ಗುಬ್ಬಿ : ದೇವಾಲಯದ ಹುಂಡಿ ಹಣ ದೋಚಿದ ಕಳ್ಳರು

ಗುಬ್ಬಿ:

      ದೇವಾಲಯದ ಬಾಗಿಲು ಮುರಿದು ಹುಂಡಿ ಹಣವನ್ನು ದೋಚಿದ ಕಳವು ಪ್ರಕರಣ ತಾಲ್ಲೂಕಿನ ಕಸಬ ಹೋಬಳಿ ಮಡೇನಹಳ್ಳಿ ಗ್ರಾಮದ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ನಡೆದಿದೆ.

      ಗ್ರಾಮದ ಆರಾಧ್ಯ ದೈವ ಮಹಾಲಿಂಗೇಶ್ವರ ದೇವಾಲಯದಲ್ಲಿ ಅಲವಡಿಸಲಾದ ಹುಂಡಿಯಲ್ಲಿನ ಹಣ ಮಾತ್ರ ದೋಚಲಾಗಿದೆ. ಸುಮಾರು 30 ಸಾವಿರ ರೂಗಳ ಅಂದಾಜು ದೇವಾಲಯ ಸಮಿತಿ ತಿಳಿಸುತ್ತಿದೆ. ಈ ಹಿಂದೆ ಕೂಡಾ ಹುಂಡಿ ಕಳವು ನಡೆದು ಅಂದಾಜು 50 ಸಾವಿರ ರೂ ದೋಚಲಾಗಿತ್ತು. ಎರಡು ಬಾರಿ ಕಳ್ಳತನದಲ್ಲೂ ದೇವಾಲಯದಲ್ಲಿರುವ ಇನ್ನಿತರ ಚಿನ್ನಾಭರಣ, ಬೆಳ್ಳಿ ಸಾಮಾಗ್ರಿಗಳ ಕಳ್ಳತನವಾಗಿಲ್ಲ. ಈ ಬಗ್ಗೆ ಸೂಕ್ಷ್ಮತೆ ಅರಿತು ಪೊಲೀಸರು ಚುರುಕಿನ ತೀವ್ರ ತನಿಖೆ ನಡೆಸಿ ಖದೀಮರನ್ನು ಬಂದಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

      ಸ್ಥಳ ಮಹಜರು ನಡೆಸಿದ ಗುಬ್ಬಿ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

(Visited 5 times, 1 visits today)

Related posts

Leave a Comment