Author: admin

ಹುಬ್ಬಳ್ಳಿ : RSS ಚಡ್ಡಿ ಸುಡುತ್ತೇವೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, RSS ಕಳೆದ 75 ವರ್ಷಗಳಿಂದ ಜನರ ಸೇವೆ ಮಾಡಿಕೊಂಡು ಬರುತ್ತಿದೆ. ಜನರು ಸಂಕಷ್ಟದಲ್ಲಿದ್ದಾಗ RSS ಸಹಾಯ ಮಾಡಿದೆ. ಹೀಗಾಗಿ ಕಾಂಗ್ರೆಸ್ ಜನರನ್ನು ತಪ್ಪು ದಾರಿಗೆ ಎಳೆಯಲು ಯತ್ನಿಸುತ್ತಿದೆ. ಸಿದ್ದರಾಮಯ್ಯ ಆರ್ ಎಸ್ಎಸ್ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಹೀಗೇ ಮಾಡಿಯೇ ಕಾಂಗ್ರೆಸ್ ಎಲ್ಲೆಡೆ ಅಧಿಕಾರ ಕಳೆದುಕೊಳ್ಳುತ್ತಿದೆ ಎಂದು ಹೇಳಿದ್ದಾರೆ. ಪಠ್ಯ ಕೇಸರೀಕರಣ ವಿರೋಧಿಸಿ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಮನೆ ಮುಂದೆ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಕ್ಕೆ ಅವರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. ಪ್ರತಿಭಟನೆ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಲಾಗಿದೆ. ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಆರ್ ಎಸ್ಎಸ್ ಚಡ್ಡಿ ಸುಡುವ ಅಭಿಯಾನ ಕೈಗೊಳ್ಳಲಾಗುವುದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು.

Read More

ತುಮಕೂರು: ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಕಲಿಸುವ ಪಠ್ಯಪುಸ್ತಕದಿಂದ ಈ ದೇಶದ ಬದಲಾವಣೆಗೆ ಶ್ರಮಿಸಿದ ದಾರ್ಶಾನಿಕರನನ್ನು ಕೈಬಿಟ್ಟು, ಆರ್.ಎಸ್.ಎಸ್. ಪ್ರೇರಿತ ಲೇಖಕರರ ಬರಹಗಳಿಗೆ ಅದ್ಯತೆ ನೀಡಿ, ಕನ್ನಡಿಗರಿಗೆ ನೋವುಂಟು ಮಾಡಿರುವ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥನನ್ನು ವಜಾಗೊಳಿಸಬೇಕು ಹಾಗೂ ಇಷ್ಟೆಲ್ಲಾ ಗೊಂದಲಗಳಿಗೆ ಕಾರಣರಾದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರನ್ನು ಸಂಪುಟದಿಂದ ಕೈಬಿಡಬೇಕೆಂದು ಭಾರತೀಯ ಶರಣ ಸೇನಾ ಕರ್ನಾಟಕದ ರಾಜ್ಯ ಸಂಚಾಲಕ ರಾಯಸಂದ್ರ ರವಿಕುಮಾರ್ ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,2022-23ನೇ ಸಾಲಿನ ಪಠ್ಯಪುಸ್ತಕಗಳಲ್ಲಿ ಹಲವಾರು ಲೋಪದೋಷಗಳನ್ನು ಈ ಸಮಿತಿ ಮಾಡಿದೆ.ಆರ್ಹತೆ ಮತ್ತು ಅನುಭವ ಎರಡು ಇಲ್ಲದ, ಕೇವಲ ಟೂಷನ್ ಸೆಂಟರನ ಮಾಲೀಕನನ್ನು ತಂದು ಪಠ್ಯಪುಸ್ತಕ ಪರಿಷ್ಕರಣೆ ಮಾಡಿಸುವ ಮೂಲಕ ಬಿಜೆಪಿ ಸರಕಾರ ಆರ್.ಎಸ್.ಎಸ್. ಅಣತಿಯಂತೆ ನಡೆದುಕೊಳ್ಳುತ್ತಿದೆ. ಇದು ಖಂಡನೀಯ. ಕೂಡಲೇ ಪಠ್ಯಪುಸ್ತಕಗಳಲ್ಲಿನ ಲೋಪದೋಷಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು. ಪಠ್ಯಪುಸ್ತಕದಲ್ಲಿ ಈ ನಾಡಿನ ಸಾಕ್ಷಿ ಪ್ರಜ್ಞೆಗಳಾದ ಬಸವಣ್ಣ, ರಾಷ್ಟ್ರಕವಿ ಕುವೆಂಪು, ಭಗತ್‍ಸಿಂಗ್, ನಾರಾಯಣಗುರು, ಪೆರಿಯಾರ್ ರಾಮುಸ್ವಾಮಿ, ಮಹಿಳಾ ಸಮಾಜ ಸುಧಾರಕರಾದ…

Read More

ತುಮಕೂರು  :       ವಿಧಾನ ಪರಿಷತ್ ಚುನಾವಣೆಯ ಮತದಾನದ ದಿನ ಸನ್ನಿಹಿತವಾಗುತ್ತಿದ್ದಂತೆ ಮೂರೂ ಪಕ್ಷಗಳಲ್ಲಿ ಚುನಾವಣೆ ರಂಗೇರುತ್ತಿದೆ. ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ಗೆಲ್ಲುವ ತರಾತುರಿಯಲ್ಲಿದ್ದಾರೆ. ಆದರೆ, ಮತದಾರನ ಒಲವು ಯಾರೆಡೆ ಇದೆ ಎಂಬುದು ಇನ್ನೂ ಗೌಪ್ಯವಾಗೇ ಉಳಿಯುತ್ತದೆ.       5559 ಮತದಾರರನ್ನ ಹೊಂದಿದ್ದ ಈ ಕ್ಷೇತ್ರದಲ್ಲಿ 2623 ಪುರುಷ ಮತದಾರರು, 2936 ಮಹಿಳಾ ಮತದಾರರಿದ್ದಾರೆ.        328 ಗ್ರಾಮ ಪಂಚಾಯ್ತಿ, 1ಪಾಲಿಕೆ, 4 ಪುರಸಭೆ ಹಾಗೂ 4 ಪಟ್ಟಣ ಪಂಚಾಯ್ತಿಗಳನ್ನು ಹೊಂದಿದೆ.      ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮಾಜಿ ಶಾಸಕ ಕೆ.ಎನ್.ರಾಜಣ್ಣರ ಪುತ್ರ ಆರ್.ರಾಜೇಂದ್ರ ಕಣದಲ್ಲಿದ್ದರೆ, ಹಾಗಲವಾಡಿ ಜಿ.ಪಂ.ಸದಸ್ಯನ ಪುತ್ರ ಮಾಜಿ ಕೆಎಎಸ್ ಅಧಿಕಾರಿ ಅನಿಲ್ ಕುಮಾರ್ ಜೆಡಿಎಸ್ ಪಕ್ಷದಿಂದ ಕಣಕ್ಕಿಳಿದರೆ,      ಬೆಂಗಳೂರಿನ ಕಾರ್ಪೋರೇಟರ್ ಲೋಕೇಶ್ ಗೌಡ ಬಿಜೆಪಿಯಿಂದ ಸ್ಪರ್ಧೆಗಿಳಿದಿದ್ದಾರೆ. ಮೂರೂ ಪಕ್ಷಗಳಲ್ಲಿ 3 ಅಭ್ಯರ್ಥಿಗಳು ಕೋಟ್ಯಾಧೀಶ್ವರರು, 3 ಅಭ್ಯರ್ಥಿಗಳಿಗೆ ಜನಾಭಿಪ್ರಾಯಕ್ಕಿಂತ ಹಣಬಲ ಪ್ರದರ್ಶನವೇ ಮಂದಾಗಿದೆ.…

Read More