ತುರುವೇಕೆರೆ: ದೀನ ದಲಿತರ ಆರ್ಥಿಕ ಸಬಲೀಕರಣದ ಉದ್ದೇಶ ಈಡೇರಬೇಕಾದರೆ ಸಹಕಾರ ಸಂಘಗಳ ಅವಶ್ಯಕತೆಯಿದೆ ಎಂದು ಮೈಸೂರಿನ ಉರಿಲಿಂಗಿಪೆದ್ದಿಮಠದ ಜ್ನಾನ ಪ್ರಕಾಶ್ ಸ್ವಾಮೀಜಿ ತಿಳಿಸಿದರು. ಪಟ್ಟಣದ ಮಾಯಸಂದ್ರ ರಸ್ತೆಯ ಪೆÇೀಲೀಸ್ ಠಾಣೆ ಮುಂಭಾಗ ಅಂಬೇಡ್ಕರ್ ವಿವಿದುದ್ದೇಶ ಸಹಕಾರ ಸಂಘಕ್ಕೆ ಬೌದ್ದ ಧರ್ಮದ ಪ್ರಕಾರ ಪೂಜೆ ಮಾಡುವ ಮೂಲಕ ಸಂಘಕ್ಕೆ ಅಧಿಕೃತ ಚಾಲನೆ ನೀಡಿ ಮಾತನಾಡಿದ ಅವರು ದೀನ ದಲಿತರ ಆರ್ಥಿಕ ಪ್ರಗತಿಯನ್ನು ಸಹಕಾರ ಸಂಘದ ಮೂಲಕ ಉನ್ನತೀಕರಿಸುವ ದೃಷ್ಟಿಯಿಂದ ಅಂಬೇಡ್ಕರ್ ವಿವಿದುದ್ದೇಶ ಸಹಕಾರ ಸಂಘ ಈಡೀ ರಾಜ್ಯದಲ್ಲಿ ತನ್ನ ಶಾಖೆಗಳನ್ನು ತರೆಯುತ್ತಿದೆ ಈ ನಿಟ್ಟಿನಲ್ಲಿ ತುರುವೇಕೆರೆಯಲ್ಲಿ ಸಂಘದ ನೂತನ ಶಾಖೆಯನ್ನು ತೆರದಿದ್ದು ಈ ಸಹಕಾರ ಸಂಘ ಉನ್ನತ ಮಟ್ಟಕ್ಕೆ ಬೆಳೆಯಲಿ ಕೋಟ್ಯಾಂತರ ರೂಪಾಯಿ ವಹಿವಾಟು ಮಾಡುವ ಹಂತಕ್ಕೆ ತಲುಪಲಿ. ಸಂಘಕ್ಕೆ ಅಂಬೇಡ್ಕರ್ ಅನುಯಾಯಿಗಳು ಜಾತ್ಯಾತೀತವಾಗಿ ಸಂಘದ ಸದಸ್ಯತ್ವ ಪಡೆದು ಸಂಘದಿಂದ ದೊರೆಯುವ ಸವಲತ್ತುಗಳನ್ನು ಸದ್ವಿನಿಯೋಗ ಮಾಡಿಕೊಳ್ಳಲಿ ಎಂದು ಆಶಿಸಿ…
ಮುಂದೆ ಓದಿ...