ಕುಳುವ ನುಲಿಯ ಜಯಂತಿ ಮುಂದೂಡುವಂತೆ ಮನವಿ


ತುರುವೇಕೆರೆ: ಶರಣ ಕುಳುವ ನುಲಿಯ ಜಯಂತಿಯನ್ನ ಮುಂದೂಡುವಂತೆ ಒತ್ತಾಯಿಸಿ ತಹಶೀಲ್ದಾರ್ ಅವರಿಗೆ ಕುಳುವ ಸಮಾಜ ಮನವಿ ಸಲ್ಲಿಸಿತು. ಪಟ್ಟಣದ ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಶಾಂತಿಯುವಾಗಿ ತಾಲ್ಲೂಕು ಕಚೇರಿಗೆ ಆಗಮಿಸಿದ ಸಂಘದ ಪದಾದಿಕಾರಿಗಳಿ ತಾಲ್ಲೂಕು ಕಚೇರಿ ಆವರಣದಲ್ಲಿ ಶರಣ ನುಲಿಯ ಚಂದ್ರಯ್ಯನವರಿಗೆ ಜಯಕಾರ ಕೂಗುತ್ತಾ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ರವರ ಮಾತನಾಡಿ ದಿನಾಂಕ 12/08/22 ರಂದು ನೆಡೆಯಬೇಕಿದ್ದ ಶರಣ ಕುಳುವ ನುಲಿಯ ಚಂದಯ್ಯನವರ ಜಯಂತಿಯನ್ನು ನೂಲಿನ ಹುಣ್ಣಿಮೆಯ ದಿನದಂದು (ಆಗಸ್ಟ್ 12) ಸರ್ಕಾರಿ ರಜಾ ರಹಿತವಾಗಿ ಆಚರಿಸಲು ಸರ್ಕಾರ ಆದೇಶ ಹೊರಡಿಸಿದ್ದು, ಅದರಂತೆ 05/08/22 ರಂದು ತುಮಕೂರಿನಲ್ಲಿ ಪೂರ್ವ ಭಾವಿ ಸಭೆಯ ತೀರ್ಮಾನದಂತೆ ಜಿಲ್ಲಾ ಕೇಂದ್ರದಲ್ಲಿ ಅದ್ದೂರಿ ಜಯಂತಿ ಆಚರಣೆಗೆ (ಅಖಿಲ ಕರ್ನಾಟಕ ಕುಳುವ ಮಹಾಸಂಘ) ಜಿಲ್ಲಾ ಘಟಕ ಎಲ್ಲ ತಾಲ್ಲೂಕು ಘಟಕಗಳಿಗೆ ಕರೆಕೊಟ್ಟಿದ್ದು ಆದ್ದರಿಂದ ತಾಲ್ಲೂಕಿನಲ್ಲಿ ಜಯಂತಿ…


ಮುಂದೆ ಓದಿ...

ನಿತೀಶ್‍ಗೆ ರಾಜ್ಯ ಜೆಡಿಯು ಬೆಂಬಲ: ಮಹಿಮಾ ಪಟೇಲ್


ತುಮಕೂರು: ಕಳೆದ ಎರಡರ ದಶಕಗಳಿಂದ ಬಿಹಾರ ರಾಜ್ಯದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತಿರುವ ನಿತೀಶ್ ಕುಮಾರ್ ಅವರು ಬಿಜೆಪಿ ಸಖ್ಯ ತೊರೆದಿರುವುದಕ್ಕೆ ರಾಜ್ಯ ಜೆಡಿಯು ಬೆಂಬಲ ನೀಡಲಿದೆ ಎಂದು ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಮಹಿಮಾ ಪಟೇಲ್ ತಿಳಿಸಿದರು. ಇತ್ತಿಚೆಗೆ ಅಪಘಾತಕ್ಕೀಡಾಗಿ ಚೇತರಿಸಿಕೊಳ್ಳುತ್ತಿರುವ ಜೆಡಿಯು ಜಿಲ್ಲಾಧ್ಯಕ್ಷ ಕೆಜಿಎಲ್ ರವಿ ಅವರ ಮನೆಗೆ ಭೇಟಿ ಆರೋಗ್ಯ ವಿಚಾರಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಹಾರವನ್ನು ಮಾದರಿ ರಾಜ್ಯವನ್ನಾಗಿ ಪರಿವರ್ತಿಸುವಲ್ಲಿ, ಶೂನ್ಯ ಸಹಿಷ್ಣುತೆಯ ಮೂಲಕ ಸುಭದ್ರ ಆಡಳಿತವನ್ನು ನೀಡುತ್ತಿರುವ ಮುಂದಿನ ಪ್ರಧಾನಮಂತ್ರಿ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ನಿತೇಶ್ ಕುಮಾರ್ ಪಕ್ಷಕ್ಕೆ ಆಗಿರುವ ಅವಮಾನವನ್ನು ವಿರೋಧಿಸಿ ಸಖ್ಯವನ್ನು ತೊರೆದುಕೊಂಡಿರುವುದು ಉತ್ತಮ ಬೆಳವಣಿಗೆ ಎಂದರು. ನಿತೇಶ್‍ಕುಮಾರ್ ಅವರ ನಡೆಯನ್ನು ಖಂಡಿಸಿ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿರುವ ಕೇಂದ್ರ ಸಚಿವ ಆರ್.ಸಿ.ಪಿ.ಸಿಂಗ್ ಅವರು ರಾಜಕೀಯ ದುರುದ್ದೇಶದಿಂದ ಪಕ್ಷದ ಬಗ್ಗೆ ಹಾಗೂ ನಾಯಕರುಗಳ ಬಗ್ಗೆ ಅನುಚಿತ ಮಾತನಾಡುತ್ತಿರುವುದು…


ಮುಂದೆ ಓದಿ...

ವ್ಯಕ್ತಿ ಕಾಣೆ!


ತುಮಕೂರು: ತುಮಕೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸುಮಾರು 48 ವರ್ಷದ ರಮೇಶ್ ಎಂಬ ವ್ಯಕ್ತಿಯು ಕಾಣೆಯಾಗಿದ್ದಾನೆ ಎಂದು ಪತ್ನಿ ಪುಟ್ಟಮ್ಮ ಆಗಸ್ಟ್ 4 ರಂದು ಠಾಣೆಗೆ ದೂರು ನೀಡಿದ್ದಾಳೆ. ಕಾಣೆಯಾದ ವ್ಯಕ್ತಿಯು ಅನಾರೋಗ್ಯದಿಂದ ಆರೋಗ್ಯದಲ್ಲಿ ಏರುಪೇರಾಗಿ ಬುದ್ದಿ ಕಡಿಮೆಯಾಗಿತ್ತು ಎಂದು ದೂರಿನಲ್ಲಿ ದಾಖಲಾಗಿದೆ. ಈತನು 5.6 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಕಾಣೆಯಾದ ಸಂದರ್ಭದಲ್ಲಿ ತಿಳಿ ನೀಲಿ ಬಣ್ಣದ ಚಡ್ಡಿ, ಬಿಳಿ ಅಂಗಿ ಧರಿಸಿದ್ದನು. ಈತನ ಬಗ್ಗೆ ಸುಳಿವು ಸಿಕ್ಕವರು ಮೊ.ಸಂ. 9480802900/ 30/ 45ನ್ನು ಸಂಪರ್ಕಿಸಬಹುದಾಗಿದೆ.


ಮುಂದೆ ಓದಿ...

ಆ.13: ರಾಷ್ಟ್ರೀಯ ಲೋಕ್ ಅದಾಲತ್


ತುಮಕೂರು: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಆಗಸ್ಟ್ 13ರಂದು ರಾಷ್ಟ್ರೀಯ ಲೋಕ್ ಅದಾಲತ್ (ಜನತಾ ನ್ಯಾಯಾಲಯ) ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ತಿಳಿಸಿದ್ದಾರೆ. “ಸರ್ವರಿಗೂ ನ್ಯಾಯ” ಎಂಬುದು ಭಾರತದ ಕಾನೂನು ಸೇವೆಗಳ ಧ್ಯೇಯವಾಗಿದೆ. ಯಾವೊಬ್ಬ ಪ್ರಜೆಯು ತನ್ನ ಅರ್ಥಿಕ ಅಥವಾ ಇತರೆ ದೌರ್ಬಲ್ಯಗಳ ಕಾರಣಗಳಿಂದಾಗಿ ನ್ಯಾಯ ಪಡೆಯುವುದರಿಂದ ವಂಚಿತನಾಗಬಾರದೆಂದು, ಉಚಿತ ಮತ್ತು ಸಕ್ಷಮ ಕಾನೂನು ಸೇವೆಗಳನ್ನು ಸಮಾಜದ ದುರ್ಬಲ ವರ್ಗಗಳಿಗೆ ಒದಗಿಸುವ ಸಲುವಾಗಿ ಜನತಾ ನ್ಯಾಯಾಲಯಗಳನ್ನು ವ್ಯವಸ್ಥೆಗೊಳಿಸಲು ಹಾಗೂ ಸಮಾನ ಅವಕಾಶಗಳ ಆಧಾರದ ಮೇಲೆ ನ್ಯಾಯಾಂಗ ವ್ಯವಸ್ಥೆ ಕಾರ್ಯ ನಿರ್ವಹಿಸಿ ನ್ಯಾಂiÀi ಒದಗಿಸುವಂತೆ ಮಾಡುವ ಶ್ರೇಷ್ಠ ಉದ್ದೇಶದಿಂದ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸ್ಥಾಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜನಸಾಮಾನ್ಯರಿಗೆ ಅತೀ ತ್ವರಿತ ಹಾಗೂ ವೆಚ್ಚವಿಲ್ಲದೆ ರಾಜೀ ಸಂಧಾನದ ಮೂಲಕ ವ್ಯಾಜ್ಯ ಇತ್ಯರ್ಥಗೊಳಿಸಿ ನ್ಯಾಯ ದೊರಕಿಸಲು ಆಗಸ್ಟ್ 13ರಂದು ರಾಷ್ಟ್ರೀಯ ಲೋಕ್ ಅದಾಲತ್…


ಮುಂದೆ ಓದಿ...

ಆಗಸ್ಟ್ 12 ರಿಂದ 15ರವರೆಗೆ ರೈಫಲ್ ಚಾಂಪಿಯನ್ ಶಿಫ್


ತುಮಕೂರು: ನಗರದ ವಿವೇಕಾನಂದ ಸ್ಟೋಟ್ರ್ಸ ಮತ್ತು ಕಲ್ಚರಲ್ ಅಸೋಸಿಯೇಷನ್(ರಿ), ಕರ್ನಾಟಕ ರಾಜ್ಯ ರೈಫಲ್ ಅಸೋಸಿಯೇಷನ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಆಗಸ್ಟ್ 12 ರಿಂದ 15ರವರೆಗೆ ರಾಷ್ಟ್ರಮಟ್ಟದ ಮುಕ್ತ ಆಹ್ವಾನಿತ 10 ಮೀಟರ್ ರೈಫಲ್ ಚಾಂಪಿಯನ್ ಶಿಫ್ ಪಂದ್ಯಾವಳಿಯನ್ನು ಆಯೋಜಿಸಿ ರುವುದಾಗಿ ವಿವೇಕಾನಂದ ಸ್ಪೋಟ್ರ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್‍ನ ಕಾರ್ಯದರ್ಶಿ ಅನಿಲ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರಮಟ್ಟದ ಮುಕ್ತ ಅಹ್ವಾನಿತ ಈ ಪಂದ್ಯಾವಳಿಯಲ್ಲಿ ಒಲಂಪಿಕ್ ಪದಕ ವಿಜೇತ ಪ್ರಕಾಶ್ ನಂಜಪ್ಪ ಸೇರಿದಂತೆ 450ಕ್ಕು ಹೆಚ್ಚು ಜನ ಶೂಟರ್ಸ್‍ಗಳು ಭಾಗವಹಿಸುತಿದ್ದು, ಸಬ್ ಜೂನಿಯರ್, ಜೂನಿಯರ್, 14 ವರ್ಷದೊಳಗಿನ ಹಾಗೂ ಸಿವಿಲ್ ಈ ನಾಲ್ಕು ವರ್ಗಗಳಲ್ಲಿ,ಓಪನ್ ಸೈಟ್, ಪಿಫ್‍ಸೈಟ್ ಹಾಗೂ ಪಿಸ್ತೂಲ್ ವಿಭಾಗಗಳಲ್ಲಿ ಶೂಟಿಂಗ್ ಸ್ಪರ್ಧೆ ನಡೆಯಲಿದೆ.ಪದಕ ವಿಜೇತರಿಗೆ ಗರಿಷ್ಠ 30 ಸಾವಿರದಂತೆ ಒಟ್ಟು 5.12 ಲಕ್ಷ ರೂಗಳ ನಗದು ಬಹುಮಾನ ಹಾಗೂ ಮೆಡಲ್‍ಗಳನ್ನು…


ಮುಂದೆ ಓದಿ...

ಕಾರ್ಮಿಕರು, ರೈತರು ದೇಶದ ಸ್ವಾತಂತ್ರಕ್ಕಾಗಿ ದುಡಿದವರು


ತುಮಕೂರು: ಭಾರತದ 75ನೇ ಸ್ವಾತಂತ್ರ್ಯೋತ್ಸವದ ಹಾದಿಯಲ್ಲಿ ಸ್ವಾತಂತ್ರ ರಕ್ಷಣೆ-ನಮ್ಮೆಲ್ಲರ ಹೊಣೆ ಸಂವಾದ ಕಾರ್ಯಕ್ರಮವನ್ನು ಭಾರತ ಕಮ್ಯೂನಿಷ್ಟ ಪಕ್ಷ ಜನಚಳವಳಿಯಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಡಾ. ಹೆಚ್.ಎಸ್ ನಿರಂಜನರಾಧ್ಯ ಮಾತನಾಡುತ್ತಾ ಬ್ರಿಟಿಷರು 200 ವರ್ಷಗಲ ಕಾಲ ಆಡಳಿತ ನಡೆಸಿ ನಮ್ಮ ದೇಶದ ಆಸ್ತಿ, ಸಂಪತ್ತು ಮತ್ತು ನೈಸರ್ಗಿಕ ಸಂಪತ್ತುಗಳನ್ನು ಲೂಟಿ ಒಡೆದುಕೊಂಡು ಹೋದರು. ಆದರೆ ಸ್ವಾತಂತ್ರ ಬಂದ 75 ವರ್ಷಗಳಲ್ಲಿ ನಾವು ಆರ್ಥಿಕವಾಗಿ ಸದೃಢವಾಗಲು ಕಾರಣವಾದುದ್ದು ನಮ್ಮ ದೇಶದ ಜನರ ತೆರಿಗೆಯಿಂದ ಕಟ್ಟಿದ ಸಾರ್ವಜನಿಕ ಉದ್ಯಮಗಳು ಅವುಗಳನ್ನು ಈ ಸರ್ಕಾರ ಬಿಕ್ಕಟಿಗೆ ದೂಡಿ ಕಾರ್ಪೋರೇಟ್ ಕಂಪನಿಗಳಿಗೆ ಕಡಿಮೆ ಬೆಲೆಗೆ ಕೇಂದ್ರ ಸರ್ಕಾರ ದಾರೆ ಎರೆಯುತ್ತಿವೆ ಎಂದರು. ಅವರು ಮುಂದುವರೆದು ಮಾತನಾಡುತ್ತಾ ದೇಶದ ಸ್ವಾತಂತ್ರಕ್ಕಾಗಿ ನಿಜವಾಗಿ ಹೋರಾಡಿದವರು ಕಮ್ಯೂನಿಷ್ಟರ ನೇತೃತ್ವದಲ್ಲಿ ಕಾರ್ಮಿಕರು ಮತ್ತು ರೈತರು ಕಾಂಗ್ರೆಸ್ ಕೂಡ ಸ್ವಾತಂತ್ರ ಚಳವಳಿಯಲ್ಲಿ ಕೇವಲ ಡೊಮಿಯನ್ ಸ್ಟೇಟಸ್ ಗಾಗಿ ಬೇಡಿಕೆ ಸಲ್ಲಿಸಿದಾಗ ಮೊದಲಬಾರಿಗೆ…


ಮುಂದೆ ಓದಿ...

ಸ್ವಾತಂತ್ರ ಚಳವಳಿಯನ್ನು ಯುವಜನರಿಗೆ ತಿಳಿಸಲು ಕಾಂಗ್ರೆಸ್ ಪಾದಯಾತ್ರೆ


ತುಮಕೂರು: ಸ್ವಾತಂತ್ರ ಚಳವಳಿಯಲ್ಲಿ ಕಾಂಗ್ರೆಸ್ ಪಕ್ಷ ವಹಿಸಿದ್ದ ಪಾತ್ರವನ್ನು ಇಂದಿನ ಯುವಜನರಿಗೆ ತಿಳಿಸುವ ನಿಟ್ಟಿನಲ್ಲಿ ಎಐಸಿಸಿ ಮತ್ತು ಕೆಪಿಸಿಸಿಯ ನಿರ್ದೇಶನದಂತೆ ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರೀಡಂ ಮಾರ್ಚ್ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಡಾ.ರಫೀಕ್ ಅಹಮದ್ ತಿಳಿಸಿದ್ದಾರೆ. ನಗರದ ಬೋರೇಗೌಡನ ಪಾಳ್ಯ ಸರ್ಕಲ್ (ಬಿ.ಜಿ.ಪಾಳ್ಯ ಸರ್ಕಲ್)ನಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪಾದಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬ್ರಿಟಿಷರನ್ನು ಭಾರತದಿಂದ ತೊಲಗಿಸಬೇಕು ಎಂಬ ಉದ್ದೇಶದಿಂದ 1885ರಲ್ಲಿ ಉದಯಿಸಿದ ಕಾಂಗ್ರೆಸ್ ಪಕ್ಷ, 1947ರವರೆಗೆ ನಿರಂತರವಾಗಿ ಹಲವಾರು ಹೋರಾಟ, ಸತ್ಯಾಗ್ರಹಗಳಲ್ಲಿ ಪಾಲ್ಗೊಂಡ ಪರಿಣಾಮ ದೇಶ ಬ್ರಿಟಿಷರ ಕಪಿ ಮುಷ್ಠಿಯಿಂದ ಹೊರಬರಲು ಸಾಧ್ಯವಾಯಿತು. ಈ ವಿಚಾರ ಇಂದಿನ ಯುವಜನತೆಗೆ ಅಷ್ಟಾಗಿ ತಿಳಿದಿಲ್ಲ.ಹಾಗಾಗಿ ಬಿಜೆಪಿ ಪಕ್ಷದ ಸುಳ್ಳು ಭರವಸೆಗಳ ಮತ ನೀಡಿ ಪರಿತಪಿಸುತ್ತಿರುವ ಯುವಜನತೆಗೆ ಸ್ವಾತಂತ್ರ ಹೋರಾಟದ ವಿವಿಧ ಮಜುಲುಗಳನ್ನು ಪರಿಚಯಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಜನರ ತೆಗೆದುಕೊಂಡು ಹೋಗುವ…


ಮುಂದೆ ಓದಿ...

ರಾಜೀವ್ ಜ್ಯೋತಿ ಸದ್ಭಾವನಾ ಯಾತ್ರೆಗೆ ಅದ್ಧೂರಿ ಸ್ವಾಗತ


ತುಮಕೂರು: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 78ನೇ ಜನ್ಮದಿನ ನಿಮಿತ್ತ ರಾಜೀವ್ ಗಾಂಧಿ ಜ್ಯೋತಿ ಯಾತ್ರಾ ಸಮಿತಿ ಮತ್ತು ಕೆಪಿಸಿಸಿ ಕಾರ್ಮಿಕ ವಿಭಾಗದಿಂದ ಹಮ್ಮಿಕೊಂಡಿರುವ ರಾಜೀವ್ ಜ್ಯೋತಿ ಸದ್ಭಾವನಾ ಯಾತ್ರೆಗೆ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ ಅದ್ಧೂರಿ ಸ್ವಾಗತ ಕೋರಿದರು. ಪೆರಂಬದೂರಿನಿಂದ ಹೊಸದಿಲ್ಲಿಯ ವೀರಭೂಮಿಯವರೆಗೆ ದೇಶದ ವಿವಿಧ ರಾಜ್ಯಗಳಲ್ಲಿ ಸಂಚರಿಸಲಿರುವ ಈ ಯಾತ್ರೆ ಬುಧವಾರ ಜಿಲ್ಲೆಗೆ ಆಗಮಿಸಿತು. ಪೆರಂಬದೂರ್‍ನಿಂದ ಬೆಂಗಳೂರಿಗೆ ಆಗಮಿಸಿದ ಈ ಜ್ಯೋತಿಯಾತ್ರೆಗೆ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‍ನ ಎಲ್ಲಾ ನಾಯಕರು ಚಾಲನೆ ನೀಡಿದ್ದು, ಇಂದು ತುಮಕೂರಿಗೆ ಆಗಮಿಸಿದೆ. ರಾಜೀವ್ ಜ್ಯೋತಿ ಸದ್ಭಾವನಾ ಯಾತ್ರೆಗೆ ಅದ್ದೂರಿ ಸ್ವಾಗತ ಕೋರಿ ಮಾತನಾಡಿದ ಮುರಳೀಧರ ಹಾಲಪ್ಪ ಅವರು, ರಾಜೀವ್‍ಗಾಂಧಿಯವರ 78ನೇ ಜನ್ಮದಿನದಂದು ನಾವು ನಮ್ಮ ರಾಜೀವ್ ಜ್ಯೋತಿ ಸದ್ಭಾವನಾ ಯಾತ್ರೆಯನ್ನು ನಡೆಸುತ್ತಿದ್ದೇವೆ…


ಮುಂದೆ ಓದಿ...

ಸೆಪ್ಟೆಂಬರ್‍ಗೆ ರಾಷ್ಟ್ರದಲ್ಲಿ ಹೊಸ ರಾಜಕೀಯ ಪಕ್ಷ ಉದಯ


ತುಮಕೂರು: ದಲಿತರನ್ನು ಕೇವಲ ಮತಬ್ಯಾಂಕುಗಳಾಗಿ ಮಾಡಿಕೊಂಡಿರುವ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಕ್ಕೆ ಪರ್ಯಾಯವಾಗಿ ದಲಿತರು, ಹಿಂದುಳಿದವರ್ಗದವರು, ಮುಸ್ಲಿಂರು ಹಾಗೂ ಬಡವರು ಸೇರಿ ಹೊಸ ರಾಜಕೀಯ ಪಕ್ಷವನ್ನು ಹುಟ್ಟು ಹಾಕುತ್ತಿದ್ದು, 2022ರ ಸೆಪ್ಟಂಬರ್ 14 ರಂದು ಬಡವರ, ಶ್ರಮಿಕರ ಪಕ್ಷ ರಾಷ್ಟ್ರದಲ್ಲಿ ಉದಯವಾಗಲಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಡಾ.ಎನ್.ಮೂರ್ತಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕಳೆದ 75 ವರ್ಷಗಳ ಕಾಲ ಅಧಿಕಾರ ನಡೆಸಿದ ನಡೆಸಿದ ಕಾಂಗ್ರೆಸ್ ಹಾಗೂ ಕಾಂಗ್ರೆಸೇತರ ಪಕ್ಷಗಳು ಈ ದೇಶದ ದಲಿತರನ್ನು ಅತ್ಯಂತ ನಿಕೃಷ್ಟವಾಗಿ ಕಂಡಿದೆ. ಬಡತನ, ನಿರುದ್ಯೋಗ, ಅಸ್ಪøಷ್ಯತೆ, ದಲಿತರ ಮೇಲಿನ ದೌರ್ಜನ್ಯ ಇಂದಿಗೂ ನಿಂತಿಲ್ಲ.ದಲಿತರ ಪಾಲಿಗೆ ಬದಲಾವಣೆ ಎಂಬುದು ಮರೀಚಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಕರ್ನಾಟಕ ದಲಿತ ಸಂಘರ್ಷ ಸಮಿತಿ,ರಾಜ್ಯದ ವಿವಿಧ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರೊಂದಿಗೆ ನಿರಂತರ ಚರ್ಚೆ ನಡೆಸಿ, ಒಂದು ರಾಜಕೀಯ…


ಮುಂದೆ ಓದಿ...

ಆರ್.ಟಿ.ಐ ಕಾರ್ಯಕರ್ತನ ಕೊಲೆ: ಇಬ್ಬರ ಬಂಧನ!


ತುರುವೇಕೆರೆ: ತಾಲೂಕಿನ ಬೀಚನಹಳ್ಳಿಯ ಆರ್.ಟಿ.ಐ ಕಾರ್ಯಕರ್ತ ಕಿರಣ್‍ಕುಮಾರ್ ಕೊಲೆ ಆರೋಪದ ಮೇಲೆ ಶಂಕಿತ ಇಬ್ಬರು ಆರೋಪಿಗಳನ್ನು ಪೋಲಿಸರು ಬಂದಿಸುವಲ್ಲಿ ಯಶ್ವಸ್ವಿಯಾಗಿದ್ಧಾರೆ. ಮೇ 13 ರಂದು ಬೀಚನಹಳ್ಳಿಯ ಕಿರಣ್ ಕುಮಾರ್ (50) ಹೃದಯಾಘಾತದಿಂದ ನಿಧನರಾಗಿದ್ದಾರೆಂದು ಶವವನ್ನು ಸಮಾಧಿ ಮಾಡಲಾಗಿತ್ತು. ಆದರೆ ಕಿರಣ್ ಕುಮಾರ್ ರವರ ಸಾವಿನಲ್ಲಿ ಅನುಮಾನವಿದೆ ಎಂದು ಕಿರಣ್‍ಕುಮಾರ್ ತಮ್ಮನ ಮಗ ವೈಭವ್ ಅನುಮಾನ ವ್ಯಕ್ತಪಡಿಸಿ ದಲಿತ ಸಂಘರ್ಷ ಸಮಿತಿ ತಾಲೂಕು ಘಟಕದ ಅಧ್ಯಕ್ಷ ಕುಣಿಕೇನಹಳ್ಳಿ ಜಗದೀಶ್ ಬಳಿ ತನ್ನ ನೋವನ್ನು ತೋಡಿಕೊಂಡಿದ್ದ ಅದರಂತೆ ಸಂಘಟನೆಯ ಸಹಾಯ ಪಡೆದು ತಮ್ಮನ ಮಗ ವೈಭವ್ ಜುಲೈ 4 ರಂದು ಪೋಲಿಸರಿಗೆ ದೂರು ನೀಡಿದ್ದರ ಹಿನ್ನೆಲೆಯಲ್ಲಿ ಜುಲೈ 26 ರಂದು ಉಪವಿಭಾಗಾಧಿಕಾರಿ ಸಿ.ಆರ್.ಕಲ್ಪಶ್ರೀ ಸಮ್ಮುಖದಲ್ಲಿ ಕಿರಣ್‍ಕುಮಾರ್ ಶವವನ್ನು ಸಮಾಧಿಯಿಂದ ಹೊರತೆಗೆದು ಮರಣೊತ್ತರ ಪರೀಕ್ಷೆ ನಡೆಸಿ ಕೆಲವು ದೇಹದ ಅಂಗಾಂಗಗಳನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿತ್ತು. ವೈದ್ಯರ ಮರಣೋತ್ತರ ವರದಿಯನ್ವಯ ಕಿರಣ್…


ಮುಂದೆ ಓದಿ...