‘ಹರ್ ಘರ್ ತಿರಂಗಾ’ ಅಭಿಯಾನ ಯಶಸ್ವಿಗೊಳಿಸಲು ಸಜ್ಜು


ಗುಬ್ಬಿ 75 ನೇ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನ ಯಶಸ್ವಿಗೊಳಿಸಲು ತಾಲ್ಲೂಕಿನ ಜನತೆ ದೇಶಭಕ್ತಿ ಜೊತೆ ಭಾಗಿ ಆಗುವಂತೆ ತಹಸೀಲ್ದಾರ್ ಬಿ ಆರತಿ ಅವರು ಕರೆ ನೀಡಿದರು. ಪಟ್ಟಣದ ತಾಲೂಕು ಕಚೇರಿಯ ಕಂದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ದಿನಾಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಈಗಾಗಲೇ ಹರ ಘರ್ ತಿರಂಗಾ ರಾಷ್ಟ್ರ ಧ್ವಜಗಳನ್ನ ಪಟ್ಟಣ ಪಂಚಾಯಿತಿ ವತಿಯಿಂದ ಎರಡು ಸಾವಿರ ಧ್ವಜಗಳನ್ನು ವಿತರಿಸಲಾಗುತ್ತಿದೆ ಎಂದರು. ಪ್ರತಿ ಗ್ರಾಮ ಪಂಚಾಯಿತಿಗಳಿಗೆ 450 ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಶಾಲೆ, ಅಂಗನವಾಡಿ, ಆಸ್ಪತ್ರೆ ಸೇರಿ ಎಲ್ಲಾ ಕಟ್ಟಡಗಳಲ್ಲಿ ಧ್ವಜ ಹಾಕುವ ಜೊತೆಗೆ ಪ್ರತಿ ಮನೆಯ ಮೇಲೂ ರಾಷ್ಟ್ರ ಧ್ವಜ ಹಾಕುವಂತೆ ಸೂಚನೆ ಇದೆ. ಗ್ರಾಮೀಣಾ ಭಾಗದಲ್ಲಿ 487 ನಗರದಲ್ಲಿ 15 ಶಾಲೆಗಳು…


ಮುಂದೆ ಓದಿ...

ಮಳೆ ಅವಾಂತರ: ಮಲ್ಲೂರಿನ ಅಮಾನಿಕೆರೆ ಬಿರುಕು-ಶಾಲಾ ಕಾಂಪೌಂಡ್ ನೆಲಸಮ


ತುರುವೇಕೆರೆ: ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಮಲ್ಲೂರು ಗ್ರಾಮದಲ್ಲಿ ಸತತ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸಂಪೂರ್ಣ ಮಳೆ ಅವಾಂತರ ಸೃಷ್ಟಿಯಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ವಿಪರೀತ ಮಳೆಯಿಂದಾಗಿ ಮಲ್ಲೂರು ಗ್ರಾಮದ ಸರ್ಕಾರಿ ಶಾಲಾ ಕಾಂಪೌಂಡ್ ಕುಸಿದು ನೆಲಕ್ಕುರುಳಿದೆ. ಕಳೆದ ಮೂರ್ನಾಲ್ಕು ತಿಂಗಳ ಹಿಂದಷ್ಟೇ ನಿರ್ಮಾಣವಾದ ಕಾಂಪೌಂಡ್ ಮಳೆಯ ರಭಸಕ್ಕೆ ಸಿಲುಕಿ ಕುಸಿದಿರುವುದು ಒಂಡೆದೆಯಾದರೆ ಕೆಲವ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಇನ್ನು ಇದಿಷ್ಟೇ ಅಲ್ಲದೆ ಗ್ರಾಮದ ಅಮಾನಿಕೆರೆ ಕೋಡಿ ಬಿದ್ದಿದ್ದು, ಕೆರೆಯ ಏರಿ ಬಿರುಕು ಬಿಟ್ಟು ಅಪಾಯದ ಅಂಚಿನಲ್ಲಿದೆ. ಇನ್ನು ಮಳೆಯ ಆರ್ಭಟ ಇದೇ ರೀತಿ ಮುಂದುವರೆದರೆ ಗ್ರಾಮಕ್ಕೆ ಸಂಕಷ್ಟ ಎದುರಾಗುವಂತಾಗಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.


ಮುಂದೆ ಓದಿ...

ವರುಣಾಘಾತಕ್ಕೆ ಅವಾಂತರ: ಅಧಿಕಾರಿಗಳು ಭೇಟಿ-ಸ್ಥಳ ಪರಿಶೀಲನೆ


ಕೊರಟಗೆರೆ: ಸತತವಾಗಿ ಒಂದು ವಾರದಿಂದ ಬೊಬ್ಬಿರಿದು ಅಬ್ಬರಿಸುತ್ತಿರುವ ಮಳೆಯಿಂದಾಗಿ ಕೊರಟಗೆರೆ ಪಟ್ಟಣ ನೀರಿನಿಂದ ಆವೃತವಾಗಿ ಕೆರೆ, ಕಟ್ಟೆಗಳು ತುಂಬಿ ಕೋಡಿ ಬಿದ್ದಿವೆ. ಇನ್ನೂ ನೀರು ಹೆಚ್ಚಾಗಿ ಹೊಲ, ಗದ್ದೆ, ಗ್ರಾಮದ ಅನೇಕ ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿ ಮಾಡಿದೆ. ಹೆಚ್ಚಿದ ಮಳೆಯಿಂದಾಗಿ ಜನರ ದೈನಂದಿನ ವಹಿವಾಟಿಗೆ ಸಮಸ್ಯೆ ಆಗಿದ್ದಲ್ಲದೇ ಜಾನುವಾರುಗಳು ಕೂಡಾ ಮಳೆಯಿಂದ ತತ್ತರಿಸಿವೆ. ಪ್ರಸ್ತುತ ಘಟ್ಟದಲ್ಲಿ ಕೊರಟಗೆರೆ ತಾಲ್ಲೂಕು ಮಲೆನಾಡಿನ ಕಳೆಯನ್ನು ಹೊಂದಿದೆ. ತಾಲ್ಲೂಕಿನ ಪ್ರತಿಯೊಂದು ಹಳ್ಳಿಯೂ ಮಲೆನಾಡಿನ ರೀತಿ ಕಾಣುತ್ತಿದೆ. ಪ್ರತಿ ಗ್ರಾಮದಲ್ಲಿರುವ ಕೆರೆ-ಕಟ್ಟೆಗಳು ತುಂಬಿ ಕೋಡಿ ಹರಿಯುತ್ತಿವೆ. ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಮಳೆಯ ನೀರು ನುಗ್ಗಿದೆ. ಅಂತಹ ಕಡೆ ಇರುವ ಜನರನ್ನು ಬೇರೆಡೆಗೆ ಸ್ಥಳಾಂತರಿಸುವ ಕೆಲಸ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು. ಗುರುವಾರ ಬೆಳಿಗ್ಗೆ 7 ಗಂಟೆಯಿಂದಲೇ ಪ್ರತಿ ಗ್ರಾಮಗಳಿಗೆ ಭೇಟಿ ನೀಡುತ್ತಿರುವ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್, ಎ.ಸಿ…


ಮುಂದೆ ಓದಿ...

ಅರಕೆರೆಯಲ್ಲಿ ನರೇಗಾ ಕಳಪೆ ಕಾಮಗಾರಿ: ಗ್ರಾಮಸ್ಥರಿಗೆ ಸ್ಪಂದಿಸದ ಅಧಿಕಾರಿಗಳು


ತುರುವೇಕೆರೆ: ತಾಲ್ಲೂಕಿನ ದಂಡಿನಶಿವರ ಗ್ರಾಮ ಪಂಚಾಯತಿ ವ್ಯಾಪ್ತಿಯ ಅರಕೆರೆ ಗ್ರಾಮದ ಮುಖ್ಯ ಸಂಪರ್ಕ ರಸ್ತೆ ಸ್ಥಗಿತಗೊಂಡಿದ್ದು, ರಸ್ತೆ ಸಂಪೂರ್ಣ ಹಾಳಾಗಿದೆ. ನರೇಗಾ ಯೋಜನೆಯಡಿಯಲ್ಲಿ ಕಳಪೆ ಕಾಮಗಾರಿ ಮಾಡಲಾಗಿದೆಯೆಂದು ಸ್ಥಳೀಯರು ಆರೋಪಿಸಿದ್ದಾರೆ. ಗ್ರಾಮದ ಪ್ರಮುಖ ರಸ್ತೆ ಇದಾಗಿದ್ದು, ಸಾರ್ವಜನಿಕರು ನಾಗರಿಕರು ಗ್ರಾಮಕ್ಕೆ ತೆರಳದಂತಹ ಸನ್ನಿವೇಶ ಉಲ್ಬಣವಾಗಿದೆ. ಡ್ರೈನೇಜ್ ಮಾಡಲು ಹೋಗಿ ರಸ್ತೆಯನ್ನು ಹಾಳು ಮಾಡಲಾಗಿದೆ. ರಸ್ತೆಯ ಮಧ್ಯಭಾಗದಲ್ಲಿ ಅಗೆದು ಸೀಮೆಂಟ್ ಪೈಪ್ ಹಾಕಲಾಗಿತ್ತು. ಈ ಅವೈಜ್ಞಾನಿಕ ಕಾಮಗಾರಿಯಿಂದ ಓಡಾಟಕ್ಕೆ ಸಮಸ್ಯೆ ಎದುರಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಸಂಬಂಧಪಟ್ಟ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಿವರಾಜು ಮತ್ತು ಇಂಜಿನಿಯರ್ ಲೋಕೇಶ್ ಹಾಗೂ ತಾಲೂಕಿ ಇ.ಓ ಸತೀಶ್ ಅವರಿಗೆ ಗ್ರಾಮಸ್ಥರು ಹಲವು ಸಾರಿ ಮನವಿ ಮಾಡಿದರೂ ಸ್ಪಂದಿಸದ ಅಧಿಕಾರಿಗಳು ಲಂಚದ ಹಣಕ್ಕೆ ಆಸೆಗೆ ಬಿದ್ದು ಕಳಪೆ ಕಾಮಗಾರಿಗೆ ಬಿಲ್ ಪಾವತಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ ಗುತ್ತಿಗೆದಾರ ಮತ್ತು ಪಂಚಾಯತಿ ಅಭಿವೃದ್ಧಿ…


ಮುಂದೆ ಓದಿ...

ವಿದ್ಯುತ್ ಅವಘಡ: ಮೃತ ಕುಟುಂಬಕ್ಕೆ 5 ಲಕ್ಷ ಪರಿಹಾರ


ತುಮಕೂರು: ನಗರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಮನೆಗೆ ನೀರು ನುಗ್ಗಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಮೃತಪಟ್ಟಿದ್ದ ಈರಣ್ಣನವರ ಪತ್ನಿ ಭಾಗ್ಯರತ್ನ ಅವರಿಗೆ ಸರ್ಕಾರದ ವತಿಯಿಂದ 5 ಲಕ್ಷ ರೂ. ಪರಿಹಾರವನ್ನು ಶಾಸಕ ಜ್ಯೋತಿಗಣೇಶ್ ವಿತರಿಸಿದರು. ನಗರದ ಉಪ್ಪಾರಹಳ್ಳಿಯ ಶಿವಮೂಕಾಂಬಿಕ ನಗರದಲ್ಲಿ ವಾಸವಾಗಿದ್ದ ಈರಣ್ಣನವರು ಕಳೆದ ಮೂರು ದಿನಗಳ ಹಿಂದೆ ಮಳೆ ನೀರು ಮನೆ ನುಗ್ಗಿ ವಿದ್ಯುತ್ ಅವಘಡದಿಂದ ಸಾವನ್ನಪ್ಪಿದ್ದರು. ಇವರ ಕುಟುಂಬಕ್ಕೆ ಶಾಸಕ ಜ್ಯೋತಿಗಣೇಶ್ ಅವರು ಸಾಂತ್ವನ ಹೇಳಿ, ಸರ್ಕಾರದ ವತಿಯಿಂದ ವಿತರಿಸುವ 5 ಲಕ್ಷ ರೂ. ಪರಿಹಾರ ಚೆಕ್‍ನ್ನು ಕುಟುಂಬದವರಿಗೆ ವಿತರಿಸಿ ಧೈರ್ಯ ತುಂಬಿದರು. ನಂತರ ಮಾತನಾಡಿದ ಶಾಸಕ ಜ್ಯೋತಿಗಣೇಶ್ ಅವರು, ಮಳೆಯಲ್ಲಿ ಉಪ್ಪಾರಹಳ್ಳಿ ಶಿವಮೂಕಾಬಿಂಕ ನಗರದಲ್ಲಿನ ಈರಣ್ಣನವರ ಮನೆಯಲ್ಲಿ ನೀರು ತುಂಬಿಕೊಂಡಿದ್ದರಿಂದ ಉಂಟಾದ ವಿದ್ಯುತ್ ಅವಘಡದಿಂದ ಈರಣ್ಣನವರು ಸಾವನ್ನಪ್ಪಿದ್ದಾರೆ. ಇದು ಅತ್ಯಂತ ದುಃಖಕರ ಸಂಗತಿ. ಅತಿಯಾದ ಮಳೆಯಿಂದಾಗಿ ಅವಾಂತರ, ಅವಘಡಗಳು ಸಂಭವಿಸುತ್ತಲೇ ಇವೆ.…


ಮುಂದೆ ಓದಿ...