ಸರ್ವೋದಯ ಚಿಂತಕರಿಂದ ಪಾದಯಾತ್ರೆ


ತುಮಕೂರು: ಭಾರತ ಸ್ವಾತಂತ್ರ್ಯ ಅಂಗವಾಗಿ 75 ಪಾದಯಾತ್ರಿಗಳ ತಂಡ ಆ.12 ಶುಕ್ರವಾರ ದೊಡ್ಡಬಳ್ಳಾಪುರ ಟಿ.ಬಿ.ಸರ್ಕಲ್ ನಿಂದ ಹೊರಟು 14 ರಂದು ಸಂಜೆ ವಿದುರಾಶ್ವತ್ಥ ತಲುಪಲಿದೆ. 50 ರೋವರ್ಸ್, 15 ಎನ್‍ಎಸ್‍ಎಸ್ ವಿದ್ಯಾರ್ಥಿಗಳು, 10 ಹಿರಿಯ ಸರ್ವೋದಯ ಚಿಂತಕರು ಹೆಜ್ಜೆ ಹಾಕಲಿದ್ದಾರೆ ಎಂದು ಸರ್ವೋದಯ ಮಂಡಲ ಜಿಲ್ಲಾಧ್ಯಕ್ಷ ಆರ್.ವಿ.ಪುಟ್ಟಕಾಮಣ್ಣ ತಿಳಿಸಿದ್ದಾರೆ. ಈ ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶದ ಹಿರಿಯರ ತ್ಯಾಗ, ಬಲಿದಾನದ ಅರಿವನ್ನು ಯುವಕರಲ್ಲಿ ಮೂಡಿಸುವ ಸಲುವಾಗಿ ಕರ್ನಾಟಕ ಸರ್ವೋದಯ ಮಂಡಲ-ಬೆಂಗಳೂರು ಈ ಪಾದಯಾತ್ರೆ ಆಯೋಜಿಸಿದೆ. ಜೊತೆಗೆ ಮಾರ್ಗ ಮಧ್ಯದಲ್ಲಿ ಬರುವ ಎಲ್ಲಾ ಗ್ರಾಮ, ಜನ ವಸತಿ ಪ್ರದೇಶದಲ್ಲಿ ಮಹಾತ್ಮ ಗಾಂಧೀಜಿ ಅವರ 100 ಭಿತ್ತಿ ಚಿತ್ರ ಪ್ರದರ್ಶನ, ಮಾರಾಟ ನಡೆಯಲಿದೆ. ಆ.14 ರಂದು ಬೆಳಗ್ಗೆ 7-30 ಗಂಟೆಗೆ ತುಮಕೂರು ಸರ್ವೋದಯ ಕಾರ್ಯಕರ್ತರು ಗಾಂಧೀಜಿ ವಾಸ್ತವ್ಯಹೂಡಿದ್ದ ಶಾಲೆಯಿಂದ ತೆರಳಲಿದ್ದು, ಗಾಂಧಿ ಚಿಂತಕರಾದ ಎಂ.ಬಸವಯ್ಯ, ಟಿ.ಆರ್.ರೇವಣ್ಣ, ಜಿ.ವಿ.ವಿ.ಶಾಸ್ತ್ರಿ , ಎಲ್.ನರಸಿಂಹಯ್ಯ…


ಮುಂದೆ ಓದಿ...

ಮಧುಗಿರಿ ಬೆ.ವಿ.ಕಂ ವ್ಯಾಪ್ತಿ: ಸಾರ್ವಜನಿಕರಿಗೆ ಎಚ್ಚರಿಕೆ


ತುಮಕೂರು: ಮಧುಗಿರಿ ಬೆ.ವಿ.ಕಂ. ವ್ಯಾಪ್ತಿಯಲ್ಲಿನ ಮಧುಗಿರಿ, ಕೊಡಿಗೇನಹಳ್ಳಿ, ಕೊರಟಗೆರೆ, ಶಿರಾ ನಗರ, ಶಿರಾ ಗ್ರಾಮೀಣ, ಪಾವಗಡ ಉಪವಿಭಾಗಗಳಲ್ಲಿ 438363 ಗ್ರಾಹಕರಿಂದ ಒಟ್ಟು 366 ವಿದ್ಯುತ್ ಮಾರ್ಗಗಳಿಂದ 16520.34 ಕಿ.ಮೀ. ಉದ್ದದ 11ಕೆವಿ ಮಾರ್ಗ ಮತ್ತು 24985.99 ಕಿ.ಮೀ. ಎಲ್.ಟಿ. ಮಾರ್ಗ ಮತ್ತು 31255 ಸಂಖ್ಯೆಯ ವಿವಿಧ ಸಾಮಥ್ರ್ಯದ ಪರಿವರ್ತಕಗಳು ಬರುತ್ತಿರುವುದರಿಂದ ಸಾರ್ವಜನಿಕರು ಈ ಕೆಳಕಂಡ ನಿಯಮಗಳನ್ನು ಪಾಲಿಸಬೇಕು ಎಂದು ಕಾರ್ಯನಿರ್ವಾಹಕ ಇಂಜಿನಿಯರ್ ಸೈಯದ್ ಮಹಮೂದ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ. ಮಳೆಗಾಲ ಪ್ರಾರಂಭವಾಗಿರುವುದರಿಂದ ಭಾರಿ ಗಾಳಿ ಮತ್ತು ಮಳೆಗೆ ಮರಗಿಡಗಳು ಬೆ.ವಿ.ಕಂ.ನ ಮಾರ್ಗಗಳ ಮೇಲೆ ಬಿದ್ದು, ತಂತಿಗಳು ತುಂಡಾಗಿ ಅಪಾಯವಾಗುವ ಸಂಭವವಿದ್ದು, ಮೇಲ್ಕಂಡ ಶಾಖೆಗೆ ಒಳಪಡುವ ಸಾರ್ವಜನಿಕರು ಮಾರ್ಗಗಳ ಕೆಳಗೆ ತೋಟಗಳನ್ನು ನಿರ್ಮಿಸುವುದು, ಕಟ್ಟಡ ನಿರ್ಮಾಣ ಕೆಲಸ, ವಿದ್ಯುತ್ ಕಂಬಗಳಿಗೆ ತಂತಿ/ಹಗ್ಗ ಕಟ್ಟಿ ಬಟ್ಟೆ ಒಣಗಿಸುವುದು, ಸಾಕು ಪ್ರಾಣಿಗಳನ್ನು ಕಟ್ಟುವುದು, ಮನೆಗಳಿಗೆ ಅನಧೀಕೃತ ವಿದ್ಯುತ್ ಸಂಪರ್ಕ ಪಡೆಯಲು ಕೊಕ್ಕೆ…


ಮುಂದೆ ಓದಿ...

ಬಡಾವಣೆಗಳ ಗುರುತಿಗೆ ನಾಮಫಲಕ ಹಾಕುವ ಕಾರ್ಯಕ್ಕೆ ಚಾಲನೆ


ತುಮಕೂರು: ನಗರದ 15ನೇ ವಾರ್ಡಿಗೆ ಸಂಬಂಧಿಸಿದಂತೆ ಪ್ರತಿ ರಸ್ತೆ, ಬಡಾವಣೆಗಳ ಗುರುತಿಗಾಗಿ ನಾಮಫಲಕ ಹಾಕುವ ಕಾರ್ಯಕ್ಕೆ ವಾರ್ಡಿನ ಪಾಲಿಕೆ ಸದಸ್ಯೆ ಗಿರಿಜಾ ಧನಿಯಕುಮಾರ್ ಚಾಲನೆ ನೀಡಿದರು. ನಗರದ ರೈಲ್ವೆ ನಿಲ್ದಾಣದ ಬಳಿ ಗಾಂಧಿನಗರ ಮುಖ್ಯರಸ್ತೆಗೆ ನಾಮಫಲಕ ಅಳವಡಿಸಲು ಪೂಜೆ ನೆರವೇರಿಸಿದ ನಂತರ ಮಾತನಾಡಿದ ಪಾಲಿಕೆಯ ಸದಸ್ಯೆ ಶ್ರೀಮತಿ ಗಿರಿಜಾ ಧನಿಯಕುಮಾರ್,ಸ್ಮಾರ್ಟ್ ಸಿಟಿವತಿಯಿಂದ 15ನೇ ವಾರ್ಡಿನಲ್ಲಿ ಕೈಗೊಂಡಿದ್ದ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿರುವ ಹಿನ್ನೇಲೆಯಲ್ಲಿ ವಾರ್ಡಿನ ರಸ್ತೆಗಳಿಗೆ ನಾಮಫಲಕ ಅಳವಡಿಸುವ ಕಾರ್ಯಕ್ಕೆ ಇಂದು ಚಾಲನೆ ನೀಡಲಾಗಿದೆ.15ನೇ ವಾರ್ಡಿನಲ್ಲಿ ಸುಮಾರು 120 ಕ್ಕೂ ಹೆಚ್ಚು ರಸ್ತೆ ಮತ್ತು ತಿರುವುಗಳಿದ್ದು, ಹಂತ ಹಂತವಾಗಿ ಎಲ್ಲಾ ತಿರುವುಗಳಿಗೂ ಪಾಲಿಕೆಯಿಂದ ನಾಮಫಲಕ ಅಳವಡಿಸಲಾಗುವುದು.ನಾಮಫಲಕಗಳಿಗೆ ಬಡಾವಣೆಯ ಹೆಸರು, ಎಷ್ಟನೇ ತಿರುವು ಎಂದು ನಮೂದಿಸುವುದರ ಜೊತೆಗೆ,ಕನ್ನಡ ಸಾಹಿತಿಗಳ ಹೆಸರನ್ನು ಅಳವಡಿಸುವ ಮೂಲಕ ಅವರುಗಳ ಹೆಸರನ್ನು ಜನಮಾನಸದಲ್ಲಿ ಉಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು. ನಾಮಫಲಕ ಅಳವಡಿಸುವುದರಿಂದ ನಗರಕ್ಕೆ ಹೊರಗಡೆಯಿಂದ ಬರುವವರಿಗೆ…


ಮುಂದೆ ಓದಿ...

ಹೋರಾಟದಿಂದ ಸಾಮಾಜಿಕ ಬದಲಾವಣೆ ಸಾಧ್ಯ!


ತುಮಕೂರು: ಭಾರತದ ಸ್ವಾತಂತ್ರ್ಯ ಹೋರಾಟ ಇಲ್ಲಿನ ಜನತೆಗೆ ಹೊಸ ರೀತಿಯ ಆಲೋಚನಾ ಕ್ರಮವಲ್ಲದೆ ಹೊಸ ಸಾಮಾಜಿಕ ಸಂಬಂಧಗಳನ್ನು ಸೃಷ್ಟಿಸಿತು. ಪೂರ್ವ ಮತ್ತು ಪಶ್ಚಿಮದ ಚಿಂತನಾ ಕ್ರಮಗಳು ಸಾಂಸ್ಕøತಿಕ ವೈರುಧ್ಯಗಳು ವ್ಯೆವಸ್ಥೆಯನ್ನುಕಟ್ಟುವ ತತ್ವಗಳು ಹೊಸ ನಿಷ್ಕರ್ಷೆಗೆ ಒಳಗಾದವು ಎಂದು ಸಂಶೋಧಕರಾದ ಡಾ.ಡಿ.ಎಸ್.ಯೋಗೀಶ್ವರಪ್ಪ ಅಭಿಪ್ರಾಯಪಟ್ಟರು. ಅವರು ನಗರದಶ್ರೀ ಸಿದ್ಧಗಂಗಾ ಕಲಾ,ವಿಜ್ಞಾನ ಮತ್ತು ವಾಣಿಜ್ಯಕಾಲೇಜಿನಲ್ಲಿ ಏರ್ಪಡಿಸಿದ್ದ ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕ್ವಿಟ್ ಇಂಡಿಯಾ ಚಳುವಳಿಯ ಸಂಸ್ಮರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಭಾರತ ಸ್ವಾತಂತ್ರ್ಯ ಹೋರಾಟದ ಅಂತಿಮ ಹಂತವಾದ ಕ್ವಿಟ್‍ಇಂಡಿಯಾ ಚಳುವಳಿಯಲ್ಲಿ ನೇತಾರರೆಲ್ಲಾ ಜೈಲು ಸೇರಿದ್ದರಿಂದ ನಾಯಕತ್ವವೇ ಇಲ್ಲವಾಗಿದ್ದರಿಂದ ದಿಕ್ಕು ತಪ್ಪಿದರೂ ತುಮಕೂರಿನಲ್ಲಿ ಅಭೂತಪೂರ್ವ ಯಶಸ್ಸನ್ನು ಕಂಡಿತು ಎಂದ ಅವರು ಇಂದಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣ, ನಗರದ ಚರ್ಚ್ ವೃತ್ತ ಮುಖ್ಯ ಕೇಂದ್ರಗಳಾಗಿದ್ದು ತಿಪಟೂರಿನಲ್ಲಿ ವಿದ್ಯಾರ್ಥಿ ಸಮುದಾಯದ ಮೇಲೆ ಪೋಲಿಸರು ಲಾಟಿಚಾರ್ಚ್ ಮಾಡಿದಾಗ ರೊಚ್ಚಿಗೆದ್ದ ಅವರು…


ಮುಂದೆ ಓದಿ...

ರಾಜೀವ್‍ಗಾಂಧಿ ಸದ್ಭಾವನಾ ಜ್ಯೋತಿಯಾತ್ರೆಗೆ ಸ್ವಾಗತ


ತುಮಕೂರು: ದಿವಂಗತ ರಾಜೀವ್ ಗಾಂಧಿಯವರ ಸ್ಮರಣಾರ್ಥ ತಮಿಳುನಾಡಿನ ಶ್ರೀ ಪೆರಂಬುದೂರಿನ ಶ್ರೀ ರಾಜೀವ್ ಗಾಂಧಿ ಸ್ವಾರಕದ ಬಳಿ ಜ್ಯೋತಿ ಉದ್ಘಾಟಿಸಿ ವಿವಿಧ ರಾಜ್ಯಗಳ ಮಾರ್ಗವಾಗಿ ನವದೆಹಲಿಯ ವೀರಭೂಮಿಗೆ ತಲುಪಲಿದೆ. ಕಳೆದ 31 ವರ್ಷಗಳಿಂದ ರಾಜೀವ್‍ಗಾಂಧಿ ಸದ್ಭಾವನಾ ಜ್ಯೋತಿಯಾತ್ರೆ ಹಮ್ಮಿಕೊಳ್ಳುತ್ತಿರುವುದು ವಿಶೇಷವಾಗಿದೆ. ಅದರಂತೆ ಈ ವರ್ಷದ ಜ್ಯೋತಿಯಾತ್ರೆ ಸಾಗುವ ಮಾರ್ಗಮಧ್ಯೆ ಇಂದು ತುಮಕೂರು ನಗರಕ್ಕೆ ಆಗಮಿಸಿದ ಸಂದರ್ಭ ಮಾಜಿ ಶಾಸಕರು ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಡಾ.ರಫೀಕ್ ಅಹ್ಮದ್ ರವರು ಜ್ಯೋತಿಯನ್ನು ಸ್ವಾಗತಿಸಿ, ರಾಜೀವ್‍ಗಾಂಧಿ ಸದ್ಭಾವನಾ ಜ್ಯೋತಿಯಾತ್ರೆ ಸಮಿತಿಗೆ ಅಭಿನಂದನೆ ಸಲ್ಲಿಸಿದರು. ಈ ವೇಳೆ ಡಾ.ರಫೀಕ್ ಅಹ್ಮದ್ ರವರು ಮಾತನಾಡಿ ರಾಜೀವ್ ಗಾಂಧಿಯವರ ವಿಚಾರಧಾರೆಗಳನ್ನು ಪಸರಿಸುವ ಉದ್ದೇಶದಿಂದ ಈ ಯಾತ್ರೆಯನ್ನು ಹಮ್ಮಿಕೊಳ್ಳಲಾಗುತ್ತಿದ್ದು ಸಂತಸದ ವಿಷಯ, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಈ ಜ್ಯೋತಿಯನ್ನು ಸ್ವಾಗತಿಸಿ ಈ ಯಾತ್ರೆ ಯಶಸ್ವಿಯಾಗಿ ಸಾಗಲಿ ಎಂದು ಶುಭ ಕೋರಿದರು. ಸಮಿತಿಯ ಕಾರ್ಯಾಧ್ಯಕ್ಷರಾದ…


ಮುಂದೆ ಓದಿ...

ತ್ಯಾಗಟೂರು ಗ್ರಾ.ಪಂ.ಅಧ್ಯಕ್ಷ ಸ್ಥಾನಕ್ಕೆ ಭೈರಮ್ಮ ಅವಿರೋಧ ಆಯ್ಕೆ


ಗುಬ್ಬಿ: ತಾಲ್ಲೂಕಿನ ನಿಟ್ಟೂರು ಹೋಬಳಿ ತ್ಯಾಗ ಟೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಭೈರಮ್ಮ ಈಶ್ವರಯ್ಯ ಅವಿರೋಧವಾಗಿ ಬುಧವಾರ ಆಯ್ಕೆಯಾದರು. ತ್ಯಾಗಟೂರು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಉಪ ತಹಸೀಲ್ದಾರ್ ಶ್ರೀನಿವಾಸ್ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಎಸ್.ಸಿ ಮೀಸಲಿನ ಅಧ್ಯಕ್ಷ ಸ್ಥಾನಕ್ಕೆ ಈ ಹಿಂದೆ ವಿಜಯ ಲಕ್ಷ್ಮಮ್ಮ ರಾಜೀನಾಮೆ ಸಲ್ಲಿಸಿದ ಹಿನ್ನಲೆ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ತ್ಯಾಗ ಟೂರು ಗ್ರಾಮ ಪಂಚಾಯಿತಿ ಸದಸ್ಯೆ ಭೈರಮ್ಮ ನಾಮಪತ್ರ ಸಲ್ಲಿಸಿದ್ದರು. ಏಕೈಕ ನಾಮಪತ್ರ ಹಿನ್ನಲೆ ಅಧ್ಯಕ್ಷ ಸ್ಥಾನ ಅವಿರೋಧ ಆಯ್ಕೆ ಎಂದು ಘೋಷಿಸಲಾಯಿತು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನೂತನ ಅಧ್ಯಕ್ಷ ಭೈರಮ್ಮ, ತಾಲ್ಲೂಕಿನ ಪ್ರಮುಖ ಗ್ರಾಮ ಪಂಚಾಯಿತಿ ಎನಿಸಿದ ತ್ಯಾಗ ಟೂರು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಸರ್ವ ಸದಸ್ಯರ ಸಹಕಾರ ಪಡೆಯಲಾಗುವುದು. ಈ ಜತೆಗೆ ಚುನಾಯಿತ ಜನಪ್ರತಿನಿಧಿಗಳ ಮೂಲಕ ಸರ್ಕಾರದಿಂದ ವಿಶೇಷ ಅನುದಾನ ತಂದು ಮೂಲಭೂತ ಸವಲತ್ತು…


ಮುಂದೆ ಓದಿ...

ದ್ವಿತೀಯ ಪಿ.ಯು.ಸಿ. ಪೂರಕ ಪರೀಕ್ಷೆ: ನಿಷೇಧಾಜ್ಞೆ ಜಾರಿ


ತುಮಕೂರು: ಜಿಲ್ಲೆಯಾದ್ಯಂತ 2022ನೇ ಸಾಲಿನ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯು 13 ಪರೀಕ್ಷಾ ಕೇಂದ್ರಗಳಲ್ಲಿ ಆಗಸ್ಟ್ 12, 2022ರಿಂದ ಆಗಸ್ಟ್ 25, 2022ರವರೆಗೆ (ಸರ್ಕಾರಿ ರಜೆಗಳನ್ನು ಹೊರತುಪಡಿಸಿ) ನಡೆಯಲಿದ್ದು, ಪರೀಕ್ಷೆಯು ಲೋಪದೋóಷವಿಲ್ಲದೆ ನಡೆಸಲು ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀ. ವ್ಯಾಪ್ತಿಯೊಳಗಿನ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಆದೇಶಿಸಿದ್ದಾರೆ. ನಿಷೇಧಾಜ್ಞೆಯು ಪರೀಕ್ಷೆ ನಡೆಯುವ ದಿನಗಳಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5.30 ಗಂಟೆಯವರೆಗೆ ಜಾರಿಯಲ್ಲಿರುತ್ತದೆ. ಪರೀಕ್ಷೆ ನಡೆಯುವ ದಿನಾಂಕಗಳಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಇರುವ eóÉರಾಕ್ಸ್ ಮತ್ತು ಬೆರಳಚ್ಚು ಕೇಂದ್ರಗಳನ್ನು ಮುಚ್ಚುವುದು, ನಿಷೇಧಾಜ್ಞೆಯು ಜಾರಿಯಲ್ಲಿರುವ ಅವಧಿಯಲ್ಲಿ ಅನಧಿಕೃತ ವ್ಯಕ್ತಿಗಳು ಯಾರೂ ನಿರ್ಬಂಧಿತ ಪ್ರದೇಶದೊಳಗೆ ಪ್ರವೇಶಿಸುವಂತಿಲ್ಲ ಹಾಗೂ ನಿಷೇಧಾಜ್ಞೆಯನ್ನು ಉಲ್ಲಂಘನೆ ಮಾಡಿದ ವ್ಯಕ್ತಿಗಳನ್ನು ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಜಿಲ್ಲಾ ಪೊಲೀಸ್ ಇಲಾಖೆಗೆ ಆದೇಶಿಸದ್ದಾರೆ. ಪರೀಕ್ಷೆಯ ಮುಖ್ಯ ಅಧೀಕ್ಷಕರಿಗೆ ಕ್ಯಾಮರಾ…


ಮುಂದೆ ಓದಿ...

ದೇಗುಲ ಅಭಿವೃದ್ಧಿಗೆ 2 ಲಕ್ಷ ನೀಡಿದ ಬಿ.ಸುರೇಶಗೌಡ


ತುಮಕೂರು: ಗ್ರಾಮಾಂತರ ಪನ್ನಸಂದ್ರ ಗ್ರಾಮದಲ್ಲಿ ನೂತನ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದ ಉದ್ಘಾಟನಾ ಸಮಾರಂಭ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಬಿ.ಸುರೇಶ್ ಗೌಡ ಭಾಗವಹಿಸಿ ದೇವಾಲಯದ ಅಭಿವೃದ್ಧಿಗೆ 2,00,000 ಲಕ್ಷ ಹಣವನ್ನು ವೈಯಕ್ತಿಕವಾಗಿ ನೀಡಿದರು. ಈ ಹಿಂದೆ ದೇವಾಲಯದ ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ 2,00,000 ಲಕ್ಷ ಹಣವನ್ನು ಸಹ ವೈಯಕ್ತಿಕವಾಗಿ ಗ್ರಾಮಸ್ಥರ ಸಮ್ಮುಖದಲ್ಲಿ ಈ ದೇವಾಲಯಕ್ಕೆ ಮಾನ್ಯ ಸುರೇಶ್ ಗೌಡರು ನೀಡಿರುತ್ತಾರೆ. ಅದೇ ರೀತಿ ಈ ಗ್ರಾಮಕ್ಕೆ ಶಾಸಕರಾಗಿದ್ದ ಸಂದರ್ಭದಲ್ಲಿ 40,00000 ಲಕ್ಷ ಸ್ವಂತ ಹಣದಿಂದ ಸಿ.ಸಿ ರಸ್ತೆ ಮತ್ತು ಚರಂಡಿಯನ್ನು ನಿರ್ಮಾಣ ಮಾಡಿಸಿ ಜನರ ಮನ ಗೆದ್ದ ಸುರೇಶ್ ಗೌಡರವರಿಗೆ ಗ್ರಾಮದಲ್ಲಿ ಅದ್ದೂರಿ ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ಹೊನ್ನುಡಿಕೆ ಜಿಲ್ಲಾ ಪಂಚಾಯಿತಿ ಬಿಜೆಪಿ ಮುಖಂಡರಾದ ಸಿದ್ದೇಗೌಡ್ರು, ಸುಮಿತ್ರಾ ಅಕ್ಕ, ಪಾಪಣ್ಣ, ಮಂಜಣ್ಣ, ಸುರೇಶ್, ಪ್ರಕಾಶ್, ಪಟೇಲರು ರಂಗಸ್ವಾಮಯ್ಯ, ಶ್ರೀನಿವಾಸ್, ಜಯಕ್ಕ ಗ್ರಾಮದ ಹಿರಿಯ ಮುಖಂಡರು,…


ಮುಂದೆ ಓದಿ...

ಜಂತು ನಿವಾರಣಾ ಮಾತ್ರೆ ಸೇವಿಸಿ: ಸಿಇಓ ಸಲಹೆ


ತುಮಕೂರು: ಎಲ್ಲಾ ಮಕ್ಕಳು ಜಂತು ನಿವಾರಣಾ ಮಾತ್ರೆಗಳನ್ನು ಸೇವಿಸುವಂತೆ ಹೆಚ್ಚಿನ ಜವಾಬ್ದಾರಿ ವಹಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ|| ಕೆ. ವಿದ್ಯಾಕುಮಾರಿ ತಿಳಿಸಿದರು. ಶಿರಾಗೇಟ್‍ನ ಅರಳಿಮರಪಾಳ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಇಂದು ‘ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲಾ ಮಕ್ಕಳು ಜಂತು ನಿವಾರಣಾ ಮಾತ್ರೆಗಳನ್ನು ಸೇವಿಸುವಂತೆ ಜವಾಬ್ದಾರಿ ವಹಿಸಬೇಕೆಂದು ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು ಹಾಗೂ ಸಾಂಕೇತಿಕವಾಗಿ ಮಕ್ಕಳಿಗೆ ಮಾತ್ರೆ ವಿತರಿಸಿ ಚೀಪಿ ಸೇವಿಸುವಂತೆ ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ 86 ಮಕ್ಕಳಿಗೆ ಜಂತು ಹುಳು ನಿವಾರಣಾ ಮಾತ್ರೆಯನ್ನು ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ||ಮಂಜುನಾಥ ಡಿ.ಎನ್. ರವರು ಮಾತನಾಡಿ, ಜಿಲ್ಲೆಯಲ್ಲಿ 1 ರಿಂದ 19 ವರ್ಷದೊಳಗಿನ…


ಮುಂದೆ ಓದಿ...

ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ನೀಡಲು ಜಿಲ್ಲಾಧಿಕಾರಿ ಸೂಚನೆ


ತುಮಕೂರು: ಕೇಂದ್ರ ಸರ್ಕಾರ ಬೀದಿಬದಿ ವ್ಯಾಪಾರಿಗಳಿಗೆಂದು ಕಲ್ಯಾಣ ಯೋಜನೆಗಳನ್ನು ರೂಪಿಸಿದ್ದು, ಅಧಿಕಾರಿಗಳು ಹೆಚ್ಚಿನ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಕಾರ್ಡುಗಳನ್ನು ವಿತರಿಸಿ ಸಾಲಸೌಲಭ್ಯ ಒದಗಿಸುವತ್ತ ಕಾರ್ಯಪ್ರವೃತ್ತರಾಗಬೇಕು ಎಂದು ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದರು. ರಸ್ತೆ ಬದಿಯಲ್ಲಿ, ಕೈಗಾಡಿಗಳಲ್ಲಿ ವ್ಯಾಪಾರ ಮಾಡಿ ತಮ್ಮ ಕುಟುಂಬವನ್ನು ನಿರ್ವಹಿಸುವ ವ್ಯಾಪಾರಿಗಳಿಗೆ ಸಹಾಯ ಮಾಡಲು ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ ಅರ್ಹರಿಗೆ ಸಾಲದ ವ್ಯವಸ್ಥೆ ಕಲ್ಪಿಸಬೇಕೆಂದು ತಿಳಿಸಿದರು. ತಮ್ಮ ಕಚೇರಿಯ ನ್ಯಾಯಾಲಯದ ಸಭಾಂಗಣದಲ್ಲಿಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಸಮಿತಿ ಸಭೆ ನಡೆಸಿ ಜೂನ್ 2022ರ ಅಂತ್ಯಕ್ಕೆ ಸಾಧಿಸಲಾದ ಕೌಶಲ್ಯ ಸಂಬಂಧಿತ ಇಲಾಖಾವಾರು ಕಾರ್ಯಕ್ರಮಗಳ ಪ್ರಗತಿ ವರದಿ ಪರಿಶೀಲಿಸಿ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಿ ದೀನ್ ದಯಾಳ್ ಉಪಾಧ್ಯಾಯ್ ಗ್ರಾಮೀಣ ಕೌಶಲ್ಯ ಯೋಜನೆ( ಡಿಡಿಯುಜಿಕೆವೈ) ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆ (ಸಿಎಂಕೆಕೆವೈ) ಪ್ರಧಾನಮಂತ್ರಿ ಕೌಶಲ್ಯ ವಿಕಾಸ್…


ಮುಂದೆ ಓದಿ...