ತುಮಕೂರು: ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾದ ಜಲಜೀವನ ಮಿಷನ್ ಯೋಜನೆ ಯಸಸ್ವಿಯಾಗಬೇಕೆಂದರೆ ಸಮುದಾಯದ ಸಹಭಾಗಿತ್ವ ಮುಖ್ಯವಾಗಿರುತ್ತದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ಜೋಸೆಫ್ ತಿಳಿಸಿದರು. ಜಿಲ್ಲಾ ಪಂಚಾಯತ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಸ್ನೇಹ ಜೀವನ ಫೌಂಡೇಶನ್ (ಗುಬ್ಬಿ) ಇವರ ಸಹಯೋಗದಲ್ಲಿಂದು ಕುಣಿಗಲ್ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳಿಗೆ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರ ಸರ್ಕಾರದ ಜೀವನ್ ಮಿಷನ್ ಯೋಜನೆಗೆ ಸಮುದಾಯದವರು ಸಹಕಾರ ನೀಡಬೇಕು. ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಜಲಜೀವನ್ ಮಿಷನ್ ಕಾರ್ಯಕ್ರಮ ನಮ್ಮಲ್ಲಿ ತಡವಾಗಿ ಪ್ರಾರಂಭವಾಗಿದೆ ಕೇಂದ್ರ ಸರ್ಕಾರ 2024ರೊಳಗಾಗಿ ಪ್ರತಿ ಮನೆಗೆ ನಳ ಸಂಪರ್ಕ ನೀಡಿ ಶುದ್ಧ ನೀರನ್ನು ಒದಗಿಸಬೇಕು ಎಂಬ ಗುರಿ ಹೊಂದಿದೆ. ಇದಕ್ಕೆ ಎಲ್ಲಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಎಲ್ಲಾ…
ಮುಂದೆ ಓದಿ...