ಶಿಥಿಲಾವಸ್ಥೆಯ ಕಟ್ಟಡಗಳನ್ನು ಕೆಡವಿ ಹಾಕತಕ್ಕದ್ದು: ಪಾಲಿಕೆ ಆಯುಕ್ತೆ


ತುಮಕೂರು: ನಗರದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಮನೆಗಳು, ವಾಣಿಜ್ಯ ಕಟ್ಟಡಗಳು ಮತ್ತು ಉಪಯೋಗಕ್ಕೆ ಯೋಗ್ಯವಲ್ಲದ ಕಟ್ಟಡಗಳನ್ನು ಕೆ.ಎಂ.ಸಿಕಾಯ್ದೆ 1976 ಕಲಂ 338ರಂತೆ ಕೆಡವಿ ಹಾಕತಕ್ಕದ್ದು ಎಂದು ತುಮಕೂರು ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ತುಮಕೂರು ನಗರ ಸೇರಿದಂತೆ ರಾಜ್ಯದಲ್ಲಿ ಧಾರಕಾರವಾಗಿ ಮಳೆಯಾಗುತ್ತಿದ್ದು, ಇದರಿಂದ ಚರಂಡಿ, ಹಳ್ಳ, ಕೆರೆಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿರುತ್ತವೆ. ನಗರದ ಕೆಲವು ಕೊಳಚೆ ಪ್ರದೇಶಗಳಲ್ಲಿ ಹಾಗೂ ಬಡಾವಣೆಗಳಲ್ಲಿ ಸಾಕಷ್ಟು ವರ್ಷಗಳ ಹಿಂದೆ ನಿರ್ಮಿಸಿರುವ ಮನೆಗಳು ಬೀಳುವ ಸ್ಥಿತಿಯಲ್ಲಿದ್ದರೂ ಅಂತಹ ಮನೆಗಳಲ್ಲಿಯೇ ವಾಸ ಮಾಡುತ್ತಿರುವುದು ಹಾಗೂ ನಗರದ ಕೆಲವು ಬಡಾವಣೆಗಳಲ್ಲಿ ಮನೆಗಳು / ವಾಣಿಜ್ಯ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು, ಬೀಳುವ ಹಂತದಲ್ಲಿದ್ದರೂ/ ಉಪಯೋಗಕ್ಕೆ ಯೋಗ್ಯವಲ್ಲದಿದ್ದರೂ ಸಹ ಅಂತಹ ಕಟ್ಟಡಗಳನ್ನು ಉಪಯೋಗಿಸುತ್ತಿರುವುದು ಪಾಲಿಕೆ ಗಮನಕ್ಕೆ ಬಂದಿರುತ್ತದೆ. ಇಂತಹ ಕಟ್ಟಡಗಳನ್ನು ಸ್ವತಃ ಕಟ್ಟಡ ಮಾಲೀಕರೇ ತೆರವುಪಡಿಸಿಕೊಳ್ಳಲು ಈ ಹಿಂದೆಯೇ ತಿಳಿಸಲಾಗಿದ್ದರೂ ಸಹ ಕಟ್ಟಡ ಮಾಲೀಕರೂ ತೆರವುಪಡಿಸಿಕೊಳ್ಳದೇ ಇರುವುದು ಕಂಡು…


ಮುಂದೆ ಓದಿ...

ವಿ.ವಿ ವಿದ್ಯಾರ್ಥಿಗಳ ಬೇಡಿಕೆ ಈಡೇರಿಸುವಂತೆ ಎಬಿವಿಪಿ ಮನವಿ


ತುಮಕೂರು: ವಿಶ್ವವಿದ್ಯಾನಿಲಯದಲ್ಲಿನ ಅನೇಕ ಸಮಸ್ಯೆಗಳ ಬಗ್ಗೆ ನೂತನ ಕುಲಪತಿಗಳಾದ ಪ್ರೊ. ಎಂ ವೆಂಕಟೇಶ್ವರಲು ಅವರ ಸಮ್ಮುಖದಲ್ಲಿ ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ. ಕೆ. ಶಿವಚಿತ್ತಪ್ಪ ಅವರಿಗೆ ಈ ಕೆಳಕಂಡ ಬೇಡಿಕೆಗಳನ್ನು ಕೂಡಲೇ ಈಡೇರಿಸುವಂತೆ ವಿಶ್ವವಿದ್ಯಾನಿಲಯದ ಎಬಿವಿಪಿ ಕಾರ್ಯಕರ್ತರ ಮೂಲಕ ಮನವಿಯನ್ನು ಸಲ್ಲಿಸಲಾಯಿತು. ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಹಲವಾರು ಶೈಕ್ಷಣಿಕ ಸಮಸ್ಯೆಗಳಿಂದ ಎದುರಿಸುತ್ತಿದ್ದು, ವಿಶ್ವವಿದ್ಯಾನಿಲಯದಲ್ಲಿ ಪ್ರಸ್ತುತ 30,000 ಗಿಂತ ಅಧಿಕ ವಿದ್ಯಾರ್ಥಿಗಳಿದ್ದು, ಕ್ಯಾಂಪಸ್‍ನಲ್ಲಿ ಜಿಲ್ಲೆಯ ಗ್ರಾಮಾಂತರದಿಂದ 4,000 ವಿದ್ಯಾರ್ಥಿಗಳು ಓದುತ್ತಿದ್ದು, ಈ ಕೆಳಗಿನ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ತುಮಕೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ 150 ಕ್ಕಿಂತ ಅಧಿಕ ಕಾಲೇಜುಗಳಿದ್ದು, 30,000 ಅಧಿಕ ವಿದ್ಯಾರ್ಥಿಗಳು ಶಿಕ್ಷಣ ಮಾಡುತ್ತಿದಾರೆ. ಕೊರೋನಾ ಕಾರಣಾಂತರದಿಂದ ಕಳೆದ ಮೂರು ವರ್ಷಗಳಿಂದ ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಪೂರ್ಣ ಪ್ರಮಾಣದ ಕ್ರೀಡಾ ಚಟುವಟಿಕೆ ನಡೆದಿರುವುದಿಲ್ಲ. ಇದರಿಂದ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಅನ್ಯಾಯವಾಗುತ್ತಿದೆ. ಅಂತರ ವಿಶ್ವವಿದ್ಯಾನಿಲಯ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸ್ಪಂದನೆ ಸಿಗುತ್ತಿರುವುದಿಲ್ಲ. ಯಾವುದೇ ರೀತಿಯ…


ಮುಂದೆ ಓದಿ...

ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ


ತುಮಕೂರು: ಭಾರತ ಸ್ವಾತಂತ್ರ್ಯ 75ನೇ ಅಮೃತ ಮಹೋತ್ಸವದ ಪ್ರಯುಕ್ತ ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತದ ವತಿಯಿಂದ ನಗರದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಲಾಯಿತು. ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ನಗರದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ಮನೆಗಳಿಗೆ ಉಪವಿಭಾಗಾಧಿಕಾರಿ ವಿ. ಅಜಯ್, ತಹಶೀಲ್ದಾರ್ ಮೋಹನ್‍ಕುಮಾರ್ ಅವರು ತೆರಳಿ ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸುವ ಮೂಲಕ ಗೌರವ ಸಲ್ಲಿಸಿದರು. ನಗರದ ಉಪ್ಪಾರಹಳ್ಳಿಯ ವಾಸವಾಗಿರುವ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಟಿ.ಆರ್. ರೇವಣ್ಣ, ಬಿ.ಜಿ. ಪಾಳ್ಯ ವೃತ್ತದಲ್ಲಿರುವ ಟಿ.ಸಿ. ಜಯರಾಮ್ ಹಾಗೂ ಚಿಕ್ಕಪೇಟೆಯಲ್ಲಿರುವ ಟಿ.ಕೆ. ರಾಜಣ್ಣ ಅವರ ಮನೆಗಳಿಗೆ ತೆರಳಿದ ಅಧಿಕಾರಿಗಳ ತಂಡ ಪ್ರತ್ಯೇಕವಾಗಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಉಪವಿಭಾಗಾಧಿಕಾರಿ ಅಜಯ್, ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾಗಿದೆ. ಹೀಗಾಗಿ 75ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ಸರ್ಕಾರದ ನಿರ್ದೇಶನದಂತೆ ನಗರ ಹಾಗೂ ಎಲ್ಲ ತಾಲ್ಲೂಕಿನಲ್ಲಿರುವ ಹಿರಿಯ…


ಮುಂದೆ ಓದಿ...

ಮಳೆಹಾನಿ: ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗೆ ಪತ್ರ ಬರೆದ ಸೊಗಡು ಶಿವಣ್ಣ


ತುಮಕೂರು: ನಗರದಲ್ಲಿ ಕಳೆದ 10 ದಿನಗಳಿಂದ ಸುರಿದ ಮಳೆಯಿಂದ ಮನೆ, ರಸ್ತೆಗಳಿಗೆ ಹಾನಿಯಾಗಿದ್ದು, ಸರ್ಕಾರ ತುರ್ತು ಪರಿಹಾರ ಕ್ರಮ ಕೈಗೊಳ್ಳುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಜಿ ಸಚಿವ ಸೊಗಡು ಶಿವಣ್ಣ ಪತ್ರ ಬರೆದು ಒತ್ತಾಯಿಸಿದ್ದಾರೆ. ನಗರದಲ್ಲಿ ಕಳೆದ 10 ದಿನಗಳಿಂದ ಭಾರಿ ಮಳೆ ಸುರಿಯುತ್ತಿರುವುದು ಸರಿಯಷ್ಟೆ. ಇದು ಅತಿದೃಷ್ಟೀಯಾಗಿದ್ದು ನಗರದಲ್ಲಿನ ಬಡಾವಣೆಗಳ ತಗ್ಗು ಪ್ರದೇಶದಲ್ಲಿ ನೀರು ಮುಂದಕ್ಕೆ ಹರಿಯದೇ ಅಲ್ಲಿ ನಿಂತು ಅತಿ ಹೆಚ್ಚು ಹಾನಿಯುಂಟುಮಾಡಿದೆ. ಇದರಿಂದ ಬಹಳಷ್ಟು ಮನೆಗಳಿಗೂ ತೊಂದರೆಯಾಗಿದೆ, ನಗರ ಪಾಲಿಕೆ ಆಯುಕ್ತರು ಶಿಥಿಲ ಕಟ್ಟಡ ತೆರವುಗೊಳಿಸಲು ಸೂಚಿಸಿರುವುದು ಸರಿಯೇ? ಎಂಬ ಚರ್ಚೆ ನಾಗರೀಕರಲ್ಲಿ ಮೂಡಿದೆ. ತುಮಕೂರು ನಗರದಲ್ಲಿರುವ ಮಳೆ ನೀರಿನ ಚರಂಡಿಗಳು ಹೂಳುವಿನಿಂದ ತುಂಬಿದ್ದು, ಕಾಲಕಾಲಕ್ಕೆ ಅದರಲ್ಲಿಯೂ ಮಳೆಗಾಲ ಬರುವ ಮುಂಚೆಯೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಿಲ್ಲ. ತುಮಕೂರು ನಗರದ ಮಧ್ಯಭಾಗದಲ್ಲಿರುವ ದೊಡ್ಡಚರಂಡಿಯನ್ನು ಸೇರುವ ಪ್ರಮುಖ ಚರಂಡಿಗಳ ಹೂಳು ತೆಗೆಯದ ಕಾರಣ ಬಡಾವಣೆಗಳಲ್ಲಿನ ಮನೆಗಳಿಗೆ ನೀರು…


ಮುಂದೆ ಓದಿ...

ಸಂತ್ರಸ್ತರ ನೆರವಿಗೆ ಧಾವಿಸಿದ ಇಕ್ಬಾಲ್ ಅಹ್ಮದ್


ತುಮಕೂರು: ಸತತವಾಗಿ ಬೀಳುತ್ತಿರುವ ಧಾರಾಕಾರ ಮಳೆಯಿಂದಾಗಿ ನಗರದಲ್ಲಿ ಅನೇಕ ಕಡೆ ಬಡವರಿಗೆ ಸೇರಿದ ಹೆಂಚಿನ ಮನೆಗಳಿಗೆ ಹಾನಿಯಾಗಿದೆ ಹಾಗೂ ಕೆಲವು ಮನೆಗಳು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ ಹೀಗೆ ನಗರದ ಗೂಡ್ಸ್ ಶೆಡ್ ಕಾಲೋನಿಯಲ್ಲೂ ಬಡ ಕುಟುಂಬಕ್ಕೆ ಸೇರಿದ ಮನೆಯ ಅರ್ಧ ಭಾಗ ಕುಸಿದು ಉಳಿದ ಭಾಗ ಶಿಥಿಲಗೊಂಡಿದ್ದು ಆರ್ಥಿಕವಾಗಿ ಹಿಂದುಳಿದವರಾದ ಇವರು ಬಾಡಿಗೆ ಮನೆಗೆ ಮುಂಗಡ ಹಣ ಕೊಡಲು ಅಶಕ್ತರಾಗಿದ್ದು ಅದೇ ಮನೆಯಲ್ಲಿ ವಾಸ ಮಾಡುವ ಸ್ಥಿತಿ ಇರುವದರಿಂದ ಶಿಥಿಲಗೊಂಡ ಗೋಡೆ ಬೀಳುವ ಶಂಕೆ ಇದ್ದು ಹೆಚ್ಚಿನ ಪ್ರಾಣಹಾನಿ ಆಗುವ ಸಂಭವವಿದೆ ಸಂತ್ರಸ್ತರ ಕುಟುಂಬ ಸದಸ್ಯರು ಸಹಾಯಕ್ಕಾಗಿ ಇಕ್ಬಾಲ್ ಅಹ್ಮದ್ ರವರಿಗೆ ಕರೆ ಮಾಡಿ ವಸ್ತು ಸ್ಥಿತಿ ತಿಳಿಸಿದ ಮೇರೆ ಸ್ಥಳಕ್ಕೆ ಭೇಟಿ ಕೊಟ್ಟ ಇಕ್ಬಾಲ್ ಅಹ್ಮದ್ ರವರ ಸ್ಥಳೀಯ ಮುಖಂಡರ ಜೊತೆಗೂಡಿ ಆರ್ಥಿಕ ಸಹಾಯ ಮಾಡಿದರು ಮಳೆಯ ಆರ್ಭಟಕ್ಕೆ ಸಿಲುಕಿರುವ ಸಂತ್ರಸ್ತರ ನೆರವಿಗೆ ನೆರೆಹೊರೆಯ ಸ್ಥಿತಿವಂತರು ಕೈಲಾದ…


ಮುಂದೆ ಓದಿ...

ಸಂತ್ರಸ್ತರಿಗೆ ನೆರವಿನ ಹಸ್ತ: ಜಪಾನಂದ ಸ್ವಾಮಿ


ಕೊರಟಗೆರೆ: ಪ್ರವಾಹ ಪರಿಹಾರ ಯೋಜನೆ ಮುಂದುವರಿದ ಭಾಗದಂತೆ ಕೊರಟಗೆರೆ ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಹುಲ್ಲಿಕುಂಟೆ, ಚನ್ನಗಾನಹಳ್ಳಿ ಗ್ರಾಮಗಳಲ್ಲಿ ಪರಿಹಾರ ಯೋಜನೆಯನ್ನು ಕೈಗೊಳ್ಳಲಾಯಿತು. ಸುರಿಯುತ್ತಿರುವ ಬಾರಿ ಮಳೆಗೆ ಈ ಭಾಗ ಸಂಪೂರ್ಣವಾಗಿ ನೀರಿನಿಂದ ಮುಳುಗಡೆಯಾಗಿದೆ.ಇದರಿಂದ ಜನರು ತುಂಬಾ ಸಂಕಷ್ಟಕ್ಕೆ ಸಿಲುಕಿದ್ದರು.ಮಳೆ ನೀರು ಮನೆಯ ಹೊರಗೆ ಮತ್ತು ಒಳಗಡೆಯಲ್ಲೆಲ್ಲ ನಿಂತಿದ್ದನ್ನು ಕಾಣಬಹುದಾಗಿತ್ತು. ಅನೇಕ ಮನೆಗಳು ಶಿಥಿಲವಾಗಿದ್ದು ಸಣ್ಣ ಮಳೆ ಬಂದರೂ ನೀರು ಸೋರುವಿಕೆಯಿಂದ ಜನರು ತತ್ತರಿಸುತ್ತಿದ್ದರು. ಈ ನಿಟ್ಟಿನಲ್ಲಿ ಶ್ರೀರಾಮಕೃಷ್ಣ ಸೇವಾಶ್ರಮ, ಇನ್ಫೋಸಿಸ್ ಫೌಂಡೇಷನ್ ಹಾಗೂ ರೆಡ್ ಕ್ರಾಸ್ ಸಹಕಾರದಿಂದ ಸುತ್ತಮುತ್ತಲಿನ ಪ್ರದೇಶದ ಜನರಿಗೂ ದಿನಸಿ (ಅಕ್ಕಿ, ಬೇಳೆ, ಗೋಧಿ ಹಿಟ್ಟು, ಉಪ್ಪು, ಸಕ್ಕರೆ, ಸಾಂಬಾರ್ ಪದಾರ್ಥಗಳನ್ನೊಳಗೊಂಡ ಕಿಟ್), ಶುಚಿತ್ವದ ಕಿಟ್ (ಸೋಪು, ಟೂಥ್ ಪೇಸ್ಟ್, ಬ್ರಷ್, ಕೊಬ್ಬರಿ ಎಣ್ಣೆ ಇತ್ಯಾದಿಗಳು) ಶುಚಿತ್ವದ ಸ್ಯಾನಿಟೈಸರ್ ಹಾಗೂ ಮಹಿಳೆಯರಿಗೆ ಸೀರೆ, ಪುರುಷರಿಗೆ ಪಂಚೆ ಹಾಗೂ ವಯೋವೃದ್ಧರಿಗೆ ಸೊಳ್ಳೆ ಪರದೆಯನ್ನು ವಿತರಿಸಿದರು.…


ಮುಂದೆ ಓದಿ...

ಕ್ವಿಟ್ ಇಂಡಿಯಾ ಚಳವಳಿಯ ಸಂಸ್ಮರಣೆ!


ತುಮಕೂರು: ಕ್ವಿಟ್ ಇಂಡಿಯಾ ಚಳವಳಿಯ ಸವಿನೆನಪಿಗಾಗಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಡಿಸಿಸಿ ಉಪಾಧ್ಯಕ್ಷ ಹೆಚ್.ಸಿ.ಹನುಮಂತಯ್ಯ ಅವರ ನೇತೃತ್ವದಲ್ಲಿ ಕ್ವಿಟ್ ಇಂಡಿಯಾ ಚಳವಳಿಯ ಸಂಸ್ಮರಣ ದಿನವನ್ನು ಆಚರಿಸಲಾಯಿತು. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸ್ವಾತಂತ್ರ ಚಳವಳಿಯ ನೇತಾರ ಮಹಾತ್ಮಗಾಂಧಿ ಅವರ ಭಾವಚಿತ್ರಕ್ಕೆ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಪುಷ್ಪನಮನ ಸಲ್ಲಿಸುವ ಮೂಲಕ 1942ರ ಆಗಸ್ಟ್ 09 ರಂದು ಆರಂಭಗೊಂಡ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂಬ ಮಾಡು, ಇಲ್ಲವೇ ಮಡಿ ಹೋರಾಟಕ್ಕೆ ಚಾಲನೆಯಾದ ದಿನವನ್ನು ಸ್ಮರಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆಂಚಮಾರಯ್ಯ ಮಾತನಾಡಿ, ಭಾರತದ ಸ್ವಾತಂತ್ರ ಇತಿಹಾಸದಲ್ಲಿಯೇ ಕ್ವಿಟ್ ಇಂಡಿಯಾ ಚಳವಳಿ ಒಂದು ಮಹತ್ತರ ಘಟ್ಟ. ಮಹಾತ್ಮಗಾಂಧಿ ನೇತೃತ್ವದ ಹಲವಾರು ಮಾದರಿ ಹೋರಾಟಗಳಿಗೆ ಬ್ರಿಟಿಷರು ಬಗ್ಗದೆ ಇದ್ದ ಸಂದರ್ಭದಲ್ಲಿ ಅಂದಿನ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ನೆಹರು, ಪಟೇಲ್ ಸೇರಿದಂತೆ ಹಲವರೊಂದಿಗೆ ಸೇರಿ, ಹೇಗಾದರೂ ಮಾಡಿ…


ಮುಂದೆ ಓದಿ...