ತುಮಕೂರು : ಸುಸೂತ್ರವಾಗಿ ನಡೆದ ಸಿಇಟಿ ಪರೀಕ್ಷೆ!!

ತುಮಕೂರು :       ಜಿಲ್ಲೆಯ ತುಮಕೂರು ನಗರದ 13 ಹಾಗೂ ತಾಲ್ಲೂಕು ಕೇಂದ್ರಗಳ 8 ಸೇರಿದಂತೆ ಒಟ್ಟು 21 ಪರೀಕ್ಷಾ ಕೇಂದ್ರಗಳಲ್ಲಿ ಇಂದು ನಡೆದ ಸಿಇಟಿ ಪರೀಕ್ಷೆಯು ಶಾಂತಿಯುತವಾಗಿ ಹಾಗೂ ಸುಸೂತ್ರವಾಗಿ ನಡೆದಿದೆ.       ಇಂದು ಬೆಳಿಗ್ಗೆ ನಡೆದ ಭೌತಶಾಸ್ತ್ರ ವಿಷಯದ ಪರೀಕ್ಷೆಗೆ 7166 ವಿದ್ಯಾರ್ಥಿಗಳು ಹಾಜರಾಗಿದ್ದು, 805 ಮಂದಿ ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು.       ಮಧ್ಯಾಹ್ನ ನಡೆದ ರಸಾಯನಶಾಸ್ತ್ರ ಪರೀಕ್ಷೆಗೆ 7164 ವಿದ್ಯಾರ್ಥಿಗಳು ಹಾಜರಾಗಿದ್ದು, 807 ಮಂದಿ ವಿದ್ಯಾರ್ಥಿಗಳು ಗೈರಾಗಿರುತ್ತಾರೆ, ಪರಿಕ್ಷೆಯು ಜಿಲೆಯಲ್ಲಿ ಶಾಂತಿಯುತವಾಗಿ ನಡೆದಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಹೆಚ್.ಕೆ. ನರಸಿಂಹಮೂರ್ತಿ ಅವರು ತಿಳಿಸಿದ್ದಾರೆ. (Visited 1 times, 1 visits today)

ಮುಂದೆ ಓದಿ...

ಗೊರವನಹಳ್ಳಿ ಮಹಾಲಕ್ಷ್ಮಿಗೆ ವಿಶೇಷ ಪೂಜಾ ; ಭಕ್ತರ ಸಂಖ್ಯೆ ಇಳಿಮುಖ!!

ಕೊರಟಗೆರೆ:        ಸಿರಿದೇವಿಗೆ ಮೀಸಲಾದ ಕರುನಾಡಿನ ಏಕೈಕ ಧಾರ್ಮಿಕ ಪುಣ್ಯಕ್ಷೇತ್ರ ಗೊರವನಹಳ್ಳಿ ಮಹಾಲಕ್ಷ್ಮೀ ಸನ್ನಿಧಾನಕ್ಕೆ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಬರುತ್ತೀದ್ದ ಲಕ್ಷಾಂತರ ಭಕ್ತರಲ್ಲಿ ಸಾವಿರಕ್ಕೂ ಕಡಿಮೆ ಭಕ್ತರು ಆಗಮಿಸಿ ಸಾಮಾಜಿಕ ಅಂತರದ ಮೂಲಕ ಶುಕ್ರವಾರ ಮುಂಜಾನೆಯಿಂದಲೇ ದರ್ಶನ ಪಡೆದಿದ್ದಾರೆ.        ಕಲ್ಪತರು ಜಿಲ್ಲೆಯ ಕೊರಟಗೆರೆ ತಾಲೂಕಿನ ತೀತಾ ಸಮೀಪದ ಗೊರವನಹಳ್ಳಿ ಶ್ರೀಕ್ಷೇತ್ರದ ಮಹಾಲಕ್ಷ್ಮೀ ದೇವಿಯ ದರ್ಶನ ಪಡೆದ ನೂರಾರು ಭಕ್ತಾಧಿಗಳು ಕಲಿಯುಗದ ದೇವತೆ ಎಂದೇ ಪ್ರಸಿದ್ದಿ ಪಡೆದಿರುವ ಕಮಲಮ್ಮ ತಾಯಿಯ ಬೃಂದಾವನದ ದರ್ಶನ ಪಡೆದು ವರಮಹಾಲಕ್ಷ್ಮೀ ಹಬ್ಬವನ್ನು ಆಚರಣೆ ಮಾಡಿರುವುದೇ ವಿಶೇಷವಾಗಿದೆ.       ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯದ ಆಡಳಿತ ಅಧಿಕಾರಿ ಡಾ.ನಂದಿನಿದೇವಿ ನೇತೃತ್ವದಲ್ಲಿ ಪೊಲೀಸ್-ಕಂದಾಯ ಮತ್ತು ಗ್ರಾಪಂ ಸಹಕಾರದಿಂದ ದೇವಿಯ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಕೊವೀಡ್-19 ಆದೇಶ ಪಾಲನೆಯ ಜೊತೆ ಸಾಮಾಜಿಕ ಅಂತರದ ಬಗ್ಗೆ ಆರೋಗ್ಯದ ಜಾಗೃತಿ ಮೂಡಿಸುವ…

ಮುಂದೆ ಓದಿ...

 ತುಮಕೂರು : 81 ಮಂದಿಗೆ ಕೋವಿಡ್-19 ಸೋಂಕು ದೃಢ!!

 ತುಮಕೂರು:       ಜಿಲ್ಲೆಯಲ್ಲಿಂದು 81 ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1617ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ ತಿಳಿಸಿದ್ದಾರೆ.       ಜಿಲ್ಲೆಯಲ್ಲಿ ಇಂದು ತುಮಕೂರು-38, ಕುಣಿಗಲ್-11, ತಿಪಟೂರು-10, ಮಧುಗಿರಿ-8, ಪಾವಗಡ-5, ಗುಬ್ಬಿ-4, ತುರುವೇಕೆರೆ-2, ಹಾಗೂ ಶಿರಾ, ಕೊರಟಗೆರೆ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ತಲಾ-1, ಸೇರಿದಂತೆ ಒಟ್ಟು 81 ಮಂದಿಯಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ.       ಇಂದು ಜಿಲ್ಲಾಸ್ಪತ್ರೆಯಿಂದ 11 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 736 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 844 ಸಕ್ರಿಯ ಪ್ರಕರಣಗಳಿದ್ದು, ಇಂದು ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಈವರೆಗೆ 52 ಮಂದಿ ಕೋವಿಡ್-19 ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (Visited 5 times, 1 visits today)

ಮುಂದೆ ಓದಿ...

ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸ್ಪಿರುಲಿನಾ ಚಿಕ್ಕಿ ವಿತರಣೆ

ಪಾವಗಡ:       ಅಪೌಷ್ಟಿಕ ಮಕ್ಕಳ ರೋಗ ನೀರೋಧಕ ಶಕ್ತಿಯನ್ನು ಹೆಚ್ಚಿಸುವ ಸಲುವಾಗಿ ನೈಸರ್ಗಿಕವಾಗಿ ತಯಾರಿಸಿರುವ ಸ್ಪೀರುಲಿನಾ ಚಿಕ್ಕಿಯನ್ನು ತಾಲ್ಲೂನಿಕಿನ ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ವಿತರಣೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ತಿಳಿಸಿದರು.       ಮಂಗಳವಾರ ಪಾವಗಡ ಪಟ್ಟಣದ ಸಮೀಪ ಇರುವ ತಿಮ್ಮಾನಾಯ್ಕಪೇಟೆ ಗ್ರಾಮದಲ್ಲಿ ಮಹಿಳಾ ಮಕ್ಕಳ ಅಭಿವೃದ್ದಿ ಇಲಾಖೆ, ಸಮಗ್ರಶಿಶು ಅಭಿವೃದ್ದಿಯೋಜನೆ, ಸಿ.ಟಿ.ಎಫ್. ಆರ್.ಐ. ಮೈಸೂರು, ಸ್ಪಿರುಲಿನಾ ಪೌಂಡೇಷನ್ ತುಮಕೂರು, ಇವರ ಸಹಯೋದಲ್ಲಿ ಹಮ್ಮಿಕೊಂಡಿದ್ದ ಸ್ಪೀರುಲಿನಾ ಚಿಕ್ಕಿ, ಹಾಗೂ ಮಕ್ಕಳ ತೂಕದ ಯಂತ್ರಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೈಸೂರು ಜಿಲ್ಲೆಯಲ್ಲಿ ಕೋವಿಡ್ ಸೊಂಕಿತರು ಚಿಕ್ಕಿಯನ್ನು ಸೇವಿಸಿ ಗುಣಮುಖರಾಗಿದ್ದಾರೆ, ಅದ್ದರಿಂದ ಕೋವಿಡ್ ಸೊಂಕಿತರಿಗೆ ಚಿಕ್ಕಿಯನ್ನು ನೀಡಲಾಗುತ್ತದೆ, ಜಿಲ್ಲೆಯಲ್ಲಿ ಮೊದಲಬಾರಿಗೆ ಪಾವಗಡ ತಾಲ್ಲೂಕಿನ ಅಂಗನವಾಡಿ ಕೇಂದ್ರದಲ್ಲಿನ ಮಕ್ಕಳಿಗೆ ಸ್ಪೀರುಲಿನಾ ಚಿಕ್ಕಿಯನ್ನು ವಿತರಣೆ ಮಾಡಲಾಗುತ್ತಿದೆ, ಚಿಕ್ಕಿಯನ್ನು ಸೇವಿಸಿದ ನಂತರ ಮಕ್ಕಳ ತೂಕ…

ಮುಂದೆ ಓದಿ...

ಜನಸಂದಣಿ ಇಲ್ಲದಂತೆ ಸ್ವಾತಂತ್ರ್ಯ ದಿನಾಚರಣೆ – ಡಿಸಿ

ತುಮಕೂರು:       ಕೊರೋನಾ ಮಧ್ಯೆ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಹಾಗೂ ವಿಭಿನ್ನ ರೀತಿಯಲ್ಲಿ ಆಚರಿಸುವ ಸಂಬಂಧ ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.        ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್-19ರ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಕೇಂದ್ರ ಸರ್ಕಾರ ಮಾರ್ಗ ಸೂಚಿಗಳನ್ನು ಹೊರಡಿಸಿದ್ದು, ಅದರಂತೆ ಸಾಮಾಜಿಕ ಅಂತರ       ಜಿಲ್ಲಾ ಮಟ್ಟದ ಕಛೇರಿಯಿಂದ ಗ್ರಾಮಪಂಚಾಯತಿಯವರೆಗೂ ಸ್ವಾತಂತ್ರ್ಯ ದಿನಾಚರಣೆಯನ್ನು ಕಡ್ಡಾಯವಾಗಿ ಆಚರಿಸಬೇಕು. ಜಿಲ್ಲಾ ಮಟ್ಟದಲ್ಲಿ ಪ್ರತಿವರ್ಷದಂತೆ ನಗರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯಲಿದೆ. ಅಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರು ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಲಿದ್ದಾರೆ ಎಂದು ಅವರು ತಿಳಿಸಿದರು. ಈ ಬಾರಿ ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ…

ಮುಂದೆ ಓದಿ...

ಎಪಿಎಂಸಿ ನೂತನ ಅಧ್ಯಕ್ಷರಾಗಿ ಉಮೇಶ್‍ಗೌಡ ಅಧಿಕಾರ ಸ್ವೀಕಾರ

ತುಮಕೂರು:        ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ನೂತನ ಅಧ್ಯಕ್ಷರಾಗಿ ಹೆಬ್ಬೂರು ಹೋಬಳಿ ಸಿರಿವರದ ಉಮೇಶ್‍ಗೌಡ ಮತ್ತು ಉಪಾಧ್ಯಕ್ಷರಾಗಿ ಬೆಳ್ಳಾವಿ ಹೋಬಳಿ ಕೊಟ್ಟನಹಳ್ಳಿ ಗೊಲ್ಲರಹಟ್ಟಿಯ ಶಿವರಾಜ್ ಬುಧವಾರ ಅಧಿಕಾರ ಸ್ವೀಕರಿಸಿದರು.       ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ 15 ಸದಸ್ಯರನ್ನು ಸರ್ಕಾರ ನಾಮರ್ದೇಶನ ಮಾಡಿದ್ದು, ಸಿರಿವರದ ಉಮೇಶ್‍ಗೌಡ ಅಧ್ಯಕ್ಷರಾಗಿ ಮತ್ತು ಕೊಟ್ಟನಹಳ್ಳಿ ಗೊಲ್ಲರಹಟ್ಟಿಯ ಶಿವರಾಜ್ ಉಪಾಧ್ಯಕ್ಷರಾಗಿ ಬುಧವಾರ ಅಧಿಕಾರ ವಹಿಸಿಕೊಂಡರು.       ಅಧಿಕಾರ ಸ್ವೀಕಾರ ಸಂದರ್ಭದಲ್ಲಿ ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸುರೇಶ್‍ಗೌಡ ಅವರು ಭೇಟಿ ನೀಡಿ ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಶುಭ ಕೋರಿದರು. ಈ ವೇಳೆ ಮಾತನಾಡಿದ ಅವರು, ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಕೊಡಿಸುವಂತಹ ಮಾರುಕಟ್ಟೆ ಇದಾಗಿದ್ದು, ಇಲ್ಲಿ ಭತ್ತ, ರಾಗಿ, ಜೋಳ…

ಮುಂದೆ ಓದಿ...

ತುಮಕೂರು :127 ಮಂದಿಗೆ ಕೋವಿಡ್-19 ಸೋಂಕು ದೃಢ!!

 ತುಮಕೂರು:       ಜಿಲ್ಲೆಯಲ್ಲಿಂದು 127 ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1473ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ ತಿಳಿಸಿದ್ದಾರೆ.       ಜಿಲ್ಲೆಯಲ್ಲಿ ಇಂದು ತುಮಕೂರು-60, ಶಿರಾ-6, ಪಾವಗಡ-10, ಮಧುಗಿರಿ ಹಾಗೂ ಗುಬ್ಬಿ ತಾಲೂಕಿನಲ್ಲಿ ತಲಾ 7, ಕುಣಿಗಲ್-13, ತಿಪಟೂರು-8, ಚಿಕ್ಕನಾಯಕನಹಳ್ಳಿ-1, ತುರುವೇಕೆರೆ-9, ಕೊರಟಗೆರೆ-6 ಸೇರಿದಂತೆ ಒಟ್ಟು 127 ಮಂದಿಯಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ.       ಇಂದು ಜಿಲ್ಲಾಸ್ಪತ್ರೆಯಿಂದ 29 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 665 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 761 ಸಕ್ರಿಯ ಪ್ರಕರಣಗಳಿದ್ದು, ಇಂದು ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಈವರೆಗೆ 47 ಮಂದಿ ಕೋವಿಡ್-19 ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (Visited 11 times, 1 visits…

ಮುಂದೆ ಓದಿ...

ತುಮಕೂರು :132 ಮಂದಿಗೆ ಕೊರೊನಾ ಸೋಂಕು ದೃಢ!!

 ತುಮಕೂರು:       ಜಿಲ್ಲೆಯಲ್ಲಿಂದು 132 ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1346ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ ತಿಳಿಸಿದ್ದಾರೆ.       ಜಿಲ್ಲೆಯಲ್ಲಿ ಇಂದು ತುಮಕೂರು-56, ಶಿರಾ-5, ಪಾವಗಡ-5, ಗುಬ್ಬಿ-6, ಕುಣಿಗಲ್-22, ತಿಪಟೂರು-9, ಮಧುಗಿರಿ-8, ಚಿಕ್ಕನಾಯಕನಹಳ್ಳಿ-4, ತುರುವೇಕೆರೆ-13, ಕೊರಟಗೆರೆ-4 ಸೇರಿದಂತೆ ಒಟ್ಟು 132 ಜನರಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ.       ಇಂದು ಜಿಲ್ಲಾಸ್ಪತ್ರೆಯಿಂದ 33 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 636 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 667 ಸಕ್ರಿಯ ಪ್ರಕರಣಗಳಿದ್ದು, ಇಂದು ಒಬ್ಬರು ಮೃತಪಟ್ಟಿದ್ದು, ಈವರೆಗೆ 43 ಮಂದಿ ಕೋವಿಡ್-19 ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (Visited 13 times, 1 visits today)

ಮುಂದೆ ಓದಿ...

ಜನಹಿತಕ್ಕಾಗಿ ಹಲವಾರು ಕಾಯ್ದೆಗಳ ತಿದ್ದುಪಡಿ- ಸಚಿವ ಜೆ.ಸಿ.ಎಂ

 ತುಮಕೂರು:       ರಾಜ್ಯದ ಜನಹಿತಕ್ಕಾಗಿ ಹಲವಾರು ಕಾಯ್ದೆಗಳಿಗೆ ತಿದ್ದುಪಡಿ ತಂದು ಸುಧಾರಣೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ತಿಳಿಸಿದರು.       ರಾಜ್ಯ ಸರ್ಕಾರದ ಅಧಿಕಾರಕ್ಕೆ ಬಂದು ಒಂದು ವರ್ಷ ಯಶಸ್ವಿಯಾಗಿ ಪೂರ್ಣಗೊಳಿಸಿರುವ ಸಂದರ್ಭದಲ್ಲಿ ವಿಧಾನ ಸೌಧದ ಬ್ಯಾಂಕ್ವೆಂಟ್ ಹಾಲ್‍ನಲ್ಲಿ ಏರ್ಪಡಿಸಿದ್ದ ಸರ್ಕಾರದ ಸಾಧನೆಯ ಕಿರು ಹೊತ್ತಿಗೆ ಬಿಡುಗಡೆ ಹಾಗೂ ಸಂವಾದ ಕಾರ್ಯಕ್ರಮದ ನೇರ ಪ್ರಸಾರ ಕಾರ್ಯಕ್ರಮವನ್ನು ವೀಕ್ಷಿಸಲು ಜಿಲ್ಲಾ ಪಂಚಾಯತಿಯಲ್ಲಿ ಏರ್ಪಡಿಸಿದ್ದ ವೀಕ್ಷಣಾ ಕಾರ್ಯಕ್ರಮದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಜನರ ವೈಯಕ್ತಿಕ ಜೀವನ, ಕೈಗಾರಿಕಾ ಅಭಿವೃದ್ಧಿ ಹಾಗೂ ವ್ಯಾಪಾರಸ್ಥರ ಅನುಕೂಲಕ್ಕಾಗಿ ಶಾಸನಾತ್ಮಕವಾಗಿ ಕೆಲಸ ಮಾಡುವ ಮೂಲಕ ಈ ಕಾಯ್ದೆಗಳಿಗೆ ತಿದ್ದುಪಡಿ ತರಲಾಗಿದೆ ಎಂದರು.       ಸಂಜೆ ಹೊತ್ತಿನಲ್ಲಿ ದುಡಿಯುವ ಮಹಿಳೆಯರ ಸುರಕ್ಷತೆಗಾಗಿ ಅಂಗಡಿ ಮತ್ತು ಸ್ಥಾಪನೆ ಕಾಯ್ದೆ ತಿದ್ದುಪಡಿ ಮಾಡಲಾಗಿದೆ ಹಾಗೂ…

ಮುಂದೆ ಓದಿ...

ಸೀಲ್’ಡೌನ್ ಆಗಿದ್ದ ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನ ಓಪನ್!!

ಕೊರಟಗೆರೆ :       ತಾಲೂಕಿನ ಸುಪ್ರಸಿದ್ಧ ಕ್ಷೇತ್ರಗಳಲ್ಲೊಂದಾದ ಶ್ರೀ ಗೊರವನಹಳ್ಳಿ ಮಹಾಲಕ್ಷ್ಮಿ ಕ್ಷೇತ್ರದ  ದೇವಸ್ಥಾನ ಒಂದರ ಅರ್ಚಕರ ಮಡದಿಗೆ ಕಾಣಿಸಿಕೊಂಡಿದ್ದ ಕೊರೊನಾ ಪಾಸಿಟಿವ್ ವರದಿಯಿಂದ ದೇವಸ್ಥಾನ ಹಾಗೂ ಆವರಣವನ್ನು ಸೀಲ್ಡ್ ಮಾಡಲಾಗಿತ್ತು .       ಇನ್ನೇನು ಇದೇ ತಿಂಗಳ 31 ರಂದು ವರಮಹಾಲಕ್ಷ್ಮಿ ಹಬ್ಬವಾಗಿದ್ದು ಕರುನಾಡಿನ ಸುಪ್ರಸಿದ್ಧ ಕ್ಷೇತ್ರಗಳಲ್ಲೊಂದಾದ ಶ್ರೀ ಗೊರವನಹಳ್ಳಿ ಮಹಾಲಕ್ಷ್ಮಿ ದೇವಿಯ ದರ್ಶನಕ್ಕೆ ಜುಲೈ 28 ರ ಮುಂಜಾನೆಯಿಂದ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಮಧುಗಿರಿ ಉಪವಿಭಾಗಾಧಿಕಾರಿ ಡಾ. ನಂದಿನಿದೇವಿ ಭಾನುವಾರ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ ತಾಲ್ಲೂಕಿನ ಪುಣ್ಯಕ್ಷೇತ್ರ ಶ್ರೀ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ದೇವಿಯ ದೇವಾಲಯವನ್ನು ಜುಲೈ 27 ರಂದು ತೆರೆದು ಸ್ವಚ್ಛತೆ ಮತ್ತು ಕೊರೊನಾ ಭದ್ರತಾ ಕ್ರಮ ಕೈಗೊಂಡು ಮರುದಿನ ಮುಂಜಾನೆಯಿಂದ ಭಕ್ತರಿಗೆ ದೇವಿಯ ದರ್ಶನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ .   …

ಮುಂದೆ ಓದಿ...