ಮಧುಗಿರಿ : 4 ತಿಂಗಳ ಮಗು ಸೇರಿ ನಾಲ್ವರಿಗೆ ಕೊರೊನಾ!!

ಮಧುಗಿರಿ :

      ತಾಲ್ಲೂಕಿನಲ್ಲಿ ಕರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಇಂದು ಕೂಡ ನಾಲ್ಕು ಕೋವಿಡ್ ಸೋಂಕಿತ ಪ್ರಕರಣಗಳು ದಾಖಲಾಗಿದ್ದು ನಾಲ್ಕು ತಿಂಗಳ ಮಗುವಿಗೂ ಕೂಡ ಕರೋನಾ ವೈರಸ್ ಸೋಂಕು ತಗಲಿದೆ.

      ತಾಲ್ಲೂಕಿನ ಇಂದಿರಾ ಗ್ರಾಮದಲ್ಲಿದ್ದ ತಮಿಳುನಾಡಿನಿಂದ ಆಗಮಿಸಿದ್ದ ಕುಟುಂಬವನ್ನು ಕ್ವಾರಂಟೈನ್ ಮಾಡಲಾಗಿತ್ತು .ಈ ಕುಟುಂಬದ ನಾಲ್ಕು ತಿಂಗಳ ಮಗುವಿಗೆ ಸೋಂಕು ದೃಢಪಟ್ಟಿದೆ. ಕೆರೆಗಳಪಾಳ್ಯದ ಮೂವತ್ತಾರು ವರ್ಷ ವಯಸ್ಸಿನ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ .ಕಡಗತ್ತೂರು ಗ್ರಾಮದಲ್ಲಿ ಸೌದಿ ಅರೇಬಿಯದಿಂದ ಆಗಮಿಸಿದಂತ ವ್ಯಕ್ತಿಗೆ ಸೋಂಕು ಧೃಢವಾಗಿದ್ದು.‌ ಐ.ಡಿ.ಹಳ್ಳಿ ಹೋಬಳಿಯ ಗೂಲಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಕರೋನಾ ಸೋಂಕು ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ.ಇದರಲ್ಲಿ ಕೆರೆಗಳ ಪಾಳ್ಯ ವ್ಯಕ್ತಿಯ ಪ್ರವಾಸ ಮಾಹಿತಿ ತಿಳಿದುಬಂದಿರುವುದಿಲ್ಲ. ಉಳಿದ ಮೂರು ಪ್ರಕರಣಗಳ ಸೋಂಕಿತರನ್ನು ಕ್ವಾರಂಟೈನ್ ಮಾಡಲಾಗಿತ್ತು.

(Visited 6 times, 1 visits today)

Related posts