ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸ್ಪಿರುಲಿನಾ ಚಿಕ್ಕಿ ವಿತರಣೆ

ಪಾವಗಡ:

      ಅಪೌಷ್ಟಿಕ ಮಕ್ಕಳ ರೋಗ ನೀರೋಧಕ ಶಕ್ತಿಯನ್ನು ಹೆಚ್ಚಿಸುವ ಸಲುವಾಗಿ ನೈಸರ್ಗಿಕವಾಗಿ ತಯಾರಿಸಿರುವ ಸ್ಪೀರುಲಿನಾ ಚಿಕ್ಕಿಯನ್ನು ತಾಲ್ಲೂನಿಕಿನ ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ವಿತರಣೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ತಿಳಿಸಿದರು.

      ಮಂಗಳವಾರ ಪಾವಗಡ ಪಟ್ಟಣದ ಸಮೀಪ ಇರುವ ತಿಮ್ಮಾನಾಯ್ಕಪೇಟೆ ಗ್ರಾಮದಲ್ಲಿ ಮಹಿಳಾ ಮಕ್ಕಳ ಅಭಿವೃದ್ದಿ ಇಲಾಖೆ, ಸಮಗ್ರಶಿಶು ಅಭಿವೃದ್ದಿಯೋಜನೆ, ಸಿ.ಟಿ.ಎಫ್. ಆರ್.ಐ. ಮೈಸೂರು, ಸ್ಪಿರುಲಿನಾ ಪೌಂಡೇಷನ್ ತುಮಕೂರು, ಇವರ ಸಹಯೋದಲ್ಲಿ ಹಮ್ಮಿಕೊಂಡಿದ್ದ ಸ್ಪೀರುಲಿನಾ ಚಿಕ್ಕಿ, ಹಾಗೂ ಮಕ್ಕಳ ತೂಕದ ಯಂತ್ರಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೈಸೂರು ಜಿಲ್ಲೆಯಲ್ಲಿ ಕೋವಿಡ್ ಸೊಂಕಿತರು ಚಿಕ್ಕಿಯನ್ನು ಸೇವಿಸಿ ಗುಣಮುಖರಾಗಿದ್ದಾರೆ, ಅದ್ದರಿಂದ ಕೋವಿಡ್ ಸೊಂಕಿತರಿಗೆ ಚಿಕ್ಕಿಯನ್ನು ನೀಡಲಾಗುತ್ತದೆ, ಜಿಲ್ಲೆಯಲ್ಲಿ ಮೊದಲಬಾರಿಗೆ ಪಾವಗಡ ತಾಲ್ಲೂಕಿನ ಅಂಗನವಾಡಿ ಕೇಂದ್ರದಲ್ಲಿನ ಮಕ್ಕಳಿಗೆ ಸ್ಪೀರುಲಿನಾ ಚಿಕ್ಕಿಯನ್ನು ವಿತರಣೆ ಮಾಡಲಾಗುತ್ತಿದೆ, ಚಿಕ್ಕಿಯನ್ನು ಸೇವಿಸಿದ ನಂತರ ಮಕ್ಕಳ ತೂಕ ಮತ್ತು ಅವರ ಅರೋಗ್ಯವನ್ನು ಪರೀಕ್ಷಿಸಬೇಕು ಎಂದು ತಿಳಿಸಿ, ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಚಿಕ್ಕಿಯನ್ನು ವಿತರಣೆ ಮಾಡಲು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು.

      ಶಾಸಕರಾದ ವೆಂಕಟರವಣಪ್ಪ ಮಾತನಾಡಿ, ತಾಯಂದಿರುಗಳು ಉತ್ತಮ ಅರೋಗ್ಯವಾಗಿದ್ದು ಪೌಷ್ಟಿಕ ಅಹಾರ ಸೇವಿಸಿದರೇ ಮಕ್ಕಳು ಸಹ ಪೌಷ್ಟಕವಾಗಿರುತ್ತಾರೆ, ವಿತರಣೆ ಮಾಡುವ ಚಿಕ್ಕಿಯನ್ನು ಮಕ್ಕಳೀಗೆ ತಿನ್ನಿಸಿಬೇಕು, ಪಾವಗಡ ತಾಲ್ಲೂಕನ್ನು ಈ ಯೋಜನೆಗೆ ಆಯ್ಕೆ ಮಾಡಿಕೊಂಡಿದ್ದಕ್ಕೆ ಜಿಲ್ಲಾಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸಿದರು.

      ಸ್ಪೀರುಲಿನಾ ಪೌಂಡೇಷನ್ ಮಹೇಶ್ ಮಾತನಾಡಿ, ಸ್ಪೀರುಲಿನಾ ಚಿಕ್ಕೆಯನ್ನು ತಾಲ್ಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡಲಾಗುತ್ತದೆ ಅವರುಗಳು ಯಾವ ರೀತಿ ಸೇವಿಸಬೇಕು ಎಂಬ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದು ತಿಳಿಸಿದರು.

       ,ಜಿಲ್ಲಾ ಮಹಿಳಾ ಮತ್ತು ಮಕ್ಕಳ ಉಪನಿದೇರ್ಶಕರಾದ ಎಸ್. ನಟರಾಜು ಮಾತನಾಡಿ, ಸ್ತ್ರೀಶಕ್ತಿ ಸಂಘದ ಸದಸ್ಯರಿಂದ ಚಿಕ್ಕಿಯನ್ನು ತಯಾರಿಸಿ ಮಾರಾಟ ಮಾಡುವ ಯೋಜನೆಯು ಸಹ ಇದ್ದು ಮುಂದಿನ ದಿನಗಳಲ್ಲಿ ತಾಲ್ಲೂಕಿನ ಆಯ್ದ ಸ್ತ್ರಿ ಶಕ್ತಿ ಸದಸ್ಯರಿಗೆ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

      ಮಧುಗಿರಿ ಎ.ಸಿ. ಡಾ. ನಂದಿನಿದೇವಿ, ತಾ.ಪಂ. ಅಧ್ಯಕ್ಷ ಸೊಗಡುವೆಂಕಟೇಶ್, ಜಿ.ಪಂ.ಸದಸ್ಯ ಚೆನ್ನಮಲ್ಲಯ್ಯತಾ.ಪಂ. ಉಪಾದ್ಯಕ್ಷ ಐ.ಜೆ. ನಾಗರಾಜು, ಸಿ.ಡಿ.ಪಿ.ಓ. ಶಿವಕುಮಾರಯ್ಯ, ನಾರಾಯಣ್,ತಹಶೀಲ್ದಾರ್ ಡಿ.ವರದರಾಜು, ತಾ. ಅರೋಗ್ಯಾಧಿಕಾರಿ ಡಾ. ತಿರುಪತಯ್ಯ,ಎಸ್.ಐ. ನಾಗರಾಜು, ಸುಪರ್ ವೈಸರ್ ಗಳಾದ ಮಣಿ, ಜಯಲಕ್ಷ್ಮೀ,ಮಮತಾ, ರಕೀಬ್ ಅಂಗವಾಡಿ ಕಾರ್ಯಕರ್ತರಾದ ಸುಶೀಲಮ್ಮ, ಶಾರದಮ್ಮ ಮತ್ತಿತರರು ಹಾಜರಿದ್ದರು.

(Visited 13 times, 1 visits today)

Related posts