ಹುಳಿಯಾರಿನಲ್ಲಿ ಕೋವಿಡ್ ನಿಯಂತ್ರಣಕ್ಕೆ ಔಷಧಿ ಸಿಂಪಡಣೆ

 ಹುಳಿಯಾರು : 

        ಕೊರೊನಾ ನಿಯಂತ್ರಣಕ್ಕೆ ಹುಳಿಯಾರು ಪಟ್ಟಣ ಪಂಚಾಯಿತಿ ವತಿಯಿಂದ ವ್ಯಾಪ್ತಿಯಲ್ಲಿ ರೋಗ ನಿರೋಧಕ ಸಿಂಪಡಣೆ ಮತ್ತು ಅಂಗಡಿಗಳಲ್ಲಿ ಖರೀದಿಗೆ ಅಂತರ ಕಾಯ್ದುಕೊಳ್ಳಲು ಗುರುತು ಮಾಡಲಾಯಿತು.

      ಹುಳಿಯಾರು ಪಟ್ಟಣದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಳೆದ ವಾರದಿಂದ ಹೆಚ್ಚಾಗಿರುವುದರಿಂದ ನಿವಾಸಿಗಳು ಭಯಭೀತರಾಗಿದ್ದಾರೆ. ಹಾಗಾಗಿ ಪ್ರಥಮ ಹಂತದಲ್ಲಿ ಸೋಂಕು ತಗುಲಿರುವ ವ್ಯಕ್ತಿಯ ಮನೆಯ ಸುತ್ತ ಸ್ಯಾನಿಟೈಸರ್ ಮಾಡಲಾಗಿತ್ತು.

      ಎರಡನೇ ಹಂತವಾಗಿ ಹುಳಿಯಾರು ಪಟ್ಟಣದಲ್ಲಿನ ಅಂಗಡಿ, ಮುಂಗಟ್ಟು, ದೇವಸ್ಥಾನ ಆವರಣ, ರಸ್ತೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಔಷಧಿ ಸಿಂಪಡಣೆ ಮಾಡಲಾಯಿತು. ನಂತರ ಬಡಾವಣೆಗಳಲ್ಲಿ ಸಿಂಪಡಣೆ ಮಾಡಲಾಗುವುದು.

       ಬೆಳಗ್ಗೆ 6 ರಿಂದ 10 ಗಂಟೆಯವರೆವಿಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಿರುವುದರಿಂದ ಪಟ್ಟಣದಲ್ಲಿ ಜನಸಂದಣೆ ಹೆಚ್ಚಾಗುತ್ತದೆ. ಹಾಗಾಗಿ ವ್ಯಾಪಾರಕ್ಕೆ ಬರುವ ಜನರಲ್ಲಿ ಅಂತರ ಕಾಯ್ದುಕೊಳ್ಳಲು ಅಂಗಡಿಗಳ ಮುಂದೆ 6 ಅಡಿ ಅಂತರದ ಬಣ್ಣ ಬಳಿದು ಗುರುತು ಮಾಡುವ ಮೂಲಕ ದೈಹಿಕ ಅಂತರ ಕಾಯ್ದುಕೊಳ್ಳಲು ಅನುವು ಮಾಡಿಕೊಡಲಾಯಿತು.

(Visited 1 times, 1 visits today)

Related posts

Leave a Comment