ಮಧುಗಿರಿ : ಮದುವೆಗೆ ತೆರಳುತ್ತಿದ್ದ ವ್ಯಕ್ತಿಯ ಮೇಲೆ ಹಲ್ಲೆ!!

ಮಧುಗಿರಿ:

      ಪಟ್ಟಣದ ಬೈಪಾಸ್ ರಸ್ತೆಯ ಲ್ಲಿರುವ ಬಿಜವರ ಸಮೀಪ ವೃತ್ತದಲ್ಲಿ ಮದುವೆಗೆಂದು ಆಗಮಿಸಿದ್ದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ಹಾಗೂ ಮೊಬೈಲನ್ನು ಕಸಿದು ನಾಲ್ವರು ಮದ್ಯಪ್ರಿಯರು ಪರಾರಿಯಾಗಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.

      ಕಲ್ಕೆರೆ ಗ್ರಾಮದ ನರಸಿಂಹ ಮೂರ್ತಿ ಎಂಬುವರು ಟಿವಿಎಸ್ ಎಕ್ಸೆಲ್ ನಲ್ಲಿ ಬಿಜವರದಲ್ಲಿರುವ ವೀರಾಂಜನೇಯಸ್ವಾಮಿ ದೇವಾಯದಲ್ಲಿ ನಡೆಯುತ್ತಿದ್ದ ಮದುವೆ ಎಂದು ಆಗಮಿಸುತ್ತಿದ್ದ ವೇಳೆ ನಾಲ್ವರು ಮದ್ಯಪ್ರಿಯರು ರಾತ್ರಿ ಒಂಬತ್ತು ಗಂಟೆಗೆ ಇವರ ಮೇಲೆ ಕಲ್ಲಿನಿಂದ ಮುಖಕ್ಕೆ ಹೊಡೆದು ಮೊಬೈಲನ್ನು ಕಸಿದು ಜೊತೆಗೆ ದ್ವಿಚಕ್ರ ವಾಹನವನ್ನು ಸಹ ಜಖಂ ಮಾಡಿದ್ದಾರೆ. ಈ ಬಗ್ಗೆ ಮಧುಗಿರಿ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿದೆ.

  “ದ್ವಿಚಕ್ರವಾಹನ ಸವಾರ ಸಾವು’ :

      ಮಧುಗಿರಿ ತಾಲ್ಲೂಕು ದೊಡ್ಡಯಲ್ಲೂರು ಗ್ರಾಮದ ಸೇತುವೆ ಬಳಿ ದ್ವಿಚಕ್ರ ವಾಹನದಿಂದ ಬಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ .
ಮಂಗಳವಾರ ರಾತ್ರಿ 8-30ರ ಸುಮಾರಿನಲ್ಲಿ ಘಟನೆ ನಡೆದಿದ್ದು, ಐ.ಡಿ.ಹಳ್ಳಿ ಹೋಬಳಿ ಚೌಳಹಳ್ಳಿಯ ಗೋಪಾಲಪ್ಪ ಮೃತಪಟ್ಟಿದ್ದಾರೆ. ಇವರ ಮಗ ಬಾಬು ನೀಡಿದ ದೂರಿನ ಮೇರಿಗೆ ಮಿಡಿಗೇಶಿ ಠಾಣೆ ಸಬ್‍ಇನ್ಸ್ ಕರ್ ಹನುಮಂತರಾಯಪ್ಪ ಪ್ರಕರಣ ದಾಖಲಿಸಿಕೊಂಡಿದ್ದಾರೆ.

(Visited 11 times, 1 visits today)

Related posts

Leave a Comment