟ್ಟಡಕ್ಕೆ ಸುಮಾರು 16 ಲಕ್ಷ ರೂ. ವೆಚ್ಚವಾಗುತ್ತದೆ ಎಂದು…


ಮುಂದೆ ಓದಿ...

ಜೂನ್ 18 ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ: ಕಾರ್ಯಕ್ರಮದಲ್ಲಿ ಸಚಿವ ಆರ್.ಅಶೋಕ್ ಭಾಗಿ


ತುಮಕೂರು: ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕು ಮಾಯಸಂದ್ರ ಗ್ರಾಮದಲ್ಲಿ ಮತ್ತು 19, 2022 ರಂದು ಎರಡು ದಿನಗಳ ಕಾಲ ನಡೆಯಲಿರುವ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ’ ಕಾರ್ಯಕ್ರಮದಲ್ಲಿ ಕಂದಾಯ ಸಚಿವರಾದ ಆರ್. ಅಶೋಕ್ ಅವರು ಭಾಗವಹಿಸಲಿದ್ದು, ಕಾರ್ಯಕ್ರಮದ ವಿವರಗಳು ಈ ಕೆಳಕಂಡಂತಿದೆ. ದಿನಾಂಕ 18-06-2022ರ ಶನಿವಾರ ಬೆಳಿಗ್ಗೆ 11 ಗಂಟೆಗೆ ಕಂದಾಯ ಸಚಿವರ ಆಗಮನ ಮತ್ತು ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮ, 11.10 ರಿಂದ 11.30 ರವರೆಗೆ ದೇವಸ್ಥಾನದಿಂದ ಕಾರ್ಯಕ್ರಮದ ಸ್ಥಳಕ್ಕೆ ಸಚಿವರ ಆಗಮನ(ಎತ್ತಿನ ಗಾಡಿ/ಟ್ರ್ಯಾಕ್ಟರ್ ಮೂಲಕ), 11.30 ರಿಂದ 12 ಗಂಟೆ ಆರೋಗ್ಯ ಶಿಬಿರ ಉದ್ಘಾಟನೆ ಮತ್ತು ವಿವಿಧ ಮಳಿಗೆಗಳ ವೀಕ್ಷಣೆ, 12 ಗಂಟೆ ವೇದಿಕೆಗೆ ಆಗಮನ, ನಂತರ ಪ್ರಾರ್ಥನೆ, ನಾಡಗೀತೆ, ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿ ಶಾಸಕರು ತುರುವೇಕೆರೆ ಅವರಿಂದ. ನಂತರ 12.20 ರಿಂದ 12.25 ಮಾನ್ಯ ಕಂದಾಯ ಸಚಿವರಿಂದ ಕಾರ್ಯಕ್ರಮ ಉದ್ಘಾಟನೆ ಮತ್ತು ಉದ್ಘಾಟಕರ ಭಾಷಣ,…


ಮುಂದೆ ಓದಿ...