ಮಧುಗಿರಿ : ಸುವರ್ಣಗ್ರಾಮ ಯೋಜನೆಯಡಿ 50 ಲಕ್ಷ ವೆಚ್ಚದಲ್ಲಿ ಕಾಮಗಾರಿ

ಮಧುಗಿರಿ : 

     ದೊಡ್ಡೇರಿ ಹೋಬಳಿಯ ಗಡಿಗ್ರಾಮ ಸಜ್ಜೆಹೊಸಹಳ್ಳಿಯ ಸಕಲ ಅಭಿವೃದ್ಧಿಗಾಗಿ 50 ಲಕ್ಷ ವೆಚ್ಚದಲ್ಲಿ ಸುವರ್ಣಗ್ರಾಮ ಯೋಜನೆಯಡಿ ಕಾಮಗಾರಿ ಕೈಗೆತ್ತಿಕೊಂಡಿದ್ದು, ಗುಣಮಟ್ಟದ ಕಾಮಗಾರಿಗೆ ಚಾಲನೆ ನೀಡಲಾಗಿದೆಯೆಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.

      ತಾಲೂಕಿನ ದೊಡ್ಢೆರಿ ಹೋಬಳಿಯ ಸಜ್ಜೆಹೊಸಹಳ್ಳಿಯಲ್ಲಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಆಂದ್ರಗಡಿಗೆ ಹೊಂದಿಕೊಂಡಿರುವ ಈ ಗ್ರಾಮದಲ್ಲಿ ಮೂಲಭೂತ ಸೌಕರ್ಯಕ್ಕಾಗಿ ಈ ಸುವರ್ಣಗ್ರಾಮ ಯೋಜನೆಯನ್ನು ಅನುಷ್ಠಾನಗೊಳಿಸಿದ್ದೇವೆ. ಇದು ಹೆಚ್ಚುವರಿ ಅನುದಾನದಿಂದ ತಂದಿದ್ದು, 6 ಸಿಸಿ ರಸ್ತೆ, 6 ಚರಂಡಿ ಒಳಗೊಂಡ ಕಾಮಗಾರಿಯನ್ನು ಕೆಆರ್‍ಐಡಿಎಲ್ ಇಲಾಖೆಗೆ ನೀಡಿದ್ದು, ಗುಣಮಟ್ಟದ ಕಾಮಗಾರಿಯನ್ನು ಮಾಡಲು ಸೂಚಿಸಲಾಗಿದೆ. ಇದರೊಂದಿಗೆ ಈಗಾಗಲೇ 8 ಕೋಟಿ ವೆಚ್ಚದಲ್ಲಿ ಕವಣದಾಲ, ಪೂಜಾರಹಳ್ಳಿ, ಬಡವನಹಳ್ಳಿ ಬಳಿ ಸುವರ್ಣಮುಖಿ ನದಿಯ ಸೇತುವೆಯ ಎರಡೂ ಕಡೆ ಹಾಗೂ ತೆರಿಯೂರು ಗ್ರಾಮಗಳಲ್ಲಿ ಚೆಕ್‍ಡ್ಯಾಂ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದ್ದು, ಕೆಲವೇ ದಿನದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.

      ಕಾರ್ಯಕ್ರಮದಲ್ಲಿ ಪಿಡಿಓ ಪ್ರಶಾಂತ್, ಬಾವಿಮನೆ ಕಾಂತಣ್ಣ, ವೆಂಕಟೇಶಗೌಡ, ಹನುಮಂತರಾಯಪ್ಪ, ಕುಮಾರ್, ಲೋಕೇಶ್, ಮಹದೇವಪ್ಪ, ಅಜೀಜ್‍ಖಾನ್, ಇಂಜಿನಿಯರ್ ಹನುಮಂತರಾಯಪ್ಪ ಇತರರು ಇದ್ದರು.

 

(Visited 4 times, 1 visits today)

Related posts

Leave a Comment