ವಾರದೊಳಗೆ ಕೊರೋನಾ ಸೋಂಕಿತರ ಸಂಖ್ಯೆ ಶೇ. 5ರಷ್ಟು ಇರಬೇಕು – ಸಂಸದ

ಮಧುಗಿರಿ:

ತಾಲ್ಲೂಕಿನಲ್ಲಿ ಇನ್ನೊಂದು ವಾರದೊಳಗೆ ಕೊರೋನಾ ಸೋಂಕಿತರ ಸಂಖ್ಯೆ ಶೇಕಡ 5ರಷ್ಟು ಇರಬೇಕು, ಇದಕ್ಕಾಗಿ ತಾಲ್ಲೂಕು ಆಡಳಿತ ಮತ್ತು ಪಿಡಿಒಗಳು,ಇತರೆ ಇಲಾಖೆಯ ಅಧಿಕಾರಿಗಳು ಇನ್ನಷ್ಟು ಶ್ರಮವಹಿಸಿ ಕೆಲಸ ಮಾಡಬೇಕೆಂದು ಸಂಸದ ಜಿ.ಎಸ್. ಬಸವರಾಜು ತಿಳಿಸಿದರು.
ಸೋಮವಾರದಂದು ಪಟ್ಟಣದಲ್ಲಿರುವ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಪಿಡಿಒಗಳು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಲ್ಲಿಯವರೆಗೆ ಹಗಳಿರುಳು ಶ್ರಮವಹಿದ ಎಲ್ಲಾ ಅಧಿಕಾರಿಗಳು,ವ್ಯೆಧ್ಯರು,ಅಂಗನವಾಡಿ,ಅಶಾಕಾರ್ಯಕರ್ತರು,ಪಿಡಿಓಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಕರೋನಾ ಪರೀಕ್ಷೆ ನಡೆಸಿದ ಬಳಿಕ ಸೋಂಕಿತ ನನ್ನು ಬೇಗ ಪತ್ತೆ ಹಚ್ಚುತ್ತೀರಿ, ಆರ್ ಟಿಪಿಸಿಆರ್ ನೆಗೆಟಿವ್ ಬಂದವರ ವರದಿ ತಡವಾಗಿ ಬರುತ್ತಿರುವುದರಿಂದ ಆತಂಕ ಹೆಚ್ಚಾಗುತ್ತಿದ್ದು ಬೇಗ ವರದಿ ನೀಡಿದರೆ ಸಾರ್ವಜನಿಕರು ನಿರಾಳರಾಗುತ್ತಾರೆ ಎಂದರು.
ಸೋಂಕಿತರು ಪತ್ತೆಯಾದ ತಕ್ಷಣ ಆಶಾ ಕಾರ್ಯಕರ್ತರು ಕೋವಿಡ್ ಕೇರ್ ಸೆಂಟರ್ ಗೆ ಕಳುಹಿಸಬೇಕು. ಇವರಿಗೆ ಪೊಲೀಸರು ಸಹಕಾರ ನೀಡುವಂತೆ ತಿಳಿಸಿದರು.
ಲಸಿಕೆ ಬಗ್ಗೆ ಅಪಪ್ರಚಾರ ಬೇಡ :ಪ್ರತಿಯೊಬ್ಬರು ಲಸಿಕೆ ಹಾಕಿಸಿಕೊಳ್ಳಿ, ಟಾಸ್ಕ್ ಫೋರ್ಸ್ ಸಭೆಗಳನ್ನು ನಿರಂತರವಾಗಿ ಮಾಡಿ ಸೋಂಕಿತರು ಹೆಚ್ಚಿರುವ ಗ್ರಾಮಗಳಲ್ಲಿ ಆಯೋಜಿಸಿದರೆ ಒಳಿತು ಎಂದರು. ಲಾಕ್ ಡೌನ್ ನಿಂದಾಗಿ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದು ಇದನ್ನು ಶೇಕಡಾ ಜೀರೊಗೆ ತರಲು ಎಲ್ಲರೂ ಪ್ರಯತ್ನ ಮಾಡಬೇಕೆಂದರು.
ಲಸಿಕೆ ಬಗ್ಗೆ ಇದು ಮೋದಿ ಸಿದ್ಧಪಡಿಸಿದ ಡಿಸ್ಟಿಲ್ ವಾಟರ್ ಎಂದು ವಿಪಕ್ಷಗಳು ಅಪಪ್ರಚಾರ ಮಾಡಿದ ಫಲ ಮೂವತ್ತೈದು ಲಕ್ಷ ದಷ್ಟು ಲಸಿಕೆ ಆಫ್ರಿಕಾಕ್ಕೆ ಕಳುಹಿಸಿಕೊಡಲಾಗಿತ್ತು. ದಕ್ಷಿಣ ಭಾರತದಲ್ಲೇ ಲಸಿಕೆ ಹೆಚ್ಚು ಹಾಕಿರುವುದು ಕರ್ನಾಟಕದಲ್ಲೇ ಕರ್ನಾಟಕದ ಕಾಂಗ್ರೆಸ್ ನಾಯಕರೊಬ್ಬರು ಕರ್ನಾಟಕಕ್ಕೆ ಲಸಿಕೆ ನೀಡುವಲ್ಲಿ ತಾರತಮ್ಯ ಮಾಡುತ್ತಿದ್ದಾರೆಂದು ಹೇಳಿಕೆ ನೀಡುತ್ತಿರುವುದು ಸತ್ಯ ದೂರವಾದ ವಿಚಾರವೆಂದರು.
ಮಧುಗಿರಿ ನನಗೆ ರಾಜಕೀಯ ಪುನರ್ಜನ್ಮ ನೀಡಿದ ತಾಲ್ಲೂಕು ಎಂದೆಂದಿಗೂ ಮರೆಯುವುದಿಲ್ಲ, ಕೇಂದ್ರ ಸರ್ಕಾರದ ಆರ್ ಡಿಪಿಆರ್ ಇಲಾಖೆಯ ಮೂಲಕ ಮತ್ತಿತರ ಇಲಾಖೆಯ ಮೂಲಕ ‘ಜಲ ಜೀವನ್ ಮಿಷನ್’ ಎಂಬ ಹೊಸ ಯೋಜನೆ ಮಂಜೂರಾತಿಗೆ ಸಿದ್ಧವಾಗಿದ್ದು ಈ ಯೋಜನೆ ಜಾರಿಯಾದರೆ ಮಧುಗಿರಿ ತಾಲ್ಲೂಕಿನಲ್ಲಿರುವ ಪ್ರತಿಯೊಂದು ಮನೆ ಮನೆಗೂ ನಲ್ಲಿ ನೀರು ಸಂಪರ್ಕ, ಸಮೀಪದ ಕೆರೆಗಳು ತುಂಬಲಿದೆ ಎಂದರು.
ನನ್ನ ಲೋಕಸಭಾ ವ್ಯಾಪ್ತಿಯಲ್ಲಿ ಅತಿ ಕಡು ಬಡವರು ವಾಸವಿರುವ ಕ್ಷೇತ್ರ ಮಧುಗಿರಿ ಯಾಗಿದ್ದು ,ಇಲ್ಲಿ ನೀರಾವರಿಯ ಕೊರತೆ ಕಾಣುತ್ತಿದೆ ನೇತ್ರಾವತಿ ಎರಡನೇ ತಿರುವಿನ ಯೋಜನೆ ಜಾರಿಗೊಳಿಸಿ ಗೂಬಲಗುಟ್ಟೆ ಮತ್ತು ಕುಣಿಗಲ್ ತಿಮ್ಮನಹಳ್ಳಿ ಕೆರೆಗೆ ನೀರನ್ನು ತಂದರೆ ತಾಲ್ಲೂಕು ನೀರಾವರಿಯಿಂದ ಸಮೃದ್ಧಿಯಾಗಲಿದೆ. ಈಗ ಬಹುತೇಕ ಬಳ್ಳಾರಿ ಜಾಲಿ ಗಿಡಗಳು ಎಲ್ಲಾ ಜಮೀನುಗಳಲ್ಲಿ ಬೆಳೆದಿದ್ದು ಸರ್ಕಾರ 1ಸಾವಿರ ಕೋಟಿ ರೂ ವೆಚ್ಚದಲ್ಲಿ ವನ್ನು ತೆರವು ಮಾಡಿಸಲು ವಿಶೇಷ ಯೋಜನೆ ಮಾಡಬೇಕಾಗಿದೆ ಎಂದರು.
ಜೂನ್ ಒಂದರಿಂದ ಮಧುಗಿರಿ ತಾಲ್ಲೂಕಿನ ಸಿದ್ದಾಪುರ ಕೆರೆಗೆ ಹೇಮಾವತಿ ನೀರನ್ನು ಹರಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಯಾವುದೇ ಯೋಜನೆ ಜಾರಿಗೆ ಬಂದರೂ ಮಧುಗಿರಿಗೆ ಪ್ರಥಮ ಆದ್ಯತೆ ನೀಡುತ್ತಿದ್ದೇನೆ , ಸಂಸದನಾಗಿ ಆಯ್ಕೆಯಾದ 2ವರ್ಷ ಗಳಲ್ಲಿ ನಾನು ಸಂಸತ್ತು ಪ್ರವೇಶಿಸಿದ್ದು ಕೇವಲ ಒಂದೂವರೆ ತಿಂಗಳು ಮಾತ್ರ ಉಳಿದ ದಿನಗಳೆಲ್ಲ ಕರೋನಾ ಕಸಿದಿದೆ ಎಂದರು.
ಮಧುಗಿರಿ ಆಸ್ಪತ್ರೆ ಮೇಲ್ದರ್ಜೆಗೆ :ಇತ್ತೀಚೆಗೆ ರಾಜ್ಯದ ಆರೋಗ್ಯ ಸಚಿವರು ತುಮಕೂರಿಗೆ ಭೇಟಿ ನೀಡಿದಾಗ ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ 0.5 ಕೆ ಯೂನಿಟ್ ನ ಆಕ್ಸಿಜನ್ ಆಸ್ಪತ್ರೆಯಲ್ಲೇ ತಯಾರಿಸುವ 1ಘಟಕ ಘಟಕ ಮಂಜೂರು ಮಾಡಲಾಗಿದೆ ಇದು ಜಾರಿಗೊಂಡರೆ ಗರ್ಭಿಣಿ ಮತ್ತು ಅಪಘಾತ ಮತ್ತಿತರ ಶಸ್ತ್ರಚಿಕಿತ್ಸೆಗಳು ಇಲ್ಲೆ ಮಾಡಬಹುದಾಗಿದೆಂದರು.
ಶಾಸಕ ಎಂ ವಿ ವೀರಭದ್ರಯ್ಯ ಅವರು ನನ್ನ ವಿರುದ್ಧ ಸುಳ್ಳು ಹೇಳಿಕೆ:- ಶಾಸಕ ಎಂ ವಿ ವೀರಭದ್ರಯ್ಯ ಯಾರದೋ ಮಾತು ಕೇಳಿ ಬೆಂಗಳೂರಿನಲ್ಲಿ ಕುಳಿತುಕೊಂಡು ಮಧುಗಿರಿ ಕೆರೆಗೆ ಹೇಮಾವತಿ ನೀರು ಬಿಡುವ ಮೋಟಾರ್ ಗಳನ್ನು ಕದ್ದಿದ್ದಾರೆ ಎಂಬ ಹೇಳಿಕೆ ನೀಡಿದ್ದನ್ನು ಸಭೆಯಲ್ಲಿ ಪ್ರಸ್ತಾಪಿಸಿದರು.
ಪಿ ಡಿ ಒ ಗಳು ಕೇಂದ್ರ ಸ್ಥಾನದಲ್ಲಿರುವುದಿಲ್ಲವೆಂಬ ದೂರುಗಳು ಕೇಳಿಬರುತ್ತಿದ್ದು, ತುಮಕೂರು ಮತ್ತು ಬೆಂಗಳೂರಿನಿಂದ ಆಗಮಿಸುತ್ತಿದ್ದಾರೆ ಜನರೇ ಇವರ ಸಹಿಗಾಗಿ ಇವರನ್ನು ಹುಡುಕಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕನಿಷ್ಠ ಇನ್ನು ಮುಂದಾದರೂ ತಾಲ್ಲೂಕು ಕೇಂದ್ರಗಳಲ್ಲಿ ವಾಸಮಾಡಿ ಗ್ರಾಮೀಣ ಜನತೆಯ ಕಷ್ಟಕ್ಕೆ ಸ್ಪಂದಿಸುವಂತೆ ಸೂಚಿಸಿದರು.(ಬಾಕ್ಸ್
ಸಿದ್ದಾಪುರ ಗ್ರಾ.ಪಂ.ಅಧ್ಯಕ್ಷ ವೀರಣ್ಣ ಮಾತಾನಾಡಿ,ಕರೊನಾ ಸೋಂಕು ಹರಡದಂತೆ ಟಾಸ್ಕ್ ಪೊರ್ಸ್ ನಲ್ಲಿರುವ ಆಶಾ ಅಂಗನವಾಡಿ ವೈದ್ಯರು ಪಿಡಿಒಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಸ್ಪಂದಿಸುತ್ತಿದ್ದಾರೆ, ಆದರೆ ಕ್ಷೇತ್ರದ ಶಾಸಕ ಎಂ.ವಿ.ವೀರಭದ್ರಯ್ಯ ಗ್ರಾಮೀಣ ಭಾಗದಲ್ಲಿ ಎಲ್ಲೂ ಕಾಣಿಸಲಿಲ್ಲ .ಇತ್ತೀಚೆಗೆ ಸಿದ್ದಾಪುರ ಗ್ರಾಮ ಪಂಚಾಯಿತಿ ಆವರಣದಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ವಿತರಿಸಿದ ಆಹಾರದ ಕಿಟ್ ಗಳನ್ನು ಅವರ ಸ್ವಂತ ಖರ್ಚಿನಲ್ಲಿ.ನೀಡದೆ ಪಂಚಾಯತಿ ಅನುದಾನದಲ್ಲಿ.ನೀಡುತ್ತಾರೆ ಮಾಹಿತಿ ಪ್ರಕಾರ ಗ್ರಾ ಪಂ ಪಿಡಿಒಗಳಿಂದ ವಸೂಲಿ ದಂಧೆ ಮೂಲಕ ಕಿಟ್ ಗಳನ್ನು ತಯಾರಿಸಿ ನೀಡಿದ್ದಾರೆಂದು ಆರೋಪಿಸಿದರು.)
ಕೇಂದ್ರ ಸರ್ಕಾರ ಕರೋನಾ ವಿಚಾರವಾಗಿ ಬಿಡುಗಡೆ ಮಾಡಿದ ಐವತ್ತು ಸಾವಿರ ಅನುದಾನ ಇನ್ನೂ ನಮ್ಮ ಗ್ರಾಮ ಪಂಚಾಯಿತಿ ತಲುಪಿಲ್ಲವೆಂದರು, ಮಧುಗಿರಿ ಸಾರ್ವಜನಿಕ ಆಸ್ಪತ್ರೆ ಅವ್ಯವಸ್ಥೆಯಿಂದ ಕೂಡಿದ್ದು ಅಲ್ಲಿನ ವೈದ್ಯಾಧಿಕಾರಿಗಳು ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗಳ ಯಾವುದೇ ಸಂದರ್ಭದಲ್ಲೂ ಸಾರ್ವಜನಿಕರ ದೂರವಾಣಿ ಕರೆಗೆ ಸ್ಪಂದಿಸುವುದಿಲ್ಲವೆಂದುಸಂಸದರ ಸಮ್ಮುಖದಲ್ಲಿ ಆರೋಪಿಸಿದರು.
ಡಿಸಿಸಿ ಬ್ಯಾಂಕ್ ನ ನಿರ್ದೇಶಕರುಗಳಾದ ಆರ್. ರಾಜೇಂದ್ರ, ಬಿ .ನಾಗೇಶ್ ಬಾಬು ,ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಇಂದಿರಾ ದೇನಾನಾಯ್ಕ, ಗ್ರಾ ಪಂ ಅಧ್ಯಕ್ಷರುಗಳಾದ ಸಿದ್ಧಾಪುರ ವೀರಣ್ಣ, ಪಂಚಾಕ್ಷರಯ್ಯ ,ನಾಗರಾಜು ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ, ಡಿವೈಎಸ್ಪಿ ಕೆ ಜಿ ರಾಮಕೃಷ್ಣ ,ತಹಸಿಲ್ದಾರ್ ವೈ. ರವಿ, ತಾಪಂ ಇಒ ದೊಡ್ಡಸಿದ್ದಯ್ಯ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಮೇಶ್ ಬಾಬು, ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಗಂಗಾಧರ್ ,ಸಿಡಿಪಿಒ ಅನಿತಾ ,ಸಿಪಿಐ ಎಂ ಎಸ್ ಸರ್ದಾರ್, ಆಹಾರ ಶಿರಸ್ತೇದಾರ್ ಗಣೇಶ್, ತೋಟಗಾರಿಕೆ ಇಲಾಖೆ ಅಧಿಕಾರಿ ವಿಶ್ವನಾಥ್ ಗೌಡ ,ಕೃಷಿ ಇಲಾಖಾಧಿಕಾರಿ ಹನುಮಂತರಾಯಪ್ಪ ,ಪುರಸಭಾ ಮುಖ್ಯಾಧಿಕಾರಿ ಅಮರನಾರಾಯಣ, ಸಮಾಜ ಕಲ್ಯಾಣ ಇಲಾಖೆ ಚಿಕ್ಕರಂಗಪ್ಪ, ತಾಲ್ಲೂಕು ಪಂಚಾಯ್ತಿಯ ಎಡಿಎ ಮಧುಸೂದನ, ಪಿಡಿಒಗಳಾದ ಶಿಲ್ಪಾ, ಆಲ್ಮಾಸ್, ಸತ್ಯನಾರಾಯಣರಾಜು, ಗೌಡಪ್ಪ ,ಶಿವಕುಮಾರ್, ವೆಂಕಟಾಚಲಪತಿ, ದಯಾನಂದ್ ,ನವೀನ್, ಜುಂಜೇಗೌಡ ,ಬಿಎಸ್ ಅನಂದ್, ಗೋಪಾಲಕೃಷ್ಣ ,ಬೋರಣ್ಣ ,ಕಡಗತ್ತೂರು ಆನಂದ್, ಮಂಜುನಾಥ್, ಧನಂಜಯ ,ಕುಮಾರ ಸ್ವಾಮಿ, ಕಾಂತರಾಜು ,ಚಿಕ್ಕನರಸಯ್ಯ, ಹೊನ್ನೇಶ್, ಮುಖಂಡರುಗಳಾದ ಡಿ. ಎಚ್ .ನಾಗರಾಜು, ಆನಂದ ಕೃಷ್ಣ,ಕುಲುಮೆ ಉಮೇಶ್, ಎಸ್ ಬಿಟಿ ರಾಮು, ವೆಂಟಾಪುರ ಗೋವಿಂದ ರಾಜು ,ಬಸ್ ಮಂಜು ಇತರರು ಇದ್ದರು.

(Visited 2 times, 1 visits today)

Related posts

Leave a Comment