ತುಮಕೂರು : ಇಂದು 63 ಮಂದಿಗೆ ಕೋವಿಡ್-19 ದೃಢ!!

 ತುಮಕೂರು :

       ಜಿಲ್ಲೆಯಲ್ಲಿಂದು 63 ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1781 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ ತಿಳಿಸಿದ್ದಾರೆ.

      ಜಿಲ್ಲೆಯಲ್ಲಿ ಇಂದು ತುಮಕೂರು-20, ಕುಣಿಗಲ್-08, ತಿಪಟೂರು-01, ಮಧುಗಿರಿ-01, ಪಾವಗಡ-10, ಗುಬ್ಬಿ-3, ತುರುವೇಕೆರೆ-6, ಕೊರಟಗೆರೆ-05, ಚಿಕ್ಕನಾಯಕನಹಳ್ಳಿ-07, ಶಿರಾ-2 ಸೇರಿದಂತೆ ಒಟ್ಟು 63 ಮಂದಿಯಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ.

      ಇಂದು ಜಿಲ್ಲಾಸ್ಪತ್ರೆಯಿಂದ 86 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 917 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

     ಜಿಲ್ಲೆಯಲ್ಲಿ ಒಟ್ಟು 810 ಸಕ್ರಿಯ ಪ್ರಕರಣಗಳಿದ್ದು,  ಈವರೆಗೆ 52 ಮಂದಿ ಕೋವಿಡ್-19 ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

(Visited 10 times, 1 visits today)

Related posts

Leave a Comment